ಈ ಲಕ್ಷಣಗಳು ನಿಮ್ಮ ಮುಖದಲ್ಲಿ ಗೋಚರಿಸಿದರೆ ನಿಮಗೇ ಈ ಅರೋಗ್ಯ ಸಮಸ್ಯೆಯಿದೆ ಎಂದರ್ಥ!!!!!

30

ವೈದ್ಯರುಗಳು ಆಸ್ಪತ್ರೆಗೆ ಹೋದಾಗ ಮೊದಲು ರೋಗಿಯನ್ನು ಕುರಿತು ಕೆಲವೊಂದು ವಿಚಾರವನ್ನು ಕೇಳುತ್ತಾ  ಮಾತನಾಡುತ್ತಲೇ ಇರುತ್ತಾರೆ ಆಗ ನಮಗೆಲ್ಲ ಅನ್ನಿಸಬಹುದು ವೈದ್ಯರು ಎಷ್ಟು ಮಾತಾಡ್ತಾರ ಅಂತ.

ಆದರೆ ಈ ರೀತಿ ವೈದ್ಯರುಗಳು ಮಾತನಾಡುವುದು ನಮ್ಮ ಮುಖದಲ್ಲಿರುವ ಕೆಲವೊಂದು ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುವುದಕ್ಕಾಗಿ. ಹಾಗಾದರೆ ಯಾವೆಲ್ಲ ಬದಲಾವಣೆಗಳು ನಮ್ಮ ಮುಖದಲ್ಲಿ ಆಗಿದ್ದರೆ ಯಾವೆಲ್ಲ ಲಕ್ಷಣಗಳು ನಮ್ಮ ಮುಖದಲ್ಲಿ ಕಂಡುಬಂದರೆ ಏನು ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತಿರುತ್ತದೆ.

ನಮ್ಮ ದೇಹ ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ನೀವು ಕೂಡ ಈ ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳಿ ಹಾಗೆ ಬೇರೆ ಅವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ.

ಮೊದಲನೆಯದಾಗಿ ತುಟಿಗಳು ಒಣಗಿದ್ದರೆ ತುಟಿಯ ಚರ್ಮವು ಎದ್ದು ಬಂದಿದ್ದರೆ ಅದು ನಮ್ಮ ದೇಹದಲ್ಲಿ ನಿರ್ಜಲೀಕರಣವಾಗಿರಬಹುದು ಎಂಬ ಸೂಚನೆಯನ್ನು ತಿಳಿಸುತ್ತಿರುತ್ತದೆ, ಇದರ ಜೊತೆಗೆ ಮಧುಮೇಹಿಗಳಿಗೆ ಮತ್ತು ಹೈಪರ್ಥೈರೋಡಿಸಂ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಕೂಡ ಈ ಒಂದು ಲಕ್ಷಣಗಳು.

ಬೇರೆ ರೀತಿಯ ಲಕ್ಷಣಗಳೆಂದರೆ ಶೀತ, ತೂಕ ಹೆಚ್ಚುವಿಕೆ, ತಲೆ ಸುತ್ತು ಇಂತಹ ಸಮಸ್ಯೆ ಗಳನ್ನು ಬಳಲುತ್ತಿದ್ದರೆ ಅದು ಹೈಪೊ ಥೈರಾಯಿಡಿಸಂ ಎಂದರ್ಥ. ಇನ್ನು ಮಧುಮೇಹಿಗಳಿಗೆ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಡರ್ಮಿಟಿಸೆಂ ಸೋರಿಯಾಸಿಸ್ ಅಂತಹ ಸಮಸ್ಯೆಗಳು ಕಂಡು ಬರುತ್ತದೆ.

ಎರಡನೆಯ ಲಕ್ಷಣವೆಂದರೆ ಅತಿಯಾಗಿ ಕೂದಲು ಬೆಳೆಯುವುದು ಅದರಲ್ಲಿ ದವಡೆಯ ಭಾಗದಲ್ಲಿ ಗಲ್ಲದ ಭಾಗದಲ್ಲಿ ತುಟಿಯ ಮೇಲ್ಭಾಗದಲ್ಲಿ ಕಂಡು ಬಂದಲ್ಲಿ ಅದು ಪಾಲಿಸ್ಟಿಕ್ ಓವರಿ ಸಿಂಡ್ರೋಮ್ ಲಕ್ಷಣಗಳಾಗಿದ್ದು ಹಾರ್ಮೋನ್ ಇಂಬ್ಯಾಲೆನ್ಸ್ನಿಂದಾಗಿ ಹೀಗೆ ಆಗುವುದು ಜೊತೆಗೆ ಪುರುಷ ಹಾರ್ಮೋನ್ ಯಿಂದಾಗಿಯು ಕೂಡ ಈ ರೀತಿ ಕೂದಲು ಹೆಚ್ಚಾಗಿ ಬೆಳೆಯುವುದುಂಟು.

ಮೂರನೆಯ ಲಕ್ಷಣವೆಂದರೆ ಕಣ್ಣುಗಳ ರೆಪ್ಪೆಯು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವೂ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತಿರುತ್ತದೆ ಜೊತೆಗೆ ಸಂತೆ ಲಾಸ್ ಎಂಬ ಸಮಸ್ಯೆಯೂ ಕೂಡ ಕಾಡುತ್ತಿದ್ದರೆ ಈ ರೀತಿಯ ಲಕ್ಷಣಗಳು ಮುಖದಲ್ಲಿ ಕಂಡುಬರುತ್ತದೆ ಹಾಗೆ ಈ ರೀತಿಯ ಲಕ್ಷಣಗಳು ಕಂಡು ಬಂದವರಲ್ಲಿ ಹಾರ್ಟ್ ಅಟ್ಯಾಕ್ ಕೂಡ ಆಗಬಹುದು ಎಂದು ತಿಳಿಸಲಾಗಿದೆ.

ಕಣ್ಣಿನ ಕೆಳಗೆ ಊದಿಕೊಂಡಿದ್ದರೆ ಅಥವಾ ಬಳಲಿರುವ ಕಣ್ಣು ದೀರ್ಘ ಕಾಲದ ಅಲರ್ಜಿ ಕಾಡುತ್ತಿದ್ದರೆ ಅಂಥವರಲ್ಲಿ ರಕ್ತ ಕಣಗಳು ದುರ್ಬಲವಾಗಿದೆ ಎಂದರ್ಥ ಹಾಗೆ ಹೈಪರ್ ಥೈರಾಯ್ಡಿಸಂನ ಒಂದು ಲಕ್ಷಣವೂ ಕೂಡ ಇದಾಗಿದೆ, ನಿದ್ರಾಹೀನತೆ ಸಮಸ್ಯೆ ಕೂಡ ಇವರಲ್ಲಿ ಕಾಡುತ್ತಿದ್ದರೆ ಈ ಒಂದು ಲಕ್ಷಣ ಕಂಡು ಬರುತ್ತದೆ .

ಅಸಿಮೆಟ್ರಿ ಫೇಸ್ ಲಕ್ಷಣ ಯಾರಲ್ಲಿ ಕಂಡು ಬರುತ್ತದೆಯೊ ಅಂತಹವರಲ್ಲಿ ಪಾರ್ಶ್ವವಾಯುವಿನ ಶುರುವಿನ ಲಕ್ಷಣಗಳು ಇದಾಗಿರುತ್ತದೆ ಎಂದು ಸೂಚಿಸುತ್ತಿರುತ್ತದೆ ಹಾಗೆ ತಕ್ಷಣವೇ ಪಾರ್ಶ್ವವಾಯು ಲಕ್ಷಣ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಇದಕ್ಕೆ ತಕ್ಕ ಟೆಸ್ಟ್ ಗಳನ್ನು ಕೂಡ ಮಾಡಬೇಕಾಗುತ್ತದೆ. ದೃಷ್ಟಿ ಎರಡೆರಡು ಕಾಣುವುದು ಕೈ ಕಾಲುಗಳು ಮರಗಟ್ಟುವುದು ಇಂತಹ ಲಕ್ಷಣಗಳು ಕೂಡ ಪಾರ್ಶ್ವವಾಯುವಿನ ಲಕ್ಷಣವಾಗಿರುತ್ತದೆ.

ಚರ್ಮ ಜೋತು ಬಿದ್ದಿರುವುದು ಮೈಬಣ್ಣ ಮಾಸಿರುವುದು ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಅಂಥವರಲ್ಲಿ ರಕ್ತ ಹೀರಲು ಸಮಸ್ಯೆ ಹೆಚ್ಚಾಗಿದೆ ಎಂದರ್ಥ ಮತ್ತು ಚರ್ಮವು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದು ಯಕೃತ್ತಿಗೆ ಸಂಬಂಧಪಟ್ಟ ಸಮಸ್ಯೆಗಳಾಗಿರುತ್ತವೆ ಮತ್ತು ಉಗುರುಗಳು ನೀಲಿ ಬಣ್ಣಕ್ಕೆ ತಿರುಗಿದರೆ ಶ್ವಾಸಕೋಶಕ್ಕೆ ಅಥವಾ ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತಿದೆ ಎಂಬ ಸೂಚನೆಯನ್ನು ನೀಡುತ್ತಿರುತ್ತದೆ.

ಚರ್ಮದ ಮೇಲೆ ಧಾತುಗಳು ಮಚ್ಚೆಗಳು ಇದ್ದರೆ ಅಲರ್ಜಿ ಇಸುಬು ಆಗಿದ್ದರೆ ಅಥವಾ ತುರಿಕೆ ಹೆಚ್ಚಾದಾಗ ಅದು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ತಿಳಿಸುತ್ತಿರುತ್ತದೆ ಜೊತೆಗೆ ಅಜೀರ್ಣವಾದಗಲು ಇಂತಹ ಲಕ್ಷಣಗಳು ಕಂಡು ಬರುತ್ತದೆ ಜೊತೆಗೆ ಇದು ಒಂದು ಆಟೋಇಮ್ಯೂನ್ ಕಾಯಿಲೆ ಅಂತ ಹೇಳಬಹುದು.

ದೇಹದಲ್ಲಿ ಹೊಸ ಮಚ್ಚೆಗಳು ಹುಟ್ಟಿಕೊಂಡಿದ್ದಾರೆ ಅದನ್ನು ನಿರ್ಲಕ್ಷಿಸಬೇಡಿ ಕೂಡಲೇ ಚರ್ಮಕ್ಕೆ ಸಂಬಂಧಪಟ್ಟ ವೈದ್ಯರುಗಳ ಬಳಿ ಪರೀಕ್ಷಿಸಿ ಇದು ಕ್ಯಾನ್ಸರ್ನ ಲಕ್ಷಣಗಳಾಗಿರಬಹುದು ಅಥವಾ ಅನುವಂಶೀಯತೆ ಯಿಂದ ಬಂದಿರುವ ಯಾವುದಾದರೂ ಆರೋಗ್ಯ ಸಮಸ್ಯೆಯಾಗಿರಬಹುದು.

LEAVE A REPLY

Please enter your comment!
Please enter your name here