ಈ ಕೆಲಸಗಳನ್ನು ನೀವೇನಾದ್ರು ಬ್ರಹ್ಮ ಮುಹೂರ್ತದ ಸಮಯದಲ್ಲಿ ಮಾಡಿದರೆ ಸಾಕು ಉತ್ತಮವಾದ ಬದಲಾವಣೆಗಳನ್ನು ಜೀವನದಲ್ಲಿ ಕಾಣುತ್ತೀರಾ ..!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಆಕೆ ಸಂಜೆ ಸಮಯದ ಅಂದರೆ ಸೂರ್ಯಾಸ್ತದ ಬಳಿಕ ದ 6ಗಂಟೆಗಳಿಂದ 9ಗಂಟೆಗಳ ವರೆಗಿನ ಕಾಲವನ್ನು ರೌದ್ರ ಕಾಲ ಎಂದು ಕರೆಯಲಾಗುತ್ತದೆ ಇನ್ನೂ 9ಗಂಟೆಗಳಿಂದ ಹನ್ನೆರಡು ಗಂಟೆಗಳವರೆಗಿನ ಸಮಯವನ್ನು ರಾಕ್ಷಸ ಕಾಲ ಎಂದೂ ಕರೆಯಲಾಗುತ್ತದೆ. ಹಾಗೆ ಹನ್ನೆರಡು ಗಂಟೆಗಳಿಂದ 3ಗಂಟೆಗಳವರೆಗಿನ ಸಮಯವನ್ನು ಗಾಂಧರ್ವ ಸಮಯ ಜೊತೆಗೆ ಈ 3 ಗಂಟೆಯ ಸಮಯ ದಿಂದ 6ಗಂಟೆಯ ಸಮಯದ ಒಳಗಿನ ಕಾಲವನ್ನು ಬ್ರಾಹ್ಮಿ ಮುಹೂರ್ತ ಅಥವಾ ಬ್ರಹ್ಮ ಕಾಲ ಎಂದು ಕರೆಯಲಾಗುತ್ತದೆ.

ಈ ಕಾಲವನ್ನು ಬ್ರಹ್ಮನ ಕಾಲ ಅಂದರೆ ಸೃಷ್ಟಿಕರ್ತನ ಸಮಯ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾರು ಈ ಸಮಯದಲ್ಲಿ ಎಚ್ಚರಗೊಳ್ಳುತ್ತಾರೆ, ಯಾರು ಈ ಸಮಯದಲ್ಲಿ ತಮ್ಮ ಇಷ್ಟಾರ್ಥಗಳನ್ನ ಸಂಕಲ್ಪ ಮಾಡಿಕೊಂಡು ಅದನ್ನು ನೆನೆಯುತ್ತಾರೆ ಅಂತಹ ಕೆಲಸಗಳನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯವನ್ನು ಈ ಬ್ರಹ್ಮ ಕಾಲ ನೀಡುತ್ತದೆ.ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳುವುದಕ್ಕಾಗಿ ಯಾರು ಈ ಸಮಯದಲ್ಲಿ ಎಚ್ಚರಗೊಳ್ಳುತ್ತಾರೆ ಅಂಥವರು ಜೀವನದಲ್ಲಿ ಬಹಳಷ್ಟು ತನ್ನ ಪಡೆದುಕೊಳ್ಳುತ್ತಾರೆ ಹಾಗೂ ತಾವು ಅಂದುಕೊಂಡಂತೆ ಜೀವನದಲ್ಲಿ ಇರಲು ಸಾಧ್ಯವಾಗುತ್ತದೆ.

ಅಷ್ಟೇ ಅಲ್ಲ ಈ ಬ್ರಹ್ಮ ಕಾಲದಲ್ಲಿ ಯಾರು ಎದ್ದೇಳುತ್ತಾರೆ, ಅಂತಹವರ ಆರೋಗ್ಯವು ಉತ್ತಮವಾಗಿರುತ್ತದೆ. ಯಾಕೆಂದರೆ ಈ ಸಮಯದಲ್ಲಿ ವಾತಾವರಣದಲ್ಲಿ ಇರುವ ಆಮ್ಲಜನಕವು ನಮ್ಮ ದೇಹದ ಗ್ರಂಥಿಯನ್ನು ಆರೋಗ್ಯವಾಗಿ ಇರಿಸುತ್ತದೆ. ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ.ಯಾರು ಬ್ರಹ್ಮಮುಹೂರ್ತದಲ್ಲಿ ಈ ಬ್ರಹ್ಮ ಕಾಲದಲ್ಲಿ ಎದ್ದೇಳುತ್ತಾರೆ ಅಂತಹವರು ಈ ಸಮಯದಲ್ಲಿ ಪೂಜೆಯನ್ನು ಮಾಡಬಹುದು ಧ್ಯಾನವನ್ನ ಮಾಡಬಹುದು ಪ್ರಾಣಾಯಾಮವನ್ನು ಪಾಲಿಸಬಹುದು

ಇದರಿಂದಾಗಿ ಸಾಕಷ್ಟು ಪ್ರಯೋಜನಗಳು ನಮ್ಮ ಮನಸ್ಸಿಗೆ ದೊರೆಯುತ್ತದೆ ಇದರಿಂದಾಗಿ ನಮ್ಮ ದೇಹ ಇಡೀ ದಿವಸ ಉಲ್ಲಾಸದಿಂದಿರುತ್ತದೆ. ಈ ಸಮಯದಲ್ಲಿ ಯಾರೋ ಎದ್ದೇಳುತ್ತಾರೆ ಯಾರು ಈ ಸಮಯದಲ್ಲಿ ಎಚ್ಚರಗೊಳ್ಳುತ್ತಾರೆ ಅಂಥವರು ಪರಿಸರದಲ್ಲಿರುವ ಕಾಸ್ಮಿಕ್ ಎನರ್ಜಿಯನ್ನು ಪಡೆದುಕೊಳ್ಳುತ್ತಾರೆ ಈ ಪರಿಸರದಲ್ಲಿರುವ ವಿಶೇಷ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ, ಇದರಿಂದಾಗಿ ಮನಸ್ ಸೂತನ ಚಂಚಲತೆಯನ್ನು ಕಳೆದುಕೊಳ್ಳುತ್ತದೆ ಹಾಗೂ ಮನಸ್ಸು ಹಿಡಿತದಲ್ಲಿರುತ್ತದೆ.

ರಾಗ ಮತ್ತು ದ್ವೇಷವನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಈ ಸಮಯದಲ್ಲಿ ಎದ್ದು ಧ್ಯಾನ ಮಾಡುವುದರಿಂದ ವಿಶೇಷವಾದ ಶಕ್ತಿಯನ್ನು ಪಡೆದುಕೊಳ್ಳಬಹುದು. ದಿನವಿಡೀ ಕೆಲಸವನ್ನು ಮಾಡಿ ಸಂಜಯ ಸಮಯದ ನಂತರ ದೇಹ ಬಳಲಿ ಇರುತ್ತದೆ ಆದರೆ ದಿನದಲ್ಲಿ ಧ್ಯಾನ ಮಾಡುವುದಕ್ಕಾಗಿ ಉತ್ತಮ ಸಮಯವೆಂದರೆ ಈ ಕಾಲ ಆಗಿರುತ್ತದೆ ಯಾರು ಈ ಸಮಯದಲ್ಲಿ ಧ್ಯಾನವನ್ನು ಕೈಗೊಳ್ಳುತ್ತಾರೆ ಅಂತಹವರು ತಮ್ಮ ಜೀವನದಲ್ಲಿ ಅಂದುಕೊಂಡಂತೆ ಏನನ್ನು ಬೇಕಾದರೂ ಸಾಧಿಸಬಹುದು.

ನಿಮ್ಮ ಜೀವನದಲ್ಲಿ ನಿಮಗೆ ಯಾವುದೇ ಗುರಿ ಇರಬಹುದು ಅದನ್ನು ತಲುಪುವುದಕ್ಕಾಗಿ ಅದನ್ನ ಸಂಕಲ್ಪ ಮಾಡಿಕೊಂಡು ಈ ಬ್ರಾಹ್ಮೀಕಾಲದಲ್ಲಿ ಎದ್ದು ಅದಕ್ಕಾಗಿ ಪರಿಶ್ರಮಿಸಿದರೆ ಆ ಗುರಿ ತಲುಪುವುದಕ್ಕೆ ಹೆಚ್ಚಿನ ಕಾಲಾವಕಾಶ ನಿಮಗೆ ಬೇಕಾಗಿರುವುದಿಲ್ಲ. ಯಾರು ಈ ಸಮಯದಲ್ಲಿ ಎಚ್ಚರಗೊಳ್ಳುತ್ತಾರೆ ಅಂಥವರು ದೈವಿಕ ಆಲೋಚನೆಗಳನ್ನು ಅವಲೋಕನ ಮಾಡಿಕೊಳ್ಳುತ್ತಾರೆ.

ಅಷ್ಟೇ ಅಲ್ಲ ಯಾರು ಈ ಸಮಯದಲ್ಲಿ ಎದ್ದು ಪರಿಸರದ ವಾತಾವರಣವನ್ನು ಸವಿಯುತ್ತಾರೆ ಅಂಥವರಿಗೆ ವಿಶೇಷ ಶಕ್ತಿ ಲಭಿಸುತ್ತದೆ ನಮ್ಮ ದೇಹ ಖನಿಜಾಂಶಗಳನ್ನು ಹೀರಿಕೊಳ್ಳುವುದಕ್ಕಾಗಿ ದೇಹವನ್ನು ಪ್ರಚೋದಿಸುವ ಈ ವಾತಾವರಣವು ಅದ್ಭುತವಾದ ಶಕ್ತಿಯನ್ನು ಹೊಂದಿರುತ್ತದೆ. ಈ ಶಕ್ತಿ ನಮ್ಮ ದೇಹಕ್ಕೆ ಅಂಟಿರುವ ಸೋಮಾರಿತನವನ್ನು ದೂರ ಮಾಡುತ್ತದೆ.ಈ ಸಮಯದಲ್ಲಿ ಎದ್ದೇಳುವುದರಿಂದ ದೇಹದ ಪಿನಿಯಲ್ ಗ್ರಂಥಿ ಹೆಚ್ಚಿನದಾಗಿ ಶ್ರಮಿಸುತ್ತದೆ ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಮನಸ್ಸಿನ ಚಂಚಲತೆ ಓಡಿಹೋಗುತ್ತದೆ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಹುಟ್ಟಿಕೊಳ್ಳುತ್ತದೆ.

ಇನ್ನು ಈ ಸಮಯದಲ್ಲಿ ಎದ್ದೇಳುವುದರಿಂದ ಈ ಸಮಯದಲ್ಲಿ ಪೂಜೆ ಮಾಡುವುದರಿಂದ ಧರ್ಮ ಗ್ರಂಥಗಳನ್ನು ಓದುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಮತ್ತು ಈ ಸಮಯದಲ್ಲಿ ಎದ್ದು ಸಾಧನೆ ಮಾಡಿದ್ದೇ ಆದಲ್ಲಿ ದೇವರ ಜೊತೆಯೂ ಕೂಡ ಸಂಭಾಷಣೆಯನ್ನು ನಡೆಸಬಹುದು. ಯಾರೂ ಗೊಂದಲಗಳಿಂದ ಮಾನಸಿಕ ಒತ್ತಡತೆಯಿಂದ ಕಿರಿಕಿರಿ ಎದುರಿಸುತ್ತಲೇ ಇರುತ್ತಾರೆ ಅಂಥವರು ಈ ಸಮಯದಲ್ಲಿ ಎದ್ದು ಧ್ಯಾನವನ್ನು ಕೈಗೊಂಡಿದ್ದೇ ಆದಲ್ಲಿ ಮನಸ್ಸು ನಿರಾಳ ಆಗುತ್ತದೆ ಮನಸ್ಸಿಗೆ ವಿಶೇಷ ಶಕ್ತಿ ಎಂಬುದು ಲಭಿಸುತ್ತದೆ. ಈ ಸಮಯದಲ್ಲಿ ಎದ್ದೇಳುವುದರಿಂದ ದೇಹ ಸುಂದರವಾಗುತ್ತದೆ ದೇಹ ಹಗುರ ಅನಿಸುತ್ತದೆ ಮತ್ತು ಸೋಮಾರಿತನವೆಂಬ ದೂರ ಉಳಿದು ಚೈತನ್ಯಭರಿತ ವಾಗಿರಬಹುದು ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವುದರಿಂದ.

Leave a Reply

Your email address will not be published. Required fields are marked *