ಈ ದೇವಸ್ಥಾನದ ಶಿವಲಿಂಗವು ದಿನಕ್ಕೆ ಮೂರು ಬಾರಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ..ಹಾಗೂ ಇಲ್ಲಿ ಅಂದುಕೊಂಡ ಬೇಡಿಕೆಗಳು ಕೂಡ ಈಡೇರುತ್ತವೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುತ್ತಿರುವ ಮಾಹಿತಿಯೆಂದರೆ ಶಿವಲಿಂಗದ ಬಗ್ಗೆ ಇಲ್ಲಿರುವಂತಹ ಶಿವಲಿಂಗವು ದಿನಕ್ಕೆ ಮೂರು ಬಣ್ಣವನ್ನು ಬದಲಾಯಿಸುತ್ತದೆ ಅಂತೆ.ಹೌದು ಸ್ನೇಹಿತರೆ ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ನಮ್ಮ ಭಾರತ ದೇಶದಲ್ಲಿ ಹಲವಾರು ದೇವಸ್ಥಾನಗಳಿವೆ .ಎಲ್ಲ ದೇವಸ್ಥಾನಗಳು ಕೂಡ ಒಂದೊಂದು ರೀತಿಯಾದಂತಹ ವಿಸ್ಮಯವನ್ನು ಕೂಡ ಹೊಂದಿವೆ.ಹಲವಾರು ಜನರು ಬೇರೆ ಬೇರೆ ರೀತಿಯ ದೇವರು ದೇವರನ್ನು ಪೂಜಿಸುತ್ತಾರೆ .ಆದರೆ ಇದರಲ್ಲಿ ಹೆಚ್ಚು ಜನರು ಶಿವನನ್ನು ಆರಾಧಿಸುತ್ತಾರೆ.ಯಾಕೆಂದರೆ ಈ ಮಹಾ ಶಿವನನ್ನು ಆರಾಧಿಸುವುದರಿಂದ ನಮಗೆ ನಮ್ಮ ಜೀವನದಲ್ಲಿ ಒಳ್ಳೆಯ ಸಂಗತಿಗಳು ಉಂಟಾಗುತ್ತವೆ ಎಂಬ ನಂಬಿಕೆಯಿಂದ ಮಹಾ ಶಿವನನ್ನು ಆರಾಧಿಸುತ್ತಾರೆ.

ನೀಲಕಂಠ, ಮಹಾದೇವ ,ಬೋಲೆನಾಥ ಹೀಗೆ ಮುಂತಾದ ಹೆಸರಿನಿಂದ ಶಿವನನ್ನು ಕರೆಯಲಾಗುತ್ತದೆ. ಹೀಗೆ ಶಿವನು ಕೂಡ ಒಂದೊಂದು ಪ್ರದೇಶದಲ್ಲಿ ಒಂದೊಂದು ಅವತಾರವಾಗಿ ನೆಲೆಸಿದ್ದಾನೆ.ಹೌದು ಸ್ನೇಹಿತರೆ ಇಲ್ಲಿರುವಂತಹ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ ಅಂತೆ ಅಂತೆ. ಬೆಳಿಗ್ಗೆ ಶಿವಲಿಂಗದ ಬಣ್ಣ ಕೆಂಪು ಬಣ್ಣದಲ್ಲಿದ್ದರೆ ಮಧ್ಯಾಹ್ನ ಕೇಸರಿ ಬಣ್ಣಕ್ಕೆ ತಿರುಗುತ್ತದೆ ಹಾಗೂ ಮತ್ತೆ ಸಂಜೆ ಇದು ಕಪ್ಪು ಬಣ್ಣಕ್ಕೆ ತಿರುಗುತ್ತದೆ.ಹೌದು ಸ್ನೇಹಿತರೆ ಈ ವಿಚಿತ್ರವಾದ ಅಂತಹ ವಿಸ್ಮಯಕಾರಿ ದೇವಾಲಯವಿರುವುದು ರಾಜಸ್ಥಾನದ ಧೋಲ್ಪುರ್ ಎಂಬ ಪ್ರದೇಶದಲ್ಲಿ. ಹೌದು ಈ ಪ್ರದೇಶದಲ್ಲಿ ಶಿವನನ್ನು ಅಚಲೇಶ್ವರ ಎಂಬ ಹೆಸರಿನಿಂದ ಜನರು ಆರಾಧಿಸುತ್ತಾರೆ.

ಈ ದೇವಾಲಯವು ಒಂದು ರೀತಿಯಾದಂತಹ ವಿಸ್ಮಯಕಾರಿ ದೇವಾಲಯಗಳಲ್ಲಿ ಒಂದಾಗಿದೆ . ಹೌದು ಸ್ನೇಹಿತರೆ ಈ ದೇವಾಲಯವು ವಿಜ್ಞಾನಿಗಳಿಗೂ ಕೂಡ ಒಂದು ರೀತಿಯಾದಂತಹ ಸವಾಲಾಗಿದೆ.ಯಾವ ವಿಜ್ಞಾನಿಯೂ ಕೂಡ ಈ ಬಣ್ಣವೂ ಯಾವ ಕಾರಣಕ್ಕೆ ಬದಲಾಗುತ್ತದೆ ಎಂಬುದನ್ನು ಕಂಡುಹಿಡಿಯಲು ಆಗಿಲ್ಲ ಇನ್ನು ಸಂಶೋಧನೆಯನ್ನು ನಡೆಸುತ್ತಲೇ ಇದ್ದಾರೆ. ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ ಸಂಪೂರ್ಣವಾಗಿ ಹಿತ್ತಾಳೆಯಿಂದ ತಯಾರಾದ ಅಂತಹ ಒಂದು ನಂದಿ ವಿಗ್ರಹವಿದೆ.ಇಲ್ಲಿ ನೀವು ಏನಾದರೂ ಇಷ್ಟಾರ್ಥ ಬೇಡಿಕೆಗಳನ್ನು ಬೇಡಿಕೊಂಡಿದ್ದೆ ಆದರೆ ಅದರಲ್ಲಿ ಕೂಡ ಕಂಕಣ ಭಾಗ್ಯದಂತಹ ಬೇಡಿಕೆಗಳನ್ನು ಬೇಡಿಕೊಂಡಿದ್ದೆ ಆದಲ್ಲಿ ಆದಷ್ಟು ಬೇಗ ಅವರಿಗೆ ಕಂಕಣಭಾಗ್ಯವನ್ನು ಬರುತ್ತದೆ.

ಎಂಬ ನಂಬಿಕೆ ಇದೆ. ಹಲವಾರು ಜನರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.ಹೌದು ಸ್ನೇಹಿತರೆ ನಾವು ದೇವರನ್ನು ಒಂದು ಬಾರಿ ನಂಬಿದರೆ ಆ ದೇವರು ನಮ್ಮನ್ನು ಯಾವತ್ತೂ ಕೂಡ ಕೈಬಿಡುವುದಿಲ್ಲ .ಆದರೆ ದೇವರ ಮೇಲೆ ನಮಗೆ ನಂಬಿಕೆ ಇರಬೇಕು ಅಷ್ಟೇ. ಈ ದೇವಾಲಯ ಕೂಡ ಒಂದು ರೀತಿಯಾದಂತಹ ನಿಗೂಢ ವಾದಂತಹ ವಿಸ್ಮಯಕಾರಿ ಸಂಗತಿಗಳನ್ನು ಹೊಂದಿದೆ.ಹೌದು ಶಿವಲಿಂಗದ ಉದ್ದವನ್ನು ಯಾರಿಗೂ ಕೂಡ ಅಳತೆ ಮಾಡಲು ಸಾಧ್ಯವಾಗಿಲ್ಲ ಈ ರೀತಿಯಾಗಿ ಒಂದು ವಿಸ್ಮಯಕಾರಿ ಸಂಗತಿಯನ್ನು ಹೊಂದಿರುವಂತಹ ದೇವಸ್ಥಾನವಾಗಿದೆ.

ಈ ದೇವಾಲಯವು ಕಾಡಿನ ನಟ್ಟನಡುವೆ ಇರುವಂತಹ ದೇವಾಲಯಗಳಲ್ಲಿ ಒಂದಾಗಿದೆ.ಪ್ರಾರಂಭದಲ್ಲಿ ಈ ಕ್ಷೇತ್ರಕ್ಕೆ ಜನರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಈ ದೇವಾಲಯದ ವಿಸ್ಮಯವನ್ನು ತಿಳಿದಂತಹ ಜನ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.ಅಚಲೇಶ್ವರ ಮಹಾದೇವನ ದೇವಾಲಯದಲ್ಲಿ ಇರುವಂತಹ ಶಿವಲಿಂಗವು ಮೂರು ಬಾರಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ನೈಸರ್ಗಿಕ ವಾದಂತಹ ಶಿವಲಿಂಗವನ್ನು ಈ ದೇವಾಲಯ ಹೊಂದಿದೆ.ಹೌದು ಸ್ನೇಹಿತರೆ ನೀವು ರಾಜಸ್ಥಾನದ ಕಡೆ ಹೋದರೆ ನೀವು ಕೂಡ ಒಮ್ಮೆ ಈ ವಿಸ್ಮಯಕಾರಿ ದೇವಾಲಯಕ್ಕೆ ಭೇಟಿ ಕೊಡಿ ಹಾಗೂ ನಿಮ್ಮ ಕೋರಿಕೆಯನ್ನು ಈಡೇರಿಸಿ ಕೊಳ್ಳಿ ಸ್ನೇಹಿತರೆ.ನೋಡಿ ಸ್ನೇಹಿತರೇ ಇದೇ ರೀತಿಯಾದಂತಹ ವಿಸ್ಮಯಕಾರಿ ಮತ್ತು ಪವಾಡ ಸದೃಶ್ಯ ವಾದಂತಹ ದೇವಾಲಯಗಳ ಬಗ್ಗೆ ಮಾಹಿತಿಯನ್ನು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ನಿಮಗೆ ಮಾಹಿತಿ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.