ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಣ ಎಂಬುದು ಮುಖ್ಯ ಏಕೆಂದರೆ ಲಕ್ಷ್ಮೀ ಸ್ವರೂಪವಾದ ಹಣವನ್ನು ಯಾರೂ ಕೂಡ ಬೇಡ ಎನ್ನುವುದಿಲ್ಲ ಜೀವನದಲ್ಲಿ ಹಣ ಇದ್ದರೆ ಎಲ್ಲ ಸಿಗುತ್ತದೆ ಎಂಬ ಭ್ರಮೆಯಲ್ಲಿ ಈಗಿನ ಕಾಲದಲ್ಲಿ ಜನರು ಇದ್ದಾರೆ ಎಂದರು ಕೂಡ ತಪ್ಪು ತಪ್ಪಾಗುವುದಿಲ್ಲ
ಆದರೆ ಈ ಹಣವನ್ನು ಗಳಿಸುವುದು ಎಷ್ಟು ಸುಲಭವೋ ಅದನ್ನು ಕಳೆಯದಂತೆ ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟವಾದ ಕೆಲಸ. ಏಕೆಂದರೆ ಗಳಿಸಿಕೊಳ್ಳುವುದಕ್ಕೆ ಕೆಲಸ ಮಾಡುತ್ತೇವೆ ಉಳಿಸಿಕೊಳ್ಳುವುದಕ್ಕೆ ರಕ್ಷಣೆ ಮಾಡುವುದು ತುಂಬಾ ಕಷ್ಟ
ಏಕೆಂದರೆ ಹಣ ಬಹುಬೇಗ ನಮ್ಮಿಂದ ದೂರ ಆಗುತ್ತದೆ.ಆದರೆ ನಿಮ್ಮ ಮನೆಯಲ್ಲಿರುವ ಮಹಿಳೆಯರ ಕೆಲವೊಂದು ಗುಣಸ್ವಭಾವಗಳಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ನೆಲೆಸಿರುವಂತೆ ಆಗುತ್ತದೆ ಎಂಬುದರಲ್ಲು ಯಾವುದೆ ರೀತಿಯಾದಂತಹ ಸಂದೇಹವಿಲ್ಲಾ. ಆ ಗುಣಗಳು ಹೊಂದಿರುವ ಮಹಿಳೆಯರು ಯಾವ ರೀತಿ ಇರುತ್ತಾರೆ ಆ ಮಹಿಳೆಯರು ನಿಮ್ಮ ಮನೆಯಲ್ಲಿಯೂ ಇದ್ದಾರೆಯೆ.
ಮಹಿಳೆಯರು ನಾವು ಹೇಳುವ ಗುಣ ಸ್ವಭಾವ ಇರುವ ರೀತಿಯಲ್ಲಿ ತಯಾರು ಮಾಡಿಕೊಳ್ಳುವುದು ತುಂಬಾ ಸುಲಭ ಆಚಾರ್ಯ ಚಾಣಕ್ಯರು ಈ ಮಾತುಗಳನ್ನು ಹೇಳಿದ್ದಾರೆ. ಮಹಿಳೆಯರಲ್ಲಿ ಮುಖ್ಯವಾಗಿ ಈಗ ನಾವು ಹೇಳುವಂತಹ ಮೂರು ಸ್ವಭಾವ ಅಥವಾ ಗುಣಗಳು ಇರಬೇಕು.
ಆ ರೀತಿ ಏನಾದರೂ ಇದ್ದರೆ ಆ ಮಹಿಳೆಯರು ಇರುವಂಥ ಮನೆಯಲ್ಲಿ ಲಕ್ಷ್ಮೀ ಯಾವಾಗಲೂ ನೆಲೆಸಿರುತ್ತಾಳೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ. ಆ ಮೂರು ಗುಣಗಳು ಯಾವುವು ಎಂದು ಯೋಚಿಸುತ್ತಿದ್ದೀರಾ ಅಲ್ಲದೆ ನಮ್ಮಲ್ಲಿ ಆ ಗುಣಗಳು ಇದೆಯೊ ಇಲ್ಲವೊ ಎಂಬ ಯೋಚನೆ ಬರುತ್ತದೆ ಅದಂತೂ ನಿಜ.
ಸಾಮಾನ್ಯವಾಗಿ ಪ್ರತಿಯೊಂದು ಮಹಿಳೆಯೂ ಕೂಡ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮೊದಲ ಆದ್ಯತೆಯನ್ನು ನೀಡುತ್ತಾರೆ ಆದರೆ ಅದಕ್ಕೆ ವಿರುದ್ಧವಾಗಿ ಕೂಡ ಕೆಲವರು ಮಹಿಳೆಯರು ಇರುತ್ತಾರೆ ಮನೆಯನ್ನ ಯಾವಾಗಲೂ ಸ್ವಚ್ಛವಾಗಿ ಇಡುವುದಿಲ್ಲ ಆದರೆ ಮನೆ ಸ್ವಚ್ಛವಾಗಿದ್ದರೆ ಆ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ.
ಆದ್ದರಿಂದ ಸಾಧ್ಯವಾದಷ್ಟು ಯಾವಾಗಲೂ ಕೂಡ ನಿಮ್ಮ ಮನೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ ಯಾವುದೇ ಮೂಲೆಗಳಲ್ಲಿ ಕಸ ಮತ್ತು ಬಟ್ಟೆಗಳು ಇರದ ರೀತಿಯಲ್ಲಿ ಕಾಪಾಡಿಕೊಳ್ಳುವುದು ಪ್ರತಿಯೊಂದು ಮಹಿಳೆಯ ಜವಾಬ್ದಾರಿಯಾಗಿರುತ್ತದೆ ಅದರ ಕಡೆ ಗಮನಕೊಡಿ
ಅದಾದ ನಂತರ ಮನೆಯಲ್ಲಿರುವ ಮಹಿಳೆಯರು ದಾನ ಧರ್ಮಗಳನ್ನು ಮಾಡಬೇಕು ಅಂದರೆ ಕೈಲಾಗದವರಿಗೆ ಮತ್ತು ಮನೆಗೆ ಅನ್ನ ನೀಡಿ ಎಂದು ಬಂದವರಿಗೆ ಒಂದು ತುತ್ತು ಅನ್ನ ಹಾಕುವ ಶಕ್ತಿ ಅವರಲ್ಲಿರಬೇಕು ಆ ರೀತಿ ದಾನ ಧರ್ಮ ಮಾಡಿದಂತಹ ಮಹಿಳೆಯರು ಮನೆಯಲ್ಲಿದ್ದರೆ ಮನೆಯಲ್ಲಿ ಲಕ್ಷ್ಮೀ ಯಾವಾಗಲೂ ನೆಲೆಸಿದ್ದಾಳೆ ಮನೆಯಲ್ಲಿರುವ ಲಕ್ಷ್ಮಿಯನ್ನು ಕಾಪಾಡುವಲ್ಲಿ ದಾನ ಧರ್ಮ ಮಾಡಿರುವ ಮಹಿಳೆಯರ ಪಾಲು ಕೂಡ ಹೆಚ್ಚಿನದೆ.
ಅದಾದ ನಂತರ ಮತ್ತೊಂದು ವಿಶೇಷವಾದ ವಿಷಯ ಎಂದರೆ ಮನೆಯಲ್ಲಿರುವ ಮಹಿಳೆಯರು ಪರಿವಾರದ ಕಡೆ ಹೆಚ್ಚು ಗಮನ ಕೊಡಬೇಕು ಯಾವಾಗಲೂ ಕೂಡ ಪರಿವಾರದ ಒಳಿತಿಗೆ ಚಿಂತಿಸಬೇಕು ಮನೆಯಲ್ಲಿರುವ ಹಿರಿಯರಿಗೆ ಗೌರವ ನೀಡಬೇಕು ಗಂಡನಿಗೆ ಎದುರು ಮಾತಾಡಬಾರದು
ಅಂದರೆ ವಾದಕ್ಕೆ ಇಳಿಯುವ ಪ್ರಯತ್ನವನ್ನು ಮಾಡಬಾರದು ಮನೆಯಲ್ಲಿರುವ ಪ್ರತಿಯೊಬ್ಬರನ್ನು ಪ್ರೀತಿ ಆದರದಿಂದ ಗೌರವಿಸಬೇಕು ಮತ್ತೆ ಮನೆಗೆ ಬರುವ ಅತಿಥಿಗಳನ್ನು ಕೂಡ ಚೆನ್ನಾಗಿ ಸತ್ಕಾರ ಮಾಡಬೇಕು ಯಾವುದೇ ರೀತಿಯಾದಂತಹ ಕೆಟ್ಟನಡವಳಿಕೆಯನ್ನು ಯಾರ ಮುಂದೆಯೂ ಕೂಡಾ ತೋರಿಸಬಾರದು
ಪರಿವಾರದಲ್ಲಿ ಇರುವವರನ್ನೆಲ್ಲ ತಮ್ಮವರು ಎಂಬ ಭಾವನೆಯೊಂದಿಗೆ ನಡೆಸಿಕೊಳ್ಳಬೇಕು. ಈ ಮೂರೂ ಗುಣಗಳು ಮಹಿಳೆಯರು ನಿಮ್ಮ ಮನೆಯಲ್ಲಿದ್ದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ ಧನ್ಯವಾದ.