ನಮಸ್ಕಾರಗಳು ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ರುಚಿಕರವಾದ ಟೊಮೆಟೊ ಚಟ್ನಿಯನ್ನು ಇನ್ನೂ ವಿಭಿನ್ನವಾಗಿ ಹೇಗೆ ಮಾಡಿಕೊಳ್ಳಬಹುದು ಎಂದು ನೀವೇನಾದರೂ ಆಚೆಯಿಂದ ಮನೆಗೆ ತಡವಾಗಿ ಬಂದಾಗ ಊಟಕ್ಕಾಗಿ ಏನು ಮಾಡುವುದು ಅಂತ ಯೋಚನೆ ಮಾಡ್ತಾ ಇರ್ತೀರಾ
ಆಗ ಈ ಒಂದು ಟೊಮೆಟೊ ಚಟ್ನಿಯನ್ನು ಮಾಡಿ ಅನ್ನದೊಂದಿಗೆ ತಿನ್ನಬಹುದು ಅಥವಾ ಚಪಾತಿ ರೊಟ್ಟಿ ದೋಸೆ ಇವುಗಳ ಜೊತೆಯೂ ಕೂಡ ಈ ಟೊಮೆಟೊ ಚಟ್ನಿಯನ್ನು ತಿನ್ನಬಹುದು. ಹಾಗಾದರೆ ಇಂದಿನ ಮಾಹಿತಿಯಡಿ ತಿಳಿಯೋಣ ರುಚಿಕರವಾದ ವಿಭಿನ್ನವಾದ ಟೊಮೆಟೊ ಚಟ್ನಿಯನ್ನು ಹೇಗೆ ಮಾಡುವುದು ಅನ್ನೋದನ್ನ.
ಈ ಟೊಮೆಟೊ ಚಟ್ನಿಯನ್ನು ಮಾಡುವುದಕ್ಕೆ ಬೇಕಾಗಿರುವ ಸಾಮಗ್ರಿಗಳು ಏನು ಎಂಬುದನ್ನು ಮೊದಲಿಗೆ ತಿಳಿದುಕೊಳ್ಳೋಣ ಅಡುಗೆ ಮಾಡುವಾಗ ನೀವು ಅಡುಗೆಗಾಗಿ ಏನು ಮಾಡುತ್ತಿದ್ದೀರಾ ಎಂಬುದನ್ನು ಸ್ವಲ್ಪ ಮುಂಚೆಯೇ ಯೋಚನೆ ಮಾಡಿ.
ಅದಕ್ಕೆ ಬೇಕಾಗಿರುವ ಪದಾರ್ಥಗಳನ್ನು ಕೂಡ ಮುಂಚೆಯೇ ಮುಚ್ಚಿಟ್ಟುಕೊಂಡರೆ ಸಮಯ ಉಳಿಯುತ್ತದೆ ಜೊತೆಗೆ ಸಿಲಿಂಡರ್ ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಈ ಚಟ್ನಿಗೆ ಬೇಕಾಗಿರುವುದು ನಾಲ್ಕು ಟೊಮೆಟೊ ಐದರಿಂದ ಆರು ಬ್ಯಾಡಗಿ ಮೆಣಸಿನಕಾಯಿ ಜೀರಿಗೆ ಸಾಸಿವೆ ಮೆಂತೆ ಚಿಟಕಿ ಇಂಗು ಮತ್ತು ಬೆಳ್ಳುಳ್ಳಿ ಎಸಳುಗಳು.
ಮೊದಲಿಗೆ ಟೊಮೆಟೊವನ್ನು ಬೇಯಿಸಿಕೊಳ್ಳಬೇಕು ನಂತರ ಈ ಟೊಮೆಟೊ ಸಿಪ್ಪೆಯನ್ನು ತೆಗೆದು ಒಳಗಿರುವ ಬೀಜಗಳನ್ನು ಬೇರ್ಪಡಿಸಿಕೊಂಡು ಟೊಮೆಟೊ ಅನ್ನು ರುಬ್ಬಿಕೊಳ್ಳಬೇಕು, ಟೊಮೆಟೊವನ್ನು ರುಬ್ಬಿ ಕೊಳ್ಳುವಾಗ ಬ್ಯಾಡಗಿ ಮೆಣಸಿನಕಾಯಿಯನ್ನು ಸ್ವಲ್ಪ ಸಮಯ ಫ್ರೈ ಮಾಡಿ.
ಟೊಮೆಟೊ ಜೊತೆಗೆ ಹಾಕಿ ಇದಕ್ಕೆ ಏಳರಿಂದ ಎಂಟು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಂದು ಪ್ಯಾನ್ ಅನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಜೀರಿಗೆ ಕಾಳು ಚಮಚ ಸಾಸಿವೆ ಮತ್ತು ಚಿಟಿಕೆ ಇಂಗನ್ನು ಹಾಕಿ.
ಇದರ ಜೊತೆಗೆ ಕಾಲು ಚಮಚ ಮೆಂತೆಯನ್ನು ಕೂಡ ಹಾಕಿಕೊಂಡು ಫ್ರೈ ಮಾಡಬೇಕು. ಇದನ್ನು ಕುಟ್ಟಾಣಿಯ ಸಹಾಯದಿಂದ ಪುಡಿ ಮಾಡಿಕೊಳ್ಳಬಹುದು ಅಥವಾ ಮಿಕ್ಸಿ ಸಹಾಯದಿಂದ ಪೌಡರ್ ಮಾಡಿಕೊಳ್ಳಬಹುದು.
ಇದಿಷ್ಟು ಮಾಡಿದ ಬಳಿಕ ಒಂದು ಬಾಣಲೆಯನ್ನು ತೆಗೆದುಕೊಳ್ಳಬೇಕು ಇದಕ್ಕೆ ಮೂರು ರಿಂದ ನಾಲ್ಕು ಚಮಚ ಎಣ್ಣೆಯನ್ನು ಹಾಕಿ ಸಾಸಿವೆ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿಕೊಳ್ಳಬೇಕು.
ಸಾಸಿವೆ ಚಟಪಟ ಎಂದು ಸಿಡಿದ ನಂತರ ಇದಕ್ಕೆ ರುಬ್ಬಿ ಕೊಂಡಂತಹ ಟೊಮೆಟೊವನ್ನು ಹಾಕಿ, ಮಧ್ಯಮ ಉರಿಯಲ್ಲಿ ಈ ಟೊಮೆಟೊವನ್ನು ಫ್ರೈ ಮಾಡುತ್ತಲೇ ಇರಬೇಕು ನಂತರ ಅದರ ಹಸಿ ವಾಸನೆ ಹೋದ ಮೇಲೆ ಕುಟ್ಟಾಣಿಯಲ್ಲಿ ಪುಡಿ ಮಾಡಿಕೊಂಡಂತಹ ಪುಡಿಯನ್ನು ಇದಕ್ಕೆ ಹಾಕಬೇಕು.
ಹಾಗೆ ಈ ಸಮಯದಲ್ಲಿ ಚಿಟಕಿ ಅರಿಶಿಣ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮತ್ತೊಮ್ಮೆ ಈ ಚಟ್ನಿಯನ್ನು ಮಧ್ಯಮ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಬೇಕು.
ಇಷ್ಟೇ ಟೊಮೆಟೊ ಚಟ್ನಿ ತಯಾರಾಯಿತು ಇದನ್ನು ನೀವು ಮೂವತ್ತು ನಿಮಿಷಗಳೊಳಗೆ ಮಾಡಿಕೊಳ್ಳಬಹುದು ಹಾಗೆ ಅನ್ನದೊಂದಿಗೆ ಚಪಾತಿ ರೊಟ್ಟಿ ದೋಸೆ ಇದರ ಜೊತೆಗೆ ಕೂಡ ಸೇವಿಸಬಹುದು ಬಹಳ ಟೇಸ್ಟಿಯಾಗಿ ವಿಭಿನ್ನವಾಗಿ ಇರುತ್ತದೆ ಈ ಟೊಮೆಟೊ ಚಟ್ನಿ.
ಈ ರೆಸಿಪಿಯನ್ನು ನೀವು ಕೂಡ ಮನೆಯಲ್ಲಿ ಮಾಡಿ ನೋಡಿ ಹಾಗೆ ರುಚಿ ಹೇಗಿದೆ ಎಂಬುದನ್ನ ಕಾಮೆಂಟ್ ಮಾಡಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೇ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ. ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.