ಈ ಒಂದು ದೇವಸ್ಥಾನದಲ್ಲಿ ಪ್ರತೀ ಶುಕ್ರವಾರ ದೇವಿಯ ಸಂಚಾರವಿರುತ್ತದೆ ಹಾಗಾದ್ರೆ ಆ ದೇವಸ್ಥಾನ ಎಲ್ಲಿದೆ ಗೊತ್ತಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಭರತ ಖಂಡದಲ್ಲಿ ಹಲವು ಶಕ್ತಿ ದೇವತೆಗಳ ಪೀಠಗಳು ಇರುವುದನ್ನ ನಾವು ಹೆಚ್ಚಾಗಿ ಗಮನಿಸಬಹುದಾಗಿದೆ. ಇನ್ನು ಇವತ್ತಿನ ಮಾಹಿತಿಯಲ್ಲಿ ಶ್ರೀಮಂತಿಕೆಗೆ ಮತ್ತು ಐತಿಹಾಸಿಕವಾಗಿ ಪ್ರಸಿದ್ಧಗೊಂಡಿರುವ ನಮ್ಮ ರಾಜಧಾನಿ ಆಗಿರುವ ಬೆಂಗಳೂರಿನಲ್ಲಿ ಇರುವ ಪ್ರಭಾವಶಾಲಿ ಆದ ದೇವಾಲಯವೊಂದರ ಬಗ್ಗೆ ನಾವು ನಿಮಗೆ ಪರಿಚಯ ಮಾಡಿಕೊಡುತ್ತೇವೆ. ಈ ದೇವಾಲಯವು ಮಲ್ಲೇಶ್ವರಂ ಬಡಾವಣೆಯ 15ನೇ ಕ್ರಾಸ್ ನಲ್ಲಿ ಇದ್ದು ಈ ದೇವಾಲಯದ ಬಗ್ಗೆ ಒಂದಿಷ್ಟು ವಿಚಾರಗಳನ್ನು ನಾವು ಈ ಮಾಹಿತಿಯಲ್ಲಿ ಪಡೆದುಕೊಳ್ಳೋಣ. ನೀವು ಸಹ ಈ ಮಾಹಿತಿಯನ್ನು ತಿಳಿದು ಈ ಪ್ರಭಾವಶಾಲಿಯಾದ ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ, ಹಾಗೂ ಸಾಧ್ಯವಾದಲ್ಲಿ ನೀವು ಸಹ ರಾಜಧಾನಿಗೆ ಭೇಟಿ ನೀಡಿದಾಗ ತಾಯಿಯ ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿ.

ನೂರು ವರ್ಷಗಳ ಕಾಲ ಇತಿಹಾಸವನ್ನು ಹೊಂದಿರುವ ಗಂಗಮ್ಮ ದೇವಿಯು ಇಲ್ಲಿ ನೆಲೆಸಿದ್ದಾಳೆ. ಹೌದು ಈ ದೇವಾಲಯದ ಪವಾಡಗಳ ಬಗ್ಗೆ ಹೇಳಬೇಕೆಂದರೆ ಒಮ್ಮೆ ಒಬ್ಬ ಮಾತು ಬಾರದ ಹುಡುಗ ಗಂಗಮ್ಮದೇವಿ ದೇವಾಲಯಕ್ಕೆ ಎಂಟು ವಾರಗಳ ಕಾಲ ತಪ್ಪದೆ ಬಂದು ತಾಯಿಗೆ ಪೂಜೆಯನ್ನು ಸಲ್ಲಿಸಿ ಹೋಗುತ್ತಿದ್ದನಂತೆ. ಪವಾಡ ಸದೃಶ್ಯದಂತೆ ಆತನಿಗೆ ಮಾತು ಬಂದಿರುವುದು ಇಲ್ಲಿ ನಡೆದ ಅಚ್ಚರಿ ಪಡುವಂತಹ ವಿಚಾರವೂ ಆಗಿದೆ. ಅಷ್ಟೇ ಅಲ್ಲ ದೇವಾಲಯದಲ್ಲಿ ಮತ್ತೊಂದು ಪವಾಡವು ಕೂಡ ಇಂದಿಗೂ ಜರುಗುತ್ತಲೇ ಅದೇನೆಂದರೆ ಶುಕ್ರವಾರದ ರಾತ್ರಿ ಸಮಯದಲ್ಲಿ ಗಂಗಮ್ಮ ತಾಯಿಯ ಗರ್ಭಗುಡಿ ಒಳಗಿನಿಂದ ಗೆಜ್ಜೆ ಶಬ್ದವನ್ನು ಇಲ್ಲಿಗೆ ಬಂದಿರುವ ಭಕ್ತಾದಿಗಳು ಕೇಳಿಸಿಕೊಂಡಿದ್ದಾರೆ.

ಇದನ್ನು ಪರೀಕ್ಷಿಸಬೇಕೆಂದು ದೇವಸ್ಥಾನದ ಟ್ರಸ್ಟಿ ಒಬ್ಬರು ಗರ್ಭಗುಡಿಯೊಳಗೆ ಬಾಳೆದೆಲೆಯನ್ನು ಹಾಕಿ ಅದರ ಮೇಲೆ ಅರಿಶಿನ ಮತ್ತು ಕುಂಕುಮವನ್ನು ಹಾಕಿ ರಾತ್ರಿ ಹಾಗೆ ಬಿಟ್ಟಿದ್ದಾರಂತೆ ಮತ್ತು ಮಾರನೇ ದಿವಸ ಹೋಗಿ ಗಮನಿಸಿದಾಗ ಎಲೆಯ ಮೇಲೆ ಹೆಜ್ಜೆ ಗುರುತು ಮೂಡಿರುವುದನ್ನು ಇಲ್ಲಿ ಬಂದಿರುವ ಭಕ್ತಾದಿಗಳು ಅನುಭವ ಪಡೆದುಕೊಂಡಿದ್ದಾರೆ. ಈ ರೀತಿ ಗಂಗಮ್ಮ ತಾಯಿಯು ಇಲ್ಲಿ ನಡೆಸಿದ್ದಾಳೆ ಎಂದು, ಭಕ್ತಾದಿಗಳು ತಪ್ಪದೆ ಮಂಗಳವಾರ ಮತ್ತು ಶುಕ್ರವಾರ ದಿವಸದಂದು ಹಾಗೂ ನವರಾತ್ರಿಯ ಸಮಯದಲ್ಲಿ ಜನ ಜಾತ್ರೆಯೆ ಬರುತ್ತದೆ.

ಅಷ್ಟೇ ಅಲ್ಲ ಹೆಣ್ಣುಮಕ್ಕಳ ಜಾತಕದಲ್ಲಿ ಯಾವುದೇ ದೋಷಗಳಿಂದ ಮದುವೆ ವಿಳಂಬ ಆಗುತ್ತಿದ್ದರೆ ಅಂತಹವರು ಬಂದು ನಮಸ್ಕಾರ ಮಾಡುತ್ತಾರೆ ಇದರಿಂದ ಜಾತಕದಲ್ಲಿ ಯಾವುದೇ ದೋಷಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಸಹ ಇಲ್ಲಿ ಇದೆ. ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆಯು ಕೂಡ ನಡೆಯುತ್ತದೆ ಮೂರು ದಿವಸಗಳ ಕಾಲ ನಡೆಯುವ ಈ ಉತ್ಸವದಲ್ಲಿ ಜನಜಾತ್ರೆಯೆ ಇಲ್ಲಿ ನೆರೆದಿರುತ್ತದೆ. ತಾಯಿಯ ದೇವಾಲಯದ ಆವರಣದಲ್ಲಿ ಸುಬ್ರಹ್ಮಣ್ಯ ದುರ್ಗಾಮಾತೆ ಹಾಗೂ ಗಣಪತಿಯ ವಿಗ್ರಹವು ಕೂಡ ಇವೆ.

1928 ರಿಂದಲೂ ಸಹ ಗಂಗಾಮಾತೆ ಇಲ್ಲಿ ನೆಲೆಸಿದ್ದಾಳೆ ಇನ್ನು 2004ರಲ್ಲಿ ಈ ದೇವಾಲಯವನ್ನು ಮತ್ತೆ ಹೊಸದಾಗಿ ಕಟ್ಟಲಾಗಿದೆ. ಮಲ್ಲೇಶ್ವರಂನ 15ನೇ ಕ್ರಾಸ್ ನಲ್ಲಿ ಇರುವ ಗಂಗಮ್ಮದೇವಿ ದೇವಾಲಯದ ಬಳಿ ಇನ್ನಷ್ಟು ಪ್ರಮುಖ ದೇವಾಲಯಗಳು ಕೂಡ ಇವೆ, ಅವುಗಳೆಂದರೆ ಕಾಡುಮಲ್ಲೇಶ್ವರ ದೇವಾಲಯ ಸಾಯಿಬಾಬಾ ದೇವಾಲಯ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ. ನೀವು ಸಹ ಗಂಗಮ್ಮದೇವಿ ದೇವಾಲಯಕ್ಕೆ ಭೇಟಿ ನೀಡಿದಾಗ ಈ ದೇವಾಲಯಗಳಿಗೆ ಬರಬಹುದು. ಇವತ್ತಿನ ಮಾಹಿತಿ ಇದಿಷ್ಟು ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

Leave a Reply

Your email address will not be published. Required fields are marked *