Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಒಂದು ವಿಷಯವನ್ನು ನೀವು ಅರಿತರೆ ನಿಮ್ಮ ಸಿಲಿಂಡರ್ ಮೂರು ತಿಂಗಳು ಬಳಕೆಯಾಗುವ ಬದಲು ಆರು ತಿಂಗಳು ಬಳಕೆಯಾಗುತ್ತದೆ!!!!

ನಿಮ್ಮ ಮನೆಯಲ್ಲಿ ಸಿಲಿಂಡರ್ ಬೇಗ ಬೇಗನೆ ಖಾಲಿಯಾಗುತ್ತಿದೆ ಹಾಗಾದರೆ ಯಾವೆಲ್ಲಾ ಟಿಪ್ ಗಳನ್ನು ಪಾಲಿಸುವುದರಿಂದ ಸಿಲಿಂಡರ್ ಬೇಗ ಖಾಲಿಯಾಗುವುದರಿಂದ ಹೊರ ಬರಬಹುದು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿ ಕೊಡಲಿದ್ದೇನೆ .

ಈ ಕೆಲವೊಂದು ವಿಚಾರಗಳಲ್ಲಿ ನಾವು ಗಮನ ವಹಿಸಿದರೆ ಸಾಕು ಸಿಲಿಂಡರ್ ಖರ್ಚಾಗುವುದು ಎಷ್ಟೋ ಕಡಿಮೆಯಾಗಿ ಇನ್ನೂ ಹೆಚ್ಚು ದಿನಗಳ ವರೆಗೂ ಸಿಲಿಂಡರ್ ಬಾಲಕ್ಕೆ ಬರುತ್ತದೆ ಹಾಗಾದರೆ ಬನ್ನಿ ಇಂದಿನ ಮಾಹಿತಿಯಲ್ಲಿನ ಕೆಲವೊಂದು ಉಪಯುಕ್ತ ವಿಚಾರಗಳನ್ನು.

ಹಿಂದಿನ ದಿನಗಳಲ್ಲಿ ಹಿರಿಯರು ಕಟ್ಟಿಗೆ ಒಲೆಯನ್ನೇ ಬಳಸುತ್ತಿದ್ದರೂ ಒಣಗಿದ ಕಟ್ಟಿಗೆಯನ್ನು ಬಳಸಿ ಅಡುಗೆಯನ್ನು ಮಾಡುತ್ತಿದ್ದರು.

ಅಂದಿನ ಕಾಲದ ಅಡುಗೆಯ ರುಚಿಯೇ ಬೇರೆ ಆದರೆ ಇತ್ತೀಚಿನ ದಿನಗಳಲ್ಲಿ ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಬಳಸುವ ಕಾರಣ ಈ ಸಿಲಿಂಡರ್ ಗಳ ಬೆಲೆ ಹೆಚ್ಚು ದಿನದಿನಕ್ಕೂ ಹೆಚ್ಚಾಗುತ್ತಿರುವ ಈ ಸಿಲಿಂಡರ್ ಬೆಲೆ ಕೈಗೆಟುಕದಂತೆ ಆಗಿದೆ ಬಿಡಿ.

ಆದರೆ ಕೆಲವರ ಮನೆಯಲ್ಲಂತೂ ಈ ಸಮಸ್ಯೆ ಕಾಡುತ್ತಲೇ ಇರುತ್ತದೆ ಅದೇನೆಂದರೆ ಬೇಗ ಬೇಗನೆ ಸಿಲಿಂಡರ್ ಖಾಲಿಯಾಗುತ್ತಾ ಇರುತ್ತದೆ .

ಇದಕ್ಕೆ ಏನು ಮಾಡೋದು ಅಂತಾನೇ ಗೊತ್ತಾಗ್ತಾ ಇರುವುದಿಲ್ಲ ಸುಮ್ಮನೆ ಯೋಚನೆ ಮಾಡ್ತಾ ಇರ್ತಾರೆ ಆದರೆ ಇದಕ್ಕೆಲ್ಲ ಕಾರಣ ಕೆಲವೊಂದು ವಿಚಾರಗಳು ಆಗಿರುತ್ತದೆ ನಾವು ಮಾಡುವ ತಪ್ಪುಗಳಿಂದ ಈ ರೀತಿ ಸಿಲಿಂಡರ್ ಬೇಗ ಬೇಗನೇ ಖಾಲಿ ಆಗ್ತಾ ಇರುತ್ತೆ.

ಮನೆಯಲ್ಲಿಯೇ ಹೆಣ್ಣು ಮಕ್ಕಳು ಅಡುಗೆ ಮಾಡುವಾಗ ಕೆಲವೊಂದು ಟಿಪ್ಪ್ ಗಳನ್ನು ಪಾಲಿಸುವುದರಿಂದ ಆರಾಮವಾಗಿ ಸಿಲಿಂಡರ್ ಅನ್ನು ಉಳಿಸಬಹುದು ತಿಂಗಳಿನವರೆಗೂ ಮಾತ್ರವಲ್ಲದೆ ಹೆಚ್ಚು ದಿನ ಸಿಲಿಂಡರ್ ಬಾಳಿಕೆ ಬರುತ್ತದೆ.

ಅಡುಗೆ ಮಾಡುವಾಗ ಹೆಚ್ಚಾಗಿ ಸಣ್ಣ ಬರ್ನರ್ ಅನ್ನು ಬಳಸುವುದು ಉತ್ತಮ ಹಾಗೆ ಅಡುಗೆ ಮಾಡುವಂತಹ ಸಮಯದಲ್ಲಿ ಮನೆಯಲ್ಲಿ ಪ್ರೆಶರ್ ಕುಕ್ಕರ್ ಅನ್ನು ಆದಷ್ಟು ಬಳಸುವುದರಿಂದ ಗ್ಯಾಸ್ ಉಳಿತಾಯವಾಗುವುದಲ್ಲದೆ ಪ್ರೆಶರ್ ಕುಕ್ಕರ್ ನಲ್ಲಿ ಸಪರೇಟರ್ ಇದ್ದರೆ ಅದರಲ್ಲಿ ಬೇಳೆ ಮತ್ತು ತರಕಾರಿಯನ್ನು ಒಟ್ಟಿಗೆ ಬೇಯಿಸಿ ಇಟ್ಟುಕೊಂಡರೆ ಇನ್ನೂ ಹೆಚ್ಚು ಗ್ಯಾಸ್ ಉಳಿತಾಯವಾಗುತ್ತದೆ.

ಇಷ್ಟೇ ಅಲ್ಲ ಹೆಣ್ಣು ಮಕ್ಕಳು ಅಡುಗೆ ಮಾಡುವಂತಹ ಸಮಯದಲ್ಲಿ ಬೇಕಾಗಿರುವ ಪದಾರ್ಥಗಳನ್ನು ಮೊದಲಿಗೆ ಎತ್ತಿಟ್ಟುಕೊಂಡು ನಂತರ ಅಡುಗೆ ಮಾಡುವುದರಿಂದ ಬೇಗ ಬೇಗನೆ ಅಡುಗೆ ಆಗುತ್ತದೆ.

ಜೊತೆಗೆ ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಕೆಲವೊಮ್ಮೆ ನೀರನ್ನು ಇಟ್ಟು ಹೆಚ್ಚು ಸಮಯ  ಕಾಯಿಸುತ್ತಿರುತ್ತಾರೆ.  ಆದರೆ ನೀರನ್ನು ಹೆಚ್ಚು ಸಮಯ ಬಾಯ್ಲ್ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತಾ ಬರುತ್ತದೆ ಆದ ಕಾರಣ ನೀರನ್ನು ಎಷ್ಟು ಸಮಯ ಬಾಯಿಲ್ ಮಾಡಬೇಕು ಅಷ್ಟು ಸಮಯ ಮಾತ್ರ ಬಾಯಿಲ್ ಮಾಡುವುದು ಒಳ್ಳೆಯದು.

ಬೇಳೆ ಯನ್ನು ಬೇಯಿಸುವಾಗ ಅದನ್ನು ಒಂದು ಗಂಟೆಗಳ ಮೊದಲೇ ನೀರಿನಲ್ಲಿ ನೆನೆಸಿಟ್ಟು ನಂತರ ಆ ಬೇಳೆ ಯನ್ನು ಬೇಯಿಸುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳದೆ ಗ್ಯಾಸ್ ಉಳಿತಾಯವಾಗುತ್ತದೆ.

ಹೀಗೆ ಅಡುಗೆ ಮಾಡುವಾಗ ಅಡುಗೆ ಮಾಡುವವರು ಕೆಲವೊಂದು ವಿಚಾರಗಳಲ್ಲಿ ಗಮನ ವಹಿಸುವುದರಿಂದ ಗ್ಯಾಸ್ ವ್ಯರ್ಥವಾಗದೆ ಸಿಲಿಂಡರ್ ಬಹುದಿನಗಳ ಕಾಲ ಬಾಳಿಕೆ ಬರುವುದಲ್ಲದೇ ಬೇಗ ಸಿಲಿಂಡರ್ ಖಾಲಿ ಕೂಡ ಆಗುವುದಿಲ್ಲ ಮತ್ತೆ ನಿಮಗೆ ತಿಂಗಳಿನ ಖರ್ಚು ಕೂಡ ಕಡಿಮೆಯಾಗುತ್ತಾ ಬರುತ್ತದೆ.

ಮತ್ತೊಂದು ವಿಚಾರವನ್ನು ನಾವು ತಿಳಿದುಕೊಳ್ಳಬೇಕು ಅದೇನೆಂದರೆ ತರಕಾರಿಗಳನ್ನು ಬೇಳೆಯನ್ನು ಬೇಯಿಸುವಾಗ ಆ ಪದಾರ್ಥಗಳಿಗೆ ತಕ್ಕಷ್ಟು ಬೇಕಾಗಿರುವ ಪ್ರಮಾಣದಷ್ಟು ನೀರನ್ನು ಬಳಸಿದರೆ ಸಾಕು, ಹೆಚ್ಚು ನೀರು ಬಳಸುವುದರಿಂದ ಗ್ಯಾಸ್ ಸುಮ್ಮನೆ ವ್ಯರ್ಥವಾಗುತ್ತದೆ.

Leave a Reply

Your email address will not be published. Required fields are marked *