ಈ ಒಂದು ಹೂವು ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೆ ಅಂತೇ ಹಾಗಾದ್ರೆ ಆ ಹೂವು ಯಾವುದು ಗೊತ್ತ ಈ ಮಾಹಿತಿ ನೋಡಿದ್ಮೇಲೆ ನೀವು ನಂಬ್ಲೇಬೇಕು !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬ್ರಹ್ಮಕಮಲ ಇದರ ಹೆಸರನ್ನು ಕೇಳಿರುತ್ತೀರಿ ಬ್ರಹ್ಮಕಮಲ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ರಾತ್ರಿಯಲ್ಲಿಯೇ ಅರಳುವ ಹೂವ ಆಗಿರುತ್ತದೆ ಕಾಕ್ಟಿ ಜಾತಿಗೆ ಸೇರಿರುವ ಈ ಬ್ರಹ್ಮ ಕಮಲ ಹೂ, ಶಾಸ್ತ್ರದಲ್ಲಿ ಹೆಚ್ಚು ಉಲ್ಲೇಖಗೊಂಡಿದೆ ಅದರಲ್ಲಿಯೂ ಬ್ರಹ್ಮಕಮಲ ಹಿಂದೂ ಹೆಸರು ಪಡೆದಿರುವ ಈ ಹೂವು ಬ್ರಹ್ಮನ ಜನನಕ್ಕೆ ಕಾರಣ ಅಥವಾ ಬ್ರಹ್ಮದೇವನು ಈ ಹೂವಿನಿಂದಲೇ ಜನಿಸಿದ್ದು ಎಂದೆಲ್ಲ ಹೇಳಲಾಗುತ್ತದೆ. ಈ ಬ್ರಹ್ಮ ಕಮಲದ ಹೂವಿನ ಬಗ್ಗೆ ಹೇಳಬೇಕೆಂದರೆ ಶಾಸ್ತ್ರದಲ್ಲಿ ಉಲ್ಲೇಖಗೊಂಡಿರುವ ಆಕೆ ರ ಶಿವ ಮತ್ತು ಪಾರ್ವತಿ ಹಾಗೂ ಗಣಪತಿಯ ಪುರಾತನ ಕತೆಯನ್ನು ನೀವು ಕೇಳಿರುತ್ತೀರಾ.

ಹೌದು ಒಮ್ಮೆ ಪಾರ್ವತಿ ದೇವಿಯು ಗಣೇಶನ ಮೂರ್ತಿಯನ್ನು ಮಾಡಿ ಅದಕ್ಕೆ ಜೀವವನ್ನು ಕೊಟ್ಟು ತಾನು ಬರುವವರೆಗೂ ಕೈಲಾಸಕ್ಕೆ ಯಾರ ಪ್ರವೇಶ ಆಗದಿರುವ ಹಾಗೆ ನೋಡಿಕೊಳ್ಳುವುದಾಗಿ ಗಣಪತಿಗೆ ಹೇಳಿ ಹೋಗಿರುತ್ತಾಳೆ ತಾಯಿಯ ಮಾತನ್ನು ಚಾಚೂ ತಪ್ಪದೆ ಕೇಳಿದ ಗಣಪತಿಯು ಶಿವನ ಕೋಪಕ್ಕೆ ಗುರಿಯಾಗುತ್ತಾರೆ. ಇನ್ನು ಶಿವನ ಕೋಪಕ್ಕೆ ಗುರಿಯಾದ ಗಣಪತಿಯ ತಲೆಯನ್ನು ಛೇಡಿಸುತ್ತಾರೆ

ಈಶ್ವರನು ನಂತರ ಪಾರ್ವತಿಯ ದುಃಖವನ್ನು ತಾಳದೆ ಉತ್ತರ ದಿಕ್ಕಿನಲ್ಲಿ ಬಿದ್ದಿದ್ದ ಗಜೇಂದ್ರ ಎಂಬ ಆನೆಯ ಮುಖ ವನ್ನು ತಂದು ಗಣಪತಿಗೆ ಜೋಡಿಸಲಾಯಿತು. ಈ ಸಮಯದಲ್ಲಿ ಗಣಪತಿ ಸ್ವಾಮೀಜಿ ಜೀವ ನೀಡುವುದಕ್ಕಾಗಿ ಬ್ರಹ್ಮ ಕಮಲವನ್ನು ಬಳಸಲಾಗಿತ್ತು ಎಂದು ಶಾಸ್ತ್ರಗಳು ತಿಳಿಸುತ್ತವೆ. ಈ ರೀತಿಯಾಗಿ ಬ್ರಹ್ಮ ಕಮಲ ದಲ್ಲಿ ವೈದ್ಯಕೀಯ ಅಂಶ ಅಡಗಿದೆ ಎಂದು ಸಹ ಹೇಳಲಾಗುತ್ತದೆ.

ಅಷ್ಟೇ ಅಲ್ಲ ಪಾಂಡವರು ವನವಾಸದಲ್ಲಿ ಇರುವಾಗ ದ್ರೌಪದಿ ಕಣ್ಣಿಗೆ ಸುಂದರವಾದ ಕಮಲವೊಂದು ಕಾಣಿಸುತ್ತದೆ ಇನ್ನು ಆ ಕಮಲವು ಸ್ವಲ್ಪ ಸಮಯದಲ್ಲಿಯೇ ಉದುರಿ ಬೀಳುತ್ತದೆ ನಂತರ ತನ್ನ ಪತಿಯಾದ ಭೀಮನಿಗೆ ಅದೇ ತರದ ಕಮಲ ಬೇಕೆಂದು ಇಚ್ಛಿಸಿದ ದ್ರೌಪದಿಯ ಆಸೆಯನ್ನು ತೀರಿಸಲು ಭೀಮಾ ಕಾಡಿಗೆ ತೆರಳುತ್ತಾರೆ. ಈ ರೀತಿ ಹಲವು ಪುರಾತನ ಕಥೆಗಳಲ್ಲಿ ಬ್ರಹ್ಮಕಮಲದ ಉಲ್ಲೇಖ ಇರುವುದನ್ನು ನಾವು ಗಮನಿಸಬಹುದಾಗಿದೆ.

ಇನ್ನೂ ಬ್ರಹ್ಮಕಮಲ ಅಂದರೆ ಅದು ಹದಿ4ವರುಷ ಗಳಿಗೊಮ್ಮೆ ಅರಳುವ ಹೂವು ಆಗಿರುತ್ತದೆ ಇದನ್ನು ಹಿಮಾಲಯದ ತಪ್ಪಲಿನಲ್ಲಿ ಕಾಣಬಹುದು ಆದರೆ ಇದೀಗ ನಾವು ಕಾಣುವ ವರ್ಷಕ್ಕೊಮ್ಮೆ ಅರಳುವ ಬ್ರಹ್ಮಕಮಲ ಸಾಮಾನ್ಯ ಹೂವಿನಂತೆ ಆದರೆ ಈ ಬ್ರಹ್ಮ ಕಮಲದಲ್ಲಿ ಹೆಚ್ಚಿನ ಆರೋಗ್ಯಕರ ಅಂಶ ಅಡಗಿರುವುದನ್ನು ಕೂಡಾ ನಾವು ಗಮನಿಸಬಹುದು. ಈ ರೀತಿ ಬ್ರಹ್ಮ ಕಮಲ ಹೂ ಶಾಸ್ತ್ರಗಳಲ್ಲಿ ಉಲ್ಲೇಖಗೊಂಡಿದೆ ಯಾರು ಈ ಬ್ರಹ್ಮ ಕಮಲ ಅರಳುವುದನ್ನು ರಾತ್ರಿ ಸಮಯದಲ್ಲಿ ಕಾಣುತ್ತಾರೆ ಅವರಿಗೆ ಅದೃಷ್ಟ ಒಲಿದು ಬರುತ್ತದೆ ಎಂದು ಸಹ ಮಾತು ಇರುವುದನ್ನು ನಾವು ತಿಳಿಯಬಹುದು.

ನಾವೀಗ ಕಾಣುವ ಬ್ರಹ್ಮ ಕಮಲ ಹೂ ಕಾಪಿ ಎಂಬ ಜಾತಿಗೆ ಸೇರಿರುವ ಹೂವು ಇದಾಗಿದೆ ಇದು ರಾತ್ರಿಯಲ್ಲಿಯೇ ಅರಳಿ ಸ್ವಲ್ಪ ಸಮಯದಲ್ಲಿಯೇ ಮುದುಡಿ ಬಿಡುತ್ತದೆ. ಇಂದಿಗೂ ಸಹ ಸಾಕಷ್ಟು ಮಂದಿ ತಮ್ಮ ಮನೆಯ ಬಳಿ ಬ್ರಹ್ಮ ಕಮಲದ ಗಿಡವನ್ನು ಬೆಳೆಸುತ್ತಾರೆ. ಅಷ್ಟೇ ಅಲ್ಲ ಆಷಾಢ ಮಾಸದಲ್ಲಿ ಈ ಹೂವು ಅರಳುವುದನ್ನು ನಾವು ಕಾಣಬಹುದು ಹಾಗೂ ತಿಳಿ ಗುಲಾಬಿ ಬಣ್ಣವನ್ನು ಹೊಂದಿರುವ ಬ್ರಹ್ಮ ಕಮಲದ ಹೂವು ಲಕ್ಷ್ಮೀದೇವಿಗೆ ಪ್ರಿಯವಾದದ್ದು ಹಾಗೂ ಇದರ ವಿಶೇಷ ಅಂದರೆ ಇದು ರಾತ್ರಿಯಲ್ಲಿಯೇ ಅರಳಿ ಸ್ವಲ್ಪ ಸಮಯದಲ್ಲಿಯೇ ಮುದುಡಿ ಹೋಗುತ್ತದೆ.

Leave a Reply

Your email address will not be published. Required fields are marked *