ಈ ರೀತಿಯಾಗಿ ಹುಡುಗರು ಮಾಡಿದರೆ ಯಾವ ಹುಡುಗಿಯಾದರೂ ಪ್ರೀತಿಗೆ ಶರಣಾಗಲೇಬೇಕು !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಜೀವನದಲ್ಲಿ ನಿಮ್ಮನ್ನು ಯಾವುದಾದರೂ ಹುಡುಗಿ ಇಷ್ಟ ಪಡಬೇಕು ಅಂತ ಅಂದುಕೊಳ್ಳುತ್ತಾ ಇದ್ದರೆ,ಯಾವ ಹುಡುಗಿಯೂ ನಿಮ್ಮನ್ನು ಇಷ್ಟ ಪಡುತ್ತಿಲ್ಲ ಅನ್ನುವುದಾದರೆ ಅಥವಾ ನೀವು ಯಾವುದಾದರೂ ಹುಡುಗಿಯನ್ನು ಇಷ್ಟಪಡುತ್ತಿದ್ದು ಆ ಹುಡುಗಿಯೂ ಕೂಡ ನಿಮ್ಮನ್ನು ಇಷ್ಟ ಪಡಬೇಕಾದರೆ.ಅಥವಾ ನಿಮ್ಮ ಸಂಗಾತಿಯು ಕೂಡ ನಿಮ್ಮನ್ನು ಹೆಚ್ಚು ಪ್ರೀತಿ ಮಾಡಬೇಕಾದರೆ ನೀವು ಈ ಕೆಲವೊಂದು ವ್ಯಕ್ತಿತ್ವವನ್ನು ನಿಮ್ಮಲ್ಲಿ ಅಳವಡಿಸಿಕೊಂಡು ಮುಂದೆ ಸಾಗುವುದರಿಂದ ನಿಮ್ಮ ಜೀವನದಲ್ಲಿ ನೀವು ಇಷ್ಟಪಟ್ಟ ಅಷ್ಟೇ ನಿಮ್ಮ ಸಂಗಾತಿಯ ಕೂಡ ನಿಮ್ಮನ್ನು ಇಷ್ಟಪಡುತ್ತಾರೆ.

ಹುಡುಗಿಯರು ಹುಡುಗರಲ್ಲಿ ಬಯಸುವ ಈ ಕೆಲವೊಂದು ವ್ಯಕ್ತಿತ್ವಗಳು ಹುಡುಗರಲ್ಲಿ ಇದ್ದರೆ ಆಕೆ ನಿಜಕ್ಕೂ ಖುಷಿಯಾಗಿ ಇರುತ್ತಾರೆ ಹಾಗೇ ಹುಡುಗಿ ಬಯಸುವ ಆ ಕೆಲವೊಂದು ವ್ಯಕ್ತಿತ್ವಗಳು ಯಾವವು ಹಾಗೇ ಹುಡುಗರು ತಮ್ಮ ಸಂಗಾತಿಯನ್ನು ಖುಷಿ ಪಡಿಸುವುದಕ್ಕೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಈ ಮಾಹಿತಿಯನ್ನು ತಿಳಿಸಿ ಕೊಳ್ಳುತ್ತಿರುವುದು ನಿಮ್ಮ ಸಂಗಾತಿಯನ್ನು ಖುಷಿ ಪಡಿಸುವುದಕ್ಕಾಗಿ ಆಕೆಯನ್ನು ಜೀವನ ಪರ್ಯಂತ ನಿಮ್ಮ ವಾಗಿಸಿ ಕೊಳ್ಳುವುದಕ್ಕಾಗಿ ಆದರೆ ನೀವು ನಿಮ್ಮ ಜೀವನದಲ್ಲಿ ಒಂಟಿಯಾಗಿ ಬೇಕು ಅನ್ನಿಸಿದರೆ ಇದರ ಅವಶ್ಯಕತೆ ಇರುವುದಿಲ್ಲ .

ಆದರೆ ಹುಡುಗಿಯೊಬ್ಬಳು ನಿಮ್ಮಣ್ಣ ಇಷ್ಟ ಪಡುತ್ತಿದ್ದಾಳೆ ಅಂದರೆ ಆಕೆ ನಿಮ್ಮಿಂದ ಕೆಲವೊಂದು ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾಳೆ ಅವಳ ನಿರೀಕ್ಷೆಯಲ್ಲಿ ನೀವು ಕೆಲವೊಂದು ಆಸೆಗಳನ್ನು ಪೂರ್ಣಗೊಳಿಸಿದರೆ ಆಕೆ ಕೂಡ ಖುಷಿಯಾಗಿರುತ್ತಾಳೆ.ಎಲ್ಲ ಹುಡುಗಿಯರು ಹುಡುಗರಲ್ಲಿ ಹಣವನ್ನೇ ನೋಡುವುದಿಲ್ಲ ಇದರ ಬದಲಾಗಿ ಕೆಲವೊಂದು ವ್ಯಕ್ತಿತ್ವವನ್ನು ಆತನಲ್ಲಿ ಬಯಸುತ್ತಿರುತ್ತಾರೆ ಹೆಚ್ಚಾಗಿ ಪ್ರಾಮಾಣಿಕ ಪ್ರೀತಿ ಮಾಡುವ ಹುಡುಗಿಯರು ಹುಡುಗರಲ್ಲಿ ಬಯಸುವುದು ಹುಡುಗರ ಸಮಯವನ್ನು ಹೌದು ಹುಡುಗ  ತಮ್ಮ ಸಂಗಾತಿಯ ಜೊತೆ ಇದ್ದಾಗ ಅನವಶ್ಯಕವಾಗಿ ಮೊಬೈಲ್ ಬಳಸುವುದರಿಂದ ಹುಡುಗಿಯರ ಮನಸ್ಸಿನಲ್ಲಿ ಒಂದು ಭಾವನೆ ಹುಟ್ಟುತ್ತದೆ .

ನಮ್ಮ ಮೇಲೆ ಆಸಕ್ತಿ ಇಲ್ಲದೆ ಈ ರೀತಿ ಟೈಮ್ ಪಾಸ್ ಮಾಡುತ್ತಿದ್ದಾರೆ ಅಂತ ಆದ ಕಾರಣ ನೀವು ನಿಮ್ಮ ಸಂಗಾತಿಯೊಂದಿಗೆ ಇದ್ದಾಗ ಆದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಅವಶ್ಯಕ ಇದ್ದಾಗ ಮಾತ್ರ ಮೊಬೈಲ್ ಬಳಸುವುದು ಒಳ್ಳೆಯದು.ನಿಮ್ಮ ಸಂಗಾತಿಯನ್ನು ನೀವು ಆಚೆ ಕರೆದೊಯ್ಯುವಾಗ ಆಕೆಯನ್ನು ಯುವರಾಣಿಯ ಹಾಗೆ ನೋಡಿಕೊಳ್ಳಿ ಉದಾಹರಣೆಗೆ ಹೋಟೆಲ್ಗೆ ಹೋದಾಗ ಆಕೆಗಾಗಿ ಕುರ್ಚಿಯನ್ನು ವ್ಯವಸ್ಥೆ ಮಾಡಿಕೊಡುವುದು ಅಥವಾ ಆಕೆಯ ಜೊತೆ ನೀವು ಕೂಡ ನಡೆದುಕೊಂಡು ಹೋಗುವುದು ಆಕೆಯ ಬಯಕೆಗಳನ್ನು ಕೇಳುವುದು ಹೀಗೆ ಮಾಡಿದರೆ ಹುಡುಗಿ ನಿಮ್ಮನ್ನು ಇಷ್ಟಪಡುತ್ತಾಳೆ.

ಹುಡುಗಿಯರಿಗೆ ಸ್ವಲ್ಪ ನಾಜೂಕುತನ ಹೆಚ್ಚಿರುತ್ತದೆ ಅವರು ತಮಗೆ ಅನಿಸುವ ಆಸೆ ಗಳನ್ನಾಗಿ ಬಯಕೆಗಳನ್ನು ಬಾಯಿಬಿಟ್ಟು ಹೇಳಿಕೊಳ್ಳುವುದಿಲ್ಲ ಅದನ್ನು ಹುಡುಗರು ಅರ್ಥ ಮಾಡಿಕೊಂಡು ಹುಡುಗಿಯರ ಆಸೆಯನ್ನು ಪೂರ್ತಿ ಮಾಡುವ ಹುಡುಗರೆಂದರೆ ಹುಡುಗಿಯರಿಗೆ ಇಷ್ಟ ಆಗ್ತಾರಂತೆ.ನೀವು ನಿಮ್ಮ ಸಂಗಾತಿಯೊಂದಿಗೆ ಇದ್ದಾಗ ಯಾವುದಾದರೂ ಒಂದು ವಿಷಯದ ಬಗ್ಗೆ ಮಾತನಾಡುತ್ತಿದ್ದರೆ ಆ ವಿಚಾರದ ಬಗ್ಗೆ ನಿಮ್ಮ ಸಂಗಾತಿಗೆ ಆಸಕ್ತಿ ಇಲ್ಲವಾದರೆ ಆ ವಿಚಾರದ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು .

ಹಾಗೆ ಹುಡುಗರು ಅವರ ಸಂಗಾತಿಯಲ್ಲಿರುವ ನೆಗೆಟಿವ್ ವಿಚಾರಗಳನ್ನು ಹೆಚ್ಚಾಗಿ ಹೇಳುವುದರ ಬದಲು ಪಾಸಿಟಿವಿಟಿಯನ್ನು ಹೇಳಿಕೊಳ್ಳಬೇಕು, ಆದರೆ ಯಾವುದಾದರೂ ಒಂದು ಸಮಯದಲ್ಲಿ ಮಾತ್ರ ಅವಳು ತಪ್ಪುಗಳ ಬಗ್ಗೆ ಆಕೆಗೆ ಅರಿವು ಮೂಡಿಸುವುದು ಒಳ್ಳೆಯದು.ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಗಮನವನ್ನು ವಹಿಸುತ್ತಾರೆ ಅದಕ್ಕಾಗಿ ಹುಡುಗರು ತಮ್ಮ ಸಂಗಾತಿಯ ಅಂದವನ್ನು ವರ್ಣಿಸುವುದರಿಂದ ಹುಡುಗಿಯರಿಗೆ ಖುಷಿಯಾಗುತ್ತದೆ,ಆದರೆ ಯಾವಾಗಲೂ ಈ ಒಂದು ಸೌಂದರ್ಯ ವರ್ಣನೆಯನ್ನೆ ಮಾಡುತ್ತಾ ಇದ್ದರೆ ಹುಡುಗಿಯರಲ್ಲಿ ಕೂಡ ಮುಜುಗರ ಹುಟ್ಟುವ ಸಾಧ್ಯತೆ ಇರುತ್ತದೆ.

Leave a Reply

Your email address will not be published. Required fields are marked *