ಈ ಕಣ್ಣುಗಳಲ್ಲಿ ನಿಮಗೇನಾದರೂ ಕಾಣಿಸುತ್ತಿದೆಯಾ ? ಯುವತಿಯರ ಕಣ್ಣುಗಳಿಂದ ತಿಳಿಸುವಂತಹ ರಹಸ್ಯಗಳು ….!!! ಇದರ ಬಗ್ಗೆ ಗೊತ್ತಾಗಬೇಕಾದರೆ ಖಂಡಿತ ಎರಡು ನಿಮಿಷ ಬಿಡುವು ಮಾಡಿಕೊಂಡು ಓದಲೇಬೇಕು ನೀವು ..

256

ನಿಮಗೆ ಯಾವ ವ್ಯಕ್ತಿ ತುಂಬಾ ಒಳ್ಳೆಯವನು ಯಾವ ವ್ಯಕ್ತಿ ತುಂಬಾ ಒಳ್ಳೆಯವಳು ಅಂತ ತಿಳಿದುಕೊಳ್ಳಬೇಕಾದರೆ ಅವರ ಕಣ್ಣಲ್ಲಿ ಕಣ್ಣಿಟ್ಟು ನೀವು ಸ್ವಲ್ಪ ನೋಡಿದರೆ ಸಾಕು ಅವರ ಸಂಪೂರ್ಣವಾದ ಭಾವನೆ ಹಾಗೂ ಅವರ ವ್ಯಕ್ತಿತ್ವವೂ ಗೊತ್ತಾಗುತ್ತದೆ. ಇದಕ್ಕೆ ನಾವು ಯಾವುದೇ ಒಂದು ದೊಡ್ಡ ಶಾಸ್ತ್ರವನ್ನು ಓದಬೇಕಾಗಿಲ್ಲ.

ಕೇವಲ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಮಾತ್ರವೇ ನಿಮಗೆ ಅವರ ಸಂಪೂರ್ಣವಾದ ವ್ಯಕ್ತಿತ್ವ ಹಾಗೂ ಅವರ ನಡತೆ ಏನು ಅಂತ ಗೊತ್ತಾಗುತ್ತದೆ. ಬನ್ನಿ ಇವತ್ತು ನಾವು ನಿಮಗೆ ಈ ಲೇಖನದ ಮುಖಾಂತರ ಯುವತಿಯರ ಕಣ್ಣನ್ನು ಗಮನಿಸಿ ಅವರ ವ್ಯಕ್ತಿತ್ವವನ್ನು ಹೇಗೆ ನಾವು ಕಂಡುಕೊಳ್ಳಬೇಕು ಎನ್ನುವುದರ ಸಂಪೂರ್ಣವಾದ ವಿಚಾರವನ್ನು ತಿಳಿದು ಕೊಳ್ಳೋಣ.

ಯಾವುದಾದರೂ ಒಬ್ಬ ಹುಡುಗಿಗೆ ಬೆಕ್ಕಿನ ಕಣ್ಣು ಇದ್ದರೆ ಅವರಿಗೆ ಹೆಚ್ಚಾಗಿ ಜನರು ಪ್ರಭಾವಿತರಾಗುತ್ತಾರೆ ಅಂದರೆ ಅವರಿಗೆ ತುಂಬಾ ಜನರು ಪ್ರೀತಿ ಮಾಡುತ್ತಾರೆ ಹಾಗೂ ಅವಳನ್ನು ತನ್ನ ಬಳಕೆ ಮಾಡಿಕೊಳ್ಳಬೇಕು ಎನ್ನುವಂತಹ ಬಯಕೆಯನ್ನು ಇಟ್ಟುಕೊಳ್ಳುತ್ತಾರೆ. ಯಾವುದಾದರೂ ಪುರುಷನಿಗೆ ನೈದಿಲೆಯ ಕಣ್ಣು ಏನಾದರೂ ಇದ್ದರೆ ಆ ತರದ ಗಂಡಸರು ಅಥವಾ ಪುರುಷರು ಸೃಜನಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ.

ಹಾಗೆ ಅವರು ಮಾಡುವಂತಹ ಕೆಲಸಗಳು ಯಾವಾಗಲೂ ಅಭಿವೃದ್ಧಿ ಹೊಂದುತ್ತವೆ ಹಾಗೂ ಯಾವಾಗಲೂ ಜಯ ಗೊಳಿಸುತ್ತದೆ. ಅದಲ್ಲದೆ ಈ ರೀತಿಯಾಗಿ ಕಣ್ಣನ್ನು ಹೊಂದಿರುವಂತಹ ಪುರುಷರಿಗೆ ಹೆಚ್ಚಾಗಿ ಬುದ್ಧಿ ಶಕ್ತಿ ಇರುತ್ತದೆ,

ಹಾಗೂ ಅವರು ತುಂಬಾ ಪ್ರತಿಭಾವಂತನೂ ಕೂಡ ಆಗಿರುತ್ತಾರೆ. ಇದೇ ತರದ ಕಣ್ಣನ್ನು ಅಂದರೆ ನೈದಿಲೆಯ ಕಣ್ಣನ್ನು ಹುಡುಗೀರು ಹೊಂದಿದ್ದರೆ ಅವರು ಏನು ಬೇಕಾದರೂ ಸಾಧಿಸುವಂತಹ ಶಕ್ತಿಯನ್ನು ಈ ರೀತಿಯಾದಂತಹ ಕಣ್ಣನ್ನು ಹೊಂದಿದ್ದರೆ ಆ ತರದ ಒಂದು ಕಲೆ ಇರುತ್ತದೆ.

ನಾವು ಫೋಟೋದಲ್ಲಿ ಹಾಕಿರುವಂತಹ ಕಣ್ಣುಗಳು ಯಾವುದಾದರೂ ಹುಡುಗಿಗೆ ಇದ್ದರೆ, ಅವರಿಗೆ ಒಂದು ವಿಶೇಷವಾದ ಶಕ್ತಿ ಇರುತ್ತದೆ ಆ ಶಕ್ತಿ ಏನಪ್ಪಾ ಅಂದರೆ ಯಾವುದೇ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿ ಎದುರು ಬಂದರೂ ಕೂಡ ಅದನ್ನು ತಾಳ್ಮೆಯಿಂದ ನೋಡಿಕೊಂಡು ಹೋಗಲು ಹಾಗೂ, ಅದಲ್ಲದೆ ಆ ಸಂದರ್ಭವನ್ನು ತುಂಬಾ ಚೆನ್ನಾಗಿ ಮುಂದುವರಿಸಿಕೊಂಡು ಹೋಗಲು ಅವಳಿಗೆ ಆ ದೇವರು ಶಕ್ತಿ ಕೊಟ್ಟಿರುತ್ತಾರೆ. ಇದಕ್ಕೆಲ್ಲ ಕಾರಣ ಅವಳಿಗೆ ಇರುವಂತಹ ಕಣ್ಣು .

ನಿಜವಾಗಲೂ ಒಂದು ವಿಷಯ ಹೇಳಬೇಕು ಅಂದ್ರೆ ಮನುಷ್ಯನ ದೇಹದಲ್ಲಿ ಇರುವಂತಹ ಒಂದೊಂದು ಅಂಗ ಗಳು ಕೂಡ ಒಂದೊಂದು ಪ್ರಾಮುಖ್ಯತೆಯನ್ನು ಹೊಂದಿರುತ್ತವೆ, ಅದರಲ್ಲೂ ನಮ್ಮ ದೇಹದಲ್ಲಿ ಇರುವಂತಹ ನಮ್ಮ ಮುಖ ಅದರಲ್ಲಿ ಇರುವಂತಹ ಕೆಲವೊಂದು ಅಂಗಗಳು ತುಂಬಾ ಪ್ರಾಮುಖ್ಯತೆ ಹೊಂದಿವೆ. ಅವುಗಳನ್ನು ನಾವು ಹತೋಟಿಗೆ ಇಟ್ಟುಕೊಂಡರೆ ನಾವು ನಮ್ಮ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ , ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ .

LEAVE A REPLY

Please enter your comment!
Please enter your name here