Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಈ ಬೀಜವನ್ನ ದಿನನಿತ್ಯ ತಿನ್ನುವುದರಿಂದ ದೇಹದಲ್ಲಿ ಯಾವತಾರ ಒಳ್ಳೆ ಪರಿಣಾಮ ಬೀರುತ್ತೆ ಗೊತ್ತ … ನಿಮ್ಮ ಅರೋಗ್ಯ ಚೆನ್ನಾಗಿ ಇರ್ಬೇಕಾದ್ರೆ ಈ ತರ ಮಾಡಿ ನೋಡಿ

ಪ್ರತಿದಿನ ನಾಲ್ಕು ಬಾದಾಮಿ ತಿನ್ನುವುದರಿಂದ ಎಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳಿವೆ ಅಂದರೆ ನಿಜಕ್ಕೂ ಆರೋಗ್ಯ ವೃದ್ಧಿಸುವುದರಲ್ಲಿ ಬಾದಾಮಿ ಹೆಚ್ಚು ಲಾಭಗಳನ್ನು ನೀಡುತ್ತದೆ.

ಇದರ ಜೊತೆಗೆ ನಮ್ಮ ಈ ಸಮಾಜದಲ್ಲಿ ಒಂದು ಬೇಡದೆ ಇರೋ ಮಾತಿದೆ ಅದೇನೆಂದರೆ ಬಾದಾಮಿ ಕೇವಲ ಶ್ರೀಮಂತರಿಗೆ ಮಾತ್ರ ಅಂತ ಆದರೆ ಬಾದಾಮಿಯನ್ನು ಶ್ರೀಮಂತರು ತಿಂದರೆ ಆರೋಗ್ಯ ಅಥವಾ ಬಡವರು ತಿಂದರೆ ಆರೋಗ್ಯ ದೊರೆಯುವುದಿಲ್ಲ ಅಂತ ಏನೂ ಅಲ್ಲ .
ಬಾದಾಮಿ ಕೇವಲ ಶ್ರೀಮಂತರಿಗೆ ಅಂತ ಯಾಕೆ ಹೇಳುತ್ತಾರೆ .

ಅಂದರೆ ಈಗಲೂ ಕೂಡ ಬಾದಾಮಿಯ ಬೆಲೆ ಸುಮಾರು ಒಂದು ಕೆಜಿಗೆ ಸಾವಿರ ರೂಪಾಯಿಗಳು ಆಗಿರುತ್ತದೆ ಆದ ಕಾರಣದಿಂದಾಗಿ ಇದನ್ನು ಬಡವರು ಸುಲಭವಾಗಿ ಕೊಂಡುಕೊಳ್ಳುವ ಸಾಧ್ಯವಾಗುವುದಿಲ್ಲ ಅನ್ನುವುದು ಕಾರಣಕ್ಕಾಗಿ ಈ ರೀತಿ ಮಾತನ್ನು ಹೇಳುತ್ತಾರೆ .
ಆದರೆ ಒಂದು ಕೆ.ಜಿ ಬಾದಾಮಿ ಎಂದರೆ ಎಷ್ಟು ಕಾಳುಗಳು ಅದರಲ್ಲಿರುತ್ತವೆ ದಿನಕ್ಕೆ ಮೂರು ಬಾದಾಮಿಯನ್ನು ತಿನ್ನುವುದರಿಂದ ತಿಂಗಳೆಲ್ಲಾ ಒಂದು ಕೆ.ಜಿ ಬಾದಾಮಿಯನ್ನು ತಿನ್ನಬಹುದು.

ಒಂದು ಸಾವಿರ ರೂಪಾಯಿ ಖರ್ಚು ಮಾಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದರಲ್ಲಿ ಯಾವುದೇ ಯೋಚಿಸುವ ಮಾತಿಲ್ಲ ಅಥವಾ ದುಡ್ಡಿನ ಬಗ್ಗೆ ಚಿಂತೆ ಮಾಡುವ ಅವಶ್ಯಕವೂ ಕೂಡ ಇಲ್ಲ ಅಲ್ವಾ . ಹಾಗಾದರೆ ಬಾದಾಮಿಯನ್ನು ತಿನ್ನುವುದರಿಂದ ನೆಲ ಆರೋಗ್ಯ ಪ್ರಯೋಜನವಿದೆ ಅಂತ ಹೇಳುವುದಾದರೆ ಸಾಕಷ್ಟು ಆರೋಗ್ಯ ಪ್ರಯೋಜನವಿದೆ , ಬಾದಾಮಿಯನ್ನು ತಿನ್ನುವುದರಿಂದ ಮೆದುಳು ವಿಕಾಸಗೊಳ್ಳುತ್ತವೆ ಅದರಲ್ಲಿಯೂ ಮಕ್ಕಳಿಗೆ ಪ್ರತಿ ದಿನ ಬಾದಾಮಿಯನ್ನು ನೆನೆಸಿಟ್ಟು ನೀಡುವುದರಿಂದ ಅದರಲ್ಲಿರುವಂತ ರಿಯೊಬ್ಬಿನ್ ಯಲ್ಕ್ಯಾರೆಟಿನ್ ಅಂಶವು ಮೆದುಳನ್ನು ಚುರುಕುಗೊಳಿಸುವುದರ ಜೊತೆಗೆ ಅಲ್ಜೊಮೈನರ್ ಅನ್ನೋ ರೋಗವನ್ನು ತಡೆಗಟ್ಟುತ್ತದೆ ಬಾದಾಮಿ .

ಬಾದಾಮಿಯನ್ನು ತಿನ್ನುವುದರಿಂದ ದೇಹಕ್ಕೆ ಬೇಕಾಗಿರುವ ಅಗತ್ಯ ಕೊಬ್ಬನ್ನು ಅಂದರೆ ಲಿಪೊಪ್ರೋಟಿನ್ ಎಚ್ಡಿಎಲ್ ಆರೋಗ್ಯಕರ ಕೊಬ್ಬನ್ನೂ ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತದೆ ಹಾಗೆಯೇ ಹಾನಿಕಾರಕ ಕೊಬ್ಬಿನ ಅಂಶವಾಗಿರುವ ಲಿಪೊಪ್ರೋಟಿನ್ ಎಲ್ಡಿಎಲ್ ಕಡಿಮೆ ಸಾಂದ್ರತೆಯಲ್ಲಿರುವ ಹಾಗೆ ಬಾದಾಮಿ ಸಹಕರಿಸುತ್ತದೆ .

ಪ್ರತಿ ದಿನ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಅದರಲ್ಲಿರುವಂತಹ ಫಾಸ್ಫರಸ್ ಅಂಶವು ಮೂಳೆ ಮತ್ತು ಹಲ್ಲು ನೋವಿನ ಸಮಸ್ಯೆಯನ್ನು ದೂರ ಮಾಡುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಹಲ್ಲು ಮತ್ತು ಮೂಳೆಗಳನ್ನು ಬಲ ಪಡಿಸುವುದರಲ್ಲಿ ಕೂಡ ಬಾದಾಮಿ ಹೆಚ್ಚು ಪ್ರಯೋಜನಕಾರಿಯಾಗಿದೆ .

ಆಸ್ಟಿಯೋಪೋರೊಸಿಸ್ ಅಂದರೆ ಟೊಳ್ಳು ಮೂಳೆ ಸಮಸ್ಯೆಯಿಂದ ಯಾರೇ ಬಳಲುತ್ತಿದ್ದರೂ ಕೂಡ ಪ್ರತಿದಿನ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಈ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತವೆ . ಹೇರಳವಾದ ಫೈಬರ್ ಅಂಶವೂ ಇದರಲ್ಲಿ ಇರುವ ಕಾರಣದಿಂದಾಗಿ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ಪ್ರತಿ ದಿನ ಬಾದಾಮಿಯನ್ನು ಸೇವನೆ ಮಾಡುವುದರಿಂದ ಅಜೀರ್ಣ ಸಮಸ್ಯೆ ದೂರವಾಗಿ ಮಲಬದ್ಧತೆ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತವೆ .

ಬಾದಾಮಿಯಲ್ಲಿ ವಿಟಮಿನ್ ಇ ಕ್ಯಾಲ್ಷಿಯಂ ಐರಾನ್ ಮೆಗ್ನೀಷಿಯಂ ಫಾಸ್ಫರಸ್ ಇರುತ್ತದೆ ಮತ್ತು ಇದರ ಜೊತೆಗೆ ಸೆಲೆನಿಯಂ ನಿಯಾಸಿನ್ ಸತ್ತು ಮತ್ತು ತಾಮ್ರದ ಅಂಶವೂ ಇರುವ ಕಾರಣದಿಂದಾಗಿ ಬೇರೆ ಹಣ್ಣುಗಳನ್ನು ಅಥವಾ ಬೀಜಗಳನ್ನು ತಿನ್ನುವುದರಿಂದ ಸಿಗುವಷ್ಟು ಪೌಷ್ಟಿಕಾಂಶವೂ ಬಾದಾಮಿಯನ್ನು ತಿನ್ನುವುದರಿಂದ ದೊರೆಯುತ್ತದೆ .

ಹೆಚ್ಚು ಬಾದಾಮಿಯನ್ನು ತಿಂದಾಗ ಹೆಚ್ಚು ನೀರು ಕುಡಿಯುವ ವಿಚಾರವನ್ನು ವರವನ್ನು ತಪ್ಪದೇ ನೆನಪಿನಲ್ಲಿ ಇಟ್ಟುಕೊಂಡಿರಬೇಕು ಇಲ್ಲವಾದಲ್ಲಿ ಅಜೀರ್ಣ ಸಮಸ್ಯೆಯಾಗುತ್ತದೆ ಇದರ ಜೊತೆಗೆ ಬಾದಾಮಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಉತ್ತಮ ಪ್ರಚನ ಕ್ರಿಯೆ ನಮ್ಮ ದೇಹದಲ್ಲಿ ಆಗುತ್ತದೆ . ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವುದರಲ್ಲಿ ಪ್ರತಿದಿನ ನಾಲ್ಕು ನೆನೆಸಿಟ್ಟ ಬಾದಾಮಿಯನ್ನು ತಿಂದರೆ ಸಾಕಷ್ಟು ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ .

Leave a Reply

Your email address will not be published. Required fields are marked *