ನಮಸ್ಕಾರ ಸ್ನೇಹಿತರೆ ನಾವು ಇಂದಿನ ಮಾಹಿತಿಯಲ್ಲಿ ನಿಮಗೆ ಅಕ್ಕಿಯಲ್ಲಿ ಹುಳ ಆಗದಂತೆ ವರ್ಷಾನುಗಟ್ಟಲೇ ಇಟ್ಟರೂ ಕೂಡ ಅಕ್ಕಿಯನ್ನು ಹುಳಗಳಿಂದ ರಕ್ಷಿಸುವುದು ಹೇಗೆ ಎಂದು ಇಂದಿನ ಮಾಹಿತಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸ್ನೇಹಿತರೆ ನಮಗೆ ಮುಖ್ಯವಾಗಿ ಆಹಾರದಲ್ಲಿ ಬೇಕಾಗಿರುವುದು ಅಕ್ಕಿ.ಅಕ್ಕಿಯಿಂದ ರೈಸ್ ಮಾಡಿ ತಿನ್ನದಿದ್ದರೆ ನಮಗೆ ಊಟವು ಪರಿಪೂರ್ಣವಾಗುವುದಿಲ್ಲ.
ಹಾಗಾಗಿ ಎಲ್ಲರ ಮನೆಯಲ್ಲಿಯೂ ಕೂಡ ಈ ಅಕ್ಕಿಯನ್ನು ಒಂದು ಡಬ್ಬದಲ್ಲಿ ಶೇಖರಿಸಿಟ್ಟು ಇರುತ್ತಾರೆ.ಇನ್ನು ಕೆಲವರ ಮನೆಯಲ್ಲಿ ಅಕ್ಕಿಯನ್ನು ಹಾಗೆಯೇ ಒಂದು ಚೀಲದಲ್ಲಿ ಇಟ್ಟಿರುತ್ತಾರೆ.
ಹೀಗೆ ಡಬ್ಬದಲ್ಲಿ ಅಥವಾ ಚೀಲದಲ್ಲಿ ಇಟ್ಟಿರುವಾಗ ಅಕ್ಕಿ ಮೇಲೆ ಹುಳಗಳು ಆಗುತ್ತವೆ. ಪ್ರಾರಂಭದಲ್ಲಿ ಹೊಸದಾಗಿ ತಂದಾಗ ಅಂದರೆ ಚೀಲದಲ್ಲಿ ಹೊಸದಾಗಿ ತಂದಾಗ ಚೀಲದಲ್ಲಿ ಹುಳುಗಳು ಇರುವುದಿಲ್ಲ .
ಒಂದು ಸಾರಿ ನೀವು ಅದನ್ನು ತೆಗೆದು ಮಾಡಿದಾಗ ಆರಂಭವಾಗುತ್ತವೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುವಂತಹ ಒಂದು ದೊಡ್ಡದಾದ ಸಮಸ್ಯೆಯಾಗಿದೆ.
ಅಕ್ಕಿಗಳಲ್ಲಿ ಒಂದು ರೀತಿಯ ಗುಣವಲ್ಲ ಸಾಮಾನ್ಯವಾಗಿ ನಾನಾರೀತಿಯ ಹುಳಗಳು ಆಗುತ್ತವೆ. ಕಪ್ಪು ಹುಳಗಳು, ಬಿಳಿ ಹುಳ ಗಳು ಹಾಗೆಯೇ ನಾನಾ ಬಗೆಯ ಹುಳುಗಳು ಆಗುತ್ತದೆ. ಅಕ್ಕಿಯನ್ನು ಹುಳಗಳಿಂದ ರಕ್ಷಿಸುವುದು ಹೇಗೆ ಎಂದು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.
ಮೊದಲನೆಯ ಟಿಪ್ಸ್ ಯಾವುದೆಂದರೆ,ನೀವು ಅಕ್ಕಿ ಚೀಲಕ್ಕೆ ಅಥವಾ ಅಕ್ಕಿಯನ್ನು ಹಾಕಿದಂತಹ ಡಬ್ಬಕ್ಕೆ ನಾಲ್ಕರಿಂದ ಐದು ಒಣ ಮೆಣಸಿನಕಾಯಿಯನ್ನು ಹಾಕಿರಬೇಕು. ಅವನ ಒಣ ಮೆಣಸಿನಕಾಯಿ ತುಂಬಾನೇ ಖಾರವಾಗಿದ್ದು ಮತ್ತು ಕೆಂಪಾಗಿ ಇರಬೇಕು.
ಹೀಗಿದ್ದರೆ ನಿಮ್ಮ ಮನೆಯಲ್ಲಿ ಇರುವಂತಹ ವರ್ಷಾನುಗಟ್ಟಲೆ ಇಟ್ಟರು ಕೂಡ ಅಕ್ಕಿಯಲ್ಲಿ ಹುಳಗಳು ಆಗುವುದಿಲ್ಲ. ಎರಡನೆಯದಾಗಿ ಕಹಿಬೇವಿನ ಸೊಪ್ಪು, ಈಗ ಬೇವಿನಸೊಪ್ಪನ್ನು ಅಕ್ಕಿಯಲ್ಲಿ ಹುದುಗಿಸಿಟ್ಟ ರೆ ನಿಮ್ಮ ಮನೆಯಲ್ಲಿ ಇರುವಂತಹ ಅಕ್ಕಿಗೆ ಹುಳಗಳು ಆಗುವುದಿಲ್ಲ.
ಈ ಬೇವಿನ ಸೊಪ್ಪು ಒಣಗಿದರೂ ಸಹ ಅದರಲ್ಲಿ ಅಂದರೆ ಡಬ್ಬದಲ್ಲಿ ಇ ಡಬಹುದು. ಹೀಗೆ ತೆರೆ ನಿಮ್ಮ ಅಕ್ಕಿಯಲ್ಲಿ ಹುಳಗಳು ಆಗುವುದಿಲ್ಲ. ಮೂರನೆಯದಾಗಿ ನಿಮ್ಮ ಅಕ್ಕಿಯಲ್ಲಿ ಅಂದರೆ ಅಕ್ಕಿಯ ಡಬ್ಬದಲ್ಲಿ ಅಥವಾ ಅಕ್ಕಿಯ ಚೀಲದಲ್ಲಿ ಬೆಳ್ಳುಳ್ಳಿಯನ್ನು ಹುದುಗಿಸಿಟ್ಟ ರೆ ಅಕ್ಕಿಯನ್ನು ಹಾಳಾಗದಂತೆ ವರ್ಷಾನುಗಟ್ಟಲೆ ಕೂಡ ಇಟ್ಟುಕೊಳ್ಳಬಹುದು.
ನಾಲ್ಕನೆಯ ಟಿಪ್ಸ್ ಯಾವುದೆಂದರೆ ಇದು ಸಾಮಾನ್ಯವಾಗಿ ಭತ್ತವನ್ನು ಬೆಳೆಯುವ ಅಂದರೆ ಅದನ್ನು ಅಕ್ಕಿಯನ್ನು ಮಾಡಿ ಮನೆಯಲ್ಲಿ ಇಡುವವರು ಸಾಮಾನ್ಯವಾಗಿ ಇದನ್ನು ಈ ಟಿಪ್ಸ್ ಅನ್ನು ಉಪಯೋಗಿಸುತ್ತಾರೆ.
ಅದು ಯಾವುದೆಂದರೆ ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಅಂದರೆ 25 ಕೆಜಿ ಬ್ಯಾಗಿನ ಅಕ್ಕಿಗೆ ಎಷ್ಟು ಬೇಕು ಎನ್ನುವುದನ್ನು ನಾನು ತಿಳಿಸಿಕೊಡುತ್ತೇನೆ. ಮೊದಲಿಗೆ ಇದಕ್ಕೆ ಬೇಕಾಗುವ ಸಾಮಗ್ರಿಗಳು ಐದರಿಂದ ಆರು ಎಸಳು ಬೆಳ್ಳುಳ್ಳಿ, ಹತ್ತರಿಂದ ಹದಿನೈದು ಕಾಳುಮೆಣಸು, ಹತ್ತರಿಂದ ಹದಿನೈದು ಲವಂಗ, ಹಾಗೂ ಕಹಿಬೇವಿನ ಸೊಪ್ಪು.. ಇವೆಲ್ಲವನ್ನೂ ಮಿಕ್ಸ್ ಮಾಡಿ ಒಂದು ಪೇಸ್ಟ್ ರೀತಿ ಹಾಗೆ ಮಾಡಿಕೊಳ್ಳಬೇಕು.
ಹಾಗೆ ಮಾಡಿಕೊಂಡ ನಂತರ ಆ ಪೇಸ್ಟ್ ಅನ್ನು ಸಂಡಿಗೆ ರೀತಿ ತಟ್ಟಿ ಒಂದು ಪ್ಲೇಟ್ ನಲ್ಲಿ ಹಾಕಿ ಇಡಬೇಕು. ಹಾಗೆ ಹಾಕಿದ ನಂತರ ಆ ಸಂಡಿಗೆ ರೀತಿ ಇರುವಂತಹ ಪೇಸ್ಟನ್ನು ಬಿಸಿಲಿನಲ್ಲಿ ಒಂದು ದಿನ ಒಣಗಲು ಬಿಡಬೇಕು.
ಹಾಗೆ ಒಣಗಿದ ನಂತರ ಆ ಸಂಡಿಗೆ ರೀತಿ ಇರುವ ಆ ಪೇಸ್ಟನ್ನು ನಿಮ್ಮ ಅಕ್ಕಿಯ ಡಬ್ಬದಲ್ಲಿ ಅಥವಾ ಚೀಲದಲ್ಲಿ ಹಾಕಿಡಬೇಕು. ಹೀಗೆ ಹಾಕಿಟ್ಟಿದ್ದ ಆದಲ್ಲಿ ನಿಮ್ಮ ಅಕ್ಕಿಯಲ್ಲಿ ಯಾವುದೇ ಕಾರಣಕ್ಕೂ ಹುಳುಗಳು ಆಗುವುದಿಲ್ಲ.
ನೋಡಿದ್ರಲ್ಲ ಸ್ನೇಹಿತರೆ ನಾವು ಹೇಳುವ ಟಿಪ್ಸ್ ಅನ್ನು ನೀವು ಕೂಡ ಒಂದು ಬಾರಿ ಟ್ರೈ ಮಾಡಿ ಒಳ್ಳೆಯ ಫಲಿತಾಂಶ ಸಿಕ್ಕೇ ಸಿಗುತ್ತದೆ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.