ಓಂ ಆದಿಶಕ್ತಿಯ ನಮಃ ವೀಕ್ಷಕರೇ ನಿಮಗೆಲ್ಲರಿಗೂ ನಿಂಬೆ ಹಣ್ಣಿನ ಬಗ್ಗೆ ತಿಳಿದಿದೆ ಆರೋಗ್ಯ ಸಮಸ್ಯೆಯಲ್ಲಿ ನಿಂಬೆ ಹಣ್ಣಿನ ಪಾತ್ರ ಬಹು ಮುಖ್ಯವಾದದ್ದು ಹೌದು ಸ್ನೇಹಿತರೆ ಬೊಜ್ಜು ಕರಗಿಸುವಲ್ಲಿ ಮತ್ತು ಬೇಸಿಗೆಯ ತಾಪಮಾನದಲ್ಲಿ ದೇಹಕ್ಕೆ ತಂಪನ್ನು ನೀಡುವ ನಿಂಬೆ ಹಣ್ಣಿನ ಮಹತ್ವವನ್ನು ನೀವೆಲ್ಲರೂ ತಿಳಿದಿರುತ್ತೀರಿ ಇನ್ನು ನೀವೆಲ್ಲರೂ ನಿಂಬೆ ಹಣ್ಣನ್ನು ಮನೆಯಲ್ಲಿ ವಾಸ್ತು ದೋಷ ಇದ್ದರೆ ಒಂದು ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿ ಅದನ್ನು ಮನೆಯ ಒಂದು ಮೂಲೆಯಲ್ಲಿ ಇಟ್ಟರೆ ಅದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಾಗಿಸಿ ನಕಾರಾತ್ಮಕ ಶಕ್ತಿಯು ಹೋಗುವಂತೆ ಮಾಡುತ್ತದೆ. ಸ್ನೇಹಿತರೇ ನಿಮಗೆ ಗೊತ್ತಿರುವ ಹಾಗೆ ನಿಂಬೆ ಹಣ್ಣಿನ ಹಾರವನ್ನು ಮಾಡಿ ದೇವರಿಗೆ ಹಾಕುವ ಪದ್ಧತಿ ತಿಳಿದಿದೆ ಹೌದು ಸ್ನೇಹಿತರೆ ನಿಂಬೆಹಣ್ಣಿನ ಹಾರವನ್ನು ಹೆಣ್ಣು ದೇವತೆಗಳಾದ ಪಾರ್ವತಿ ಸ್ವರೂಪ ಆದಿಶಕ್ತಿ ಕಾಳಿ ಮಾತೆ ಚೌಡೇಶ್ವರಿ ದೇವರುಗಳಿಗೆ ಹೆಚ್ಚಾಗಿ ಅರ್ಪಿಸುತ್ತಾರೆ ಮತ್ತು ನಿಂಬೆ ಹಣ್ಣಿನ ದೀಪಗಳನ್ನು ಸಹ ನೀವು ಈ ತಾಯಿಯಂದಿರ ದೇವಾಲಯದಲ್ಲಿ ನೋಡಿರುತ್ತೀರಾ.
ಇದರ ಬಗ್ಗೆ ನಾವು ನಿಮಗೆ ಇನ್ನೂ ಹೆಚ್ಚಾಗಿ ತಿಳಿಸಿಕೊಡುತ್ತೇವೆ ಆದ್ದರಿಂದ ನೀವು ಈ ಕೆಳಗೆ ಅಥವಾ ಮೇಲೆ ನೀಡಿರುವ ವಿಡಿಯೊವನ್ನು ಸಂಪೂರ್ಣವಾಗಿ ನೋಡಿ ಮತ್ತು ಇದರ ಮಾಹಿತಿಯನ್ನು ಪಡೆದುಕೊಳ್ಳಿ.ಮನೆಯಲ್ಲಿ ಕಷ್ಟಗಳೇ ತುಂಬಿದ್ದರೆ ಮನೆಯ ಮಾಲೀಕನು ಏನೇ ಕೆಲಸ ಮಾಡಿದರೂ ಅದು ಕೈ ಹತ್ತುತ್ತಿಲ್ಲ ಅನ್ನುವುದಾದರೆ , ಮನೆಯ ಒಡತಿಯಾದಾವಳು ಶುಕ್ರವಾರದ ದಿನದಂದು ಪಾರ್ವತಿ ದೇವಿಯ ಸ್ವರೂಪರಾದ ಕಾಳಿಕಾಂಬಾ, ಚೌಡೇಶ್ವರಿ , ಅಂಬಾಭವಾನಿ ದೇವಾಲಯದಲ್ಲಿ ನಿಂಬೆ ಹಣ್ಣಿನಲ್ಲಿ ದೀಪವನ್ನು ಮಾಡಿ ಈ ದೇವಾಲಯಗಳಲ್ಲಿ ಹಚ್ಚುವುದರಿಂದ ಮನೆಯಲ್ಲಿರುವ ಕಷ್ಟಗಳು ನಿವಾರಣೆಯಾಗುತ್ತದೆ. ಇನ್ನು ಈ ದೀಪಗಳನ್ನು ಮೂರು ವಾರಗಳ ಕಾಲ ಅಥವಾ ಐದು ವಾರಗಳ ಕಾಲ ಅಥವಾ ಒಂಬತ್ತು ವಾರಗಳ ಕಾಲವು ಸಹ ಈ ವ್ರತವನ್ನು ಮಾಡಬಹುದಾಗಿದೆ.
ವಿಡಿಯೋ ಕೆಳಗೆ ಇದೆ ….
ಇನ್ನೂ ಈ ದೀಪವನ್ನು ಶುಕ್ರವಾರದ ದಿನದಂದೇ ಯಾಕೆಂದರೆ ಆ ದಿನದಂದು ದೀಪದಿಂದ ಸಕಾರಾತ್ಮಕ ಶಕ್ತಿಯು ಹೊರಡುತ್ತದೆ ಆದ್ದರಿಂದ ಸ್ನೇಹಿತರೇ ನೀವು ಸಹ ಮನೆಯಲ್ಲಿ ಕಷ್ಟವೆಂದರೆ ಈ ದೀಪವನ್ನು ಹಚ್ಚಿ ಈ ವ್ರತವನ್ನು ಮಾಡಿ . ದೀಪವನ್ನು ಹಚ್ಚಿದ ನಂತರ ದೇವಾಲಯಕ್ಕೆ ಬಂದಿರುವ ಸುಮಂಗಲಿಯರಿಗೆ ಬಳೆ ಹೂವು ಅಥವಾ ಎಲೆ ಅಡಿಕೆ ಹಣ್ಣು ರವಿಕೆ ಫೀಸು ಇವುಗಳಲ್ಲಿ ಯಾವುದಾದರೂ ಒಂದನ್ನು ಕೊಟ್ಟು ಸುಮಂಗಲಿಯರಿಂದ ಆಶೀರ್ವಾದವನ್ನು ಪಡೆದುಕೊಳ್ಳಿ ಯಾಕೆಂದರೆ ಈ ವಸ್ತುಗಳೆಲ್ಲಾ ತಾಯಿಗೆ ಇಷ್ಟವಾದ ವಸ್ತುವಾಗಿರುವುದರಿಂದ ಇದನ್ನು ಸುಮಂಗಲೆಯರಿಗೆ ಕೊಡುವುದರಿಂದ ತಾಯಿಗೂ ಸಹ ಸಂತಸವಾಗುತ್ತದೆ ಮತ್ತು ಈ ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೂ ಲಕ್ಷ್ಮೀ ಮತ್ತು ಸರಸ್ವತಿ ದೇವಾಲಯಗಳಲ್ಲಿ ಹಚ್ಚಬಾರದು, ಹೀಗೆ ಮಾಡುವುದರಿಂದ ಮನೆಯಲ್ಲಿ ಇನ್ನೂ ಕಷ್ಟಗಳು ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ . ಎಲ್ಲರಿಗೂ ಈ ಮಾಹಿತಿ ಇಷ್ಟವಾಗಿದ್ದಲ್ಲಿ ಮೆಚ್ಚುಗೆಯನ್ನು ನೀಡಿ ಧನ್ಯವಾದಗಳು .