ಸ್ನೇಹಿತರೆ ಸಾಮಾನ್ಯವಾಗಿ ಗೃಹಿಣಿಯರು ಮನೆಯ ಕಸವನ್ನು ಗುಡಿಸುವುದು ಮತ್ತು ಮನೆ ಅನ್ನು ಸ್ವಚ್ಛ ಮಾಡುವ ಸಮಯದಲ್ಲಿ ತುಂಬಾ ವ್ಯತ್ಯಾಸವು ಇರುತ್ತದೆನ ಗೃಹಿಣಿಯರು ಸಾಮಾನ್ಯವಾಗಿ ಮನೆಯ ಯಜಮಾನರು ಮನೆ ಯಿಂದ ಹೋದ ನಂತರ ಮನೆ ಗುಡಿಸುವುದು ಸಾರಿಸುವುದು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ.ಈ ರೀತಿ ಮಾಡುವುದರಿಂದ ಮನೆಯಲ್ಲಿ ದುರಾದೃಷ್ಟ ಲಕ್ಷ್ಮಿ ನೆಲೆಸುತ್ತಾಳೆ. ಹಾಗಾದರೆ ಬನ್ನಿ ಸ್ನೇಹಿತರೆ ನಮ್ಮ ಮನೆಗಳಲ್ಲಿ ಅದೃಷ್ಟ ಲಕ್ಷ್ಮಿ ನೆಲಸಬೇಕು ಅದೃಷ್ಟ ಬರಬೇಕು ಎಂದರೆ ಯಾವ ಸಮಯದಲ್ಲಿ ಮನೆಯನ್ನು ಗುಡಿಸಿ ಸಾರಿಸಬೇಕು ಎಂದು ತಿಳಿದುಕೊಳ್ಳೋಣ.
ಹಾಗೆಯೆ ನಾವು ಮನೆ ಅನ್ನು ಸ್ವಚ್ಛ ಮಾಡಿದ ನಂತರ ಪೊರಕೆ ಅನ್ನು ಇಡುವುದು ಕೂಡ ನಮ್ಮ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ಮತ್ತು ದುರಾದೃಷ್ಟ ಲಕ್ಷ್ಮಿ ನೆಲೆಸುವುದನ್ನು ಸೂಚಿಸುತ್ತದೆ.ಹಾಗಾದರೆ ನಾವು ಮನೆಯನ್ನು ಸ್ವಚ್ಛಗೊಳಿಸಿದ ನಂತರ ಪೊರಕೆಯ ತುದಿ ಮೇಲ್ಭಾಗಕ್ಕೆ ಬರುವ ರೀತಿಯಲ್ಲಿ ಇಡಬೇಕು ಅಥವಾ ಪೊರಕೆಯನ್ನು ಮಲಗಿಸಿ ಇಡಬೇಕು ಈ ರೀತಿ ಇರಿಸುವುದರಿಂದ ನಮ್ಮ ಮನೆಯಲ್ಲಿ ಸದಾಕಾಲ ಅದೃಷ್ಟ ನೆಲೆಸಿರುತ್ತದೆ.
ಹಾಗೆಯೆ ನಾವು ಮಾಡುವ ಕೆಲವೊಂದು ತಪ್ಪುಗಳಿಂದ, ಮನೆಯನ್ನು ಸ್ವಚ್ಛಗೊಳಿಸುವ ವಿಚಾರದಲ್ಲಿ ಮನೆಗೆ ದುರಾದೃಷ್ಟ ಬರುತ್ತದೆ. ಹಾಗಾದರೆ ನಮ್ಮ ಮನೆಯಲ್ಲಿ ಅದೃಷ್ಟಲಕ್ಷ್ಮಿ ನೆಲಸಿರಬೇಕು ಎಂದರೆ ನಾವು ಸೂರ್ಯ ಉದಯಿಸುವುದಕ್ಕೂ ಮುಂಚೆ ಮನೆಯನ್ನು ಗುಡಿಸಿ ಸಾರಿಸಿ ಸ್ವಚ್ಛಗೊಳಿಸಬೇಕು ಹೀಗೆ ಮಾಡುವುದರಿಂದ ನಮ್ಮ ಮನೆಯಲ್ಲಿ ಅದೃಷ್ಟಲಕ್ಷ್ಮಿ ಸದಾಕಾಲ ನೆಲೆಸಿರುತ್ತಾಳೆ.
ಹಾಗೆಯೆ ದಿನದಲ್ಲಿ ಎರಡು ಬಾರಿ ಮಾತ್ರ ಮನೆಯನ್ನು ಗುಡಿಸಿ ಸಾರಿಸಿ ಸ್ವಚ್ಛಗೊಳಿಸಬೇಕು. ಸಂಜೆ ಸಮಯದಲ್ಲಿ ಸೂರ್ಯ ಮುಳುಗುವ ನಲವತ್ತೈದು ನಿಮಿಷಗಳ ಮುನ್ನ ಅಥವಾ ಒಂದು ಗಂಟೆಗೂ ಮುನ್ನ ಮನೆಯನ್ನು ಗುಡಿಸಿ ಸಾರಿಸಿ ಸ್ವಚ್ಚಗೊಳಿಸಿದರೆ ನಮ್ಮ ಮನೆಯಲ್ಲಿ ಅದೃಷ್ಟಲಕ್ಷ್ಮಿ ಸದಾಕಾಲ ನೆಲೆಸಿರುತ್ತಾಳೆ.ನೋಡಿದಿರಲ್ಲ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲಾ ಮನೆಯಲ್ಲಿಯೂ ಗೃಹಿಣಿಯರು ತಮ್ಮ ದೈನಂದಿನ ಕೆಲಸಗಳ ಎಲ್ಲವನ್ನೂ ಮುಗಿಸಿ ನಂತರ ಮನೆಯಲ್ಲಿರುವಂತಹ ಮಕ್ಕಳು ಯಜಮಾನರು ಎಲ್ಲರೂ ಮನೆಯಿಂದ ಹೊರಟ ನಂತರ ಮನೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಾರೆ.
ಈ ರೀತಿ ಮಾಡುವುದರಿಂದ ಮನೆ ಯಿಂದ ಹೊರಗೆ ಕೆಲಸಕ್ಕೆ ಹೋಗಿರುವಂತಹ ಯಜಮಾನರು ಮಾಡುವ ಕೆಲಸಗಳೆಲ್ಲ ಗುಡಿಸಿದ ರೀತಿಯಲ್ಲಿ ಅನಾನುಕೂಲ ಆಗುತ್ತದೆ.ಆದ್ದರಿಂದ ಸೂರ್ಯ ಉದಯಿಸುವುದಕ್ಕಿಂತ ಮೊದಲು ಮನೆಯನ್ನು ಗುಡಿಸಿ ಸಾರಿಸಿ ಸ್ವಚ್ಛಗೊಳಿಸುವುದರಿಂದ ನಮ್ಮ ಮನೆಯಲ್ಲಿ ಸದಾ ಕಾಲ ಅದೃಷ್ಟ ಲಕ್ಷ್ಮಿ ನೆಲೆಸಿರುತ್ತಾಳೆ.
ಹಾಗಾದರೆ ಸ್ನೇಹಿತರೆ ನೀವೂ ಕೂಡ ನಿಮ್ಮ ಮನೆಗಳಲ್ಲಿ ಈ ರೀತಿಯ ತಪ್ಪುಗಳನ್ನು ಮಾಡುತ್ತಿದ್ದರೆ ಈ ರೀತಿಯ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ ನಿಮ್ಮ ಮನೆಯಲ್ಲಿ ಅದೃಷ್ಟಲಕ್ಷ್ಮಿ ನೆಲೆಸುವಂತೆ ಮಾಡಿಕೊಳ್ಳಿ.ಇದು ನಮ್ಮ ಪದ್ದತಿಯಂತ ಹೇಳಿದರೆ ತಪ್ಪಾಗಲ್ಲ, ಅಂದರೆ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುನ್ನವೇ ಮನೆಯನ್ನು ಶುಚಿಗೊಳಿಸಿ ಮನೆಯ ಗೃಹಿಣಿ ಶುಚಿಯಾಗಿ ಮನೆಯಲ್ಲಿ ಪೂಜೆ ಮಾಡಿರಬೇಕು ಎಂದು ಮತ್ತು ಸಂಜೆ ಸೂರ್ಯ ಮುಳುಗುವುದಕ್ಕಿಂತ ಮುನ್ನವೇ ಮನೆಯನ್ನು ಸ್ವಚ್ಛಗೊಳಿಸಬೇಕು ಅಂತ.
ಈ ರೀತಿ ಯಾಕೆ ಹಿರಿಯರು ಹೇಳ್ತಾರೆ ಅಂದರೆ ಬೆಳಿಗ್ಗೆ ಸಮಯದಲ್ಲಿ ಹೆಣ್ಣುಮಕ್ಕಳು ಬೇಗ ಎದ್ದರೆ ಅನಾರೋಗ್ಯ ಸಮಸ್ಯೆಗಳು ಅವರಿಗೆ ಕಾಡುವುದಿಲ್ಲ ಎಂದು ಇನ್ನು ಸೂರ್ಯಾಸ್ತಕ್ಕಿಂತ ಮುನ್ನ ಕಸಗುಡಿಸಬೇಕು ಅಂತ ಯಾಕೆ ಹೇಳ್ತಾರೆ ಅಂದರೆ ಹಿಂದಿನ ಕಾಲದಲ್ಲಿ ಈ ಕರೆಂಟ್ ವ್ಯವಸ್ಥೆ ಇರುತ್ತ ಇರಲಿಲ್ಲ ಸೂರ್ಯ ಅರ್ಥವಾದ ನಂತರ ಕತ್ತಲಾಗುತ್ತಿತ್ತು ಆಗ ಮನೆಯನ್ನು ಸ್ವಚ್ಛಗೊಳಿಸುವುದು ಆದರೆ ಎಲ್ಲಿ ಕಸ ದೂಳು ಇದೆ ಅಂತ ನಮಗೆ ತಿಳಿಯುತ್ತಿರಲಿಲ್ಲ ಅಂದಿನಿಂದಲೂ ಕೂಡ ಈ ರೀತಿಯ 1ಪದ್ಧತಿಯನ್ನು ಮಾಡಲಾಯಿತು ಧನ್ಯವಾದಗಳು ಸ್ನೇಹಿತರೆ.