Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ತರಹದ ಕನಸುಗಳು ನಿಮಗೆ ಪದೇ ಪದೇ ಬೀಳುತ್ತಿದ್ದರೆ ನೀವು ಕೋಟ್ಯಧಿಪತಿ ಆಗೋದು ಖಚಿತ …!!!

ನೀವು ಕನಸನ್ನು ಕಾಣುತ್ತೀರಾ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಕೆಲವೊಂದು ಬಾರಿ ಕನಸು ನಿದ್ರೆಯಲ್ಲಿ ಕಾಣಿಸಿಕೊಂಡಿರುತ್ತದೆ ಆದರೆ ಆ ಕನಸು ಕೆಲವರಿಗೆ ಅಸ್ಪಷ್ಟವಾಗಿ ಇದ್ದರೆ, ಇನ್ನೂ ಕೆಲವರಿಗೆ ಆ ಕನಸು ನೆನಪು ಇರುವುದಿಲ್ಲ. ಆದರೆ ಕನಸುಗಳು ಕೆಲವರಿಗೆ ಸುಮ್ಮನೆ ಬರುವುದಿಲ್ಲ ಕನಸುಗಳು ಕೆಲವೊಂದು ವಿಚಾರಗಳನ್ನು ಅಥವಾ ಭವಿಷ್ಯದಲ್ಲಿ ಉಂಟಾಗುವಂತಹ ಕೆಲವೊಂದು ವಿಚಾರಗಳ ಬಗ್ಗೆ ತಿಳಿಸಲೆಂದೇ ಕನಸುಗಳು ನಮಗೆ ಉಂಟಾಗಿರುತ್ತದೆ ಅದರ ಅರ್ಥವನ್ನು ನಾವು ತಿಳಿಯುವುದಿಲ್ಲ ಅಷ್ಟೇ. ನೀವು ಗಮನಿಸಿ ಕೆಲವು ಬಾರಿ ನಮಗೆ ಬೀಳುವ ಕನಸು ಕೆಲವೊಂದು ವಿಚಾರಗಳನ್ನು ತಿಳಿಸಲೆಂದೇ ಆ ಕನಸು ನಮಗೆ ನಿದ್ರೆಯಲ್ಲಿ ಕಾಣಿಸಿಕೊಂಡಿರುತ್ತದೆ.

ಕನಸು ಎಲ್ಲಾರಿಗೂ ಕೂಡ ಏನನ್ನಾದರೂ ತಿಳಿಸಬೇಕೆಂದು ಬರುವುದಿಲ್ಲ. ಆದರೆ ಕೆಲವು ಕನಸುಗಳು ಮಾತ್ರ ಕೆಲವರಿಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಇವತ್ತಿನ ಮಾಹಿತಿ ಅಲ್ಲಿಯೂ ಸಹ ನಿಮಗೆ ಒಂದು ಆಸಕ್ತಿಕರವಾದ ವಿಚಾರವನ್ನು ತಿಳಿಸುತ್ತೇವೆ. ಅದೇನೆಂದರೆ ನಿಮಗೆ ಅದೃಷ್ಟ ಒಲಿದು ಬರುವ ಮುನ್ನ ಅಥವಾ ನೀವು ನಿಮ್ಮ ಜೀವನದಲ್ಲಿ ಏನನ್ನಾದರೂ ಬದಲಾವಣೆ ಅನ್ನು ಕಾಣುವ ಮುನ್ನ ನಿಮ್ಮ ಕನಸಿನಲ್ಲಿ ಕೆಲವೊಂದು ವಿಚಾರಗಳು ನಡೆದಿರುತ್ತದೆ ಅಥವಾ ಕೆಲವು ಶುಭ ಕನಸುಗಳು ನಿಮಗೆ ನಿದ್ರೆಯಲ್ಲಿ ಗೋಚರ ಆಗಿರುತ್ತದೆ. ಆ ವಿಚಾರಗಳು ಯಾವುದಿರಬಹುದು ಅಂತ ತಿಳಿಸಿಕೊಡುತ್ತೇವೆ ಇವತ್ತಿನ ಮಾಹಿತಿಯಲ್ಲಿ.

ಕೆಲವರಿಗೆ ಕೋಟ್ಯಾಧಿಪತಿಗಳ ಆಗುವ ಮುನ್ನ ಕನಸು ಹೀಗೆ ಬೀಳುತ್ತದೆ. ಇಂತಹ ಕೆಲ ಕನಸುಗಳನ್ನು ಯಾರ ಬಳಿಯು ಕೂಡ ಹೇಳಿಕೊಳ್ಳಬಾರದು ಅಂತ ಹಿರಿಯರು ಹೇಳುತ್ತಾರೆ ಕೂಡ. ನಿಮಗೇನಾದರೂ ಕೋಟ್ಯಾಧಿಪತಿಗಳು ಆಗುವ ಅದೃಷ್ಟ ಇದ್ದರೆ, ನಿಮ್ಮ ಕನಸಿನಲ್ಲಿ ಆಗಾಗ ದೇವರು, ದೇವರ ಮಂಟಪ ದೇವರುಗಳು ಕಾಣಿಸಿಕೊಳ್ಳುವ ಕನಸುಗಳು ಗೋಚರವಾಗುತ್ತದೆ. ಕೆಲವರ ಕನಸಿಗೆ ದೇವರುಗಳು ಬರುವುದು ಯಾವ ಕಾರಣಕ್ಕಾಗಿ ಅಂದರೆ ನೀವು ಮಾಡಿದಂತಹ ಪೂಜೆ ಇಂದ ದೇವರು ಪ್ರಸನ್ನರಾಗಿ ಇರುತ್ತಾರೆ, ಆ ಕಾರಣಕ್ಕಾಗಿ ಕನಸಿನಲ್ಲಿ ನಿಮಗೆ ದೇವರು ದೇವಾನು ದೇವತೆಗಳು ಗೋಚರ ಆಗುತ್ತಾರೆ.

ನಿಮ್ಮ ಕನಸಿನಲ್ಲಿ ಏನಾದರೂ ಸಮುದ್ರ, ನೀರು ಅಥವ ನೀರು ಹರಿಯುವ ಹಾಗೆ ಕಾಣಿಸಿಕೊಂಡರೆ ಅಥವಾ ನೀವು ನೀರು ಕುಡಿಯುವ ಹಾಗೆ ಕಾಣಿಸಿಕೊಂಡರೆ ನಿಮಗೆ ಅದೃಷ್ಟ ಒಲಿದು ಬರಲಿದೆ ಎಂಬುದರ ಅರ್ಥ ಇದಾಗಿರುತ್ತದೆ. ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಕುದುರೆ ಕಾಣಿಸಿಕೊಂಡರೆ ಅಥವಾ ನೀವು ಕುದುರೆ ಸವಾರಿ ಮಾಡಿದ ಹಾಗೆ ನಿಮಗೆ ಕನಸಿನಲ್ಲಿ ಅನಿಸಿದರೆ, ನಿಮಗೆ ಒಂದಲ್ಲ ಒಂದು ದಿವಸ ವಿದೇಶ ಪ್ರಯಾಣ ಮಾಡುವ ಯೋಗ ಇದೆ ಎಂಬುದರ ಅರ್ಥ ಇದಾಗಿರುತ್ತದೆ.

ನಿಮ್ಮ ಕನಸಿನಲ್ಲಿ ಏನಾದರೂ ಸೂರ್ಯ ಅಥವಾ ಸೂರ್ಯೋದಯ ಆಗುವ ಹಾಗೆ ಅಥವಾ ನೀವು ಸೂರ್ಯೋದಯದ ಸಮಯದಲ್ಲಿ ಸೂರ್ಯನ ಮುಂದೆ ನಿಂತು ಸೂರ್ಯ ನಮಸ್ಕಾರ ಮಾಡುವ ಹಾಗೆ ಕನಸು ಬಂದರೆ, ನಿಮಗೆ ಇದರ ಸೂಚನೆ ಏನಾಗಿರುತ್ತದೆ ಅಂದರೆ ನೀವು ಜೀವನದಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ, ಜೀವನದಲ್ಲಿ ನಿಮಗೆ ಇನ್ನು ಮುಂದಿನ ದಿವಸಗಳಲ್ಲಿ ಏಳಿಗೆ ಆಗಲಿದೆ ಎಂಬುದರ ಅರ್ಥ ಈ ಕನಸುಗಳು ನಿಮಗೆ ನೀಡುತ್ತ ಇರುತ್ತದೆ ಅಥವಾ ಈ ಕನಸು ನಿಮಗೆ ಸೂಚನೆಯನ್ನು ನೀಡುತ್ತ ಇರುತ್ತದೆ. ಈ ರೀತಿ ಕೆಲವೊಂದು ಕನಸುಗಳು ನಿಮಗೆ ಶುಭವಾಗಿ ಕಾಣಿಸಿಕೊಂಡರೆ ನೀವು ನಿಮ್ಮ ಜೀವನದಲ್ಲಿ ಅದೃಷ್ಟವನ್ನು ಪಡೆದುಕೊಳ್ಳಲು ಇದ್ದೀರಾ ಎಂಬುದನ್ನು ಸೂಚನೆ ನೀಡುತ್ತಾ ಇರುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ