ನನಗೆ ಏಕೆ ತುಂಬಾ ಕಷ್ಟ ಬರುತ್ತದೆ ಎಂಬ ಪ್ರಶ್ನೆಯನ್ನು ನೀವು ಯಾರಿಗಾದರೂ ಕೇಳಿರಬಹುದು ಅಥವಾ ಯಾರಾದರೂ ಈ ಮಾತನ್ನು ಹೇಳುವುದನ್ನು ನೀವು ಕೇಳಿರಬಹುದು, ಇಷ್ಟೊಂದು ಕಷ್ಟ ನನಗೆ ಬರಲು ಅಂತಹಾ ತಪ್ಪುಗಳಾದರೂ ನಾನು ಮಾಡಿರುವುದು ಏನು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಬರುವುದು ಸಹಜ.
ಬೇರೆಯವರಿಗೆ ಅನ್ಯಾಯ ಮಾಡುವುದಾಗಲಿ ಅಥವಾ ಮೋಸ ಮಾಡುವುದಾಗಲಿ ಮಾಡಿದರೆ ಮಾತ್ರ ನಿಮ್ಮ ಜೀವನದಲ್ಲಿ ಕಷ್ಟಗಳು ಬರುತ್ತದೆ ಎಂದುಕೊಂಡಿದ್ದರೆ ಅದು ನಿಜವಾಗಿಯೂ ತಪ್ಪು,
ಏಕೆಂದರೆ ನಮ್ಮ ಜೀವನದಲ್ಲಿ ಮಾಡುವ ಅನೇಕ ಸಣ್ಣ ಸಣ್ಣ ತಪ್ಪುಗಳು ನಮ್ಮ ಜೀವನಕ್ಕೆ ದೊಡ್ಡ ಪರಿಣಾಮಗಳನ್ನು ಬೀರುತ್ತವೆ, ಅಂತಹ ದೊಡ್ಡ ಪರಿಣಾಮಗಳನ್ನು ಬೀರುವ ಸಂಗತಿಗಳು ಯಾವುದು ಎಂದು ಇಂದು ನಿಮಗೆ ತಿಳಿಸುತ್ತೇವೆ.
ಮೊದಲನೆಯದಾಗಿ ನೀವು ಯಾರದಾದರೂ ಅಂತ್ಯ ಸಂಸ್ಕಾರ ಕ್ರಿಯೆಗೆ ಹೋಗಿದ್ದರೆ ಅಲ್ಲಿ ಯಾವ ಕಾರಣಕ್ಕೂ ಬೆಂದ ಅಥವಾ ಅರೆಬೆಂದ ಮನುಜನ ಮೂಳೆಗಳು ನಿಮ್ಮ ದೇಹವನ್ನು ಮುಟ್ಟದಂತೆ ನೋಡಿಕೊಳ್ಳಬೇಕು, ಅಕಸ್ಮಾತ್ ಆ ಮೂಲಗಳು ನಿಮ್ಮ ದೇಹವನ್ನು ತಾಕಿದರೆ ನಿಮಗೆ ಅಂದಿನಿಂದಲೇ ದಾರಿದ್ರ್ಯ ನಿಮ್ಮ ಬೆನ್ನು ಹತ್ತಿ ನಿಮ್ಮನ್ನು ಹಿಂಬಾಲಿಸಿ ಕೊಂಡು ಬರುತ್ತದೆ ಹಾಗಾಗಿ ಸ್ಮಶಾನಕ್ಕೆ ಹೋದಾಗ ಸ್ವಲ್ಪ ಜಾಗರೂಕತೆಯಿಂದ ಇರಬೇಕು.
ಅಷ್ಟೇ ಅಲ್ಲದೆ ಸ್ಮಶಾನದಲ್ಲಿ ದಹನ ಕ್ರಿಯೆ ನಡೆಯುವಾಗ ಅಲ್ಲಿ ಬರುವ ಹೊಗೆಯನ್ನು ಯಾವುದೇ ಕಾರಣಕ್ಕೂ ನಿಮ್ಮ ಉಸಿರಾಟಕ್ಕೆ ಬಳಸಬಾರದು, ಆ ಹೊಗೆಯು ನಿಮ್ಮ ಶ್ವಾಸಕೋಶವನ್ನು ತಲುಪಿದಲ್ಲಿ ದಾರಿದ್ರ್ಯ ಶುರುವಾಗಿ ಕಷ್ಟಗಳಲ್ಲೇ ಮುಳುಗಿ ಹೋಗುತ್ತೇವೆ ಲಕ್ಷ್ಮಿ ನಿಮ್ಮನ್ನು ಬಿಟ್ಟು ಹೊರಟುಹೋಗುತ್ತಾಳೆ.
ಜೊತೆಯಲ್ಲಿ ಸ್ಮಶಾನದಲ್ಲಿ ಮೂಳೆಯನ್ನು ಅಷ್ಟೇ ಅಲ್ಲದೆ ಚಿತೆಯಲ್ಲಿ ಇಟ್ಟ ಸೌದೆಯನ್ನು ಸಹ ಹುಟ್ಟ ಬಾರದು, ಅಂತ್ಯಕ್ರಿಯೆ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಗಂಗಾ ಜಲದಿಂದ ಸ್ನಾನವನ್ನು ಮಾಡಬೇಕು ಹೀಗೆ ಮಾಡಿದರೆ ಅಪ್ಪಿ ತಪ್ಪಿಯೂ ಸ್ಮಶಾನದಲ್ಲಿ ನಾವು ಮೇಲೆ ತಿಳಿಸಿದ ರೀತಿಯಲ್ಲಿ ನೀವು ಯಾವುದೇ ತಪ್ಪುಗಳನ್ನು ಮಾಡಿದರು ಇದರಿಂದ ನಿವಾರಣೆಯನ್ನು ಪಡೆಯುವಿರಿ.
ನಿಮ್ಮ ಮನೆಯಲ್ಲಿ ಕೊಳೆಯಾಗಿರುವ ಚಾಪೆ ಇದ್ದರೆ ಮೊದಲು ಅದನ್ನು ಸ್ವಚ್ಛಗೊಳಿಸಿ ಅಥವಾ ಬಿಸಾಕುವುದು ಒಳ್ಳೆಯದು, ಕಾರಣ ಕೊಳೆಯಾದ ಚಾಪೆಯ ಮೇಲೆ ಕೈಕಾಲುಗಳನ್ನು ಈಡುವುದರಿಂದ ನಿಮ್ಮಲ್ಲಿ ನೆಗೆಟಿವ್ ಶಕ್ತಿಗಳು ಏನಾದರೂ ಇದ್ದರೆ ಅದು ಮತ್ತಷ್ಟು ಪ್ರಬಲವಾಗಿ ನಿಮ್ಮನ್ನು ಹೆಚ್ಚು ಕಾಡುವ ಸಂಭವವುಂಟು.
ಹಾಗೆಯೇ ಮನೆಯನ್ನು ಸ್ವಚ್ಛ ಮಾಡಿದ ನೀರು ನಿಮ್ಮ ದೇಹವನ್ನು ಹಾಕಬಾರದು ಅಕಸ್ಮಾತ್ ಸೋಕಿದರೆ ದಾರಿದ್ರ್ಯ ಶುರುವಾಗುತ್ತದೆ ಹಾಗಾಗಿ ಮನೆ ಸ್ವಚ್ಛ ಮಾಡುವ ಸಮಯದಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ.
ನೆಲದ ಮೇಲೆ ಬಿದ್ದಿರುವ ಆಹಾರವನ್ನು ಯಾವುದೇ ಕಾರಣಕ್ಕೂ ತುಳಿಯಬಾರದು ಹಾಗೂ ನೀವು ಆಹಾರ ಸೇವಿಸುವ ತಟ್ಟೆಯಲ್ಲಿ ಕಾಲನ್ನು ಇಡಬಾರದು, ಹೀಗೆ ಮಾಡುವುದರಿಂದ ಅನ್ನಪೂರ್ಣೇಶ್ವರಿ ಗೆ ಅವಮಾನ ಮಾಡಿದಂತಾಗುತ್ತದೆ, ಅನ್ನಪೂರ್ಣೇಶ್ವರಿ ತಾಯಿ ಲಕ್ಷ್ಮಿಯ ಮತ್ತೊಂದು ರೂಪ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಂಚಿಕೊಳ್ಳುವುದು ಒಳ್ಳೆಯ ವಿಷಯ.