ಅರಳಿಮರ ನಮ್ಮ ಹಿರಿಯರು ಹೇಳುತ್ತಾರೆ ಯಾವುದಾದರೂ ಒಂದು ವಾರವನ್ನು ಕಲ್ಪಿಸಿಕೊಳ್ಳ ಬೇಕೆಂದರೆ ಅಶ್ವ ಮರವನ್ನು ಪ್ರತಿ ದಿನ ಸುತ್ತು ಎಂದು ಹೌದು ಸ್ನೇಹಿತರ ಹೀಗೆ ಯಾಕೆ ಹೇಳುತ್ತಾರೆ .
ಅಂದರೆ ಈ ಅರಳಿಮರವು ಒಂದು ಉತ್ತಮ ಔಷಧವುಳ್ಳ ಪರವಾಗಿರುವ ಕಾರಣದಿಂದಾಗಿ ಈ ಅರಳಿಮರದ ಕೆಳಗೆ ನಿಂತು ಏನನ್ನೇ ಆಗಲಿ ಪ್ರಾರ್ಥಿಸಿ ಕೊಳ್ಳುವುದರಿಂದ ಎಂದು ಅದು ನಿಜವಾಗುತ್ತದೆ ಎಂಬ ನಂಬಿಕೆ ನಮ್ಮ ಹಿರಿಯರಲ್ಲಿ ಇರುತ್ತಿತ್ತು .
ಹಾಗೆಯೇ ಇಂತಹ ಔಷಧಿಯಿಯ ಮರಗಳನ್ನು ಮನೆಯ ಸುತ್ತಮುತ್ತ ಬೆಳೆಸುವುದರಿಂದ ವಾತಾವರಣವೂ ಕೂಡ ಶುದ್ಧವಾಗಿರುತ್ತದೆ ಜೊತೆಗೆ ನಮ್ಮ ಉಸಿರಾಟಕ್ಕೆ ಹೇರಳವಾಗಿ ಆಮ್ಲಜನಕ ಪೂರೈಕೆಯಾಗುತ್ತದೆ .
ಹಾಗಾದರೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಅರಳಿಮರದಿಂದ ಏನೆಲ್ಲಾ ಪ್ರಯೋಜನಗಳಿವೆ ಹಾಗೂ ಯಾವೆಲ್ಲಾ ಪ್ರಯೋಜನಗಳನ್ನು ನಾವು ಈ ಅರಳಿಮರದ ಎಲೆ ತೊಗಟೆ ಯಿಂದ ಪಡೆದುಕೊಳ್ಳಬಹುದು ಎಂಬುದನ್ನು . ಹೌದು ಸ್ನೇಹಿತರೇ ನಮ್ಮ ಹಿರಿಯರು ಏನೇ ಹೇಳಿದರೂ ಕೂಡ ಅದಕ್ಕೆ ಒಂದು ಬಲವಾದ ಕಾರಣವೂ ಕೂಡ ಇರುತ್ತದೆ ಅವರು ಯಾವ ಪದ್ಧತಿಗಳನ್ನು ಯಾವ ಸಂಸ್ಕೃತಿಯನ್ನು ನಡೆಸಿಕೊಂಡು ಬಂದಿದ್ದರೂ ವೈಜ್ಞಾನಿಕವಾಗಿಯೂ ಕೂಡ ಆ ಪದ್ಧತಿಗಳಿಗೆ ಕಾರಣಗಳು ಇರುತ್ತವೆ .
ನಾನು ನಿಮಗೆ ಈ ಮೇಲೆ ತಿಳಿಸಿದ ಹಾಗೆ ಹಿರಿಯರು ಹೇಳುತ್ತಾರೆ ಅರಳಿಮರವನ್ನು ಸುತ್ತುವುದರಿಂದ ಒಳ್ಳೆಯ ಪ್ರಯೋಜನ ದೊರೆಯುತ್ತದೆ ಎಂದು ಹಾಗೆ ಈ ರೀತಿ ಯಾಕೆ ಹೇಳುತ್ತಿದ್ದರು ಅಂದರೆ ಮರದ ಕೆಳಗೆ ಆಮ್ಲಜನಕವು ಹೇರಳವಾಗಿ ದೊರೆಯುತ್ತದೆ ಆದ್ದರಿಂದ ಈ ಮರದ ಕೆಳಗೆ ಪ್ರಾರ್ಥಿಸುವುದರಿಂದ ಅಥವಾ ಧ್ಯಾನ ಮಾಡುವುದರಿಂದ ಉಸಿರಾಟದ ಸಮಸ್ಯೆ ಇದ್ದರೆ ಪರಿಹಾರವಾಗುತ್ತದೆ ಜೊತೆಗೆ ಶ್ವಾಸಕೋಶದ ಆರೋಗ್ಯ ವೃದ್ಧಿಸುತ್ತದೆ .
ಹೀಗೆ ದೇಹಕ್ಕೆ ಬೇಕಾಗಿರುವಷ್ಟು ಆಮ್ಲಜನಕ ಪೂರೈಕೆಯಾಗಿ ರಕ್ತವು ಶುದ್ಧಗೊಳ್ಳುತ್ತದೆ ಇದರಿಂದ ನಮ್ಮ ದೇಹ ಚೈತನ್ಯದಿಂದ ಇರಲು ಸಹಕರಿಸುತ್ತದೆ .ಇನ್ನು ಅನೇಕ ಅರಳಿಮರದ ಪ್ರಯೋಜನಗಳನ್ನು ತಿಳಿಯುವುದಾದರೆ ಇಲ್ಲಿರುವಂತಹ ಎಲೆ ತೊಗಟೆ ಪ್ರತಿಯೊಂದರಲ್ಲಿಯೂ ಕೂಡ ಔಷಧೀಯ ಗುಣವಿದ್ದು ಈ ಎಲೆಗಳನ್ನು ಮತ್ತು ತೊಗಟೆಗಳನ್ನು ಒಣಗಿಸಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಕೊಡುವುದರಿಂದ ಆರೋಗ್ಯ ವೃದ್ಧಿಸುತ್ತದೆ .
ಅರಳಿಮರದ ಎಲೆಯ ಪುಡಿಯನ್ನು ಹಾಲಿನೊಂದಿಗೆ ಹಾಕಿ ಕುಡಿಯುವುದರಿಂದ ಶೀತ ಅಥವಾ ಕೆಮ್ಮಿನ ಸಮಸ್ಯೆ ಪರಿಹಾರಗೊಳ್ಳುತ್ತದೆ .ಅರಳಿಮರದ ತೊಗಟೆಯನ್ನು ತೆಗೆದುಕೊಂಡು ಅದನ್ನು ಒಣಗಿಸಿ ಪುಡಿ ಮಾಡಿ ಹಲ್ಲನ್ನು ಉಜ್ಜುವುದರಿಂದ ಹಲ್ಲು ನೋವಿನ ಸಮಸ್ಯೆ ದೂರವಾಗುತ್ತದೆ .
ಹೀಗೆ ಈ ಅರಳಿಮರ ದ ತೊಗಟೆಯ ಪುಡಿಯನ್ನು ನೀರಿಗೆ ಬೆರೆಸಿ ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದರೆ ಅಸ್ತಮಾದಂತಹ ಸಮಸ್ಯೆ ಕೂಡ ದೂರವಾಗುತ್ತದೆ .ಇಂತಹ ಅನೇಕ ಲಾಭವಿರುವ ಅಶ್ವ ಮರದಲ್ಲಿ ದೇವರಗಳು ನೆಲೆಸಿರುತ್ತಾರೆ ಎಂದು ಕೂಡ ನಂಬಲಾಗಿದೆ , ಆದ್ದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದರೆ ಈ ರೀತಿ ಅರಳಿಮರ ದ ಎಲೆಗಳಿಂದ ತೊಗಟೆಗಳಿಂದ ನೀವು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ .
ಈ ದಿನದ ಮಾಹಿತಿಯಲ್ಲಿ ನಾವು ತಿಳಿಸಿ ಕೊಟ್ಟಂತಹ ಅರಳಿಮರ ದ ಈ ಅನೇಕ ಪ್ರಯೋಜನಗಳು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಹಾಗೆಯೇ ಇಂತಹ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳಿಗೆ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ .
ಹಾಗೆಯೇ ನಿಮಗೆ ಮಾಹಿತಿ ಇಷ್ಟವಾದಲ್ಲಿ ನೀವು ಕೂಡ ತಿಳಿದು ಬೇರೆಯವರಿಗೂ ಕೂಡ ಈ ಮಾಹಿತಿಯನ್ನೂ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು ಶುಭ ದಿನ .