ಈ ದೇವಿಗೆ ದುಡ್ಡೇ ಅಲಂಕಾರ,ದುಡ್ಡೇ ನೈವೇದ್ಯ, ದುಡ್ಡೇ ಅಭಿಷೇಕ, ಈ ದೇವಿಯ ಮಹಾತ್ಮೆ ನಿಮಗೆ ಗೊತ್ತಾದರೆ ಈ ತಾಯಿಯ ಬಗ್ಗೆ ಇನ್ನಷ್ಟು ಹೆಚ್ಚಿನ ಭಕ್ತಿ ಹೆಚ್ಚಾಗುತ್ತದೆ?

ಉಪಯುಕ್ತ ಮಾಹಿತಿ ಭಕ್ತಿ

ಯಾವುದೇ ಹೆಣ್ಣು ದೇವರಿಗೆ ಹೆಚ್ಚಾಗಿ ನಾವು ನೈವೇದ್ಯ ಮಾಡುವುದು ಅಥವಾ ಅಲಂಕಾರ ಮಾಡುವುದು ಕೇವಲ ಕುರಿಯನ್ನು ಕಡಿದು ರಕ್ತದ ಮುಖಾಂತರ, ಕೆಲವೊಂದು ಕಡೆ ಕೋಳಿಯನ್ನು ಕಡೆದರೆ  ಹಾಗೂ ರಕ್ತ ನೈವೇದ್ಯವನ್ನು ಕೊಡುವುದು ಸರ್ವೇ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ನೋಡಬಹುದು.

ಆದರೆ ಇಲ್ಲಿರುವ ಒಂದು ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ಸಂಪ್ರದಾಯ ಇದೆ ಆ ಸಂಪ್ರದಾಯವೇ ಇಲ್ಲಿರುವ ಈ ದೇವಸ್ಥಾನದಲ್ಲಿ ನಡೆಸಿರುವಂತಹ ಈ ದೇವಿಗೆ ದುಡ್ಡು ತುಂಬಾ ಇಷ್ಟವಂತೆ, ಈ ತಾಯಿಗೆ ದುಡ್ಡಿಗಿಂತ ಅಲಂಕಾರ ಮಾಡಬೇಕು, ದುಡ್ಡಿನಿಂದಲೇ ನೈವೇದ್ಯವನ್ನು ಮಾಡಬೇಕು, ಹಾಗೂ ದುಡ್ಡಿನಿಂದಲೇ ಅಭಿಷೇಕವನ್ನು ಕೂಡ ಮಾಡಬೇಕು.

ಹೀಗೆ ಈ ತರಹ ವಿಚಿತ್ರ ಸಂಪ್ರದಾಯವನ್ನು ಹೊಂದಿರುವಂತಹ ಈ ದೇವಸ್ಥಾನ ಇರುವುದಾದರೂ ಎಲ್ಲಿ ಹಾಗೂ ಈ ದೇವಸ್ಥಾನದಲ್ಲಿ ಯಾಕೆ ದುಡ್ಡಿನಿಂದ ದೇವಿಯನ್ನು ಪೂಜೆ ಮಾಡುತ್ತಾರೆ, ಈ ದೇವಸ್ಥಾನದ ಹಿನ್ನೆಲೆ ಏನು ಹಾಗೂ ಈ ದೇವಿಯ ಪವಾಡಗಳು ಆದರೂ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು, ಕೆಳಗೆ ಸವಿವರವಾಗಿ ತಿಳಿಸಿ ಕೊಡಲಿದ್ದೇನೆ.

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ಬಳ್ಳಾರಿ ಜಿಲ್ಲೆಯಲ್ಲಿ ಇರುವಂತಹ ಕೂಡ್ಲಿಗಿ ತಾಲೂಕಿನ ಗಣಗಟ್ಟಿ ಎನ್ನುವ ಗ್ರಾಮದಲ್ಲಿ ನಡೆದಿರುವಂತಹ ಗಾಣಗಟ್ಟೆ ಮಾಯಮ್ಮ ದೇವಿ. ಈ ದೇವಸ್ಥಾನ ಕೇವಲ ಬಳ್ಳಾರಿ ಜಿಲ್ಲೆಯಿಂದ 120 ಕಿಲೋ ಮೀಟರ್ ದೂರದಲ್ಲಿದೆ. ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಈ ದೇವಸ್ಥಾನಕ್ಕೆ ದಿನದಿಂದ ದಿನಕ್ಕೆ ಭಕ್ತಾದಿಗಳು ಹೆಚ್ಚಾಗುತ್ತಿದ್ದಾರೆ,

ಹಾಗೂ ಸಾವಿರಾರು ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಈ ಗಣಗಟ್ಟಿ ರಿ ನಡೆಸಿರುವಂತಹ ಈ ದೇವಿಯು ಲಕ್ಷ್ಮೀಯ ಪ್ರತಿರೂಪವಾಗಿದ್ದ ಹಾಗೂ ಅತಿ ಹೆಚ್ಚು ಶಕ್ತಿಯನ್ನು  ಹೊಂದಿತ್ತು ಯಾವುದೇ ತರಹದ ಕಷ್ಟಗಳನ್ನು ನೀವು ಪಡುತ್ತಾ ಇದ್ದರೆ ಅದನ್ನು ಸಂಪೂರ್ಣವಾಗಿ ನಿವಾರಿಸುವಂತಹ ಶಕ್ತಿಯನ್ನು ಈ ಗಣಗಟ್ಟೆ ಮಾಯಮ್ಮ ದೇವಿ ಹೊಂದಿದೆ.

ಈ ದೇವಸ್ಥಾನದ ಹಿನ್ನೆಲೆಯಾದರೂ ಏನು ಹಾಗೂ ಇಲ್ಲಿನ ಗಾಣಗಟ್ಟೆ ಮಾಯಮ್ಮ ಹೇಗೆ ಇಲ್ಲಿಗೆ ಬಂದ ನಡೆಸಿದ್ದಾಳೆ?

ಇಲ್ಲಿನ ಪೂರ್ವಿಕರು ಹೇಳುವ ಪ್ರಕಾರ ಇಲ್ಲಿನ ಗಾಣಗಟ್ಟೆ ಮಾಯಮ್ಮ ದೇವಿಯ ಕೋಣದ ವ್ಯಾಪಾರಿಗಳ ಮೂಲಕ ಇಲ್ಲಿಗೆ ಬಂದು ನೆಲೆಸಿದ್ದಾರೆ ಎಂದು ಹೇಳುತ್ತಾ, ಇದಕ್ಕೆ ಪುರಾವೆ ಕೊಡುವ ಹಾಗೆ ಒಂದು ಕಥೆ ಇದೆ, ಒಂದು ಸಾರಿ ಆ ಕೊಡವನ್ನು ಮಾಡುವವರು ಕೋಣವನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತಿದ್ದರು, ಆದರೆ ಒಂದು ಕೋಣದ ತೂಕ ಇದ್ದಕ್ಕಿದ್ದ ಹಾಗೆ ಹೆಚ್ಚಾಗುತ್ತದೆ ತೂಕವನ್ನು ಸರಿದೂಗಿಸಲು ವ್ಯಾಪಾರಿಯು ,

ಒಂದು ಕಲ್ಲನ್ನು ಆ ಕೋಣದ ಇನ್ನೊಂದು ಭಾಗದಲ್ಲಿ ಎರಡು ಕೋಣದ ತೂಕವನ್ನು ಸರಿದೂಗಿಸುತ್ತಾ ನೆ. ಕೆಲ ಹೊತ್ತಿನ ನಂತರ ಕೋಣದ ವ್ಯಾಪಾರಿಗಳು ವಿಶ್ರಾಂತಿಯನ್ನು ಪಡೆಯುವುದಕ್ಕಾಗಿ ಒಂದು ಕ್ಷೇತ್ರದಲ್ಲಿ ಕೂತು ಬಿಡುತ್ತಾರೆ. ಅದಾದ ನಂತರ ಒಂದು ವಿಸ್ಮಯಕಾರಿ ಆದಂತಹ ಘಟನೆ ನಡೆದು ಹೋಗುತ್ತದೆ, ಅದೇ ಕೋಣದ ಬಾರ ಮತ್ತೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಹೀಗೆ ಕಡಿಮೆಯಾದ ಅಂತಹ ಕೋಣದ ಭಾರವನ್ನು ಗಮನವಹಿಸಿ ದಂತಹ ಕೋಣದ ವ್ಯಾಪಾರಿಯು, ಅವನು ಹಾಕಿದಂತಹ ಕಲ್ಲನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾನೆ. ಹೀಗೆ ಬಿಸಾಕಿ ದಂತಹ ಆ ಕಲ್ಲು ದೇವಿಯ ರೂಪ ಪಡೆದುಕೊಂಡು ಅಲ್ಲಿ ಈ ಕ್ಷೇತ್ರವಾಗಿ ಬೆಳೆದಿದೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ.

ಕೆಲವು ದಿನಗಳ ಹಿಂದೆ ಒಂದು ಚಿಕ್ಕ ಹುಡುಗಿಯ ಮೇಲೆ ಈ ಮಾಯಮ್ಮ ಬಂದು ನನಗೆ ದೇವಸ್ಥಾನ ಕಟ್ಟಬೇಕು ಎನ್ನುವ ಬಯಕೆಯನ್ನು ಹೇಳಿಕೊಂಡಿದ್ದಳು ಅಂತೆ, ಇವಳ ಇಷ್ಟಾರ್ಥ ಮೇರೆಗೆ ಇಲ್ಲಿನ ಜನರು ಈ ದೇವಿಗೆ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಹಾಗೂ ಈ ದೇವಿಗೆ ಒಂದು ವಿಚಿತ್ರವಾದ ಬಯಕೆಯಂತೆ ಆ ಬಯಕೆಯೇ ಇವಳಿಗೆ ದುಡ್ಡು ಎಂದರೆ ತುಂಬಾ ಇಷ್ಟ,

ಇವಳಿಗೆ ಇರಲಿ ದುಡ್ಡೇ ನೆವೇದ್ಯ ದುಡ್ಡು ಅಲಂಕಾರ ಹಾಗೂ ದುಡ್ಡೇ ಅಭಿಷೇಕ. ಇಲ್ಲಿ ಯಾರಾದರೂ ದುಡ್ಡಿನ ಆಮಿಷವನ್ನು ಹೋಗಿ ದೇವಿಗೆ ತೋರಿಸಿ ಹರಕೆಯನ್ನು ಕಟ್ಟಿಕೊಂಡರೆ ಅವರಿಗೆ ಇರುವಂತಹ ಯಾವುದೇ ತರಹದ ಪತ್ರಗಳು ಆದರೂ ಕೂಡ ಇಲ್ಲಿ ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ.

ಇಲ್ಲಿ ಮಂಗಳವಾರ ಹಾಗೂ ಶುಕ್ರವಾರ ದಿನದಂದು ವಿಶೇಷ ಪೂಜೆ ನಡೆಯುವ ರಿಂದ, ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಹಾಗೆ ಸಂತಾನ ಆಗದೇ ಇರುವಂತಹ ಅವರು ವಿಶೇಷವಾಗಿ ತನಗೆ ಹುಟ್ಟಿದಂತಹ ಮಗುವಿನ ಭಾಗದಷ್ಟು ಹಣವನ್ನು ಹಾಕುತ್ತೇವೆ ಎಂದು ಹರಕೆಯನ್ನು ಕೂಡ ಕೆಲವರು ಮಾಡಿಕೊಳ್ಳುತ್ತಾರೆ. ಹೀಗೆ ಈ ದೇವಸ್ಥಾನದಲ್ಲಿ ಹಣದ ಆಮಿಷವನ್ನು ತೋರಿಸಿ ದೇವರನ್ನು ಒಲಿಸಿಕೊಳ್ಳುವುದು ಈಗಲೂ ಕೂಡ ನಡೆಯುತ್ತಿದೆ.

ನಿಮಗೂ ಕೂಡ ಈ ದೇವಿಯ ಅನುಗ್ರಹ ಬೇಕಾದರೆ ಇವಾಗಲೇ ಇಲ್ಲಿಗೆ ಹೋಗಿ ದೇವಿಯ ಅನುಗ್ರಹವನ್ನು  ಪಡೆದುಕೊಳ್ಳಿ, ಇಂತಿ ನಿಮ್ಮ ಪ್ರೀತಿಯ ಹುಡುಗಿ.

Leave a Reply

Your email address will not be published. Required fields are marked *