Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ದೇವಸ್ಥಾನದಲ್ಲಿ ನೀವು ಹೋಗಿ ಒಂದೇ ಒಂದು ದಿನ ಉಳಿದುಕೊಂಡು ಬಂದರೆ ಸಾಕು ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಉಂಟಾಗುತ್ತವೆ …!!!

ಭಕ್ತಾದಿಗಳು ಇಲ್ಲಿ ಈ ದೇವಾಲಯದಲ್ಲಿ 1ದಿನ ರಾತ್ರಿ ಉಳಿದರೆ ಅವರ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆಯೂ ಕೂಡ ಇದೆ ಈ ನಂಬಿಕೆ ಮಾತ್ರವಲ್ಲ ಇಲ್ಲಿ ದೇವಿಗೆ ಮತ್ತು ಎಂಬ ಮಾತು ಕೂಡ ರೂಢಿಯಲ್ಲಿದೆ ಈ ರೀತಿ ಭಕ್ತಾದಿಗಳು ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ ಮತ್ತು ತಾಯಿಗೆ ನೆಡೆದುಕೊಂಡು ತಮಗೆ ಬೇಕಾಗಿರುವ ವರವನ್ನು ಪಡೆದುಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಈ ದೇವಾಲಯವು ಇರುವುದಾದರೂ ಎಲ್ಲಿ ಅಂದರೆ ದಾವಣಗೆರೆಯಿಂದ ಸುಮಾರು ಎಪ್ಪತ್ತ್ 3ಕಿಲೋ ಮೀಟರ್ ದೂರದಲ್ಲಿರುವ ಹಾಗೆ ಕೊಟ್ಟೂರಿನಿಂದ ಇಪ್ಪತ್ತಾರು ಕಿಲೋಮೀಟರ್ ದೂರದಲ್ಲಿರುವ ಮಾಯಮ್ಮ ದೇವಿಯ ಆಲಯವು ಇದಾಗಿದೆ.ಇಲ್ಲಿ ದೇವಿಗೆ ಹಣದಿಂದಲೇ ಅಲಂಕಾರ ಮಾಡಲಾಗುತ್ತದೆ ಮತ್ತು ಹಣವನ್ನು ನೈವೇದ್ಯ ಸಮರ್ಪಿಸಲಾಗುತ್ತದೆ ಈ ದೇವಿಗೆ ಹಣವೇ ಪ್ರಿಯವಾದದ್ದು. ಆದ್ದರಿಂದ ಇಲ್ಲಿಯ ಭಕ್ತಾದಿಗಳು ಹೀಗೆ ಹಣದ ರೂಪದಲ್ಲಿ ಹರಕೆಯನ್ನು ಮಾಡಿಕೊಳ್ಳುತ್ತಾರೆ.

ಸಂತಾನ ಸಮಸ್ಯೆಯಿಂದ ಬಳಲುತ್ತಾ ಇರುವವರು ಸಂತಾನ ಪ್ರಾಪ್ತಿಗಾಗಿ ಇಲ್ಲಿ ದೇವಿಗೆ ಹರಕೆ ಮಾಡಿಕೊಳ್ಳುತ್ತಾರೆ ಇನ್ನು ಮಗು ಜನಿಸಿದ ನಂತರ ಮಗು ವನ್ನು ತುಲಾಭಾರ ನಡೆಸುತ್ತಾರೆ ದೇವಾಲಯದಲ್ಲಿ ನೀಡುವ ನಾಣ್ಯವನ್ನು ಬಳಸಿ ತುಲಾಭಾರ ಮಾಡಲಾಗುತ್ತದೆ ನಂತರ ದೇವಾಲಯಕ್ಕೆ ಇಷ್ಟು ಹಣ ಎಂದು ಭಕ್ತಾದಿಗಳು ನೀಡುತ್ತಾರೆ. ಈ ರೀತಿ ಜನರು ಇಲ್ಲಿ ಹರಕೆಯನ್ನು ಮಾಡಿಕೊಳ್ಳುತ್ತಾರೆ ಸಂತಾನ ವಿಚಾರದಲ್ಲಿ ಮಾತ್ರವಲ್ಲ ವ್ಯಾಪಾರ ವಹಿವಾಟು ವಿಚಾರದಲ್ಲಿಯೂ ಕೂಡ ಭಕ್ತಾದಿಗಳು ಹರಕೆಯನ್ನು ಮಾಡಿಕೊಳ್ಳುತ್ತಾರೆ ಇಲ್ಲಿ ಪ್ರಾಣಿಗಳನ್ನು ಬಲಿ ನೀಡುವ ಸಂಪ್ರದಾಯ ಕೂಡ ನಡೆದುಕೊಂಡು ಬಂದಿದೆ.

ಮಂಗಳವಾರ ಶುಕ್ರವಾರ ಹಾಗು ಹುಣ್ಣಿಮೆಯ ದಿವಸ ದಂದು ಈ ದೇವಾಲಯದಲ್ಲಿ ಜನಜಾತ್ರೆಯೇ ನೆರೆದಿರುತ್ತದೆ ಇನ್ನೂ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಜಾತ್ರೆ ಕೂಡ ನಡೆಯುತ್ತದೆ. ಸ್ವಲ್ಪ ತಿಂಗಳಿನ ಹಿಂದೆ ಈ ದೇವಾಲಯಕ್ಕೆ ರಾಜಗೋಪುರವನ್ನು ಕೂಡ ಕಟ್ಟಿಸಲಾಗಿದೆ ಕೊಲ್ಲಾಪುರ ಲಕ್ಷ್ಮೀ ದೇವಿಯ ಸ್ವರೂಪ ಈ ಮಾಯಮ್ಮದೇವಿ ಎಂದು ಹೇಳಲಾಗುತ್ತದೆ. ಪ್ರತಿ ದಿವಸ ಸಂಜೆ ಸಮಯದಲ್ಲಿ ಸಮಯ 6.30ಕ್ಕೆ ತಾಯಿಯನ್ನು ಗದ್ದುಗೆಯಿಂದ ಎಬ್ಬಿಸಿ ಊರನ್ನು ಸುತ್ತಿಸುತ್ತಾರೆ

ನಂತರ ತಾಯಿಯ ಗರ್ಭ ಗುಡಿಯಲ್ಲಿ ತಾಯಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಈ ಸಮಯದಲ್ಲಿ ಭಕ್ತಾದಿಗಳು ತಮ್ಮ ಕೋರಿಕೆಗಳನ್ನು ಕೇಳಿಕೊಳ್ಳುತ್ತಾರೆ ಅಷ್ಟೇ ಅಲ್ಲ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಅಥವ ತಮ್ಮ ಕೆಲಸ ನೆರವೇರುತ್ತದೋ ಇಲ್ಲವೊ ಎಂದು ಚೀಟಿಯಲ್ಲಿ ಬರೆದಿಟ್ಟು, ಈ ದೇವಾಲಯದ ಸುತ್ತ ಮುತ್ತಲಿನಲ್ಲಿ ಬಚ್ಚಿಡುತ್ತಾರೆ ನಂತರ ಪುರೋಹಿತರು ಈ ಚೀಟಿಯನ್ನು ಹುಡುಕಿ ಅವರ ಕೆಲಸ ನೆರವೇರುತ್ತದೊ ಇಲ್ಲವೋ ಎಂದು ತಿಳಿಸುತ್ತಾರೆ. ಇಲ್ಲಿ ನಡೆಯುತ್ತಿರುವ ವಿಶೇಷಗಳಲ್ಲಿ ಇದೂ ಕೂಡ ಒಂದಾಗಿದೆ.

ಬಂದ ಭಕ್ತಾದಿಗಳಿಗೆ ಉಳಿದುಕೊಳ್ಳುವುದಕ್ಕಾಗಿ ಇಲ್ಲಿ ಸುಮಾರು ಹದಿನೈದು ಕೊಠಡಿಗಳು ಕೂಡ ಇದೆ ಅಮಾವಾಸ್ಯೆಯ ದಿವಸ ದಂದು ತಾಯಿಯ ಹೆಸರಲ್ಲಿ ಅನ್ನಸಂತರ್ಪಣೆ ಕೂಡ ಇಲ್ಲಿ ನಡೆಯುತ್ತದೆ. ತಾಯಿಗೆ ಚಿನ್ನದ ಬಳೆಗಳು ಗಾಜಿನ ಬಳೆಗಳನ್ನು ನೀಡುವುದಾಗಿ ಕೂಡ ಭಕ್ತಾದಿಗಳು ಕೇಳಿಕೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವುದಾಗಿ ಹರಕೆಯನ್ನು ಕೂಡ ಮಾಡಿಕೊಳ್ಳುತ್ತಾರೆ.

ತಾಯಿಯ ಆಲಯಕ್ಕೆ ತೆರಳುವುದಕ್ಕಾಗಿ ಹತ್ತಿರದ ರೈಲ್ವೆ ಸ್ಟೇಷನ್ ದಾವಣಗೆರೆಯಲ್ಲಿ ಇರುತ್ತದೆ. ಇನ್ನು ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ಇನ್ನೂರ ಅರವತ್ತ್ ಮೂರು ಕಿಲೋ ಮೀಟರ್ ದೂರದಲ್ಲಿರುವ ಈ ಆಲಯವು ಬಳ್ಳಾರಿಯಿಂದ ಸುಮಾರು ತೊಂಬತ್ತ್ ನಾಲ್ಕು ಕಿಲೋಮೀಟರ್ ದೂರದಲ್ಲಿದೆ.

ಈ ರೀತಿಯಾಗಿ ನಮ್ಮ ಭಾರತ ದೇಶದಲ್ಲಿ ಇರುವ ಅನೇಕ ದೇವಾಲಯಗಳು ಅನೇಕ ವಿಶೇಷತೆಗಳನ್ನು ಪಡೆದುಕೊಂಡಿರುವುದನ್ನು ಗಮನಿಸಬಹುದಾಗಿದೆ ಹಾಗೂ ನಮ್ಮ ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಗಾಣಗಟ್ಟೆ ಮಾಯಮ್ಮ ದೇವಿ ಆಲಯಕ್ಕೆ ನೀವು ಕೂಡ ಒಮ್ಮೆ ಭೇಟಿ ನೀಡಿ ತಾಯಿಯ ಅನುಗ್ರಹವನ್ನು ಪಡೆದುಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ