Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಜಿಲ್ಲಾಧಿಕಾರಿ ಮಾಡಿದ ಕೆಲಸ ನೋಡಿದ್ರೆ ಒಮ್ಮೆ ಶಾಕ್ ಆಗ್ತೀರಾ !!!!

ಕೆಲವರು ಹುಟ್ಟಿರುವುದೇ ಜನ ಸೇವೆಗೆಂದು ಅನಿಸುತ್ತದೆ. ಜಿಲ್ಲಾಧಿಕಾರಿ ಕೂಡ ಜನರು ಸ್ವಚ್ಛವಾದ ನೀರನ್ನು ಕುಡಿಯಬೇಕು ಎಂದು ಇಂಥ ಸಾಹಸಕ್ಕೆ ಕೈ ಹಾಕಿದ್ದಾರೆ ನೋಡಿ ಸ್ನೇಹಿತರೆ ನಾನು ಇಂದಿನ ಮಾಹಿತಿಯಲ್ಲಿ ಜಿಲ್ಲಾಧಿಕಾರಿಯವರು ಇಂತಹ ಒಳ್ಳೆಯ ಕೆಲಸ ಅಂದರೆ ಯಾರು ಮಾಡಿರದ ಕೆಲಸವನ್ನು ಮಾಡಿದ್ದಾರೆ ಎಂದು ಲೇಖನದಲ್ಲಿ ನಾನು ನಿಮಗೆ ಎಂದು ತಿಳಿಸಿಕೊಡುತ್ತೇನೆ.

ಹೌದು ಸ್ನೇಹಿತರೆ, ಕರ್ನಾಟಕದವರಾದ ಶಿಲ್ಪಾ ಪ್ರಭಾಕರ್ ಅವರು ತಮಿಳುನಾಡಿನ ತಿರುನೆಲವಲೀ ಒಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಯಾಗಿದ್ದಾರೆ. ಜಿಲ್ಲೆಯಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿದ್ದ ಕಾರಣ, ಜನರ ಸ್ವಚ್ಛವಾದ ನೀರು ಕುಡಿಯುತ್ತಿದ್ದಾರೋ ಇಲ್ಲವೆಂದು ಪರಿಶೀಲನೆ ಮಾಡಲು ಹೊರಟರು ಶಿಲ್ಪಾ ಅವರು. ವಾಟರ್ ಟ್ಯಾಂಕ್ ಬಳಿ ಹೋದಾಗ ಅಲ್ಲಿನ ಸಿಬ್ಬಂದಿ ಸ್ವಚ್ಛವಾಗಿದೆ ಮೇಡಂ ಎಂದು ಹೇಳಿದರು.

ಅವರು ಹೇಳಿದ ಹಾಗೆ ಸುಮ್ಮನೆ ಹೋಗುವ ಮನಸ್ಸು ಶಿಲ್ಪ ಅವರದಲ್ಲ. ವಾಟರ್ ಟ್ಯಾಂಕುಗಳು ಚೆನ್ನಾಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಏಕಾಏಕಿ ಶಿಲ್ಪಾ ಅವರು 140 ಅಡಿ ಟ್ಯಾಂಕನ್ನು ಹತ್ತಿಯೇ ಬಿಟ್ಟರು ಶಿಲ್ಪಾ ಅವರು. ಇದನ್ನು ನೋಡಿದ ಅವರ ಜೊತೆ ಬಂದಿದ್ದ ಸಿಬ್ಬಂದಿಯವರು ಒಂದು ಕ್ಷಣ ಶಾಕ್ ಆದರು.

ಅಷ್ಟು ಎತ್ತರದ ಟ್ಯಾಂಕನ್ನು ಹತ್ತಲು ಗಂಡಸರ ಪಡುತ್ತಾರೆ. ಹಾಗಿರುವಾಗ ಅಷ್ಟೇ ಎತ್ತರದ ಟ್ಯಾಂಕನ್ನು ಶಿಲ್ಪಾ ಪ್ರಭಾಕರ್ ಅವರು ಹತ್ತಿ ತೋರಿಸಿಬಿಟ್ಟರು. ಹಾಗೂ ವಾಟರ್ ಟ್ಯಾಂಕ್ ನ ತುತ್ತತುದಿಗೆ ಹತ್ತಿದರು ಶಿಲ್ಪಾ ಪ್ರಭಾಕರ್ ಅವರು ಅಂದರೆ ಜಿಲ್ಲಾಧಿಕಾರಿಯವರು. ಟ್ಯಾಂಕನ್ನು ಪರಿಶೀಲಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಟ್ಯಾಂಕನ್ನು ಇನ್ನಷ್ಟು ಕ್ಲೀನಾಗಿ ಇಡುವಂತೆ ಎಚ್ಚರಿಕೆಯನ್ನು ಕೊಟ್ಟರು.ಮತ್ತು ಇನ್ನೊಂದು ಸ್ಥಳಕ್ಕೆ ಹೋಗಿ ಅಲ್ಲಿಯೂ ಕೂಡ ಟ್ಯಾಂಕನ್ನು ಹತ್ತಿ, ಪರಿಶೀಲಿಸಿದರು ಜಿಲ್ಲಾಧಿಕಾರಿಯವರು. ಇದನ್ನು ಕಂಡು ಟ್ಯಾಂಕ್ ಕ್ಲೀನಿಂಗ್ ಸಿಬ್ಬಂದಿ ಬೆಚ್ಚಿಬಿದ್ದರು. ನಾನು ಯಾವುದೇ ಕ್ಷಣ ಟ್ಯಾಂಕನ್ನು ಬಂದು ಚೆಕ್ ಮಾಡುತ್ತೇನೆ ಟ್ಯಾಂಕನ್ನು ಸ್ವಚ್ಛವಾಗಿಡಿ ಎಂದು ತನ್ನ ಸಿಬ್ಬಂದಿಗೆ ಹೇಳಿದರು ಜಿಲ್ಲಾಧಿಕಾರಿಯವರು.

ಸ್ವಚ್ಛವಾಗಿ ಇರಲಿಲ್ಲ ಅಂದ್ರೆ ನಾನು ನಿಮ್ಮನ್ನು ಸಸ್ಪೆಂಡ್ ಮಾಡುತ್ತೇನೆ ಎಂದು ಕೂಡ ಹೇಳಿಬಿಟ್ಟರು. ಅದೇ ತನ್ನ ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಶುದ್ಧ ನೀರನ್ನು ಪೂರೈಸಿದರೆ ರೋಗಗಳನ್ನು ತಡೆಗಟ್ಟಬಹುದು. ಶುದ್ಧ ನೀರನ್ನು ಪೂರೈಸುವುದು ನನ್ನ ಕರ್ತವ್ಯ ಎಂದು ಹೇಳಿದ ಶಿಲ್ಪ ಅವರು ನನಗೆ ವಾಟರ್ ಟ್ಯಾಂಕ್ ಹತ್ತಿರ ಯಾವುದೇ ಅಭ್ಯಾಸವಿಲ್ಲ ಇದೇ ಮೊದಲ ಬಾರಿಗೆ ಹತ್ತಿದ್ದು ಎಂದು ಹೇಳಿಕೊಂಡರು.

ಇತ್ತೀಚೆಗೆ ತನ್ನ ಮಗಳನ್ನು ಯಾವುದೇ ಇಂಟರ್ನ್ಯಾಷನಲ್ ಸ್ಕೂಲ್ ಗೆ ಕಲಿಸದೇ ಇರುವ ಜಿಲ್ಲಾಧಿಕಾರಿಯವರು ಒಂದು ಅಂಗನವಾಡಿಗೆ ತನ್ನ ಮಗಳನ್ನು ಜಾಯಿನ್ ಮಾಡಿಸಿ ಸರ್ಕಾರದ ಯೋಜನೆಗಳ ಬಗ್ಗೆ ಬರಿ ಮಾತನಾಡುವುದಲ್ಲ,ಮೊದಲು ಅದನ್ನು ನಾವು ಪಾಲಿಸಬೇಕು ಎಂದು ತನ್ನ ಸರ್ಕಾರಿ ಅಧಿಕಾರಿಗಳಿಗೆ ಸಂದೇಶ ನೀಡಿದ್ದಾರೆ.

ಕಾಟಾಚಾರಕ್ಕೆ ಪರಿಶೀಲನೆ ಮಾಡದೇ ಜನರನ್ನು ತನ್ನ ಕುಟುಂಬದವರು ಎಂದು ಭಾವಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಶಿಲ್ಪಾ ಪರ್ಭಾಕರ್ ಅವರಿಗೆ ನಮ್ಮ ಕಡೆಯಿಂದ ಅಭಿನಂದನೆಯನ್ನು ಸಲ್ಲಿಸೋಣ ಸ್ನೇಹಿತರೆ.ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *