ಈ ರೀತಿಯ ಗಿಡಗಳು ನಿಮ್ಮ ಮನೆಯಲ್ಲಿ ಏನಾದ್ರು ಇದ್ದರೆ ನಿಮ್ಮ ಜೀವನ ಅಂದಿನಿಂದಲೇ ಬದಲಾಗುತ್ತೆ ಬೇಕಾದ್ರೆ ನೋಡಿ ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಮಾಹಿತಿ ಅನ್ನು ನೀವೂ ತಪ್ಪದೆ ತಡೆಯಿರಿ ಯಾಕೆ ಅಂದರೆ ಮನೆಯಲ್ಲಿ ಮನೆಗೆ ಧನಾಕರ್ಷಣೆ ಮಾಡುವಂತಹ ಈ ಕೆಲವೊಂದು ಗಿಡಗಳನ್ನು ನೀವು ಮನೆಯಲ್ಲಿ ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮನೆಯಲ್ಲಿ ಎಲ್ಲವೂ ಕೂಡ ಒಳ್ಳೆಯದಾಗಿಯೇ ಇರುತ್ತದೆ. ಆದ್ದರಿಂದ ನೀವು ಕೂಡ ತಪ್ಪದೆ ಈ ಕೆಲವೊಂದು ಗಿಡಗಳನ್ನು ಮನೆಯಲ್ಲಿ ಮನೆಯ ಸುತ್ತಮುತ್ತ ಬೆಳಸಿಕೊಳ್ಳಿ.

ಹಿಂದಿನ ಕಾಲದವರನ್ನು ಗಮನಿಸಿದರೆ ಅಥವಾ ಹಳ್ಳಿ ಕಡೆ ಗಮನಿಸಿದರೆ ಮನೆಯ ಅಕ್ಕಪಕ್ಕದಲ್ಲಿ ಅಥವಾ ಮನೆಯ ಮುಂಭಾಗದಲ್ಲಿ ಕೆಲವೊಂದು ಗಿಡ ಮರಗಳನ್ನು ಬೆಳೆಸುತ್ತ ಇದ್ದರು. ಇದಕ್ಕೆ ಕಾರಣ ಅಂದರೆ ಮನೆಗೆ ಸಕಾರಾತ್ಮಕ ಶಕ್ತಿಯ ಪ್ರವೇಶ ಆಗಲಿ ಎಂದು ಇನ್ನೂ ವೈಜ್ಞಾನಿಕವಾಗಿ ಹೇಳಬೇಕೆಂದರೆ ಮನೆಗೆ ಆಮ್ಲಜನಕದ ಪೂರೈಕೆ ಆಗಬೇಕು ಅನ್ನುವ ಕಾರಣದಿಂದಾಗಿ, ಈ ಕಾರಣದ ಸಲುವಾಗಿ ಮನೆಯಲ್ಲಿ ಮನೆಯ ಮುಂದೆ ಕೆಲವೊಂದು ಗಿಡಮರಗಳ ಬೆಳೆಸಿಕೊಳ್ಳುತ್ತಿದ್ದರು.

ಮನಿ ಪ್ಲಾಂಟ್ ಮನೆಯ ಒಳಗೆ ಮನಿ ಪ್ಲಾಂಟ್ ಅನ್ನು ಬೆಳೆಸುವುದರಿಂದ ಮತ್ತು ಮನಿಪ್ಲಾಂಟ್ ತನ್ನ ಮನೆಯ ಒಳಗೆ ಇಟ್ಟುಕೊಂಡರೆ ಇದು ಕೆಲವೊಂದು ತೊಂದರೆಗಳು ಉಂಟಾಗಬಹುದೆಂದು ಸೂಚನೆ ನೀಡುತ್ತವೆ ಹೇಗೆಂದರೆ ಮನೆಯಲ್ಲಿ ಮನಿಪ್ಲಾಂಟ್ ಬೆಳೆಸಿದರೆ ಅವುಗಳು ಹಸಿರಾಗಿದ್ದರೆ ಅಥವಾ ಚೆನ್ನಾಗಿ ಬೆಳೆಯುತ್ತಿದ್ದರೆ ಆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ವೃದ್ಧಿಸುತ್ತದೆ ಅಂತ ಅರ್ಥ ಇನ್ನೂ ಮನಿಪ್ಲಾಂಟ್ ಬೆಳೆಯುತ್ತಿಲ್ಲ ಅನ್ನುವುದಾದರೆ ಅಥವಾ ಮನಿ ಪ್ಲಾಂಟ್ ಹಸಿರಾಗಿ ಇಲ್ಲ ಅಂದರೆ ಆ ಮನೆಯಲ್ಲಿ ಮುಂದಿನ ದಿವಸಗಳಲ್ಲಿ ಉದುರು ಕಷ್ಟಗಳು ಉಂಟಾಗ ಬಹುದು ಎಂಬುದರ ಸೂಚನೆಯನ್ನು ಮನಿಪ್ಲಾಂಟ್ ನೀಡುತ್ತಿರುತ್ತದೆ. ಇನ್ನೂ ಮನೆಗೆ ಧನಾಕರ್ಷಣೆ ಅನ್ನೂ ಮಾಡುತ್ತದೆ ಈ ಮನಿ ಪ್ಲಾಂಟ್.

ಶಮಿ ಸಸಿ ಈ ಗಿಡವನ್ನು ಬೆಳೆಸಲು ಜನರು ಹೆದರುತ್ತಾರೆ ಯಾಕೆಂದರೆ ಇದರಲ್ಲಿ ಶನಿದೇವ ವಾಸವಿರುತ್ತಾನೆ ಅಂತ ಆದರೆ ಶಮಿ ಸಸಿ ಬೆಳೆಸುವುದರಿಂದ ಇದು ಮನೆಗೆ ಸಕಾರಾತ್ಮಕತೆಯನ್ನು ನೀಡುತ್ತದೆ ಮನೆಗೆ ನಕಾರಾತ್ಮಕ ಪ್ರವೇಶ ಆಗದಿರುವ ಹಾಗೆ ಕಾಪಾಡುತ್ತದೆ.ತುಳಸಿ ಗಿಡ ತುಳಸಿ ಗಿಡವನ್ನು ಪ್ರತಿಯೊಬ್ಬರೂ ಕೂಡ ಮನೆಯ ಮುಂದೆ ಬೆಳೆಸಿರುತ್ತಾರೆ. ಇದರ ಕಾರಣವೇನು ಅಂದರೆ ನಮ್ಮ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನಮಾನವನ್ನು ಕೊಟ್ಟು ಗೌರವಿಸಲಾಗಿದೆ. ಇನ್ನೂ ವಾತಾವರಣವನ್ನ ಶುದ್ಧವಾಗಿ ಇಡುವುದಲ್ಲದೆ, ಮನೆಗೆ ಕೆಟ್ಟ ಶಕ್ತಿಯ ಪ್ರವೇಶ ಆಗದಿರುವ ಹಾಗೆ ಕಾಪಾಡುತ್ತದೆ ತುಳಸಿ ಗಿಡ ಇದು ಆಧ್ಯಾತ್ಮಿಕವಾಗಿ ವೈಜ್ಞಾನಿಕವಾಗಿಯು ಕೂಡ ಹೆಚ್ಚು ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ.

ಬ್ಯಾಂಬೂ ಗಿಡ ಇದನ್ನು ಮನೆಯ ಮುಂದೆ ನೆಡಬಹುದು ಇದರಿಂದ ಮನೆಗೆ ಲಕ್ಷ್ಮೀದೇವಿಯ ಆಗಮನವಾಗುತ್ತದೆ ಅಂತ ಹೇಳಲಾಗಿದೆ. ಶಾಸ್ತ್ರಗಳು ತಿಳಿಸುತ್ತವೆ. ನಿಮಗೂ ಕೂಡ ಮನೆಯ ಮುಂದೆ ಜಾಗವಿದ್ದರೆ ಬ್ಯಾಂಬೂ ಗಿಡವನ್ನು ಬೆಳೆಸಿ ಅಥವಾ ಮಾರುಕಟ್ಟೆಯಲ್ಲಿ ಕೆಲವೊಂದು ಬೋನ್ಸಾಯ್ ಗಿಡಗಳು ದೊರೆಯುತ್ತದೆ ಅದನ್ನು ಕೂಡ ಮನೆಯಲ್ಲಿ ಇಟ್ಟು ಬೆಳೆಸಬಹುದು ಇದರಿಂದ ಮನೆಯ ವಾತಾವರಣ ಶುದ್ಧವಾಗಿ ಇರುತ್ತದೆ.

ಈ ಕೆಲವೊಂದು ಗಿಡಗಳು ನೀವು ಕೂಡ ನಿಮ್ಮ ಮನೆಯಲ್ಲಿ ಅಥವಾ ಮನೆಯ ಮುಂದೆ ಬೆಳೆಸಿ ಇದರಿಂದ ವಾತಾವರಣ ಕೂಡ ಶುದ್ಧಿಯಾಗುತ್ತದೆ ಮನೆಗೆ ಧನಾಕರ್ಷಣೆ ಆಗುತ್ತದೆ ಇದರ ಜತೆಗೆ ವೈಜ್ಞಾನಿಕವಾಗಿಯೂ ಕೂಡ ಕೆಲವೊಂದು ಪ್ರಯೋಜನಗಳು ಆಗುತ್ತವೆ ಶುಭ ದಿನ ಧನ್ಯವಾದಗಳು.

Leave a Reply

Your email address will not be published.