ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ನಾವು ಅತಿ ಹೆಚ್ಚಾಗಿ ದೇವರುಗಳನ್ನು ನಂಬುತ್ತೇವೆ ನಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಅಥವಾ ಸುಖದಲ್ಲಿ ಇದ್ದರೂ ನಾವು ಮೊದಲು ನೆನೆಯುವುದು ದೇವರುಗಳನ್ನು ಅಂಥದ್ದೇ ಒಂದು ವಿಶಿಷ್ಟವಾದ ದೇವರಿನ ಬಗ್ಗೆ ನಾನು ಈ ದಿನ ನಿಮಗೆ ತಿಳಿಸಿಕೊಡುತ್ತೇನೆ.
ಶಿವ ಸಾಮಾನ್ಯವಾಗಿ ಶಿವನ ಭಕ್ತರು ಹಲವಾರು ರೀತಿಯಲ್ಲಿ ಶಿವನನ್ನು ಆರಾಧನೆ ಮಾಡುತ್ತಾರೆ ಶಿವನ ಪವಾಡಗಳು ಹೇಳತೀರದು ಒಂದಲ್ಲ ಒಂದು ರೀತಿಯಲ್ಲಿ ಶಿವನ ಪವಾಡಗಳು ನಮ್ಮ ಕಣ್ಣು ಮುಂದೆ ನಡೆದಿರುತ್ತವೆ ಈ ಶಿವ ನಂಬಿಕೆ ಎನ್ನುವುದರ ಜೊತೆಗೆ ಭಕ್ತಿಯ ಪರಮಾವಧಿಯನ್ನು ನಮಗೆ ತೋರಿಸುತ್ತಾನೆ ಎಂದರು ಕೂಡ ತಪ್ಪಾಗುವುದಿಲ್ಲ.
ಈ ಶಿವನ ಭಕ್ತಿಗೆ ಮತ್ತು ಈ ಶಿವನು ಮಾನವರ ಮೇಲೆ ಇಟ್ಟಿರುವ ಅನುಕಂಪಕ್ಕೆ ಯಾವುದೂ ಸಾಟಿಯಿಲ್ಲ ಅದರ ಜೊತೆಯಲ್ಲಿ ಶಿವನ ಪವಾಡಗಳು ಕೂಡ ಇರುವುದನ್ನು ನಾವು ಕಾಣಬಹುದು ಅಂಥದ್ದೇ ಒಂದು ಪ್ರಮುಖವಾದ ಪವಾಡದ ಬಗ್ಗೆ ಈ ದಿನ ನಾನು ನಿಮ್ಮೊಂದಿಗೆ ಚರ್ಚಿಸುತ್ತೇನೆ .
ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪವಾಡಗಳು ನಡೆಯುತ್ತವೆ ಸೂರ್ಯನ ಕಿರಣಗಳು ನೇರವಾಗಿ ಶಿವಲಿಂಗದ ಪಾದವನ್ನು ಕೆಲವೊಂದು ದಿನ ಮಾತ್ರ ಸ್ಪರ್ಶಿಸುವುದು ಅಥವಾ ಬೆಳಕು ಲಿಂಗದ ಯಾವುದೋ ಒಂದು ಭಾಗಕ್ಕೆ ಬೀಳುವುದು ಅಥವಾ ಅಲ್ಲಿರುವ ಕೊಳ ಅಥವಾ ಅಲ್ಲಿರುವ ಯಾವುದೋ ಕಲ್ಲು ಅಥವಾ ಅಲ್ಲಿರುವ ಯಾವುದೋ ಗಿಡ ಈ ರೀತಿ ಶಿವನ ದೇವಾಲಯಗಳಲ್ಲಿ ಹಲವಾರು ರೀತಿಯ ದಂತಹ ಪವಾಡಗಳು ನಡೆಯುವುದನ್ನು ಗಮನಿಸಬಹುದು.
ನಾವು ಈ ದಿನ ನಿಮಗೆ ಅಂಥದ್ದೇ ಒಂದು ಪವಾಡವನ್ನು ಹೊಂದಿರುವ ಶಿವನ ದೇವಾಲಯದ ಬಗ್ಗೆ ಹೇಳುತ್ತೇವೆ ಆ ದೇವಾಲಯ ಇರುವುದು ಉತ್ತರ ಪ್ರದೇಶದ ಸೀತಾಪುರ ಗ್ರಾಮದಲ್ಲಿರುವ ರುದ್ರ ವ್ರತ ಮಹಾದೇವರ ದೇವಾಲಯವಾಗಿದೆ ಈ ದೇವಾಲಯಗಳಲ್ಲಿ ಶಿವನನ್ನು ಆರಾಧನೆ ಮಾಡಲಾಗುತ್ತದೆ ಈ ದೇವಾಲಯದಲ್ಲಿ ಒಂದು ವಿಚಿತ್ರ ಸಂಗತಿ ಯಾವಾಗಲೂ ನಡೆಯುತ್ತದೆ ಆ ಸಂಗತಿ ಏನು ಅದರಿಂದ ಏನು ಪ್ರಯೋಜನ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ .
ಸ್ನೇಹಿತರೇ ಈ ದೇವಾಲಯದಲ್ಲಿ ನಡೆಯುವ ವಿಚಿತ್ರವಾದ ಸಂಗತಿಯೆಂದರೆ ಈ ದೇವಾಲಯದ ಆವರಣದಲ್ಲಿ ಒಂದು ಕುಂಡವಿದೆ ಆ ಕುಂಡದ ಒಳಗೆ ಸದಾ ನೀರಿರುತ್ತದೆ ಅದರಲ್ಲಿ ಏನು ವಿಶೇಷತೆ ಎಂದು ಯೋಚಿಸುತ್ತಿದ್ದೀರಿ ಇಲ್ಲಿ ಶಿವನ ಚಮತ್ಕಾರವನ್ನು ನಾವು ನಮ್ಮ ಕಣ್ಣಿಂದಲೇ ನೋಡಬಹುದು ಅದನ್ನು ನೋಡುವುದು ಮಾತ್ರವಲ್ಲ ಅದನ್ನು ನಾವು ಪರೀಕ್ಷಿಸಿ ನಾವು ಕೂಡ ಆ ಚಮತ್ಕಾರವನ್ನು ನೋಡಿ ಅಚ್ಚರಿ ಪಡಬಹುದು.
ಅದೇನು ಗೊತ್ತೆ ಆ ಕುಂಡದಲ್ಲಿರುವ ನೀರಿನ ಒಳಗೆ ಬಿಲ್ವಪತ್ರೆಯನ್ನು ಹಾಕಿದರೆ ಆ ಬಿಲ್ವ ಪತ್ರೆ ಮುಳುಗುತ್ತದೆ ಆದರೆ ಹಣ್ಣುಗಳನ್ನೇ ನಾದರೂ ಹಾಕಿದರೆ ಆ ಹಣ್ಣುಗಳು ತೇಲುತ್ತವೆ ನಮಗೆ ಗೊತ್ತಿರುವ ಹಾಗೆ ಹಣ್ಣುಗಳು ಭಾರವಾಗಿರುತ್ತವೆ ಮತ್ತು ಯಾವುದೇ ನೀರಿಗೆ ಹಣ್ಣುಗಳನ್ನು ಹಾಕಿದ್ದರೂ ತೇಲುವುದಿಲ್ಲ ಅದು ಮುಳುಗುತ್ತದೆ ಆದರೆ ಇಲ್ಲಿ ವಿಚಿತ್ರವಿದೆ ಆ ವಿಚಿತ್ರಕ್ಕೆ ಕೂಡ ಒಂದು ಇತಿಹಾಸವಿದೆ.
ಇದು ಶಿವನೇ ನಿರ್ಮಿಸುವಂತದು ಎಂಬ ಮಾತು ಕೂಡ ಕೇಳಿ ಬರುತ್ತದೆ ಶಿವ ತಾಂಡವವಾಡುತ್ತಿರುವಾಗ ಅವನ ದೇಹದಿಂದ ಉತ್ಪತ್ತಿಯಾಗುವ ಶಾಖವನ್ನು ಕಡಿಮೆ ಮಾಡಲು ಶಿವ ಈ ಕುಂಡದ ಒಳಗೆ ಮುಳುಗುತ್ತಾನೆ ಎಂಬ ಪ್ರತೀತಿ ಕೂಡ ಇರುವುದನ್ನು ನಾವು ಗಮನಿಸಬಹುದಾಗಿದೆ .
ಈಗಲೂ ಕೂಡ ನಾವು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಭಕ್ತರು ಹಾಕಿರುವ ಹಣ್ಣುಗಳನ್ನು ತೆಗೆದು ಭಕ್ತರಿಗೆ ಕೊಡುತ್ತಾರೆ ಮತ್ತು ಎಲ್ಲರಿಗೂ ಕೂಡ ಬಿಲ್ವ ಪತ್ರೆಯನ್ನು ಹಾಕುವ ಅವಕಾಶವನ್ನು ಕೂಡ ಕಲ್ಪಿಸಿಕೊಳ್ಳಲಾಗುತ್ತದೆ ಈ ಸಂಗತಿಗಳೆಲ್ಲ ವಿಜ್ಞಾನಕ್ಕೆ ನಿಲುಕದಂಥ ಸಂಗತಿಗಳಾಗಿವೆ ಇಲ್ಲಿ ಮೂಢನಂಬಿಕೆ ಎನ್ನುವುದಕ್ಕಿಂತ ಎಲ್ಲಾ ಕೂಡ ಅವರ ಮನಸ್ಸಿಗೆ ಸಂಬಂಧಪಟ್ಟದ್ದು ಅವರವರ ಭಕ್ತಿ ಅವರವರಿಗೆ ಧನ್ಯವಾದಗಳು .