ಈ ಒಂದು ಮಂತ್ರವನ್ನು ನೀವು ಹೇಳಿದರೆ ಸಾಕು ಸಾಕ್ಷಾತ್ ರಾಯರು ನಿಮ್ಮ ಕನಸಿನಲ್ಲಿ ಬಂದು ಬೇಡಿದ ವರವನ್ನು ನೀಡುತ್ತಾರೆ ….!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕಲಿಯುಗ ದೈವ ಕಾಮದೇನು ಜೀವಂತ ದೈವ ಎಂದೆಲ್ಲಾ ಕರೆಸಿಕೊಳ್ಳುವ, ಶ್ರೀ ರಾಘವೇಂದ್ರ ಸ್ವಾಮಿಯನ್ನು ನೆನೆಯುವುದಕ್ಕಾಗಿ, ಶ್ರೀ ರಾಘವೇಂದ್ರ ಸ್ವಾಮಿಯನ್ನು ಸ್ಮರಣೆ ಮಾಡುವುದಕ್ಕಾಗಿ ಅನೇಕ ಮಂತ್ರಗಳು ಇವೆ,ಆದರೆ ಗುರುರಾಘವೇಂದ್ರ ದೇವನನ್ನು ಒಲಿಸಿಕೊಳ್ಳಬೇಕೆಂದರೆ ಶ್ರೀ ಗುರು ರಾಘವೇಂದ್ರರ ಆಶೀರ್ವಾದವನ್ನು ಪಡೆದುಕೊಳ್ಳಬೇಕಾದರೆ ಒಂದು ವ್ರತವನ್ನು ಕೈಗೊಳ್ಳಬೇಕು, ಈ ವ್ರತವನ್ನು ಕೈಗೊಳ್ಳುವುದು ಹೇಗೆ ಯಾವ ದಿನ ಈ ವ್ರತವನ್ನು ಕೈಗೊಳ್ಳುವುದರಿಂದ ಶ್ರೇಷ್ಠ ಮತ್ತು ಗುರು ರಾಘವೇಂದ್ರರ ಕೃಪಾಕಟಾಕ್ಷ ಪಡೆಯಬೇಕಾದರೆ ಯಾವ ಗಾಯತ್ರಿ ಮಂತ್ರವನ್ನು ಪಠಿಸಬೇಕು,

ಎಷ್ಟು ಬಾರಿ ಪಠಿಸಿದರೆ ಶ್ರೇಷ್ಠ ಎಂಬುದರ ಮಾಹಿತಿಯನ್ನು ಇಂದಿನ ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ, ನೀವು ಕೂಡ ಗುರು ರಾಘವೇಂದ್ರರ ಭಕ್ತರಾಗಿದ್ದರೆ ಸಂಪೂರ್ಣ ಮಾಹಿತಿಯನ್ನು ತಿಳಿದು ರಾಘವೇಂದ್ರರ ಕೃಪೆಗೆ ಪಾತ್ರರಾಗಿ.ಗುರು ರಾಘವೇಂದ್ರರ ಮಹಿಮೆ ಪವಿತ್ರವಾದದ್ದು ಅಪಾರವಾದದ್ದು ಮಹಾಮಹಿಮ ಶ್ರೀ ಗುರು ರಾಘವೇಂದ್ರರ ವ್ರತವನ್ನು ಕೈಗೊಳ್ಳಬೇಕಾದರೆ ಗುರುವಾರದ ದಿವಸದಂದು ಅಥವಾ ಶುಕ್ಲಪಕ್ಷ ಪುಷ್ಯ ನಕ್ಷತ್ರದಂದು,

ಈ ವ್ರತವನ್ನು ಕೈಗೊಳ್ಳುವುದರಿಂದ ಬಹಳ ಶ್ರೇಷ್ಠ ಎಂದು ಹೇಳಲಾಗಿದ್ದು, ಶ್ರೀ ಗುರು ರಾಘವೇಂದ್ರರ ವ್ರತವನ್ನು ಕೈಗೊಳ್ಳುವುದರಿಂದ ಮತ್ತು ಗುರುರಾಘವೇಂದ್ರರ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಸಕಲ ಸಂಕಷ್ಟಗಳು ನಿವಾರಣೆಗೊಂಡು ಗುರು ರಾಘವೇಂದ್ರರ ಮಹಿಮೆ ನಮ್ಮ ಮೇಲೆ ಆಗಲಿದೆ.ಕಲಿಯುಗದಲ್ಲಿ ಗುರು ರಾಘವೇಂದ್ರರ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಇದ್ದಾರೆ ಮತ್ತು ಗುರು ರಾಘವೇಂದ್ರರ ಪೂಜೆಯನ್ನು ಮಾಡುತ್ತಾ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಿದ್ದರು

ಮತ್ತು ಗುರುರಾಯರ ದರ್ಶನವನ್ನು ಪಡೆದು ಯಾವುದೇ ಕೆಲಸಗಳನ್ನು ಶುರು ಮಾಡಿದರೂ ಆ ಕೆಲಸಗಳು ಪರಿಪೂರ್ಣವಾಗಿ ಸಾಗುತ್ತದೆ ಎಂದು ನಂಬಲಾಗಿದೆ ಮತ್ತು ಶ್ರೀ ಗುರು ರಾಘವೇಂದ್ರರ ಗಾಯತ್ರಿ ಮಂತ್ರವನ್ನು ಒಂದು ಅಥವಾ ಮೂರು ಐದು ಅಥವಾ ಒಂಬತ್ತು ಇಪ್ಪತ್ತ್ ಒಂದು ಬಾರಿ ಅಥವಾ ಸಾವಿರದ ಎಂಟು ಬಾರಿ ಪಠನೆ ಮಾಡುತ್ತಾ ಬರುವುದರಿಂದ, ರಾಯರ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದು.

ಗುರುರಾಯರ ವ್ರತವನ್ನು ಶುರು ಮಾಡಿದ ನಂತರ ಪ್ರತಿ ದಿನ ರಾಯರ ಗಾಯತ್ರಿ ಮಂತ್ರವನ್ನು ಸಾವಿರದ ಎಂಟು ಬಾರಿ ಪಠಿಸುತ್ತಾ ಬರಬೇಕು ಈ ರೀತಿ ನಲವತ್ತೆಂಟು ದಿನಗಳವರೆಗೂ ರಾಯರ ವ್ರತವನ್ನು ಕೈಗೊಳ್ಳುವುದರಿಂದ,ನಿಮ್ಮ ವ್ರತ ಸಂಪೂರ್ಣವಾದ ನಂತರ ರಾಯರು ನಿಮ್ಮ ಕನಸಿನಲ್ಲಿ ಬಂದರೆ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಸಕಲ ಕಷ್ಟಗಳು ತೊಂದರೆಗಳು ಯಾವುದೇ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಎಂಬುದರ ಸೂಚನೆ ಇದಾಗಿರುತ್ತದೆ.

ರಾಘವೇಂದ್ರರ ಗಾಯತ್ರಿ ಮಂತ್ರವಾದ ಕೆಲವೊಂದು ಮಂತ್ರಗಳನ್ನು ಈ ಮಾಹಿತಿಯ ಮುಖಾಂತರ ತಿಳಿಸಿಕೊಡುತ್ತೇನೆ, ಇದನ್ನು ನೀವು ರಾಯರ ವ್ರತವನ್ನು ಮಾಡುವಾಗ ಗುರುವಾರದ ದಿವಸದಂದು ರಾಯರನ್ನು ನೆನೆಯುತ್ತಾ, ಈ ಮಂತ್ರವನ್ನು ಪಠಿಸುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಸಕಲ ಕಷ್ಟಗಳು ನಿವಾರಣೆಗೊಳ್ಳಲಿದೆ. ” ಓಂ ವೆಂಕಟನಾಥಾಯ ವಿದ್ಮಹೇ, ಸಚ್ಚಿದಾನಂದ ಧೀಮಹಿ, ತನ್ನೋ ರಾಘವೇಂದ್ರ ಪ್ರಚೋದಯಾತ್ ” “ಓಂ ವೆಂಕಟನಾಥಾಯ ವಿದ್ಮಹೇ, ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್””ಓಂ ಪ್ರಹ್ಲಾದಾಯ ವಿದ್ಮಹೇ ವ್ಯಾಸರಾಜಯಾ ಧೀಮಹೆ ತನ್ನೊ ರಾಘವೇಂದ್ರ ಪ್ರಚೋದಯಾತ್”

ಈ ಮಂತ್ರಗಳು ಗುರುರಾಯರ ಗಾಯತ್ರಿ ಮಂತ್ರಗಳು ಆಗಿರುತ್ತವೆ, ಇದನ್ನು ಸ್ವಚ್ಛಂದವಾಗಿ ಪರಿಪೂರ್ಣವಾಗಿ ಪ್ರತಿಯೊಂದು ಶಬ್ದಗಳನ್ನು ಕೂಡ ಸರಿಯಾಗಿ ಉಚ್ಛಾರಣೆ ಮಾಡುವ ಮುಖಾಂತರ, ಗುರು ರಾಯರನ್ನು ನೆನೆಯುತ್ತಾ ಈ ಮಂತ್ರಗಳನ್ನು ಸಾವಿರದ ಎಂಟು ಬಾರಿ ಪಠಿಸಬೇಕು,ಇದರಿಂದ ಜೀವನದಲ್ಲಿ ಎದುರಾಗುತ್ತ ಇರುವ ಸಕಲ ಕಷ್ಟಗಳು ರಾಯರ ಆಶೀರ್ವಾದದಿಂದಾಗಿ ಪರಿಹಾರಗೊಳ್ಳುತ್ತದೆ. ಒಂದು ಮಾತನ್ನು ನೆನಪಿನಲ್ಲಿ ಇಡಿ ರಾಯರ ವ್ರತವನ್ನು ಕೈಗೊಂಡಾಗ ಮಡಿಯಿಂದ ಸ್ವಚ್ಛವಾಗಿ ಇರುವುದು ಒಳ್ಳೆಯದು.

Leave a Reply

Your email address will not be published. Required fields are marked *