Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಒಂದು ಸನ್ನಿಧಿಯಲ್ಲಿ ನೀವೇನಾದ್ರು ಸ್ನಾನವನ್ನು ಮಾಡಿದರೆ ಸಾಕು ಕಾಶಿಗೆ ಹೋಗಿ ಸ್ನಾನ ಮಾಡಿದಷ್ಟೇ ಒಳ್ಳೆಯ ಫಲಗಳು ನಿಮಗೆ ದೊರೆಯುತ್ತವೆ …!!!

ನಮಸ್ಕಾರ ಸ್ನೇಹಿತರೇ ,ನಿಮಗೆ ಮನೆಯಲ್ಲಿ ಒಂದಲ್ಲ ಒಂದು ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿದ್ದರೆ ನೀವು ಒಂದು ಬಾರಿ ಈ ದೇವಸ್ಥಾನಕ್ಕೆ ಹೋಗಿ ಒಂದು ಬಾರಿ ಸ್ನಾನವನ್ನು ಮಾಡಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ಎಲ್ಲ ರೀತಿಯ ಕಷ್ಟಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ .ಹಾಗಾದ್ರೆ ಈ ದೇವಸ್ಥಾನ ಯಾವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ ಸ್ನೇಹಿತರೇ

ನಿಮಗೆ ನಮಗೆ ಗೊತ್ತಿರುವ ಒಂದು ವಿಚಾರ ಏನಪ್ಪ ಅಂದರೆ ಗಂಗಾ ಸ್ನಾನ ತುಂಗಾ ಪಾನ ಎನ್ನುವಂತಹ ಮಾತನ್ನು ನೀವು ಕೇಳಿರಬಹುದು ಅದರ ಪ್ರಕಾರ ನೀವೇನಾದರೂ ಕಾಶಿಗೆ ಹೋಗಿದ್ದಾಗ ಸ್ಥಾನವನ್ನು ಮಾಡಿಕೊಂಡರೆ, ನೀವು ಯಾವುದೇ ತಪ್ಪನ್ನು ಮಾಡಿರಬಹುದು ಅಥವಾ ಯಾವುದೇ ಪಾಪವನ್ನು ಮಾಡಿರಬಹುದು .ಗಂಗೆಯಲ್ಲಿ ನೀವು ಒಂದು ಸಾರಿ ಸ್ನಾನವನ್ನು ಮಾಡಿದ ನಂತರ ನೀವು ಮಾಡಿರುವ ಅಂತಹ ತಪ್ಪುಗಳನ್ನು ಹಾಗೂ ನೀವು ಮಾಡಿರುವಂತಹ ಕೆಟ್ಟದಾದ ಕೆಲಸಗಳು ನಿವಾರಣೆ ಆಗುತ್ತದೆ .

ಎನ್ನುವುದು ಕೆಲವರ ಒಂದು ಅಭಿಪ್ರಾಯ. ಆದರೆ ಅದೇ ರೀತಿಯಾದಂತಹ ಹಾಗೂ ಅಷ್ಟೇ ಪವರ್ ಫುಲ್ ಆಗಿ ನೀವು ಅಂದುಕೊಂಡಿದ್ದೆಲ್ಲಾ ನಿವಾರಣೆ ಮಾಡುವಂತಹ ಒಂದು ಜಾಗವಿದೆ.ಆ ಜಾಗಕ್ಕೆ ಹೋಗಿದ್ದೆ ನೀವೇನಾದರೂ ಸ್ಥಾನ ಮಾಡಿದೆ ಆದರೆ ನೀವು ಕಾಶಿಗೆ ಹೋಗಿ ಸ್ನಾನ ಮಾಡಿ ಅಲ್ಲಿ ಯಾವ ರೀತಿಯಾಗಿ ಪರಿಹಾರ ಕಂಡುಕೊಳ್ಳುತ್ತೀರಿ ಅದೇ ರೀತಿಯಾಗಿ ಇಲ್ಲಿ ಕೂಡ ನೀವು ಪರಿಹಾರವನ್ನು ಕಂಡುಕೊಳ್ಳಬಹುದು.ಹಾಗಾದರೆ ಈ ಸ್ಥಳ ಇರೋದಾದ್ರೂ ಎಲ್ಲಿ ಎನ್ನುವುದರ ಸಂಪೂರ್ಣವಾದ ಮಾಹಿತಿ ನಿಮಗೆ ಬೇಕಾದರೆ ಎರಡು ನಿಮಿಷ ಬಿಡುವು ಮಾಡಿಕೊಂಡು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಈ ಸ್ಥಳ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಬಂದರೆ ಈ ಸ್ಥಳ ಇರುವುದು ಬೆಳಗುತಿರು ತೀರ್ಥರಾಮೇಶ್ವರ ,ಈ ದೇವಸ್ಥಾನಕ್ಕೆ ಹಲವಾರು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಇರುವುದರ ಪ್ರಶ್ನೆಗೆ ಉತ್ತರ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿ ಇರುವ ಹೊನ್ನಾಳಿ ತಾಲೂಕಿನಲ್ಲಿ ಈ ದೇವಸ್ಥಾನವನ್ನು ನೀವು ನೋಡಬಹುದಾಗಿದೆ. ಬೆಳಗುತ್ತಿ ಗೆ ಸುಮಾರು ನೀವು ಏಳು ಕಿಲೋಮೀಟರ್ ಕ್ರಮಿಸಿದರೆ ಈ ದೇವಸ್ಥಾನಗಳು ನಮಗೆ ದೊರಕುತ್ತವೆ.ಹೀಗೆ ಕ್ರಮಿಸಿದ ನಂತರ ನಿಮಗೆ ತೀರ್ಥರಾಮೇಶ್ವರ ಇರುವಂತಹ ದೇವಸ್ಥಾನ ನಿಮಗೆ ದೊರಕುತ್ತದೆ ಈ ದೇವಸ್ಥಾನ ಇರುವುದು ಕಾಡಿನಲ್ಲಿ ಅಲ್ಲಿನ ರಮಣಿಯ ದೃಶ್ಯವನ್ನು ನೀವೇನಾದರೂ ನೋಡಿದರೆ ನಿಜವಾಗಲೂ ನೀವು ಒಂದು ಸಾರಿ ನಿಮಗೆ ಸ್ವರ್ಗಕ್ಕೆ ನಾವು ಬಂದು ಬಿಟ್ಟಿದ್ದೇವೆ ಎನ್ನುವುದರ ಒಂದು ಭಾಸವಾಗುತ್ತದೆ, ಇದನ್ನು ದಕ್ಷಿಣ ಕಾಶಿ ಎಂದು ಕೂಡ ಕರೆಯುತ್ತಾರೆ.

ಇದರಲ್ಲಿ ಇರುವಂತಹ ಒಂದು ಕೆರೆ ಅಥವಾ ಕುಂಡ ಯಾವಾಗಲು  ತುಂಬಿರುತ್ತದೆ. ಈ ಸ್ಥಳದಲ್ಲಿ ನೀವೇನಾದರೂ ಇಲ್ಲಿರುವಂತಹ ನೀರನ್ನು ತೆಗೆದುಕೊಂಡು ಹೋಗಿ ಸ್ನಾನವನ್ನು ಮಾಡಿದರೆ ನೀವು ಮಾಡಿರುವಂತಹ ಪಾಪಗಳು ಹಾಗೂ ನಿಮ್ಮ ಜೀವನದಲ್ಲಿ ನಿಮಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆ ಮಾಡಿರುವಂತಹ ಕೆಲವೊಂದು ತಪ್ಪುಗಳನ್ನು ನೀವು ಪರಿಹಾರವಾಗಿ ಇಲ್ಲಿ ಪರಿಣಾಮಕಾರಿಯಾಗಿ ಕಡಿಮೆ ಮಾಡಿಕೊಳ್ಳಬಹುದು.ಈ ಪುಣ್ಯಕ್ಷೇತ್ರದಲ್ಲಿ ಇರುವಂತಹ ಈ ಕುಂಡವು ತುಂಬಾ ಫೇಮಸ್ ಆಗಿದೆ, ಏಕೆಂದರೆ ಎಲ್ಲಾ ಋತುಮಾನದಲ್ಲಿ ಕೂಡ ತುಂಬಿ ಹರಿಯುತ್ತದೆ ಈ ಜಾಗದಲ್ಲಿ ನೀವೇನಾದರೂ ಸ್ನಾನವನ್ನು ಮಾಡಿದರೆ ನಿಮಗೆ ಪುಣ್ಯವು ಸಿಗುತ್ತದೆ ಎನ್ನುವುದು ಇಲ್ಲಿ ಒಳಿತು ಹೊಂದಿರುವಂತಹ ಜನರ ಮಾತಾಗಿದೆ, ಈ ಕೆರೆಗೆ ಸುತ್ತಮುತ್ತ ಕಲ್ಲಿನ ಕಾಂಪೌಂಡ್ ಅನ್ನು ಮಾಡಿದ್ದು ಅದು ಕಣ್ಣಿಂದ ನೋಡುವುದಕ್ಕೆ ತುಂಬಾ ಚೆನ್ನಾಗಿದೆ, ಅದಲ್ಲದೆ ಈ ಕುಂಡದಲ್ಲಿ ಮೊಸಳೆಯ ರೂಪದಲ್ಲಿ ಮಾಡಿರುವಂತಹ ಒಂದು ವಿಗ್ರಹವನ್ನು ನೀವು ನೋಡಬಹುದಾಗಿದೆ.

ಇಲ್ಲಿನ ಜನರು ಹೇಳುವ ಹಾಗೆ ಇಲ್ಲಿ ನೀವೇನಾದರೂ ಸ್ನಾನವನ್ನು ಮಾಡಿದ್ದೆ ಆದಲ್ಲಿ ದಕ್ಷಿಣ ಕಾಶಿಯಲ್ಲಿ ಹೋಗಿ ನೀವು ಸ್ನಾನ ಮಾಡಿಕೊಂಡು ಬಂದಂತಹ ಪುಣ್ಯ ಇಲ್ಲಿ ಸ್ನಾನ ಮಾಡಿದರೆ ನಿಮಗೆ ದೊರಕುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು, ಹಾಗಾದರೆ ಇನ್ನೇಕೆ ತಡ ನಿಮಗೇನಾದರೂ ಸಮಯ ಇದ್ದರೆ ಇಲ್ಲಿಗೆ ಒಂದು ಸಾರಿ ಭೇಟಿ ನೀಡಿ ಹಾಗೂ ನಿಮ್ಮ ಪಾಪ ಕಾರ್ಯಗಳನ್ನು ಅವನು ಕಡಿಮೆ ಮಾಡಿಕೊಂಡು ಬನ್ನಿ. ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ