Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ತರಹದ ಸೂಚನೆಗಳು ನಿಮಗೆ ಏನಾದ್ರು ಕಾಣಿಸಿಕೊಂಡರೆ ನಿಮ್ಮ ಪಿತೃ ದೇವತೆಗಳು ನಿಮ್ಮ ಮನೆಗೆ ಬರುತ್ತಿದ್ದಾರೆ ಎಂದು ಅರ್ಥ .. ಆ ಸೂಚನೆಗಳನ್ನು ಯಾವತ್ತೂ ಕಡೆಗಣಿಸಬೇಡಿ ಅವರು ನಿಮ್ಮನ್ನು ಹರಸಿ ಹಾರೈಸಲು ಬಂದಿರುತ್ತಾರೆ ….

ಪಿತೃಪಕ್ಷದಲ್ಲಿ ಪಿತೃಗಳು ಮನೆಗೆ ಬಂದು ಹೋದರೆ ಏನೇನು ಸೂಚನೆಗಳು ಸಿಗುತ್ತವೆ ಎಂಬುದನ್ನು ನೀವೇ ತಿಳಿದುಕೊಳ್ಳಿ.ಹೌದು ಸ್ನೇಹಿತರೆ ಪಿತೃ ಪಕ್ಷಕ್ಕೆ ಸಂಬಂಧಪಟ್ಟಂತೆ ಭಾದ್ರಪದ ಹುಣ್ಣಿಮೆಯ ದಿನದಿಂದ ಭಾದ್ರಪದ ಅಮಾವಾಸ್ಯೆಯವರೆಗೆ ಅಂದರೆ 16 ದಿನದಲ್ಲಿ ನಮ್ಮ ಪೂರ್ವಜರು ದಕ್ಷಿಣ ದಿಕ್ಕಿನಿಂದ ನಮ್ಮ ಮನೆಗೆ ಬರುವರೆಂದು ನಂಬಿಕೆಯಿದೆ. ಇಂತಹ ಸಮಯದಲ್ಲಿ ನಾವು ಪಿತೃಗಳಿಗೆ ಕಾರ್ಯಗಳನ್ನು ಮಾಡಿದರೆ ಅವರು ನಮಗೆ ಸುಖ ಶಾಂತಿ ನೆಮ್ಮದಿ ಸಮೃದ್ಧಿಯನ್ನು ನೀಡಿ ಪುನಹ ಅವರು ವೈಕುಂಠ ಲೋಕಕ್ಕೆ ಹೋಗುತ್ತಾರೆ. ಜಾನಪದಗಳ ಪ್ರಕಾರ ಇವೆಲ್ಲ ಸೂಚನೆಗಳು ನಿಮಗೆ ಸಿಕ್ಕರೆ ಪಿತೃ ಪಕ್ಷದಿಂದ ನಿಮಗೆ ಆಶೀರ್ವಾದ ಇದೆಯೆಂದು ಹೇಳುತ್ತಾರೆ.

ಹಾಗಾದ್ರೆ ಆ ಸೂಚನೆಗಳು ಯಾವುವು ಮತ್ತು ಆ ಸೂಚನೆಗಳಿಂದ ಏನು ಸಿಗುತ್ತದೆ ಮತ್ತು ಸೂಚನೆಗಳನ್ನು ಕೊಡುವರು ಯಾರು ಎಂದು ನಾನು ನಿಮಗೆ ತಿಳಿಸುತ್ತೇನೆ. ಹೌದು ಸ್ನೇಹಿತರೆ ನಮ್ಮೆಲ್ಲರಿಗೂ ಸಾವು ಇದ್ದೇ ಇದೆ. ಈ ಭೂಮಿ ಮೇಲೆ ಯಾರೂ ಶಾಶ್ವತವಲ್ಲ. ಮನೆಗೆ ಹಿರಿಯರು ಇರಬೇಕು ಅನ್ನುತ್ತಾರೆ ಏಕೆಂದರೆ ಅವರು ಜೀವನದಲ್ಲಿ ತುಂಬಾ ಅನುಭವಗಳನ್ನು ನೋಡಿರುತ್ತಾರೆ ಆದ್ದರಿಂದ ಮನೆಯಲ್ಲಿರುವವರಿಗೆ ಆಗುಹೋಗುಗಳ ಬಗ್ಗೆ ಮತ್ತು ಅವರ ತಪ್ಪುಗಳ ಬಗ್ಗೆ ತಿಳಿಸಿ ಎಚ್ಚರ ನೀಡುತ್ತಾರೆ ಹಾಗೆ ಹಿರಿಯರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ,

ಅಂತಹ ಹಿರಿಯರು ನಿ’ಧನರಾದ ಮೇಲೆ ನಿಮ್ಮ ಮೇಲೆ ಆಶೀರ್ವಾದ ಮಾಡಿರುವುದು ನಮಗೆ ತಿಳಿಯಬೇಕು ಎಂದರೆ ಅವರು ಈ ಎಲ್ಲಾ ಮುನ್ಸೂಚನೆಗಳನ್ನು ನೀಡಿರುತ್ತಾರೆ. ಕಾಗೆಯು ಈ ಎಲ್ಲಾ ಮುನ್ಸೂಚನೆಗಳನ್ನು ನೀಡುತ್ತದೆ ಹಾಗಾದರೆ ಪಿತೃಪಕ್ಷದಲ್ಲಿ ಕಾಗೆ ಮಹತ್ವವೇನು ಎಂದು ತಿಳಿಯೋಣ. ವಿಷ್ಣು ಪುರಾಣದ ಪ್ರಕಾರ ಕಾಗೆ ಪೂರ್ವಜರ ಸಂಕೇತ ಎಂದು ಹೇಳುತ್ತಾರೆ. ಶಾಂತ ಪಕ್ಷದಲ್ಲಿ ಕಾಗೆಯನ್ನು ನೋಡುವುದು ತುಂಬಾ ವಿಶೇಷ ಎನ್ನುತ್ತಾರೆ. ಪಿತೃಪಕ್ಷದಲ್ಲಿ ಕಾಗೆಗಳಿಗೆ ಹೆಚ್ಚು ವಿನಮ್ರತೆ ಮತ್ತು ಭಕ್ತಿಯಿಂದ ಆಹಾರವನ್ನು ನೀಡುವುದು ಕೂಡ ಇದೆ. ಕಾಗೆಗಳ ಮೂಲಕವೇ ಪೂರ್ವಜರು ತಮ್ಮ ಆಗಮನವನ್ನು ಸೂಚಿಸುತ್ತಾರೆ ಎನ್ನುವ ನಂಬಿಕೆ ಇದೆ

ಹಾಗಾದರೆ ಸೂಚನೆಗಳು ಯಾವವು ಮತ್ತು ಆ ಸೂಚನೆಗಳಿಂದ ಹಿಂದೆ ಇರುವ ಲಾಭಗಳೇನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಕಾಗೆಯ ಬಾಯಲ್ಲಿ ಹುಲ್ಲು ಕಂಡರೆ ಅರ್ಥವೇನು ಶಾಂತ ಪಕ್ಷದಲ್ಲಿ ನಿಮ್ಮ ಮನೆಯ ಚಾವಣಿಯಲ್ಲಿ ಕಾಗೆ ಹುಲ್ಲನ್ನು ಬಾಯಿಯಲ್ಲಿ ಇಟ್ಟುಕೊಂಡು ಬಂದರೆ ಪೂರ್ವಜರು ನಿಮ್ಮ ಮನೆಗೆ ಆಗಮಿಸುತ್ತಾರೆ ಎಂದರ್ಥ. ಹಾಗೆಯೇ ಈ ರೀತಿಯಾಗಿ ಕಂಡರೆ ಸಂಪತ್ತು ನಿಮ್ಮ ಮನೆಗೆ ಬರುತ್ತಿದೆ ಎಂದರ್ಥ. ನಿಮ್ಮ ಮನೆಯ ಮುಂದೆ ಇರುವ ಮರದ ಮೇಲೆ ಕಾಗೆ ಬಂದು ಕೂತರೆ ಅದರಲ್ಲೂ ಹಸಿರು ಮರದ ಮೇಲೆ ಕೂತರೆ ಪೂರ್ವಜರು ಆಗಮಿಸುತ್ತಾರೆ ಆಶೀರ್ವದಿಸುತ್ತಾರೆ

ಮತ್ತು ನಿಮ್ಮ ಮನೆಗೆ ಸಂಪತ್ತು ವೈಭವ ಸಿಗುತ್ತದೆ ಎಂದು ಪರಿಗಣಿಸುತ್ತಾರೆ. ಕಾಗೆಗಳು ಬಾಯಿಯಲ್ಲಿ ಹೂ ಅಥವಾ ಎಲೆಗಳನ್ನು ಕಚ್ಚಿಕೊಂಡು ಬಂದರೆ ಪೂರ್ವಜರು ನಿಮ್ಮ ಸುತ್ತಲೂ ಇದ್ದಾರೆ ಹಾಗೆಯೇ ಅವರು ನಿಮ್ಮ ಜೊತೆಗೆ ಸಂತೋಷವಾಗಿ ಇದ್ದಾರೆ ಎಂದು ಸೂಚನೆ ಕೊಡುತ್ತಿರುತ್ತದೆ ಎಂದು ಅರ್ಥಮಾಡಿಕೊಳ್ಳಿ ಹಾಗೆಯೇ ಅವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಎಂದು ತಿಳಿದುಕೊಳ್ಳಿ. ಹಾಗೆ ನಿಮಗೆ ಯಾವುದೇ ತೊಂದರೆ ಆಗದೆ ರೀತಿ ಅವರ ನೋಡಿಕೊಳ್ಳುತ್ತಾರೆ ಮತ್ತು ನಿಮ್ಮ ಎಲ್ಲಾ ಆಸೆಗಳು ನೆರವೇರುತ್ತವೆ.

ಹಾಗೆ ಹಸುವಿನ ಮೇಲೆ ಅಂದರೆ ಬೆನ್ನಿನ ಮೇಲೆ ಕಾಗೆ ಬಂದು ಕೂತರೆ ಶೀಘ್ರವೇ ನಿಮ್ಮ ಮನೆಗೆ ಸಮೃದ್ಧಿ ಪೂರ್ವಜರ ಆಶೀರ್ವಾದದಿಂದ ಸಿಗುತ್ತದೆ ಎಂದರ್ಥ. ಕಾಗೆಗಳು ಹಂದಿಯ ಹಿಂಭಾಗದಲ್ಲಿ ಕೂತಿರುವುದನ್ನು ನೋಡಿದರೆ ನಿಮಗೆ ಶುಭಸೂಚನೆ ಏಕೆಂದರೆ ಪೂರ್ವಜರು ನಿಮ್ಮ ಕೊಡುಗೆಗಳನ್ನು ಸ್ವೀಕರಿಸುತ್ತಾರೆ ಎಂದು ಇದರಿಂದ ತಿಳಿದುಕೊಳ್ಳಬಹುದು. ಇದು ನಿಮ್ಮ ಒಳ್ಳೆಯತನವನ್ನು ಸೂಚಿಸುತ್ತದೆ. ಹಾಗಾದರೆ ಪೂರ್ವಜರ ಶ್ರಾದ್ಧ ಮುಗಿದಮೇಲೆ ಕಾಗೆಯು ಎಡೆಯನ್ನು ತಿಂದು ಬಲಗಡೆಯಿಂದ ಎಡಗಡೆಗೆ ಹೋದರೆ ನೀವು ಮಾಡಿದ ಕಾರ್ಯ ಅವರಿಗೆ ಸಂತೋಷವನ್ನು ನೀಡಿರುತ್ತದೆ ಎಂದು ಅರ್ಥ.

ಕಾಗೆಯು ಬಲದಿಂದ ಎಡಕ್ಕೆ ಹಾರಿಹೋದರೆ ಪೂರ್ವಜರ ಸಂಪೂರ್ಣ ಆಶೀರ್ವಾದ ಹಾಗೂ ನಿಮ್ಮ ಮನೆಗೆ ಸುಖ ಸಮೃದ್ಧಿ ಸದಾ ಇರುತ್ತದೆ ಎಂದು ನಂಬಬಹುದು. ಹಾಗಾದರೆ ಸ್ನೇಹಿತರೆ ನಿಮಗೆಲ್ಲಾ ಎಲ್ಲಾ ಸೂಚನೆಗಳು ಕಂಡುಬಂದರೆ ತುಂಬಾ ಒಳ್ಳೆಯದು ಮತ್ತು ನಿಮ್ಮ ಮನೆಗೆ ಪೂರ್ವಜರ ಆಶೀರ್ವಾದ ಸದಾ ಸಿಗಲಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ