ಎಲ್ಲರಿಗೂ ನನ್ನ ನಮಸ್ಕಾರಗಳು ಫ್ರೆಂಡ್ಸ್ ನಾನು ನಿಮಗೆ ಈ ದಿನದ ಮಾಹಿತಿಯಲ್ಲಿ ಯಾವುದೇ ವಿಚಾರದ ಬಗ್ಗೆ ತಿಳಿಸಿಕೊಡಲು ಬಂದಿಲ್ಲ ಅದರ ಬದಲಾಗಿ ನಮ್ಮ ಮನೆಯ ಅಂಗಳದಲ್ಲಿ ಸ್ವಲ್ಪ ಜಾಗವಿದ್ದರೆ ಸಾಕು ಹೇಗೆ ಪುದೀನ ಸೊಪ್ಪನ್ನು ಬೆಳೆಯುವುದು ಎಂಬುದನ್ನು ತಿಳಿಸಿಕೊಡುತ್ತೇನೆ.
ಇದರಲ್ಲೇನಿದೆ ಪುದಿನ ಬೆಳೆಯುವುದು ಮಾಮೂಲಿ ಹಾಗೇನೆ ಅಂತ ನೀವು ಅಂದುಕೊಳ್ಳಬಹುದು ಆದರೆ ಪುದಿನ ಬೆಳೆಯುವುದರಲ್ಲಿ ಕೂಡ ಕೆಲವೊಂದು ಕ್ರಮವಿದೆ ಅದನ್ನ ನೀವು ಮನೆಯಲ್ಲಿ ಸಣ್ಣ ಜಾಗದಲ್ಲಿ ಪು ದಿನವನ್ನು ಬೆಳೆಯುವಾಗ ಪಾಲಿಸಿದರೆ ಒಳ್ಳೆಯ ಹಸಿರಾದ ನವಿರಾದ ಪುದಿನ ಸೊಪ್ಪು ನಿಮ್ಮ ಮನೆಯ ಅಂಗಳದಲ್ಲಿಯೇ ಬೆಳೆಯುತ್ತದೆ.
ಹೌದು ಪುದಿನ ಸೊಪ್ಪು ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ಸಾಕಷ್ಟು ಮಾಹಿತಿಯಲ್ಲಿ ತಿಳಿದಿದ್ದೀರಾ ಆಕೆ ಇನ್ನೂ ಈ ಸೊಪ್ಪಿನ ಪ್ರಯೋಜನವನ್ನು ಹೇಳುವುದಾದರೆ ಅಜೀರ್ಣವನ್ನು ದೂರ ಮಾಡುತ್ತದೆ .
ದೇಹವನ್ನು ತಂಪಾಗಿರಿಸಲು ಸಹಾಯ ಮಾಡುವುದರ ಜೊತೆಗೆ ಆರೋಗ್ಯವರ್ಧಕ ಮಾತ್ರ ಅಲ್ಲ ಪುದಿನ ಸೊಪ್ಪು ಸೌಂದರ್ಯವರ್ಧಕವಾಗಿಯೂ ಕೂಡ ಕೆಲಸ ಮಾಡುತ್ತದೆ.
ಇದೀಗ ತಿಳಿಯೋಣ ಪುದಿನ ಅವನ ಮನೆಯಲ್ಲಿಯೇ ಹೇಗೆ ಬೆಳೆಯಬಹುದು ಅದರಲ್ಲಿಯೂ ಕಡಿಮೆ ಜಾಗದಲ್ಲಿ ಹೆಚ್ಚು ಪುದೀನ ಸೊಪ್ಪನ್ನು ಹೇಗೆ ಬೆಳೆಯುವುದು ಎಂಬುದನ್ನು ಮೊದಲಿಗೆ ಪುದೀನ ಸೊಪ್ಪನ್ನು ಮಾರುಕಟ್ಟೆಯಿಂದ ತಂದಾಗ ಅದರಲ್ಲಿ ಕೇವಲ ಎಲೆಗಳನ್ನು ಮಾತ್ರ ತೆಗೆದುಕೊಂಡು ಕಡ್ಡಿಗಳನ್ನು ಬಿಸಾಡುತ್ತೇವೆ,
ನೀವು ಗಮನಿಸಿ ಕೆಲವೊಂದು ಸೊಪ್ಪುಗಳಲ್ಲಿ ಬೇರು ಸಮೇತ ಬಂದಿರುತ್ತದೆ ಆ ಸೊಪ್ಪುಗಳನ್ನು ತೆಗೆದುಕೊಂಡು ನಾವು ಬೇರನ್ನು ಬಿಸಾಡುತ್ತೇವೆ ಆದರೆ ಆ ಬೇರನ್ನು ನೀವು ಮಣ್ಣಿಗೆ ಹಾಕಿದಾಗ ಆ ಸೊಪ್ಪು ನೆಲದಲ್ಲಿ ಬೆಳೆಯುತ್ತದೆ ಅದಕ್ಕೆ ಒಳ್ಳೆಯ ಹದವಾದ ಮಣ್ಣು ಸಿಕ್ಕರೆ ಇನ್ನು ಸೊಪ್ಪುಗಳು ಚೆನ್ನಾಗಿ ಬೆಳೆಯುತ್ತದೆ.
ಪುದೀನ ಸೊಪ್ಪನ್ನು ತಂದಾಗ ಅದರಲ್ಲಿರುವ ಬಲಿತಿರುವ ಬೇರುಗಳನ್ನು ತೆಗೆದುಕೊಳ್ಳಿ ಹದಿನೈದು ಕಡ್ಡಿಗಳನ್ನು ತೆಗೆದುಕೊಂಡು ಒಂದು ಗಾಜಿನ ಲೋಟದಲ್ಲಿ ನೀವು ಕುಡಿಯಲು ಬಳಸುವ ನೀರಿನ್ನು ಅರ್ಧ ಲೋಟದಷ್ಟು ತುಂಬಿಸಿ ಅದರೊಳಗೆ ಈ ಪುದಿನ ಸೊಪ್ಪಿನ ಕಡ್ಡಿಗಳನ್ನು ಹಾಕಬೇಕು,
ನೆನಪಿಡಿ ಪುದಿನ ಸೊಪ್ಪು ಬಲಿತಿರಬೇಕು. ಇದೀಗ ನೀವು ಈ ಗಾಜಿನ ಲೋಟವನ್ನು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇಟ್ಟರೆ ಸಾಕು. ಗಾಜಿನ ಲೋಟದ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳಬೇಕು ಅಂತ ಏನೂ ಇಲ್ಲ ಎಲ್ಲಿ ಸೂರ್ಯನ ಬೆಳಕು ಇರುತ್ತದೆಯೋ ಅಲ್ಲಿ ಗಾಜಿನ ಲೋಟ ಇಟ್ಟರೆ ಸಾಕು.
ಇಷ್ಟು ಆದ ಬಳಿಕ ಪ್ರತಿ ದಿನ ಗಾಜಿನ ಲೊಟದಲ್ಲಿ ಇರುವ ನೀರನ್ನು ಬದಲಾಯಿಸುವ ಅವಶ್ಯಕತೆ ಇರುವುದಿಲ್ಲ ಜೊತೆಗೆ ಒಂದು ವಾರದ ನಂತರ ಗಮನಿಸಿ ಈ ಪುದಿನ ಸೊಪ್ಪಿನ ಕಡ್ಡಿಗಳಲ್ಲಿ ಸಣ್ಣಗೆ ಚಿಗುರು ಬಂದಿರುತ್ತದೆ .
ನಂತರ ಮತ್ತೆ ಆ ಗಾಜಿನ ಲೋಟದ ನೀರನ್ನು ವಾರದ ಬಳಿಕ ಬದಲಾಯಿಸಿ ಇನ್ನು ಮೂರು ನಾಲ್ಕು ದಿನ ಹಾಗೆ ಇಡಿ ನಂತರ ಒಂದು ಪಾಟ್ನಲ್ಲಿ ಉದುರು ಉದುರಾಗಿರುವ ಮಣ್ಣನ್ನು ಹಾಕಿ ಸ್ವಲ್ಪ ಮಣ್ಣನ್ನು ಮಾಡಿಕೊಳ್ಳಿ ನಂತರ ಈ ಪುದಿನ ಸೊಪ್ಪಿನ ಕಡ್ಡಿಗಳನ್ನು ನೆಡಬೇಕು.
ಈ ರೀತಿ ನೆಟ್ಟ ನಂತರ ಇದಕ್ಕೆ ಹೆಚ್ಚು ನೀರನ್ನು ಹಾಕುವ ಅವಶ್ಯಕತೆ ಇರುವುದಿಲ್ಲ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸ್ವಲ್ಪ ನೀರನ್ನು ಚಿಮುಕಿಸುತ್ತಿದ್ದ ಸಾಕು ಈ ಪುದಿನ ಸೊಪ್ಪಿನ ಗಿಡಗಳು ಚೆನ್ನಾಗಿ ಬೆಳೆದು ಎಲೆಗಳು ಕೂಡ ಹಸಿರಾಗಿ ಬೆಳೆಯುತ್ತದೆ.
ಹೀಗೆ ಪುದಿನ ಬೆಳೆದ ನಂತರ ಅದನ್ನು ವಾರಕ್ಕೊಮ್ಮೆ ಗಟ್ಟಿಗಳ ಸಮೇತ ಕೀಳುತ್ತೀರಿ. ಯಾಕೆ ಅಂದರೆ ಪುದೀನಾವನ್ನು ಆಗಾಗ ಕೀಳದೇ ಇದ್ದರೆ ಎಲೆಗಳು ತುಂಬಾನೇ ಹಸಿರಾಗಿ ಕಹಿ ರುಚಿಗೆ ತಿರುಗುವ ಸಾಧ್ಯತೆ ಇರುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.