ನೀವೇನಾದರೂ ಮನೆಯಲ್ಲಿ ಹೆಚ್ಚಿನ ತರಕಾರಿಯಲ್ಲಿ ಸೊಪ್ಪಿಗೆ ನೀವು ಹೆಚ್ಚಾಗಿ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರೆ ಅದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಯಾಕೆಂದರೆ ನಿಮ್ಮ ದೇಹದಲ್ಲಿ ಆಗುವಂತಹ ಜೀರ್ಣಕ್ರಿಯೆಯನ್ನು ಸೊಪ್ಪುಗಳು ತುಂಬಾ ಚೆನ್ನಾಗಿ ಮಾಡುತ್ತವೆ .ಅದಲ್ಲದೆ ಇದರಲ್ಲಿ ಇರುವಂತಹ ನಾರಿನ ಅಂಶ ನಿಮ್ಮ ದೇಹದಲ್ಲಿ ಉತ್ತಮವಾಗಿಯೇ ಮಲ ಕ್ರಿಯೆ ಆಗೋದಕ್ಕೆ ತುಂಬಾ ಸಹಕಾರಿಯಾಗುತ್ತದೆ ಅದಲ್ಲದೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಮಲಬದ್ಧತೆ ಸಮಸ್ಯೆ ಕೂಡ ಬರುವುದಿಲ್ಲ.
ಇವತ್ತು ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಇಲ್ಲಿರುವಂತಹ ಸೊಪ್ಪು ಹೆಚ್ಚಾಗಿ ಬಳಕೆ ಮಾಡಿದ್ದೆ ಆದಲ್ಲಿ ನಿಮಗೆ ನಾರ್ಮಲ್ ಆಗಿ ಬರುವಂತಹ ಕಜ್ಜಿ ತುರಿಕೆ ಮಲಬದ್ಧತೆ ಹಾಗೂ ಹಲವಾರು ಚರ್ಮರೋಗಕ್ಕೆ ಸಂಬಂಧಪಟ್ಟಂತಹ ರೋಗದಿಂದ ನೀವು ದೂರ ಇರಬಹುದು,
ಹಾಗಾದರೆ ಇವೆಲ್ಲದಕ್ಕೂ ರಾಮಬಾಣ ಆಗಿರುವಂತಹ ಸೊಪ್ಪು ಅದು ಯಾವುದು ಎನ್ನುವಂತಹ ಪ್ರಶ್ನೆಗೆ ಉತ್ತರ ಹಳ್ಳಿಯಲ್ಲಿ ಹೆಚ್ಚಾಗಿ ದೊರಕುವಂತಹ ಗೋಣಿಸೊಪ್ಪು . ಹಳ್ಳಿಯಲ್ಲಿ ವಾಸ ಮಾಡುವವರಿಗೆ ಈ ಸೊಪ್ಪಿನ ಬಗ್ಗೆ ಹೆಚ್ಚಾದ ಮಾಹಿತಿ ಇರುತ್ತದೆ, ಗೋಣಿಸೊಪ್ಪು ಹೆಚ್ಚಾಗಿ ಹುಳಿ ಕಹಿ ಹಾಗೂ ರುಚಿಯಾಗಿರುತ್ತದೆ. ನಿಮಗೆ ಬರುವಂತಹ ಪಿತ್ತ ವಾತ ಹಾಗೂ ಕಫ ಎನ್ನುವಂತಹ ಸಮಸ್ಯೆಗಳಿಂದ ದೂರ ಇರುವುದಕ್ಕೆ ಗೋಣಿಸೊಪ್ಪು ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಹಾಗಾದ್ರೆ ಬನ್ನಿ ಗೋಣಿಸೊಪ್ಪು ಇದರಿಂದ ಆಗುವಂತಹ ನಮಗೆ ಅನುಕೂಲವಾದ ಏನು ಹಾಗೂ ನಮ್ಮ ದೇಹಕ್ಕೆ ಯಾವ ರೀತಿಯಾದಂತಹ ಸಹಾಯವನ್ನು ಈ ಸೊಪ್ಪು ಮಾಡುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ. ನಮ್ಮ ದೇಹದಲ್ಲಿ ಇರುವಂತಹ ರಕ್ತಶುದ್ಧಿಗೆ ಈ ಸೊಪ್ಪು ತುಂಬಾ ಸಹಕಾರಿಯಾಗುತ್ತದೆ,
ಅದಲ್ಲದೆ ನಮ್ಮ ದೇಹವನ್ನು ಯಾವಾಗಲೂ ತಂಪಾಗಿ ಇಟ್ಟುಕೊಳ್ಳುವುದಕ್ಕೆ ಈ ಸೊಪ್ಪು ತುಂಬಾ ಸಹಕಾರಿ ಸಹಕಾರಿಯಾಗುತ್ತದೆ, ಈ ಸೊಪ್ಪನ್ನು ನೀವು ತೊಗರಿಬೇಳೆ ಅಥವಾ ಹೆಸರು ಕಾಳಿನ ಜೊತೆಗೆ ಪಲ್ಯ ಮಾಡಿ ಅಥವಾ ಸಾರು ಮಾಡಿಕೊಂಡು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ರಕ್ತ ಶುದ್ಧಿಯಾಗುತ್ತದೆ, ಅಲ್ಲದೆ ನಿಮ್ಮ ದೇಹದಲ್ಲಿ ಇರುವಂತಹ ಉಷ್ಣತೆ ಕೂಡ ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿ ಆಗುತ್ತದೆ.
ನಿಮ್ಮ ಮೂತ್ರಪಿಂಡದಲ್ಲಿ ಇರುವಂತಹ ಕಲ್ಮಶಗಳನ್ನೂ ದೂರ ಮಾಡುವಲ್ಲಿ ಹಾಗೂ ನಿಮ್ಮ ಮೂತ್ರದಲ್ಲಿ ಇರುವಂತಹ ದೋಷಗಳನ್ನು ನಿವಾರಣೆ ಮಾಡುವಲ್ಲಿ ಸೊಪ್ಪು ತುಂಬಾ ಸಹಕಾರಿ ಆಗುತ್ತದೆ, ಸೊಪ್ಪನ ನೀವು ಸರಿಯಾಗಿ ಜಜ್ಜಿ ಅದನ್ನು ಕಷಾಯಮಾಡಿ ಜೇನುತುಪ್ಪದ ಜೊತೆಗೆ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಉಷ್ಣತೆ ಕಡಿಮೆಯಾಗಿ , ನಿಮ್ಮ ಮೂತ್ರವು ತುಂಬಾ ಸರಾಗವಾಗಿ ಹೋಗುವಹಾಗೆ ಈ ಸೊಪ್ಪು ನೋಡಿಕೊಳ್ಳುತ್ತದೆ.
ಅದು ನಿಮ್ಮ ಮೈಮೇಲೆ ಬರುವಂತಹ ಕಜ್ಜಿ ತುರಿಕೆ ಹಾಗೂ ಚರ್ಮರೋಗಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳಿಗೂ ಕೂಡ ಈ ಸೊಪ್ಪು ಮದ್ದು, ಈ ಸುಪರ್ಣ ಸರಿಯಾಗಿ ಜಜ್ಜಿ ಅದರಿಂದ ಬರುವಂತಹ ರಸವನ್ನು ಎಲ್ಲಿ ನಿಮಗೆ ಕಜ್ಜಿ ತುರಿಕೆ ಹಾಗೂ ಚರ್ಮದ ಕಾಯಿಲೆಗಳು ಇದೆಯೋ ಅಲ್ಲಿ ಹಚ್ಚುವುದರಿಂದ ಹಾಗೂ ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಮಿಕ್ಸ್ ಮಾಡಿ ,
ಕಜ್ಜಿ ತುರಿಕೆ ಇರುವಂತಹ ಜಾಗದಲ್ಲಿ ಹಚ್ಚುವುದರಿಂದ ಯಾವುದೇ ಚರ್ಮರೋಗ ಇದ್ದರೂ ಕೂಡ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದಕ್ಕೆ ಈ ಸೊಪ್ಪಿನ ರಸ ತುಂಬಾ ಸಹಕಾರಿಯಾಗುತ್ತದೆ. ನಿಮಗೇನಾದರೂ ಮಲಬದ್ಧತೆಯ ಸಮಸ್ಯೆ ಏನಾದರೂ ಇದ್ದಲ್ಲಿ ಬೆಳಗಿನ ಜಾವದಲ್ಲಿ ಸೊಪ್ಪಿನಿಂದ ಬಂದಂತಹ ರಸಕ್ಕೆ ಸ್ವಲ್ಪ ಜೇನುತುಪ್ಪ ಮಿಕ್ಸ್ ಮಾಡಿಕೊಂಡು ಕುಡಿಯುದರಿಂದ ಮಲವಿಸರ್ಜನೆ ತುಂಬಾ ಚೆನ್ನಾಗಿ ಆಗುತ್ತದೆ ಹಾಗೂ ರಕ್ತ ಕೂಡ ತುಂಬಾ ಪರಿಶುದ್ಧವಾಗುತ್ತದೆ …
ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಮರೆಯಬೇಡಿ ಹಾಗೂ ನಮ್ಮ ಪಿಜಿ ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ …