ಈ ರೀತಿಯಾಗಿ ದಾಸವಾಳ ಹೂವಿನಿಂದ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯು ಯಾವಾಗಲೂ ಸ್ಥಿರವಾಗಿ ನಿಲ್ಲುತ್ತಾಳೆ !!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪ್ರತಿಯೊಬ್ಬರ ಜೀವನದಲ್ಲಿಯೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ, ಹಾಗೆಯೇ ಈ ಹಣದ ಅಧಿಪತಿಯಾಗಿರುವ ಕುಬೇರ ದೇವನನ್ನು ಲಕ್ಷ್ಮೀದೇವಿಯನ್ನು ಪೂಜಿಸುವುದು ಕೂಡ ಅಷ್ಟೇ ಅತ್ಯವಶ್ಯಕವಾಗಿರುತ್ತದೆ.

ಯಾಕೆ ಅಂತೀರಾ ದುಡ್ಡಿಗೆ ಅಧಿಪತಿ ಕುಬೇರ, ಹಣದ ಸ್ವರೂಪ ಲಕ್ಷ್ಮೀದೇವಿ ಇವರಿಬ್ಬರನ್ನು ನಾವು ಪೂಜಿಸುತ್ತಾ ಬರುವುದರಿಂದ ನಮ್ಮ ಜೀವನದಲ್ಲಿ ಹಣಕ್ಕೆ ಸಂಬಂಧಪಟ್ಟಂತೆ ಯಾವ ಸಮಸ್ಯೆಗಳು ಎದುರಾಗುವುದಿಲ್ಲ, ಹಾಗೆಯೇ ಲಕ್ಷ್ಮೀ ದೇವಿಯ ಸಾನ್ನಿಧ್ಯವೂ ಕೂಡ ನಮ್ಮ ಮೇಲೆ ಆಗುತ್ತದೆ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಹೀಗೆ ಒಂದಲ್ಲ ಒಂದು ಬಾರಿ ಅನಿಸಿರುತ್ತದೆ, ಅದೇನೆಂದರೆ ನಾವು ಕಡಿಮೆ ಶ್ರಮಿಸಿ ಹೆಚ್ಚು ಹಣವನ್ನು ದುಡಿಯ ಬೇಕಪ್ಪಾ ಅಂತ, ಹಾಗೆಯೇ ಕೆಲವರಿಗೆ ಆಕಸ್ಮಿಕ ಧನ ಲಾಭವಾಗಬಾರದ ಅಂತ ಕೂಡ ಅನಿಸುತ್ತ ಇರುತ್ತದೆ,

ಈ ರೀತಿ ನಿಮಗೆ ಅನಿಸ್ತಾ ಇದ್ರೆ ಅಥವಾ ನಿಮಗೆ ಉದ್ಯೋಗ ಸಿಗದೆ ಜೀವನದಲ್ಲಿ ಹಣದ ಕಷ್ಟಗಳು ಬಹಳಾನೇ ಇದೆ ಅನ್ನುವುದಾದರೆ, ನಾವು ಈ ದಿನ ತಿಳಿಸುವಂತಹ ಕೆಲವೊಂದು ಪರಿಹಾರವನ್ನು ಕೈಗೊಳ್ಳಿ ಹೇಗೆ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನೀವೆ ಕಾಣಬಹುದು.

ಈ ಮೊದಲೇ ಹೇಳಿದ ಹಾಗೆ ಜೀವನದಲ್ಲಿ ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ, ಹಾಗೆ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಯಾರಿಗಾದರೂ ಎದುರಾಗಿರುತ್ತದೆ,

ಅಂತಹ ಸಮಯದಲ್ಲಿ ಧೃತಿಗೆಡದೆ ಕೆಲವೊಂದು ಪರಿಹಾರವನ್ನು ಮಾಡಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವಂತಹ ಕೆಲವೊಂದು ತಂತ್ರಗಳನ್ನು ಮಾಡುವುದರಿಂದ, ಜೀವನದಲ್ಲಿ ಸಮಸ್ಯೆಗಳು ನಿವಾರಣೆಯಾಗುತ್ತದೆ.

ದುಡ್ಡಿಗೆ ಅಧಿಪತಿಯಾಗಿರುವ ಕುಬೇರ ದೇವನು ಈಶ್ವರನಿಗೆ ಪೂಜೆ ಸಲ್ಲಿಸುತ್ತಾರೆ, ಈ ರೀತಿ ಕುಬೇರ ದೇವನು ಈಶ್ವರನಿಗೆ ಪೂಜೆಯನ್ನು ಸಲ್ಲಿಸುವಂತಹ ಪಟವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ, ಆ ಮನೆಯಲ್ಲಿ ಹಣಕ್ಕೆ ಸಂಬಂಧ ಪಟ್ಟಂತೆ ಸಮಸ್ಯೆಗಳು ಕ್ರಮೇಣವಾಗಿ ನಿವಾರಣೆಯಾಗುತ್ತಾ ಬರುತ್ತದೆ.

ಇದೊಂದು ಪರಿಹಾರವಾದರೆ ಲಕ್ಷ್ಮೀದೇವಿಗೆ ಪ್ರಿಯವಾದ ದಾಸವಾಳದ ಹೂವನ್ನು, ಅದರಲ್ಲಿಯೂ ಕೆಂಪು ದಾಸವಾಳದ ಹೂವನ್ನು ಶುಕ್ರವಾರದ ದಿವಸದಂದು ದೇವಿಗೆ ಸಮರ್ಪಿಸಬೇಕು, ಇದರಿಂದ ದೇವಿ ಪ್ರಸನ್ನಳಾಗುತ್ತಾಳೆ ನಿಮ್ಮ ಕಷ್ಟಗಳನ್ನು ನಿವಾರಿಸುತ್ತಾರೆ.

ಮನೆಯಲ್ಲಿ ಕಷ್ಟ ಪಡುವ ಹಿರಿಯರಿಗೆ ಅಂದರೆ ಆ ಮನೆಯ ಜವಾಬ್ದಾರಿಯನ್ನು ಯಾರು ತೆಗೆದುಕೊಂಡಿರುತ್ತಾರೆಯೊ, ಅವರಿಗೆ ಭಾನುವಾರ ಅಥವಾ ಗುರುವಾರದ ದಿವಸದಂದು ಅರಿಶಿಣದ ನೀರಿಗೆ ದಾಸವಾಳವನ್ನು ಹಾಕಿ,

ಆ ದಾಸವಾಳದ ಸಹಾಯದಿಂದ ಮನೆಯ ಹಿರಿಯ ವ್ಯಕ್ತಿಗೆ ಅಂದರೆ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ವ್ಯಕ್ತಿಗೆ ದೃಷ್ಟಿಯನ್ನು ತೆಗೆಯಬೇಕು. ಈ ರೀತಿ ದೃಷ್ಟಿಯನ್ನು ತೆಗೆಯುವುದರಿಂದ ಆ ವ್ಯಕ್ತಿಯ ಮೇಲೆ ಆಗುವ ಕಣ್ಣು ದೃಷ್ಟಿ ನಿವಾರಣೆಯಾಗುತ್ತದೆ.

ನಿಮ್ಮ ಜೀವನದಲ್ಲಿ ಆಕಸ್ಮಿಕ ಧನಲಾಭ ವಾಗಬೇಕಾದರೆ ಈ ಒಂದು ಪರಿಹಾರವನ್ನು ಪಾಲಿಸಿ ಅದೇನೆಂದರೆ ಯಾವ ಪ್ರದೇಶದಲ್ಲಿ ಅರಳಿಮರ ಮತ್ತು ಬೇವಿನ ಮರ ಒಟ್ಟಿಗೆ ಇರುವುದಿಲ್ಲವೋ ಅಂತಹ ಪ್ರದೇಶದಲ್ಲಿ ಅರಳಿ ಮರ ಮತ್ತು ಬೇವಿನ ಮರದ ಸಸಿಯನ್ನು ನೆಟ್ಟು ಬೇಕು ಇದರಿಂದ ನಿಮ್ಮ ಜೀವನದಲ್ಲಿ ಆಕಸ್ಮಿಕ ಧನಲಾಭವಾಗುತ್ತದೆ.

ಈ ರೀತಿಯ ಪರಿಹಾರವನ್ನು ನೀವು ನಿಮ್ಮ ಜೀವನದಲ್ಲಿ ಕೈಗೊಳ್ಳಿ, ನೀವು ಕೂಡ ಆರ್ಥಿಕವಾಗಿ ಬಲಗೊಳ್ಳುವಿರಿ ಮತ್ತು ಲಕ್ಷ್ಮಿದೇವಿಯ ಸಾನ್ನಿಧ್ಯವನ್ನು ಪಡೆದುಕೊಳ್ಳುತ್ತೀರಿ.

ಇಂದಿನ ದಿನದ ಈ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ತಿಳಿಸಿ, ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.

Leave a Reply

Your email address will not be published. Required fields are marked *