ಈ ಪವಿತ್ರ ಸ್ಥಳದಿಂದ ಕಾಶಿಗೆ ಸುರಂಗ ಮಾರ್ಗ ಇದೆ ಅಂತ ಹೇಳುತ್ತಾರೆ ಹಾಗಾದ್ರೆ ಈ ಪವಿತ್ರ ಸ್ಥಳ ಇರುವುದೆಲ್ಲಿ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಗವಿಗಂಗಾಧರೇಶ್ವರ ದೇವಾಲಯದ ಬಗ್ಗೆ ನಿಮಗೆ ತಿಳಿಯದೆ ಇರುವಂತಹ ಕೆಲವೊಂದು ವಿಚಾರಗಳನ್ನು ಈ ಮಾಹಿತಿಯಲ್ಲಿ ತಿಳಿಯಿರಿ ನಾನು ನಿಮಗೆ ಈ ದೇವಾಲಯದ ವೈಶಿಷ್ಟ್ಯತೆಯನ್ನು ಕುರಿತು ಐತಿಹಾಸಿಕ ಮಾಹಿತಿಯನ್ನು ಕುರಿತು ಒಂದಿಷ್ಟು ವಿಚಾರಗಳನ್ನು ತಿಳಿಸುತ್ತೇನೆ.ನಿಮಗೂ ಕೂಡ ಈ ದೇವಸ್ಥಾನದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ನಿಮಗೆ ಮಾಹಿತಿ ಇಷ್ಟ ಆದಲ್ಲಿ ಬೇರೆಯವರೊಂದಿಗೂ ಕೂಡ ಒಂದು ಮಾಹಿತಿಯನ್ನು ಶೇರ್ ಮಾಡಿ.

ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಬೆಂಗಳೂರಿನ ಬಸವನಗುಡಿ ನಗರದಲ್ಲಿರುವ ಈ ದೇವಾಲಯವನ್ನು ಕಲ್ಯಾಣಿ ನಗರ ಅಂತ ಕೂಡ ಕರೆಯಲಾಗುತ್ತದೆ. ಹಾಗಾದರೆ ಈ ದೇವಾಲಯದ ಹಿಂದಿರುವ ವೈಶಿಷ್ಟ್ಯತೆಗಳೇನು ಎಂಬುದನ್ನು ಈ ಕೆಳಗೆ ತಿಳಿಯೋಣ.ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಸುಮಾರು ಇಪ್ಪತ್ತು ಸಾವಿರ ವರ್ಷಗಳ ಐತಿಹಾಸಿಕ ಇತಿಹಾಸವಿದ್ದು ಕ್ರಿಸ್ತ ಶಕ 9ನೇ ಶತಮಾನದಲ್ಲಿ ಈ ಒಂದು ದೇವಸ್ಥಾನಗಳನ್ನು ಹೆಬ್ಬಂಡೆಗಳನ್ನು ಕೊರೆದು ಮಾಡಲಾಗಿದೆ ಎಂದು ಹೇಳಲಾಗಿದ್ದು.

ಇಲ್ಲಿರುವ ಅಗ್ನಿಯ ವಿಗ್ರಹಕ್ಕೆ ಎರಡು ತಲೆ ಏಳು ಕೈ ಮತ್ತು ಮೂರು ಕಾಲುಗಳು ಇರುವುದು ವೈಶಿಷ್ಟ್ಯತೆ ಹಾಗೆ ಈ ದೇವಾಲಯಕ್ಕೆ ಕಣ್ಣಿನ ದೋಷವಿದ್ದವರು ಬಂದು ದೇವರಲ್ಲಿ ಬೀಳುವುದರಿಂದ ದೋಷ ನಿವಾರಣೆಯಾಗುತ್ತದೆ ಅಂತ ಹೇಳಲಾಗುತ್ತದೆ.ಈ ದೇವಾಲಯದ ಮತ್ತೊಂದು ವೈಶಿಷ್ಟ್ಯತೆಯನ್ನು ಹೇಳುವುದಾದರೆ ದೇವಾಲಯದ ಮೇಲ್ಛಾವಣಿ ಗೋಪುರಗಳು ಕೂಡ ವಿಶೇಷವಾಗಿದೆ ಜೊತೆಗೆ ವಾಸ್ತು ಶಿಲ್ಪ ವಿನ್ಯಾಸವೂ ಮನೋಹರವಾಗಿದೆ.

ಮಹಾ ಸಂಕ್ರಮಣ ಸಂಕ್ರಾಂತಿಯ ದಿನದಂದು ಸಂಜೆಯ ಸಮಯದಲ್ಲಿ ಸೂರ್ಯನ ಕಿರಣಗಳು ಇಲ್ಲಿ ಇರುವ ಬಸವನ ವಿಗ್ರಹದ ಕೊಂಬಿನಿಂದ ಹಾದು ಹೋಗಿ ಲಿಂಗದ ಮೇಲೆ ರಶ್ಮಿಗಳ ಚುಂಬನವಾಗುತ್ತದೆ.ಸ್ವಯಂಭು ಎಂದೇ ಪ್ರಸಿದ್ಧವಾಗಿರುವ ಈ ದೇವಾಲಯದ ಮತ್ತೊಂದು ವಿಶೇಷತೆ ಏನು ಅಂದರೆ ಇದಕ್ಕೆ ಗೌತಮ ಕ್ಷೇತ್ರ ಅಂತ ಕೂಡ ಕರೆಯಲಾಗುತ್ತದೆ ಯಾಕೆ ಅಂದರೆ ಶ್ರೀ ಗೌತಮ ಮಹರ್ಷಿಗಳು ಇಲ್ಲಿಗೆ ಬಂದು ತಪಸ್ಸನ್ನು ಆಚರಿಸಿ ಲಿಂಗಕ್ಕೆ ತ್ರಿಕಾಲ ಪೂಜೆಯನ್ನು ಸಲ್ಲಿಸುತ್ತಿದ್ದಾರೆಂದು ಉಲ್ಲೇಖವಿದೆ.

ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲಿರುವ ಗುಹ ಮಾರ್ಗದಲ್ಲಿ ಗೌತಮ ಮಹರ್ಷಿಗಳ ಮತ್ತು ಭಾರದ್ವಾಜರ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ, ಇದರ ಜೊತೆಗೆ ಈ ಮಾರ್ಗದಲ್ಲೇ ಸಪ್ತಮಾತ್ರೆಕಿಯರಾದ ಬ್ರಾಹ್ಮಿ ಮಹರ್ಷಿ ವರಾಹಿ ಚಾಮುಂಡಿ ವೈಷ್ಣವಿ ಶ್ರೀದೇವಿ ಭೂದೇವಿ ಇವರ ವಿಗ್ರಹಗಳನ್ನು ಕೂಡ ಕಾಣಬಹುದಾಗಿದೆ.ಇಪ್ಪತ್ತು ವರುಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಅಡಗಿರುವ ಮತ್ತೊಂದು ರಹಸ್ಯವೇನು ಅಂದರೆ ಈ ದೇವಾಲಯದಲ್ಲಿರುವ ಗುಹೆಯ ಒಂದು ಮಾರ್ಗವು ವಾರನಾಸಿಗೆ ಹೋದರೆ, ಮತ್ತೊಂದು ಮಾರ್ಗವೂ ತುಮಕೂರಿನ ಶಿವಗಂಗೆಗೆ ಹೋಗುತ್ತದೆ .

ಹಾಗೆ ದೇವಸ್ಥಾನದ ಮುಂಭಾಗದಲ್ಲಿ ವಿಜಯನಗರ ಶೈಲಿಯ ಹದಿನಾಲ್ಕು ಕಂಬಗಳಿರುವ ಮಂಟಪವನ್ನು ಕಾಣಬಹುದಾಗಿದ್ದು ಎರಡು ಸೂರಪ್ಪನ ಡಮರುಗ ಹಾಗೂ ತ್ರಿಶೂಲದ ಎತ್ತರದ ಸ್ತಂಭಗಳನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ.ಈ ದೇವಾಲಯದಲ್ಲಿ ಲಿಂಗವು ದಕ್ಷಿಣಾಭಿಮುಖದಲ್ಲಿರುವುದು ಕೂಡ ಒಂದು ವಿಶೇಷವಾಗಿದ್ದು ನೀವು ಬೆಂಗಳೂರಿಗೆ ಹೋದಾಗ ಒಮ್ಮೆ ಬಸವನಗುಡಿಯಲ್ಲಿರುವ ಗವಿಗಂಗಾಧರೇಶ್ವರ ಆಲಯಕ್ಕೆ ಭೇಟಿ ನೀಡಿ ಬನ್ನಿ.

ಹಾಗೇ ಈ ದೇವಾಲಯದಲ್ಲಿ ಈಶ್ವರನ ಬಲಭಾಗದಲ್ಲಿ ಪಾರ್ವತಿದೇವಿ ಇರುವುದನ್ನು ಕೂಡ ಕಾಣಬಹುದಾಗಿದೆ ಮತ್ತು ಈ ದೇವಸ್ಥಾನಕ್ಕೆ ಬರುವ ದಾರಿಯಲ್ಲಿಯೇ ದೊಡ್ಡ ಗಣಪತಿ ದೇವಾಲಯವೂ ಕೂಡ ಇದ್ದು, ನಂದಿಯ ದೇವಾಲಯವೂ ಕೂಡ ಇದೆ ಇದನ್ನು ಬುಲ್ ಟೆಂಪಲ್ ಅಂತ ಕೂಡ ಕರೆಯಲಾಗುತ್ತದೆ. ಈ ಚಿಕ್ಕ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಒಂದು ಮೆಚ್ಚುಗೆಯನ್ನು ನೀಡಿ ಧನ್ಯವಾದ.

Leave a Reply

Your email address will not be published. Required fields are marked *