Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ದೇವರುಗಳು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಎದುರಾಗಿ ಅದೃಷ್ಟ ನಿಮ್ಮ ಪಾಲಾಗುತ್ತೆ ….!!!!!

ಕನಸಿನಲ್ಲಿ ದೇವರು ಕಾಣಿಸಿಕೊಂಡರೆ ಏನೆಲ್ಲಾ ಸೂಚನೆ ಇರಬಹುದು ನೋಡಿ ಹಾಗೆ ಯಾವ ದೇವರು ಕಂಡರೆ ಏನು ಸೂಚನೆ ಎಂದು ತಿಳಿಯಿರಿ.
ಸ್ನೇಹಿತರೇ ಮನುಷ್ಯನಿಗೆ ಮಲಗಿದ್ದಾಗ ಕನಸು ಬೀಳುವುದು ಸಹಜ. ಈ ಕನಸುಗಳು ಒಂದೊಂದು ಸಲ ನಿಜ ಆಗುತ್ತವೆ ಒಂದು ಸಲ ನಿಜ ಆಗುವುದಿಲ್ಲ. ಹಾಗೆಯೇ ಬೆಳಗ್ಗೆ ಅಂದರೆ ನಾಲ್ಕರಿಂದ ಆರು ಗಂಟೆ ಒಳಗೆ ಬೀಳುವ ಕನಸುಗಳು ನಿಜ ಆಗುತ್ತದೆ ಎನ್ನುವ ನಂಬಿಕೆಯೂ ಕೂಡ ಕೆಲವೊಬ್ಬರಲ್ಲಿ ಇದೆ. ನಾವು ಮಲಗಿದ್ದಾಗ ಎಚ್ಚರವಿಲ್ಲದ ಸಮಯದಲ್ಲಿ ನಮಗೆ ಕನಸುಗಳು ಬೀಳುವುದು ಸರ್ವೇಸಾಮಾನ್ಯ ಎಲ್ಲಾ ಕನಸುಗಳು ಕೆಲವೊಂದು ಸಲ ನೆನಪಲ್ಲಿ ಉಳಿಯುವುದಿಲ್ಲ.

ಕನಸಿನಲ್ಲಿ ನೀರು ಬಂದರೆ ಅಥವಾ ನದಿ ಬಂದರೆ ಯಾರಾದರೂ ಸತ್ತಿರುವ ಸುದ್ದಿಯನ್ನು ಕೇಳುತ್ತೇವೆ ಎಂದು ಹೇಳುತ್ತಾರೆ. ಇನ್ನು ಕೆಲವರು ಕನಸಿನಲ್ಲಿ ಊಟ ಮಾಡುವುದು ಬಂದರೆ ಅಶುಭ ಎಂದು ಹೇಳುತ್ತಾರೆ. ಹಾಗೆಯೇ ಕನಸಿನಲ್ಲಿ ದೇವರು ಕೂಡ ಬರಬಹುದು. ಕನಸಿನಲ್ಲಿ ಯಾವ ದೇವರು ಬಂದರೆ ಏನು ಸೂಚನೆ ಎಂದು ನಾನು ನಿಮಗೆ ತಿಳಿಸುತ್ತೇನೆ. ನಾವು ಮಲಗಿದ ಸ್ಥಳವೂ ಕೂಡ ನಮ್ಮ ಕನಸುಗಳಿಗೆ ಕಾರಣವಾಗಿರುತ್ತೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳುತ್ತಾರೆ. ನಮಗೆ ಬೀಳುವ ಕನಸುಗಳು ಕೆಲವೊಮ್ಮೆ ಭಯಂಕರವಾಗಿರುತ್ತದೆ ಇನ್ನು ಕೆಲವೊಮ್ಮೆ ನಮಗೆ ಸಂತೋಷವನ್ನು ತಂದುಕೊಡುತ್ತವೆ.

ಕನಸುಗಳು ರಾತ್ರಿಯಷ್ಟೇ ಅಲ್ಲದೆ ಹಗಲಿನಲ್ಲಿ ಕೂಡ ಬೀಳುತ್ತವೆ. ಆದರೆ ಕೆಲವೊಂದು ಕನಸುಗಳು ನಮಗೆ ಮುನ್ಸೂಚನೆಯನ್ನು ಕೊಡುತ್ತಿರುತ್ತವೆ ದೇವರು ಕನಸಿನಲ್ಲಿ ಬಂದರೆ ಶುಭವೋ ಅಶುಭವೋ ಎಂಬುದು ದೇವರ ರೂಪದ ಮೇಲೆ ನಿರ್ಧಾರವಾಗಿರುತ್ತದೆ. ಹಾಗಾದರೆ ಯಾವ ದೇವರು ಕನಸಿನಲ್ಲಿ ಬಂದರೆ ಏನು ಸೂಚನೆ ಎಂದು ನೀವು ಕೂಡ ತಿಳಿದುಕೊಳ್ಳಬಹುದು. ಕನಸಿನಲ್ಲಿ ಶಿವ ದೇವರು ಬಂದರೆ ನಿಮಗೆ ತುಂಬಾ ಒಳ್ಳೆಯದು ಅಂದರೆ ನೀವು ಜೀವನದಲ್ಲಿ ಕಷ್ಟಗಳನ್ನು ಕಾಣುವುದಿಲ್ಲ ಎಂದು ನಂಬಿಕೆಯಿದೆ. ಶಿವನು ಸೃಷ್ಟಿಯನ್ನು ಐಕ್ಯ ಮಾಡಿಕೊಳ್ಳುವ ಶಕ್ತಿ ಉಳ್ಳವನು.

ನಾವು ಸತ್ತಮೇಲೆ ಅಂದರೆ ಎಲ್ಲಾ ಬಂಧನದಿಂದ ಮುಕ್ತಿ ಹೊಂದಿದ ಮೇಲೆ ಶಿವನ ಪಾದಕ್ಕೆ ನಾವು ಸೇರುತ್ತೇವೆ ಎನ್ನುವ ನಂಬಿಕೆಯೂ ಇದೆ ಇಂತಹ ಶಿವನ ಮೂರ್ತಿ ನಿಮ್ಮ ಕನಸಿನಲ್ಲಿ ಬಿದ್ದರೆ ತುಂಬಾ ಒಳ್ಳೆಯದು ಹಾಗೂ ನಿಮಗೆ ಆರೋಗ್ಯ ನೆಮ್ಮದಿ ನಿಮ್ಮ ಜೀವನದಲ್ಲಿ ಸದಾ ಇರುತ್ತದೆ ಎಂದು ಅರ್ಥ. ಹಾಗೆಯೇ ಕನಸಿನಲ್ಲಿ ಶಿವನ ರೂಪ ಕಂಡರೆ ಶೀಘ್ರದಲ್ಲಿ ನಿಮಗೆ ಒಳ್ಳೆಯ ಸಮಯ ಬಂದಿದೆ ಎಂದು ಹೇಳಬಹುದು. ಹಾಗಾದರೆ ಕನಸಿನಲ್ಲಿ ದುರ್ಗಾದೇವಿ ಬಂದರೆ ಏನು ಸೂಚನೆ ಅಂದರೆ ಕನಸಿನಲ್ಲಿ ದೇವಿ ಸ್ವರೂಪಿ ದುರ್ಗಾದೇವಿ ಕೆಂಪು ವಸ್ತ್ರದಲ್ಲಿ ಕಂಡರೆ ನಿಮಗೆ ಅದೃಷ್ಟವು ಸಿಗುತ್ತದೆ ದುರ್ಗಾದೇವಿ ದುಷ್ಟರನ್ನು ಸಂಹರಿಸುವ ಚಂಡಿ ಆಗಿರುತ್ತಾಳೆ ನಂತರ ಸೌಮ್ಯ ಆಗುತ್ತಾಳೆ.

ಕೆಂಪು ವಸ್ತ್ರವನ್ನು ಧರಿಸಿ ಸೌಮ್ಯವಾಗಿ ದುರ್ಗಾದೇವಿ ನಿಮಗೆ ಕಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಅದೃಷ್ಟ ಸಿಗುವುದು ಎಂದರ್ಥ. ಆದರೆ ದುರ್ಗಾದೇವಿಯ ಜೊತೆ ಸಿಂಹವು ಕಂಡು ಮೈಸಾಸುರನ ಸಂಹಾರ ಮಾಡುವ ಕನಸು ಕಂಡರೆ ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ಅಥವಾ ಮನೆ ಸುತ್ತಲೂ ಜಗಳ ಆಡುವ ಸಂದರ್ಭವನ್ನು ನೀವು ನೋಡುತ್ತೀರಾ ಎಂದರ್ಥ. ಹಾಗೆಯೇ ಕನಸಿನಲ್ಲಿ ಶ್ರೀರಾಮ ಬಂದರೆ ಏನಾಗುವುದೆಂದು ನೀವೇ ನೋಡಿ ಸಾಕ್ಷಾತ್ ಶ್ರೀ ವಿಷ್ಣುವಿನ ಅವತಾರವಾದ ಶ್ರೀರಾಮನು ಅಯೋಧ್ಯೆಯ ರಾಜ ಆಗಬೇಕಾಗಿತ್ತು

ಆದರೆ ತಂದೆಯ ಮಾತಿನಂತೆ ನಡೆದುಕೊಳ್ಳುವ ಶ್ರೀರಾಮ ಅವರ ಮಾತನ್ನು ನಡೆಸಿ ತಮ್ಮ ಜವಾಬ್ದಾರಿಗಳನ್ನು ಪೂರ್ತಿ ಮಾಡುತ್ತಾರೆ ಶ್ರೀರಾಮ ಹಾಗೆಯೇ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮನು ರಾವಣನನ್ನು ಸಂಹರಿಸಿ ಸೀತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಇಂತಹ ಶ್ರೀರಾಮಚಂದ್ರನು ನಿಮಗೆ ಕನಸಿನಲ್ಲಿ ಬಂದರೆ ನಿಮ್ಮ ಜೀವನದಲ್ಲಿ ಕೂಡ ನಿಮಗೆ ಜವಾಬ್ದಾರಿಗಳು ಹೆಚ್ಚಾಗಲಿದೆ ಎಂದು ಅರ್ಥ ಹಾಗೆಯೇ ಈ ಜವಾಬ್ದಾರಿಗಳು ನಿಮಗೆ ಪ್ರಗತಿಯನ್ನು ಉಂಟು ಮಾಡುತ್ತವೆ ಅಂದರೆ ಇದು ಕೂಡ ನಿಮಗೆ ಒಳ್ಳೆಯದನ್ನೇ ಮಾಡುವ ಸೂಚನೆ ನೀಡುತ್ತದೆ.

ಹಾಗಾದರೆ ಕನಸಿನಲ್ಲಿ ಶ್ರೀಕೃಷ್ಣ ಸ್ನೇಹಜೀವಿ ಜಗದೋದ್ಧಾರ ಕಂಡರೆ ಏನು ಅರ್ಥ ಎಂದರೆ ಶ್ರೀಕೃಷ್ಣನು ನಿಮಗೆ ನಿಮ್ಮ ಜೀವನದಲ್ಲಿ ಪ್ರೇಮದ ಮಳೆಯನ್ನು ಸುರಿಸುತ್ತಾನೆ ಎಂದರ್ಥ ಹಾಗೆ ಯಶಸ್ಸು ನಿಮ್ಮ ಜೀವನದಲ್ಲಿ ಸದಾ ಇರುತ್ತದೆ. ಹಾಗೆಯೇ ಮಹಾಲಕ್ಷ್ಮಿಯು ನಿಮ್ಮ ಕನಸಿನಲ್ಲಿ ಬಂದರೆ ನೀವು ಎಲ್ಲಾ ಕಷ್ಟಗಳಿಂದ ದೂರವಾಗಿ ನೀವು ಮಾಡುವ ಕೆಲಸದಲ್ಲಿ ಲಾಭವನ್ನು ತೆಗೆದುಕೊಳ್ಳುತ್ತೀರಾ ಎಂದರ್ಥ. ಕನಸಿನಲ್ಲಿ ಶ್ರೀವಿಷ್ಣು ದೇವನೂ ಕಂಡರೆ ನಿಮ್ಮ ಜೀವನದಲ್ಲಿ ಏಳಿಗೆ ಎಂಬುದು ಸದಾ ಇರುತ್ತದೆ

ಹಾಗೆಯೇ ದೇವರು ನಿಮಗೆ ಸಂಪೂರ್ಣ ಆಶೀರ್ವದಿಸುತ್ತಾನೆ ಎಂದು ಹೇಳುತ್ತಾರೆ ಸ್ನೇಹಿತರೆ ದೇವರು ಕನಸಿನಲ್ಲಿ ಬಂದರೆ ಏನು ಸೂಚನೆ ಎಂದು ನಿಮಗೆ ಈಗ ತಿಳಿದಿರಬಹುದು ಕನಸುಗಳನ್ನು ಕಾಣಿರಿ ಮತ್ತು ನಿಮ್ಮ ಜೀವನದಲ್ಲಿ ಶುಭವನ್ನು ಪ್ರಾಪ್ತಿ ಮಾಡಿಕೊಳ್ಳಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ