ಪಾರ್ವತಿ ದೇವಿಯ ಸ್ವರೂಪವಾಗಿ ಇರುವ ಈ ತಾಯಿ ಹಾಸನದ ನಿಟ್ಟೂರೆ ನಲ್ಲಿ ನೆಲೆಸಿದ್ದಾಳೆ ಹಾಗಾದರೆ ಈ ಪುರದಮ್ಮ ತಾಯಿಯ ಬಗೆಗಿನ ವಿಶೇಷ ಮಾಹಿತಿಯನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ನೀವು ಕೂಡ ಈ ಶಕ್ತಿಶಾಲಿ ದೇವಿಯ ಬಗೆಗಿನ ಒಂದಿಷ್ಟು ವಿಚಾರವನ್ನ ತಿಳಿಯುವುದಕ್ಕಾಗಿ ಹಿಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಎಂದಾದರೂ ಹಾಸನಕ್ಕೆ ಭೇಟಿ ನೀಡಿದರೆ ಹಾಸನ ದಿಂದ ಕೇವಲ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಇರುವಂತಹ ಈ ಪುರದಮ್ಮ ದೇವಿ ಕ್ಷೇತ್ರಕ್ಕೆ ಭೇಟಿ ನೀಡಿ ಬನ್ನಿ ನಿಮ್ಮ ಇಷ್ಟಾರ್ಥಗಳನ್ನು ತಾಯಿ ಬೇಗ ನೆರವೇರಿಸುತ್ತಾಳೆ.
ಇಲ್ಲಿಗೆ ಬರುವ ಭಕ್ತಾದಿಗಳು ಅನಾರೋಗ್ಯ ಸಮಸ್ಯೆ ಆರ್ಥಿಕ ಸಮಸ್ಯೆಗಳು ಅಥವಾ ಮಾಟ ಮಂತ್ರದ ಬಾಧೆ ಇರುವವರು ತಮ್ಮ ಸಂಕಷ್ಟಗಳನ್ನು ತಾಯಿಯ ಎದುರು ಹೇಳಿಕೊಂಡು ತಾಯಿಗೆ ಪೂಜೆಯನ್ನು ಸಲ್ಲಿಸಿ ತಾಯಿಯ ದರುಶನವನ್ನು ಪಡೆದುಕೊಂಡು ಹರಕೆ ಮಾಡಿಕೊಂಡು ಬರುತ್ತಾರೆ. ಇನ್ನೂ ಆ ಹರಕೆ ತೀರಿದ ನಂತರ ಮಂದಿ ಹರಕೆ ತೀರಿಸಲು ತಾಯಿಯ ಸನ್ನಿಧಿಗೆ ಬಂದು ಇಲ್ಲಿ ಮಾಂಸದ ಅಡುಗೆಯನ್ನು ಮಾಡಿ ತಮ್ಮ ಬಂಧು ಮಿತ್ರರಿಗೆ ಮತ್ತು ಬಂದ ಭಕ್ತಾದಿಗಳಿಗೆ ಇಲ್ಲಿ ಊಟವನ್ನು ಸಹ ಹಾಕುತ್ತಾರೆ. ಈ ಪದ್ದತಿಯು ಸಕಷ್ಟು ವರುಷಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ.
ಶ್ರೀ ಪುರದಮ್ಮ ತಾಯಿಯು ಪಾರ್ವತಿ ದೇವಿಯ ಸ್ವರೂಪ ಸ್ವರೂಪಳಾಗಿದ್ದಾಳೆ ಈಕೆ ಮಹಿಮೆ ಅಗಾಧವಾದದ್ದು ಮತ್ತು ಪ್ರತಿದಿನ ಸಾವಿರಾರು ಭಕ್ತಾದಿಗಳು ಪುರದಮ್ಮ ಕ್ಷೇತ್ರಕ್ಕೆ ಬಂದು ತಾಯಿಯ ದರ್ಶನ ಪಡೆದುಕೊಂಡು ಹೋಗುತ್ತಾರೆ ಈ ದೇವಾಲಯದ ಮತ್ತೊಂದು ವಿಶೇಷ ಅಂದರೆ ಇಲ್ಲಿ ತಾಯಿಗೆ ಪೂಜೆ ಸಲ್ಲಿಸಲು ಯಾವುದೇ ಅರ್ಚಕರು ಇರೋದಿಲ್ಲ ಭಕ್ತಾದಿಗಳು ಸ್ವತಃ ತಾವೇ ತಾಯಿಯ ಪೂಜೆಯನ್ನು ಮಾಡಬಹುದು. ಇನ್ನೂ ತಾಯಿಯ ಅಲಂಕಾರಕ್ಕಾಗಿ ಇಲ್ಲಿ ಯಾವುದೇ ಒಡವೆಗಳು ಇರುವುದಿಲ್ಲ ಮತ್ತು ಹೂಮಾಲೆಗಳನ್ನು ಸಹ ಹೆಚ್ಚಿನ ಸಮಯ ತಾಯಿಯ ಮೇಲೆ ಹಾಕಿರುವುದಿಲ್ಲ. ತಾಯಿ ಎಷ್ಟು ಸರಳವೋ ಅಷ್ಟೇ ಶಕ್ತಿಶಾಲಿ ಕೂಡ.
ಪುರದಮ್ಮ ದೇವಿ ದೇವಾಲಯಕ್ಕೆ ಯಾವ ಸಮಯದಲ್ಲಿ ಬೇಕಾದರೂ ಹೋಗಬಹುದು ಇಲ್ಲಿಯ ಭಕ್ತಾದಿಗಳು ತಾಯಿಗೆ ಮಧ್ಯರಾತ್ರಿಯಲ್ಲಿಯೂ ಕೂಡ ಪೂಜೆ ಸಲ್ಲಿಸುವುದುಂಟು. ಇನ್ನೂ ಅಮವಾಸ್ಯೆಯ ದಿವಸ ದಂದು ಈ ಕ್ಷೇತ್ರಕ್ಕೆ ಜನಜಾತ್ರೆಯೇ ಬರುತ್ತಾರೆ ಮತ್ತು ಅಮವಾಸ್ಯೆಯ ದಿವಸದಂದು ಪುರದಮ್ಮ ದೇವಿಯ ಶಕ್ತಿ ಇನ್ನೂ ಹೆಚ್ಚು ಇರುತ್ತದೆ ಎಂದು ಜನರು ನಂಬಿದ್ದು ತಮಗೆ ಯಾವುದೇ ಸಮಸ್ಯೆಗಳಿರಲಿ ಇಲ್ಲಿಗೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ಹರಕೆ ಮಾಡಿಕೊಂಡು ಭಕ್ತಾದಿಗಳು ಹೋಗುತ್ತಾರೆ.
ಈ ರೀತಿ ಪುರದಮ್ಮ ತಾಯಿಯೂ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ ಹಾಸನ ಜಿಲ್ಲೆಯ ಸುತ್ತಮುತ್ತ ಜಿಲ್ಲೆಗಳಲ್ಲಿಯೂ ಕೂಡ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ ಹಾಗೂ ಅನೇಕ ಜಿಲ್ಲೆಗಳಿಂದ ಜನರು ತಮ್ಮ ಬೇಡಿಕೆಗಳನ್ನು ತಾಯಿಯ ಬಳಿ ಕೇಳಿಕೊಳ್ಳಲು ಬರುತ್ತಾರೆ ಮತ್ತು ಹರಕೆ ಅನ್ನು ಕೂಡ ಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕಾಗಿ ಪುರದಮ್ಮ ತಾಯಿಯ ಬಳಿ ಕೇಳಿ ಹೋಗುತ್ತಾರೆ ಮತ್ತು ಮಾತಿನಂತೆ ಹರಕೆ ತೀರಿಸುವುದಕ್ಕಾಗಿ ಭಕ್ತಾದಿಗಳು ತಪ್ಪದೆ ತಾಯಿಯ ಸನ್ನಿಧಿಗೆ ಬಂದು ತಮ್ಮ ಹರಕೆಯನ್ನು ತೀರಿಸುತ್ತಾರೆ.
ಪುರದಮ್ಮ ದೇವಿ ಸನ್ನಿಧಿಯಲ್ಲಿ ಮತ್ತೊಂದು ವಿಶೇಷವಿದೆ ಅದೇನೆಂದರೆ ಇಲ್ಲಿರುವ ತಾಳೆಮರ ವಿಶೇಷ ಶಕ್ತಿಯನ್ನು ಹೊಂದಿದೆ ಮತ್ತು ಜನರು ತಮ್ಮ ಕಷ್ಟಗಳನ್ನು ಇಷ್ಟಾರ್ಥಗಳನ್ನು ಚೀಟಿಯಲ್ಲಿ ಬರೆದು ಈ ತಾಳೆ ಮರಕ್ಕೆ ಕಟ್ಟುತ್ತಾರೆ ಮತ್ತು ಹಸಿರು ಬಳೆಗಳನ್ನು ಸಹ ಈ ತಾಳೆಮರಕ್ಕೆ ಕಟ್ಟುವ ಪದ್ದತಿ ಅನ್ನು ಕೂಡ ಇಲ್ಲಿ ಪಾಲಿಸಿಕೊಂಡು ಬರಲಾಗಿದೆ.