ಈ ಒಂದು ಮರದ ಎಲೆಯನ್ನು ನೀವೇನಾದ್ರು ಸೇವಿಸಿದರೆ ಸಾಕು ನಿಮ್ಮಲ್ಲಿರುವ ಯಾವುದೇ ರೀತಿಯ ಚರ್ಮರೋಗಗಳನ್ನು ವಾಸಿ ಮಾಡಲು ಹಾಗಾದ್ರೆ ಆ ಒಂದು ಮರ ಯಾವುದು ಗೊತ್ತಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಈ ಒಂದೆ ಒಂದು ಎಲೆಯಿಂದ ನಿಮ್ಮ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳೆಲ್ಲ ಪರಿಹಾರವಾಗುತ್ತದೆ. ಹೌದು ಬಹಳ ಹಳೆಯದಾದ ವಿಧಾನ ಆದರೂ ಪರಿಣಾಮಕಾರಿಯಾದ ಫಲಿತಾಂಶ ನೀಡುವ ಈ ಒಂದು ಮನೆ ಮದ್ದಿನ ಬಗ್ಗೆ ಇಂದಿನ ಮಾಹಿತಿಯಲ್ಲಿ ಇನ್ನಷ್ಟು ವಿಚಾರವನ್ನು ತಿಳಿದುಕೊಳ್ಳಿ.ಹಾಗೆ ಇದನ್ನು ಹೇಗೆ ಬಳಸಬೇಕು ಆ ಒಂದು ಮರ ಯಾವುದು ಆ ಮರದ ಎಲೆಯ ಬಗೆಗಿನ ಇನ್ನಷ್ಟು ವಿಶೇಷತೆಗಳನ್ನು ನಿಮಗೆ ತಿಳಿಸಿಕೊಡುತ್ತೇನೆ. ಇದರ ಜೊತೆಗೆ ಈ ಮರದಲ್ಲಿ ಕೇವಲ ಇದರ ಎಲೆ ಮಾತ್ರ ಅಲ್ಲ ಇದರ ಬೀಜಗಳು ಕಾಂಡ ಎಲ್ಲವೂ ಕೂಡ ಔಷಧೀಯ ಗುಣವನ್ನು ಹೊಂದಿದ್ದು.ಆಯುರ್ವೇದದಲ್ಲಿಯೂ ಕೂಡ ಈ ಒಂದು ಮರದ ಎಲೆಯ ಬೀಜಗಳು ಮತ್ತು ಕಾಂಡದ ಬಳಕೆಯಾಗುತ್ತದೆ.ಆ ಒಂದು ಮರ ಯಾವುದು ಅಂತ ಹೇಳ್ತೇವೆ ಜೊತೆಗೆ ನೀವೂ ಕೂಡ ಈ ಒಂದು ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ.

ಇನ್ನು ಆ ಒಂದು ಮರ ಯಾವುದು ಅಂದರೆ ಹೊಂಗೆ ಮರ ಇದರ ಬಗ್ಗೆ ನಿಮಗೆ ಗೊತ್ತೆ ಇದೆ ಸಾಕಷ್ಟು ಹಾಡುಗಳು ಕೂಡ ಕೇಳಿರ್ತೀರಿ. ಹೊಂಗೆ ಮರದ ಕೆಳಗೆ ಮಲಗುವುದರಿಂದ ಬಹಳ ಸೊಗಸಾದ ನಿದ್ರೆ ಬರುತ್ತದೆ ಅಂತ ಹಿರಿಯರು ಹೇಳಿರುವ ಮಾತನ್ನು ಕೇಳಿರುತ್ತೇವೆ.ಹಾಗೆ ಈ ಹೊಂಗೆ ಮರದ ಎಲೆಯಲ್ಲಿ ಇರುವ ಶಕ್ತಿಯಿಂದ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳನ್ನು ಪರಿಹರಿಸಿಕೊಳ್ಳಬಹುದು.ಹೌದು ಈ ಹೊಂಗೆ ಮರದ ಎಲೆಯನ್ನು ತೆಗೆದುಕೊಳ್ಳಿ ಎಂತಹ ಎಲೆ ತೆಗೆದುಕೊಳ್ಳಬೇಕು ಅಂದರೆ ಹಾಲು ಬರ್ತಿರೋ ಎಲೆಯನ್ನು ತೆಗೆದುಕೊಳ್ಳಬೇಕು.ನಂತರ ಅದನ್ನು ಒಂದು ಕುಟ್ಟ ಣಿಯಲ್ಲಿ ಸ್ವಚ್ಛ ಪಡಿಸಿ ಹಾಕಿಕೊಳ್ಳಿ ಅಂದರೆ ಒಣಗಿದ ಎಲೆಯನ್ನು ಹಾಕಿಕೊಳ್ಳಬೇಕು. ಕುಟ್ಟುವಾಗ ಇದು ತರಿತರಿ ಆಗಿ ಪುಡಿಯಾಗುತ್ತದೆ ನೀವು ಇದಕ್ಕೆ ಅರ್ಧ ಚಮಚ ನೀರನ್ನು ಹಾಕಿದರೆ ಸಾಕು.

ನಂತರ ಇದನ್ನು ಮತ್ತೆ ಕುಟ್ಟಿ ಅದನ್ನು ತೆಗೆದುಕೊಂಡು ಅಂದರೆ ಆ ಹೊಂಗೆ ಮರದ ಎಲೆಯ ಪೇಸ್ಟ್ ಅನ್ನು ತೆಗೆದುಕೊಂಡು ಅದರಿಂದ ರಸವನ್ನು ಹಿಂಡಿಕೊಳ್ಳಿ.ಇದೀಗ ಈ ರಸವನ್ನು ನೀವು ಚರ್ಮವ್ಯಾಧಿ ಅಂದರೆ ಬಿಳಿ ಚಿಬ್ಬು ಕಜ್ಜಿ ಅಥವಾ ತುರಿಕೆ ಆಗುತ್ತಾ ಇರುತ್ತದೆ ಅಂತಹ ಒಂದು ಭಾಗದಲ್ಲಿ ಈ ರಸವನ್ನು ಲೇಪನ ಮಾಡಿಕೊಂಡು ಸ್ವಲ್ಪ ಜಾಸ್ತಿ ಹಾಕಿ ಅದನ್ನು ಚೆನ್ನಾಗಿ ಉಚ್ಚಬೇಕುಅಂದರೆ ಸ್ಕ್ರಬ್ ರೀತಿ ಮಾಡಬೇಕು. ಇದನ್ನು ನೀವು ದಿನದಲ್ಲಿ ಎರಡು ಬಾರಿ ಮಾಡಬಹುದು ನಂತರ ತಣ್ಣೀರನ್ನು ಅಥವಾ ಬೆಚ್ಚಗಿನ ನೀರನ್ನು ಬಳಸಿ ಇದನ್ನು ಸ್ವಚ್ಛ ಪಡಿಸಿಕೊಳ್ಳಿ. ಇದೇ ರೀತಿ ವಾರದವರೆಗೆ ಮಾಡುತ್ತಾ ಬನ್ನಿ ಚರ್ಮಕ್ಕೆ ಸಂಬಂಧಪಟ್ಟು ಯಾವುದೆ ವ್ಯಾಧಿಗಳೆ ಆಗಲಿ ಪರಿಹಾರವಾಗುತ್ತದೆ.

ಇನ್ನು ಅದೆಷ್ಟು ಹೊಂಗೆ ಮರದ ಎಲೆಯ ಮಹತ್ವ ಆದರೆ ಹೊಂಗೆ ಮರದಲ್ಲಿ ಬೀಜಗಳು ಕೂಡ ಬಿಡುತ್ತವೆ ಆ ಬೀಜದಿಂದ ಎಣ್ಣೆಯನ್ನು ತೆಗಿತಾರೆ ಎಣ್ಣೆಯನ್ನು ಮೊಣಕಾಲು ಮೊಣಕೈ ಮತ್ತು ಮಂಡಿಗಳ ಮೇಲೆ ಲೇಪನ ಮಾಡಿ ನಿಧಾನವಾಗಿ ಮಸಾಜ್ ಮಾಡುತ್ತಾ ಬರುವುದರಿಂದ ನೋವುಗಳು ಪರಿಹಾರವಾಗುತ್ತದೆಅಷ್ಟೇ ಅಲ್ಲದೆ ಈ ಹೊಂಗೆ ಮರದ ಕಾಂಡವನ್ನು ತೆಗೆದುಕೊಂಡು ಅದನ್ನು ಸುಟ್ಟು ಅದರ ಒಂದು ಕೆಂಡವನ್ನು ಪುಡಿ ಮಾಡಿ ಇಟ್ಟುಕೊಂಡು ಹಲ್ಲುಗಳನ್ನು ಉಜ್ಜುತ್ತ ಬರುವುದರಿಂದ ಕೂಡ ಹಲ್ಲು ನೋವು ಕಡಿಮೆಯಾಗುತ್ತದೆ ಮತ್ತು ಹುಲಿಕಲ್ಲು ಆಗಿದ್ದರೆ ಅದರಲ್ಲಿ ಹುಳಗಳು ಸತ್ತು ನೋವು ಬರದಂತೆ ಇದು ನೋಡಿಕೊಳ್ಳುತ್ತದೆ.

Leave a Reply

Your email address will not be published. Required fields are marked *