ಈ ನಾಯಿ ಮಾಡಿದ ಕೆಲಸಕ್ಕೆ ಈ ದೇಶವೇ ಬೆರಗಾಗಿದೆ .. ಇದು ನಾಯಿಯ ನಿಯತ್ತು ಅಂದ್ರೆ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಯತ್ತು ಅನ್ನುವ ಒಂದು ಪದವನ್ನು ಕೇಳಿದರೆ ಸಾಕು ಪ್ರತಿಯೊಬ್ಬರಿಗೂ ನೆನಪಾಗೋದು ನಾಯಿ. ಹೌದು ಈ ನಾಯಿ ನಿಯತ್ತಿಗೆ ಹೆಸರುವಾಸಿಯಾದದ್ದು ಹಾಗೆ ತನ್ನ ಒಡೆಯನಿಗಾಗಿ ಏನು ಬೇಕಾದರೂ ಮಾಡಬಲ್ಲ ಈ ಒಂದು ಜೀವಿ.ಇದರ ಅರ್ಧದಷ್ಟು ನೀಯತ್ತು ಇದರ ಅರ್ಧದಷ್ಟು ಪ್ರಾಮಾಣಿಕತೆ ಮನುಷ್ಯನ ಜೀವಕ್ಕಿಲ್ಲ ಅಂತಾನೇ ಹೇಳಬಹುದು. ಹೌದು ಇಂದಿನ ಮಾಹಿತಿಯಲ್ಲಿ ಈ ಶ್ವಾನಕ್ಕೆ ಪಟ್ಟವಾಗಿರುವ ಪ್ರಾಮಾಣಿಕತೆಯನ್ನು ಕುರಿತು ಒಂದು ಕಥೆಯನ್ನು ನಿಮಗೆ ಹೇಳ್ತೇನೆ.ಇದೊಂದು ನೈಜ ಘಟನೆ ನಡೆದಿರುವುದು ಜಪಾನ್ ದೇಶದಲ್ಲಿ. ಇದರ ಒಂದು ನಿಯತ್ತನ್ನು ಮನುಷ್ಯನ ಬುದ್ಧಿಗೆ ತಿಳಿಸಬೇಕೆಂದು ಜಪಾನ್ ದೇಶದಲ್ಲಿ ಇಂದಿಗೂ ಕೂಡ ಈ ಒಂದು ನಾಯಿಯ ಮೂರ್ತಿಯನ್ನು ಮಾಡಿ ಇರಿಸಲಾಗಿದೆ ಅಂತೆ.ಅದು ಜಪಾನ್ ದೇಶದ ಯೂನೊ ಎಂಬ ವ್ಯಕ್ತಿ ಜಪಾನ್ನ ಟೋಕಿಯೋ ಯುನಿವರ್ಸಿಟಿಯಲ್ಲಿ ಕೆಲಸ ಮಾಡ್ತಾ ಇರ್ತಾರೆ ಇವರು ಒಬ್ಬ ಪ್ರಾಧ್ಯಾಪಕರು ಇವರು ಪ್ರತಿದಿನ ಯೂನಿವರ್ಸಿಟಿಗೆ ಹೋಗುವಾಗ ರೈಲಿನ ಮುಖಾಂತರ ಹೋಗಬೇಕಾಗಿತ್ತು.

ಹೀಗೆ ಪ್ರತಿದಿನ ರೈಲ್ವೇ ಸ್ಟೇಷನ್ ಗೆ ಹೋದಾಗ ಯೂನೊಗೆ ಒಂದು ನಾಯಿ ಕಾಣಿಸುತ್ತಿತ್ತು ದಿನ ಕಳೆದಂತೆ ಆ ನಾಯಿಯೂ ಯೂನೊಗೆ ಪರಿಚಯವಾಯಿತು. ಆ ಪರಿಚಯ ಎಷ್ಟರ ಮಟ್ಟಿಗೆ ಆಯಿತು ಅಂದರೆ ಆ ನಾಯಿಯನ್ನು ಯೂನೊ ತನ್ನ ಮನೆಗೆ ಕರೆದುಕೊಂಡು ಬಂದು ಸಾಕಿಕೊಂಡರೂ ಅದಕ್ಕೆ ಅಚ್ಚಿಕೊ ಹೆಸರನ್ನು ಕೂಡ ಇಟ್ಟರು.ಪ್ರತಿದಿನ ಯೂನೊ ರೈಲ್ವೆ ಸ್ಟೇಷನ್ ಗೆ ಹೋಗುವಾಗ ಅವರ ಜೊತೆ ಈ ಒಂದು ನಾಯಿಯೂ ಕೂಡ ಹೋಗುತ್ತಿತ್ತಂತೆ ಮತ್ತು ಯೂನೊ ವಾಪಸ್ ಆದಾಗ ಅವರ ಜೊತೆಯೇ ಮತ್ತೆ ಮನೆಗೆ ಬರುತ್ತಿತ್ತು ಅಚ್ಚಿಕೊ.ಹೀಗೇ ದಿನ ಕಳೆಯಿತು ಪ್ರತಿದಿನ ತನ್ನ ಒಡೆಯ ನೊಂದಿಗೆ ನಾಯಿ ರೈಲ್ವೇ ಸ್ಟೇಷನ್ ಗೆ ಹೋಗುತ್ತಿತ್ತು ಆದರೆ ಹಾಗೊಂದು ದಿನ ಮಾತ್ರ ರೈಲ್ವೇ ಸ್ಟೇಷನ್ ಗೆ ಹೋದ ಅಚ್ಚಿಕೊ ಮತ್ತೆ ಮನೆಗೆ ವಾಪಸ್ಸಾಗುವುದಿಲ್ಲ.

ಯಾಕೆ ಅಂದರೆ ಆತನ ಒಡೆಯ ಸಂಜೆಯಾದರೂ ಅವನಿಗೆ ಸಿಗೋದೆ ಇಲ್ಲ. ಹೀಗೆ ಅಚ್ಚಿಕೊ ಬರೋಬ್ಬರಿ ಹತ್ತು ವರ್ಷಗಳ ಕಾಲ ತನ್ನ ಒಡೆಯನಿಗಾಗಿ ರೈಲ್ವೆ ನಿಲ್ದಾಣದಲ್ಲಿ ಹುಡುಕಾಡುತ್ತಿದ್ದು ತನ್ನ ಒಡೆಯನ ಹಾಗೆ ಯಾರೂ ಕಾಣಿಸಿಕೊಂಡರೂ ಅವರೊಡನೆ ಹೋಗಿ ಮುದ್ದಾಡುತ್ತಿತ್ತು.ಕೊನೆಗೆ ಒಂದು ದಿನ ಈ ನಾಯಿಯ ವರ್ತನೆಯನ್ನು ಕಂಡು ವಿಚಾರಿಸಿದ ರೈಲ್ವೆ ಸ್ಟೇಷನ್ ಅಧಿಕಾರಿಗಳು ಕೊನೆಗೆ ತಿಳಿದು ಬಂದಿದ್ದು ಈತನ ಒಡೆಯ ಆ ಒಂದು ದಿನ ಪಾಠ ಮಾಡುವಾಗಲೇ ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟರು ಅಂತ.ಕೊನೆಗೆ ಈ ನಾಯಿಯನ್ನು ಕಂಡು ರೈಲ್ವೆ ಅಧಿಕಾರಿಗಳು ಈ ನಾಯಿಯ ವಿಚಾರವನ್ನು ಸರ್ಕಾರಕ್ಕೆ ತಿಳಿಸುತ್ತಾರೆ ಆದರೆ ಹಚ್ಚಿಕೊ ಅಷ್ಟರಲ್ಲಿ ಅನಾರೋಗ್ಯ ಸಮಸ್ಯೆಯಿಂದ ಪ್ರಾಣ ಬಿಟ್ಟಿತ್ತು.

ಆದರೂ ಕೂಡ ಜಪಾನ್ ದೇಶ ಈ ಒಂದು ಅಚ್ಚಿಕೊ ಮೂರ್ತಿಯನ್ನು ಜಪಾನ್ ದೇಶದಲ್ಲಿ ಒಂದು ಉದ್ಯಾನವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ನಿಜಕ್ಕೂ ಈ ನಾಯಿಗಳ ನಿಯತ್ತಿನ ಬಗ್ಗೆ ನಾವು ಸಾಕಷ್ಟು ನಿದರ್ಶನಗಳಲ್ಲಿ ಪಡೆದುಕೊಳ್ಳಬಹುದು.ಅಂತಹ ನಿದರ್ಶನಗಳಲ್ಲಿ ಈ ಒಂದು ನೈಜ ಘಟನೆ ಕೂಡ ಒಂದಾಗಿದೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮಾಡಿ. ನೀವು ಕೂಡ ಶ್ವಾನ ಪ್ರಿಯರಾಗಿದ್ದರೆ ಮಾಹಿತಿಯನ್ನು ಲೈಕ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *