ಈ ಗುಡ್ಡದಿಂದ ಶಾಂತಲಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಹಾಗೆಯೇ ಈ ಸ್ಥಳದಿಂದ ಒಂದು ಉದ್ದವಾದ ಸುರಂಗ ಮಾರ್ಗ ಶ್ರೀರಂಗಪಟ್ಟಣದವರೆಗೂ ಇದೆ. ಎಂದು ಅಲ್ಲಿನ ಜನರು ಹೇಳುತ್ತಾರೆ. ಆ ಸ್ಥಳದ ಬೇರೆ ಯಾವುದೂ ಅಲ್ಲ ಅದೇ ಶಿವಗಂಗೆ. ಅನೇಕ ಅಚ್ಚರಿಯನ್ನು ಉಂಟು ಮಾಡುತ್ತಿರುವಂತಹ ಈ ದೇವಸ್ಥಾನದ ಬಗ್ಗೆ ನಾವು ನಿಮಗೆ ಹೇಳಲು ಹೊರಟಿದ್ದೇವೆ.
ಈ ದೇವಸ್ಥಾನದಲ್ಲಿ ಇರುವಂತಹ ಶಿವಲಿಂಗದ ಮೇಲೆ ಬೆಣ್ಣೆಯನ್ನು ಹಾಕಿದರೆ ತುಪ್ಪವಾಗಿ ಬದಲಾಗುತ್ತದೆ ಹಾಗೂ ಪಾತಾಳದಲ್ಲಿ ಹಾಕಿದಂತಹ ವಸ್ತುಗಳು ಬೇರೆ ಬೇರೆ ಸ್ಥಳದಲ್ಲಿ ಕಾಣಿಸಿಕೊಳ್ಳುವಂತೆ. ಈಗ ಅಚ್ಚರಿ ಉಂಟು ಮಾಡುವಂತಹ ಈ ಸ್ಥಳದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಮುಂದೆ ಓದಿ.
ಶಿವಗಂಗೆ ಒಂದು ಕಪ್ಪಾದ ಕಲ್ಲು ಈ ಬೆಟ್ಟವು ಸಮುದ್ರ ಮಟ್ಟದಿಂದ 1280 ರಷ್ಟು ಮೇಲಿದೆ. ಹಾಗೆ ಈ ಸ್ಥಳಕ್ಕೆ ನೀವು ಹೋಗಬೇಕಾದರೆ ಬೆಂಗಳೂರಿಂದ ನೀವು 54 ಕಿಲೋಮೀಟರ್ ಪ್ರಯಾಣ ಮಾಡಬೇಕಾಗುತ್ತದೆ. ಬೆಂಗಳೂರಿನ ಪಕ್ಕಕ್ಕೆ ಇರುವಂತಹ ತುಮಕೂರಿನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿ ಈ ಬೆಟ್ಟದ ಮೇಲೆ ಅಚ್ಚರಿಯನ್ನು ಉಂಟು ಮಾಡುವಂತಹ ಗಂಗಾಧರೇಶ್ವರ ದೇವಾಲಯವಿದೆ.
ಇಲ್ಲಿನ ದೇವರ ಮೇಲೆ ಬೆಣ್ಣೆಯನ್ನು ಹಾಕಿದರೆ ತುಪ್ಪವಾಗಿ ಬದಲಾವಣೆ ಆಗುತ್ತದೆ ಈ ಬೆಟ್ಟದ ಮೇಲೆ ಒಂದು ಶಿವಲಿಂಗ ಇದೆ ಸ್ನೇಹಿತರೆ, ಇದು ಜನರಲ್ಲಿ ಹಲವಾರು ತರಹದ ಅಚ್ಚರಿ ಉಂಟುಮಾಡಿದೆ ಅಚ್ಚರಿಯ ಸಂಗತಿ ಏನಪ್ಪಾ ಅಂದರೆ, ಈ ಶಿವಲಿಂಗದ ಮೇಲೆ ಬೆಣ್ಣೆಯನ್ನು ಹಾಕಿದರೆ ಕೆಲವೇ ನಿಮಿಷದಲ್ಲಿ ತುಪ್ಪವಾಗಿ ಬದಲಾವಣೆಯಾಗುತ್ತದೆ.
ಹಾಗೆಯೇ ಇನ್ನೊಂದು ಮತ್ತೊಂದು ಅಚ್ಚರಿ ಮಾಡುವಂತಹ ಒಂದು ವಿಷಯ ಇದ್ದರೆ ಅದು ಏನಪ್ಪ ಅಂದ್ರೆ ಈ ಬೆಟ್ಟದ ಮೇಲೆ ಒಂದು ಸುರಂಗ ಮಾರ್ಗವಿದೆ. ಈ ಸುರಂಗ ಮಾರ್ಗದಲ್ಲಿ ನೀವೇನಾದರೂ ಚಲಿಸಿದರೆ ನಿಮಗೆ ಶ್ರೀರಂಗಪಟ್ಟಣ ತಲುಪಬಹುದು ಅಂತಾರೆ ಎನ್ನುತ್ತಾರೆ ಅಲ್ಲಿನ ಜನಗಳು. ಮತ್ತೊಂದು ಸ್ಥಳ ಇದೆ ಸ್ನೇಹಿತರೆ ಅದರಲ್ಲಿ 275 ವರ್ಷದ ನೀರು ದೊರಕುತ್ತದೆ, ಆ ನೀರನ್ನು ಕುಡಿಯುವುದು ನಿಜವಾಗಲೂ ಅದೃಷ್ಟವಂತರು.
ಹೌದು ಒಳಕಲ್ಲು ತೀರ್ಥ ಎನ್ನುವ ಪ್ರದೇಶವಿದೆ, ಈ ಪ್ರದೇಶದಲ್ಲಿ ಇರುವಂತಹ ಒಳಕಲ್ಲು ನಲ್ಲಿ 250 ವರ್ಷದ ಹಳೆಯದಾದ ಅಂತಹ ನೀರು ಎಲ್ಲಿ ದೊರಕುತ್ತದೆ. ನಿಜವಾಗಲೂ ನೀರು ಕುಡಿದರೆ ನಿಮ್ಮಂತ ಅದೃಷ್ಟವಂತರು ಯಾರು ಇಲ್ಲ. ಆದರೆ ಎಲ್ಲರಿಗೂ ನೀರನ್ನು ಸ್ಪರ್ಶಿಸುವ ಅಂತಹ ಅವಕಾಶವಿರುವುದಿಲ್ಲ, ಅದು ಕೇವಲ ಅದೃಷ್ಟವಂತರಿಗೆ ಮಾತ್ರ. ಈ ಬೆಟ್ಟವನ್ನು ನೀವು ಹತ್ತಿ ಹೋದರೆ ಇನ್ನೊಂದು ದೇವಸ್ಥಾನ ನಿಮಗೆ ದೊರಕುತ್ತದೆ ಆ ದೇವಸ್ಥಾನದ ಹೆಸರು ದ್ವಾದಶ ಜ್ಯೋತಿರ್ಲಿಂಗ.
ಹಾಗೆಯೇ ಆ ಬೆಟ್ಟದ ಮೇಲೆ ನಂದಿ ವಿಗ್ರಹ ಕೂಡ ಇದೇ , ಆದರೆ ಈ ನಂದಿ ಇರುವಂತಹ ಸ್ಥಳ ಬೆಟ್ಟದ ಮೇಲೆ ಇರುವುದರಿಂದ ಕೆಳಗೆ ಆಳವಾದ ಪ್ರಪಾತ ಇದೆ, ಇರಲಿ ಎಂದು ನೀವು ಪ್ರದಕ್ಷಿಣೆ ಹಾಕುವುದು ಅಷ್ಟೊಂದು ಸುಲಭವೇನೂ ಅಲ್ಲ ಯಾಕೆಂದರೆ ಸ್ವಲ್ಪ ಯಾಮಾರಿದರೂ ಕೂಡ ಕೆಳಗೆ ಪ್ರಪಾತವಿದೆ. ನಂತರ ನೀವು ಸ್ವಲ್ಪ ಮುಂದುವರೆದರೆ ನಿಮಗೆ ಶ್ರೀ ಗಂಗಾಧರೇಶ್ವರ ದೇವಸ್ಥಾನ ನಿಮಗೆ ದೊರಕುತ್ತದೆ. ಹಾಗೆಯೇ ಇನ್ನೊಂದು ಅಚ್ಚರಿಯ ತಾಣ ಏನಪ್ಪಾ ಸ್ವಲ್ಪ ನೀವು ಮುಂದೆ ಬಂದರೆ ನಿಮಗೆ ಬೆಟ್ಟದ ತುದಿಯಲ್ಲಿ ಇರುವಂತಹ ಬೆಳ್ಳಿ ಗಂಟೆಗಳು ನೋಡುವ ಅವಕಾಶ ನಿಮಗೆ ದೊರಕುತ್ತದೆ.
ಇಲ್ಲಿರುವಂತಹ ಪಾತಾಳಗಂಗೆ ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದು, ಇನ್ನೊಂದು ವಿಚಿತ್ರ ಸಂಗತಿ ಏನಪ್ಪಾ ಅಂದರೆ ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗುತ್ತದೆ. ಹಾಗೆ ಬೇಸಿಗೆ ಕಾಲದಲ್ಲಿ ನೀರು ಮೇಲಕ್ಕೆ ಬರುತ್ತದೆ ಇದು ಒಂದು ವಿಚಿತ್ರಕ್ಕೆ ನಿಲುಕದ ಸಂಗತಿಯಾಗಿದೆ. ಈ ಕ್ಷೇತ್ರವನ್ನು ಕೆಲವರು ದಕ್ಷಿಣ ಕಾಶಿ ಎಂದು ಕೂಡ ಕರೆಯುತ್ತಾರೆ. ಒಂದು ದಿಕ್ಕಿನಲ್ಲಿ ಒಂದು ತರ ಹಾಗೂ ಇನ್ನೊಂದು ದಿಕ್ಕಿನಲ್ಲಿ ಈ ಬೆಟ್ಟ ಶಿವನಿಗೆ ಸುತ್ತಿ ಕೊಟ್ಟಿರುವಂತಹ ಸರ್ಪದ ಹಾಗೆ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಈ ಬೆಟ್ಟವು ಶಿವಲಿಂಗನ ಆಕೃತಿ ಕೂಡ ಕಾಣಿಸಿಕೊಳ್ಳುತ್ತದೆ.
ಇಲ್ಲಿ ಶಾಂತಲಾದೇವಿ ಆತ್ಮಹತ್ಯೆ ಮಾಡಿಕೊಂಡಿರುವ ಅಂತಹ ಕತೆ ಇದೆ ಅದು ಏನ್ ಅಂತೀರಾ?ಈ ಸ್ಥಳವು ಪುರಾತನ ದಿನಗಳಲ್ಲಿ ಹೊಯ್ಸಳ ರಾಜರ ಆಳ್ವಿಕೆಯಲ್ಲಿತ್ತು. ಆಗಿನ ರಾಜ ಆದಂತಹ ವಿಷ್ಣುವರ್ಧನ ಹಾಗೂ ಅವರ ಪತ್ನಿ ಶಾಂತಲಾದೇವಿ. ಅವರಿಗೆ ಮಗು ಆಗುವುದಿಲ್ಲ, ಹೀಗೆ ನನಗೆ ಮಗು ಆಗುವುದಿಲ್ಲ ಎಂದು ವಿಷಯ ತಿಳಿದ ಶಾಂತಲಾದೇವಿ ಅದೇ ಖಿನ್ನತೆಯಿಂದ, ಈ ಬೆಟ್ಟದ ಮೇಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಂತೆ. ಆದ್ದರಿಂದ ಈ ಪ್ರದೇಶವನ್ನು ಶಾಂತಲ ಡ್ರಾಪ್ ಎಂದು ಕೂಡ ಕರೆಯುತ್ತಾರೆ.