ಈ ರೀತಿ ಒಂದು ಗ್ಲಾಸ್ ನೀರಿನಲ್ಲಿ ನಿಂಬೆಹಣ್ಣನ್ನು ಹಾಕಿ ಇಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ದೂರ ಆಗುತ್ತವೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಿಮ್ಮ ಮನೆಯಲ್ಲಿ ಒಂದೇ ಒಂದು ನಿಂಬೆಹಣ್ಣಿನಿಂದ ಈ ರೀತಿ ಮಾಡಿ ಹೇಗೆ ನಿಮ್ಮ ಮನೆಯ ಮೇಲೆ ಆಗಿರುವ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ ಎಂಬುದನ್ನು ನೀವೇ ನೋಡಬಹುದು,ಹೌದು ಜೀವನದಲ್ಲಿ ಯಾರೇ ಆಗಲಿ ಸ್ವಲ್ಪ ಬೆಳೆಯುತ್ತಿದ್ದಾರೆ ಅಂದರೆ ಸ್ವಲ್ಪ ಸಂತೋಷವಾಗಿ ಇದ್ದಾರೆ ಅಂದರೆ ಅವರ ಮನೆಯ ಮೇಲೆ ಅಥವಾ ಆ ಮನೆಯ ಸದಸ್ಯರ ಮೇಲೆ ಕಣ್ಣು ದೃಷ್ಟಿ ಬೀಳುವುದು ಸಹಜ ಈ ನೇರ ದೃಷ್ಟಿ ಎಂಬುದು ಎಷ್ಟು ಕೆಟ್ಟದ್ದು ಅಂದರೆ ಮನುಷ್ಯನ ದೃಷ್ಟಿಗೆ ಕಲ್ಲು ಕೂಡ ಸೀಳುತ್ತದೆ ಎಂಬ ಮಾತಿದೆ.

ಆದ ಕಾರಣ ಒಂದೇ ಒಂದು ನಿಂಬೆ ಹಣ್ಣಿನಿಂದ ನೀವು ನಿಮ್ಮ ಮನೆಯಲ್ಲಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಕಣ್ಣು ದೃಷ್ಟಿಯ ಸಮಸ್ಯೆ ದೂರವಾಗಿ ನಿಮ್ಮ ಮನೆಯಲ್ಲಿ ಯಾವ ಕೆಟ್ಟ ಶಕ್ತಿಯ ನೆಲೆಯೂ ಕೂಡ ಇರುವುದಿಲ್ಲ.ಈ ನಿಂಬೆ ಹಣ್ಣನ್ನು ಹೇಗೆ ಬಳಸಬೇಕು ಅಂದರೆ ಸಾಮಾನ್ಯವಾಗಿ ನೀವು ಅಂಗಡಿಗಳಿಗೆ ಹೋದಾಗ ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿಸಿ ಅದಕ್ಕೆ ನಿಂಬೆ ಹಣ್ಣನ್ನು ಹಾಕಿರುತ್ತಾರೆ ಈ ರೀತಿ ಯಾಕೆ ಮಾಡುತ್ತಾರೆ ಅಂದರೆ ಆ ವ್ಯಾಪಾರ ವಹಿವಾಟಿನ ಮೇಲೆ ಅಥವಾ ಆ ಅಂಗಡಿಯ ಮೇಲೆ ದೃಷ್ಟಿ ಆಗದೇ ಇರಲಿ ಎಂಬ ಕಾರಣಕ್ಕಾಗಿ ಈ ರೀತಿ ಮಾಡಲಾಗಿರುತ್ತದೆ.

ನಿಂಬೆ ಹಣ್ಣಿನಲ್ಲಿ ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಅಂದರೆ ಕೆಟ್ಟ ಶಕ್ತಿಯನ್ನು ಅಥವಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಶಕ್ತಿ ಇರುವ ಕಾರಣ ಈ ರೀತಿ ನಿಂಬೆ ಹಣ್ಣನ್ನು ನೀರಿನೊಳಗೆ ಹಾಕಿ ಅದರಲ್ಲಿ ಗಾಜಿನ ಲೋಟದಲ್ಲಿ ನೀರನ್ನು ಹಾಕಿ ಅದರೊಳಗೆ ನಿಂಬೆ ಹಣ್ಣನ್ನು ಇರಿಸಿ .ಅಂಗಡಿಯ ಒಂದು ಮೂಲೆಯಲ್ಲಿ ಅಥವಾ ಮನೆಯ ಒಂದು ಮೂಲೆಯಲ್ಲಿ ಇಡುವುದರಿಂದ ಆ ಮನೆಗೆ ತಗುಲುವ ದೃಷ್ಟಿಯಾಗಲಿ ಮನೆಯಲ್ಲಿರುವ ಕೆಟ್ಟ ಶಕ್ತಿಯಾಗಲಿ ನಕಾರಾತ್ಮಕ ಅಲೆಗಳಾಗಿ ಇವೆಲ್ಲವೂ ಕೂಡ ದೂರವಾಗುತ್ತದೆ.

ಈ ಒಂದು ಪರಿಹಾರವನ್ನು ಹೇಗೆ ಶುರು ಮಾಡುವುದು ಅಂದರೆ ನೀವು ಇದನ್ನು ಗುರುವಾರ ಅಥವಾ ಭಾನುವಾರದ ದಿವಸದಂದು ಮಾಡಬಹುದಾಗಿದ್ದು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ದೇವರ ಮುಂದೆ ಇಟ್ಟು ಪೂಜಿಸಿ.ನಂತರ ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮ್ಮ ಬಲಗೈನಲ್ಲಿ ಹಿಡಿದು ನಿಮ್ಮ ಪ್ರಾರ್ಥನೆಗಳನ್ನು ಹೇಳಿಕೊಳ್ಳುತ್ತಾ ಒಂದು ಗಾಜಿನ ಲೋಟದಲ್ಲಿ ಅರ್ಧ ನೀರನ್ನು ತುಂಬಿಸಿ ಅದರೊಳಗೆ ನೀವು ಪ್ರಾರ್ಥಿಸಿ ಕೊಂಡಂತಹ ನಿಂಬೆ ಹಣ್ಣನ್ನು ಹಾಕಬೇಕು.

ಈ ರೀತಿಯ ಪರಿಹಾರವನ್ನು ನೀವು ಗುರುವಾರ ಮತ್ತು ಭಾನುವಾರದ ದಿವಸದಂದು ವಾರಕ್ಕೆ ಎರಡು ಬಾರಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ದೂರವಾಗಿ ಸಕಾರಾತ್ಮಕ ಶಕ್ತಿಯ ಮನೆಯಲ್ಲಿ ಪಸರಿಸುತ್ತದೆ.ಕೇವಲ ಒಂದೇ ಒಂದು ನಿಂಬೆ ಹಣ್ಣಿನಿಂದ ನಿಮ್ಮ ಮನೆಯಲ್ಲಿರುವ ಕೆಟ್ಟ ಶಕ್ತಿಯೂ ಪರಿಹಾರವಾಗುತ್ತದೆ ಅಂದರೆ ನೀವು ಯಾಕೆ ಒಂದು ಪರಿಹಾರವನ್ನು ಮಾಡಬಾರದು ಈಗಲೇ ನಿಮ್ಮ ವ್ಯಾಪಾರ ಸ್ಥಳದಲ್ಲಿ ಅಥವಾ ಮನೆಯಲ್ಲಿ ಅಥವಾ ನೀವು ಮನೆಯಲ್ಲಿ ಹಣ ಬಿಡುವಂತಹ ಸ್ಥಳದಲ್ಲಿ ಈ ಒಂದೇ ಒಂದು ನಿಂಬೆ ಹಣ್ಣನ್ನು ಇಡುವುದರಿಂದ ಇಷ್ಟೆಲ್ಲ ಲಾಭವಾಗುತ್ತದೆ.ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *