Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ರೀತಿ ಮಾಡಿದರೆ ಸಾಕು ನಿಮಿಷಗಳಲ್ಲಿ ತಲೆಯಲ್ಲಿ ಇರುವ ಹೇನುಗಳು ಮಾಯವಾಗುತ್ತವೆ!!!!

ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಕಾಡುತ್ತಿದ್ದ ಈ ಒಂದು ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಹೆಚ್ಚು ಹೌದು ಏನು ಅಂತೀರಾ ಹೆಣ್ಣುಮಕ್ಕಳಲ್ಲಿ ಕಾಡುತ್ತಿದ್ದ ಆ ಒಂದು ಸಮಸ್ಯೆ ಏನು ಅಂದರೆ ಏನು ಹೇನಿನ ಸಮಸ್ಯೆ.

ಹೌದು ಈ ಹೇನಿನ ಸಮಸ್ಯೆ ಬಂದರೆ ನೆಮ್ಮದಿಯೇ ಇರುತ್ತಿರಲಿಲ್ಲ ಬರೀ ತಲೆಯಲ್ಲಿ ಹೇನುಗಳನ್ನು ಹಿಡಿದು ಅಥವಾ ಹೇನುಗಳ ಕಾಟದಿಂದ ತಲೆ ಕೆರೆದು ಬೇಸರವಾಗಿ ಬಿಡುತ್ತಿತ್ತು ಅದರಲ್ಲಿಯೂ ತಕ್ಷಣವೇ ಈ ಒಂದು ಸಮಸ್ಯೆ ಪರಿಹಾರವಾಗುತ್ತ ಇರಲಿಲ್ಲ, ಎಷ್ಟೇ ಪ್ರಯತ್ನಿಸಿದರೂ ಈ ಸಮಸ್ಯೆಯಿಂದ ಪರಿಹಾರ ದೊರೆಯದೇ ಹಲವು ಜನರು ಏನು ಮಾಡುವುದೆಂದು ತಿಳಿಯದೆ ತುಂಬಾನೇ ಯೋಚನೆ ಮಾಡ್ತಾ ಇರ್ತಾರೆ.

ಈ ಹೇನುಗಳ ಸಮಸ್ಯೆ ಕಾಡಿದರೆ ಕೂಡಲೇ ಪರಿಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಒಂದು ಮನೆ ಮದ್ದು ಇದನ್ನು ನೀವು ಬಳಸಿ ಹಾಗೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

ಕೆಲವರು ಈ ಹೇನುಗಳ ಸಮಸ್ಯೆ ಕಾಡುತ್ತಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಶಾಂಪುಗಳನ್ನು ಅಥವಾ ಆಯಿಲ್ಗಳನ್ನು ತಂದು ಹಚ್ಚಿ ಕೊಳ್ತಾರೆ ಇದರಿಂದ ಕೂದಲು ಉದುರುವ ಸಾಧ್ಯತೆ ಇರುತ್ತದೆ ಮತ್ತು ಬೇಗನೆ ಪರಿಹಾರವೂ ಕೂಡ ಸಿಗುವುದಿಲ್ಲ.

ಆದ ಕಾರಣ ಈ ಒಂದು ಪರಿಹಾರವನ್ನು ಪಾಲಿಸಿ ನೋಡಿ ಈ ಪರಿಹಾರ ಮಾಡಲು ಬೇಕಾಗಿರುವುದು ಕೊಬ್ಬರಿ ಎಣ್ಣೆ ಕರ್ಪೂರ ನಿಂಬೆ ಹಣ್ಣಿನ ರಸ. ಕೊಬ್ಬರಿ ಎಣ್ಣೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಕೂದಲಿನ ಪೋಷಣೆ ಮಾಡುತ್ತದೆ ಕೂದಲನ್ನು ಮೃದುವಾಗಿಸುತ್ತದೆ ಹಾಗೆ ಕೂದಲ ಆರೈಕೆಯನ್ನು ಚೆನ್ನಾಗಿ ಮಾಡುತ್ತದೆ ಕೂದಲು ಬರುವ ಸಮಸ್ಯೆಯನ್ನು ಕೂಡ ತಡೆಗಟ್ಟುತ್ತದೆ.

ಇನ್ನು ಕರ್ಪೂರ ಇದೊಂದು ಉತ್ತಮವಾದ ಔಷಧೀಯ ವಸ್ತು ವಂದನೆ ಹೇಳಿದರೆ ತಪ್ಪಾಗಲಾರದು ಇದನ್ನು ನಾವು ದೇವರ ಪೂಜೆಯಲ್ಲಿ ಬಳಸುತ್ತೇವೆ, ಇದರ ಘಮ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇಷ್ಟ ಆಗುತ್ತದೆ ಆದರೆ ಇದರ ಘಮ ಹೇನುಗಳಿಗೆ ಆಗುವುದಿಲ್ಲ ಇದರ ಘಮ ಅಂದರೆ ದೂರ ಓಡಿಹೋಗುತ್ತವೆ ಹೇನುಗಳು.

ಇನ್ನು ನಿಂಬೆಹಣ್ಣಿನ ರಸ ಈ ನಿಂಬೆಹಣ್ಣಿನ ರಸದಲ್ಲಿರುವ ಸಿಟ್ರಿಕ್ ಆಮ್ಲವು ಹೇನುಗಳ ನಾಶ ಮಾಡುತ್ತದೆ ಮತ್ತು ಹೇನುಗಳು ಸಾಯುವ ಹಾಗೆ ಮಾಡುತ್ತದೆ ಆದ ಕಾರಣ ಈ ಮೂರು ಪದಾರ್ಥಗಳ ಮಿಶ್ರಣವನ್ನು ಮಾಡಿ ಕೂದಲಿನ ಎಳೆ ಎಲೆಗೆ ಹಚ್ಚುತ್ತಾ ಬನ್ನಿ.

ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಮೂರರಿಂದ ನಾಲ್ಕು ಅಥವಾ ಕೂದಲು ಉದ್ದವಾಗಿ ಇರದೇ ಇದ್ದರೆ ಎರಡು ಕರ್ಪೂರವನ್ನು ಕೊಬ್ಬರಿ ಎಣ್ಣೆಯೊಳಗೆ ಮುರಿದು ಹಾಕಬೇಕು ಅಥವಾ ಪುಡಿ ಮಾಡಿ ಕೊಬ್ಬರಿ ಎಣ್ಣೆ ಯೊಂದಿಗೆ ಕರಗಿಸಿ ನಂತರ ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಇದೀಗ ಎಣ್ಣೆಯನ್ನು ಹಚ್ಚುವ ರೀತಿಯಲ್ಲಿಯೆ ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಗಳ ಬಳಿಕ ಬೆಚ್ಚಗಿನ ನೀರಿನಿಂದ ಶಾಂಪೂವನ್ನು ಬಳಸಿ ತಲೆಯನ್ನು ತೊಳೆದುಕೊಳ್ಳಬೇಕು ಹಾಗೆ ತಲೆಯನ್ನು ತೊಳೆದುಕೊಂಡ ನಂತರ ಬಾಚಣಿಕೆಯ ಸಹಾಯದಿಂದ ಕೂದಲನ್ನು ಬಾಚಿ ಇದರಿಂದ ಸತ್ತ ಹೇನುಗಳು ಮೊಟ್ಟೆಯೂ ಬಿದ್ದು ಹೋಗುತ್ತದೆ.

ಈ ರೀತಿ ವಾರಕ್ಕೆ ಒಮ್ಮೆ ಮಾಡಿ ಹೇಗೆ ನಿಮ್ಮ ಕೂದಲಿನಲ್ಲಿ ಇರುವ ಹೇನುಗಳು ಹೊಟ್ಟುಗಳು ಹೇನಿನ ಮೊಟ್ಟೆಗಳು ಇವೆಲ್ಲವೂ ಕೂಡಾ ಪರಿಹಾರವಾಗುತ್ತದೆ ಎಂಬುದನ್ನು ನೀವೆ ಕಾಣಬಹುದು.

ಈ ಮನೆ ಮುತ್ತಿನಲ್ಲಿ ಯಾವುದಾದರೂ ಅಡ್ಡ ಪರಿಣಾಮಗಳಿವೆಯ ಎಂದು ನೀವು ಯೋಚಿಸಿದರೆ ಇದರಲ್ಲಿ ಯಾವ ಅಡ್ಡ ಪರಿಣಾಮಗಳು ಇಲ್ಲ ನೈಸರ್ಗಿಕವಾದ ಸಾಮಗ್ರಿಗಳನ್ನು ಬಳಸಿರುವುದರಿಂದ ಕೂದಲು ಉದುರುವ ಸಮಸ್ಯೆ ಕಾಡುವುದಿಲ್ಲ.

Leave a Reply

Your email address will not be published. Required fields are marked *