ಕೆಮ್ಮು ಶೀತ ಜ್ವರಕ್ಕೆ ಅಥವಾ ಗಂಟಲಿನಲ್ಲಿ ಕಟ್ಟಿರುವ ಕಫದ ಸಮಸ್ಯೆಗೆ ಪರಿಹಾರ ಮಾತ್ರೆ ಮಾತ್ರ ಅಲ್ಲ. ಈ ಕೆಮ್ಮು ಶೀತಕ್ಕೆ ನೀವು ಮಾತ್ರೆ ತೆಗೆದುಕೊಂಡಾಗ ಶೀತ ಮತ್ತು ಕೆಮ್ಮು ಕಡಿಮೆ ಆಗುತ್ತದೆ. ಆದರೆ ಕಫ ಕಟ್ಟುವ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನೀವು ತಪ್ಪದೆ ಈ ಮಾಹಿತಿಯನ್ನ ತಿಳಿಯಿರಿ ಮಾತ್ರೆ ಬಳಸುವುದಕ್ಕಿಂತ ಇಂತಹ ಮನೆ ಮತ್ತು ಶೀತ ಕೆಮ್ಮಿಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ. ಕೆಲವರಿಗೆ ಈ ಶೀತ ಕೆಮ್ಮು ಎಲ್ಲ ವರ್ಷಕ್ಕೊಮ್ಮೆ ಬಂದರೆ ಕೆಲವರಿಗಂತೂ ಪದೇಪದೆ ಈ ಶೀತ ಕೆಮ್ಮು ಬರುತ್ತಲೇ ಇರುತ್ತದೆ ಅಂಥವರು ಪದೇಪದೆ ಮಾತ್ರೆಗಳನ್ನ ತೆಗೆದುಕೊಳ್ಳುವುದಕ್ಕಿಂತ ಈ ಮನೆಮದ್ದುಗಳನ್ನು ಮಾಡುವುದರಿಂದ ರೋಗ ನಿರೋಧಕ ಶಕ್ತಿ ಅನ್ನು ಕೂಡಾ ವೃದ್ಧಿಸಿಕೊಳ್ಳಬಹುದು ಹಾಗೆ ಆರೋಗ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು.
ಶೀತ ಕೆಮ್ಮು ಅಥವಾ ಜ್ವರದಂತಹ ಸಮಸ್ಯೆ ವರ್ಷಕ್ಕೊಮ್ಮೆ ಬರಲೇಬೇಕು ಹೀಗಂತ ಹಿರಿಯರು ಹೇಳ್ತಾರೆ ಆಗಲೇ ನಾವು ಆರೋಗ್ಯಕರವಾಗಿರಲು ಸಾಧ್ಯ ಆದರೆ ಶೀತ ಕೆಮ್ಮು ಅಥವಾ ಜ್ವರ ಬಿಟ್ಟು ಬಿಟ್ಟು ಬರುತ್ತಾ ಇದೆ. ಇಂತಹ ಚಿಕ್ಕಪುಟ್ಟ ಸಮಸ್ಯೆಗಳು ಪದೇ ಪದೆ ಕಾಡುತ್ತಲೇ ಇದೆ ಅಂದರೆ ನೀವು ಅರ್ಥಮಾಡಿಕೊಳ್ಳಬೇಕು ನಿಮ್ಮಲ್ಲಿ ಪ್ರತಿರೋಧಕ ಶಕ್ತಿ ಅಂದರೆ ನಿಮ್ಮ ದೇಹಕ್ಕೆ ಲಗ್ಗೆ ಇಡುವ ಈ ವೈರಾಣುಗಳನ್ನು ನಾಶ ಮಾಡುವಂತಹ ಶಕ್ತಿ ನಿಮ್ಮಲ್ಲಿ ಕಡಿಮೆಯಾಗಿದೆ. ಆದ್ದರಿಂದಲೇ ನೀವು ಪದೇ ಪದೇ ಈ ರೀತಿ ಚಿಕ್ಕಪುಟ್ಟ ಸಮಸ್ಯೆಗಳಿಗೆ ಒಳಗಾಗುತ್ತಿದ್ದ ತೀರಾ ಎಂದರ್ಥ ಆದರೆ ನೀವು ಪ್ರತಿಸಲ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ದೇಹದ ಪ್ರತಿರೋಧಕ ಶಕ್ತಿ ಇನ್ನೂ ಕಡಿಮೆಯಾಗುತ್ತದೆ ಹೊರತು ನಿಮಗೆ ಯಾವುದೇ ಆರೋಗ್ಯಕರ ಲಾಭಗಳನ್ನು ಸಹ ನೀಡುವುದಿಲ್ಲ.
ಹಾಗಾದರೆ ನಾವು ತಿಳಿಯೋಣ ಈ ಶೀತ ಕೆಮ್ಮಿನಂತಹ ಸಮಸ್ಯೆಗೆ ಕಫದ ಬಾಧೆಗೆ ಉತ್ತಮ ಪರಿಹಾರವನ್ನು ಇದಕ್ಕೆ ನಾವು ಬಳಕೆ ಮಾಡುತ್ತಾ ಇರುವುದು ವಿಳ್ಳೇದೆಲೆ ಹೌದು ಹಿರಿಯರು ಊಟದ ನಂತರ ಹಾಕಿಕೊಳ್ಳುವ ಈ ವಿಳ್ಳೆದೆಲೆಯಲ್ಲಿ ಅಗಾಧವಾದ ಆರೋಗ್ಯಕರ ಲಾಭಗಳು ಇವೆ. ಆದ್ದರಿಂದ ನೀವು ನೆನಪಿನಲ್ಲಿ ಇಡೀ ಈ ವಿಳ್ಳೆದೆಲೆ ನಿಮ್ಮ ಶೀತದ ಸಮಸ್ಯೆಗೆ ಉತ್ತಮ ಪರಿಹಾರ ಇದರ ಜೊತೆಗೆ ನಾವು ಬಳಸುತ್ತಿರುವ ಪದಾರ್ಥ ಅಜ್ವೈನ ಹಾಗೂ ಜೇನುತುಪ್ಪ.
ಮೊದಲಿಗೆ ಒಂದು ವಿಳ್ಳೆದೆಲೆಯನ್ನು ತೆಗೆದುಕೊಳ್ಳಿ ಎಳೆ ವಿಳ್ಳೆದೆಲೆ ಗಿಂತ ಸ್ವಲ್ಪ ಬಲಿತಿರೊ ವಿಳ್ಯದೆಲೆ ತೆಗೆದುಕೊಂಡರೆ ಉತ್ತಮ ಈ ಒಂದು ವಿಳ್ಯದೆಲೆಗೆ ಒಂದು ಚಮಚ ಅಜ್ವೈನ ವನ್ನು ಹಾಕಿ, ಇದನ್ನು ಮಡಚಬೇಕು ನಂತರ ನೀವು ಇದಕ್ಕೆ ಜೇನುತುಪ್ಪವನ್ನು ಕೂಡಾ ಮಿಶ್ರ ಮಾಡಿಕೊಳ್ಳಬಹುದು ಇಲ್ಲ ಅಂದರೆ ಈ ಎರಡೂ ಪದಾರ್ಥದ ಮಿಶ್ರಣವನ್ನು ನೀವು ಸೇವಿಸಬಹುದು. ಎಲೆ ಅಡಿಕೆಯನ್ನು ಹೇಗೆ ಜಗಿದು ಅದರ ರಸವನ್ನು ನುಂಗುತ್ತಿದ್ದರೆ ಅದೇ ರೀತಿ ಈ ವಿಳ್ಳೇದೆಲೆ ಮತ್ತು ಅಜ್ವೈನ ಹಾಗೂ ಜೇನುತುಪ್ಪದ ಮಿಶ್ರಣವನ್ನು ಜಗಿದು ರಸವನ್ನು ನುಂಗಬೇಕು. ಇದರಿಂದ ಗಂಟಲಿನಲ್ಲಿ ಕಫ ಕರಗುತ್ತದೆ ಮತ್ತು ಶೀತ ಕೆಮ್ಮಿನಂತಹ ಸಮಸ್ಯೆ ಕೂಡ ಬೇಗ ಪರಿಹಾರ ಆಗುತ್ತದೆ.
ಚಿಕ್ಕಮಕ್ಕಳಿಗಾದರೆ ಎಲೆ ಮತ್ತು ಅಜ್ವೈನ್ ಅವನ್ನು ಕುಟ್ಟಿ ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಬೇಕು. ನಂತರ ಈ ರಸಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಮಕ್ಕಳಿಗೆ ನೀಡಿ ಇದರಿಂದ ಕಫಾ ಬೇಗ ಕರಗುತ್ತದೆ ಮತ್ತು ಗಂಟಲು ನೋವು ಶೀತದಂತಹ ಸಮಸ್ಯೆ ಕೂಡ ನಿವಾರಣೆ ಆಗುವುದರ ಜೊತೆಗೆ ಕೆಮ್ಮಿಂದ ಬಂದ ಎದೆ ನೋವು ಕೂಡ ಕಡಿಮೆ ಆಗುತ್ತದೆ.