ಈ ಒಂದು ಗಿಡ ಬಹಳಷ್ಟು ರೋಗಗಗಳಿಗೆ ರಾಮಬಾಣ ಹಾಗೂ ಇದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು …ನಿಮ್ಮ ಮನೆಯ ಹಿತ್ತಲಲ್ಲೇ ಇದೆ ಸರ್ವರೋಗ ಸಂಜೀವಿನಿ ಗಿಡ …!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕೆಂದರೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ಗಿಡಗಳಿಂದ ನಾವು ಆರೋಗ್ಯವಂತರಾಗಿ ಇರಬಹುದು ಆದರೆ ಅದನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವ ಮಾಹಿತಿ ನಮಗಿರಬೇಕು.ಈ ಮಾಹಿತಿ ನಮಗಿದ್ದರೆ ನಾವು ಎಂತಹ ಖಾಯಿಲೆಗಳಿಂದಲೂ ಕೂಡ ನಾವು ದೂರವಿರಬಹುದು.ಹೌದು ಸ್ನೇಹಿತರೆ ನಮ್ಮ ಮನೆ ಹಿತ್ತಲಲ್ಲಿ ಹಲವಾರು ಆಯುರ್ವೇದಿಕ್ ಅನ್ನು ಸಸ್ಯಗಳು ಇರುತ್ತವೆ.

ಆದರೆ ನಮಗೆ ಅವುಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ ಇಂದು ನಾವು ಹೇಳುತ್ತಿರುವ ಈ ಗಿಡದ ಬಗ್ಗೆ ನಿಮಗೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುತ್ತದೆ ಆದರೆ ಅದರ ಉಪಯೋಗ ನಿಮಗೆ ತಿಳಿದಿರುವುದಿಲ್ಲ .ಇದನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಹಾಗೆ ಇದು ಯಾವ ಖಾಯಿಲೆಯನ್ನು ತಡೆಗಟ್ಟುತ್ತದೆ ಇದು ಯಾವ ರೀತಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎನ್ನುವ ಮಾಹಿತಿಯನ್ನು ಇಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ ಸ್ನೇಹಿತರೆ.ನಾವು ಹೇಳುವ ಆಯುರ್ವೇದಿಕ್ ಸಸ್ಯ ಯಾವುದೆಂದರೆ ಅದು ಬೇರೆ ಯಾವುದೂ ಎಲ್ಲಾ ನೆಲ ನಲ್ಲಿ ಗ , ಭೂ ಆಮ್ಲ ನೆಲ ಅಂಬಲಿಕೆ ಹೀಗೆ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ಆದರೆ ಈ ಒಂದು ಸಸ್ಯದಲ್ಲಿ ಹಲವಾರು ರೋಗಗಳನ್ನು ವಾಸಿ ಮಾಡುವಂತಹ ಗುಣಗಳಿವೆ.ಈ ಗಿಡವು ಹಲವಾರು ರೋಗಗಳನ್ನು ವಾಸಿ ಮಾಡುವುದಲ್ಲದೆ ನಮಗೆ ಯಾವುದೇ ವೈರಸ್ ಕೂಡ ನಮ್ಮ ದೇಹಕ್ಕೆ ತಗುಲದ ಹಾಗೆ ನಮ್ಮ ದೇಹವನ್ನು ನೋಡಿಕೊಳ್ಳುವ ಶಕ್ತಿಯನ್ನು ಕೂಡ ಹೊಂದಿದೆ. ಹಾಗಾದರೆ ನೆಲ ನಲ್ಲಿಯ ಉಪಯೋಗಗಳನ್ನು ತಿಳಿಯೋಣ ಬನ್ನಿ.ಸಾಮಾನ್ಯವಾಗಿ ಗಿಡವು ತುಂಬಾನೇ ಚಿಕ್ಕದಾಗಿದ್ದು ಇದರ ಕಾಂಡವು ಕೆಂಪು ಮಿಶ್ರಿತ ಹಸಿರು ಬಣ್ಣದಲ್ಲಿ ಕೂಡಿರುತ್ತದೆ ಹಾಗೂ ಇದರ ಎಲೆಗಳು ಚಿಕ್ಕದಾಗಿದ್ದು ಚೊಕ್ಕವಾಗಿ ಜೋಡಣೆಯಾಗಿರುತ್ತವೆ.ಹೌದು ಸ್ನೇಹಿತರೆ ಈ ನೆಲ ನಲ್ಲಿಯಲ್ಲಿ ಹಲವಾರು ಉಪಯೋಗಗಳಿವೆ.ಈಗ ಗಿಡಗಳು ಸಾಮಾನ್ಯವಾಗಿ ಹಿತ್ತಲಲ್ಲಿ ತೋಟಗಳಲ್ಲಿ ಕಂಡುಬರುತ್ತವೆ ಆದರೆ ಈ ಗಿಡಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಕಂಡುಬರುವಂತಹ ಸಸ್ಯಗಳಾಗಿವೆ.

ಒಂದು ಗ್ಲಾಸ್ ನೀರಿನಲ್ಲಿ ಎಲೆಗಳನ್ನು ಚೆನ್ನಾಗಿ ಅರ್ಧ ಗ್ಲಾಸ್ ನೀರು ಬರುವಹಾಗೆ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.ಈ ಗಿಡದಲ್ಲಿ ಅದ್ಭುತವಾದಂತಹ ಶಕ್ತಿ ಎನ್ನುವುದು ಇದೆ ಅದೇನೆಂದರೆ ಅತಿಸಾರ ಬೇದಿ, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಈ ಗಿಡದ ಎಲೆ, ಕಾಂಡ ಬೇರು ಗಳನ್ನು ಮಾಡಿ ಕುಡಿದರೆ ಈ ರೀತಿಯ ಸಮಸ್ಯೆಗಳಿಂದ ಹೊರ ಬರಬಹುದು ಎಂದು ಆಯುರ್ವೇದ ತಜ್ಞರು ಹೇಳಿದ್ದಾರೆ.ಕಷಾಯ ಸ್ವಲ್ಪ ರುಚಿ ಆಗಿರಬೇಕು ಎಂದು ಬಯಸುವವರು ಈ ಕಷಾಯಕ್ಕೆ ಚಿಟಿಕೆ ಇಂಗನ್ನು ತುಪ್ಪದಲ್ಲಿ ಹುರಿದು ಇದಕ್ಕೆ ಬೆರೆಸಿ ಕುಡಿದರೆ ತುಂಬಾನೇ ರುಚಿಯಾಗಿರುತ್ತದೆ ಕಷಾಯ.

ಕಷಾಯ ಬೇಡ ಎನ್ನುವವರು ಈ ಗಿಡದ ರಸವನ್ನು ಪ್ರತಿ 4 ಗಂಟೆಗೊಮ್ಮೆ ಕುಡಿಯುತ್ತಾ ಬಂದರೆ ಉದರ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ.ಮತ್ತು ನೆಲನಲ್ಲಿ ರಸವನ್ನು ಹಾಲು ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ 15 ದಿನಗಳಲ್ಲಿ ಕಾಮಲೆ ರೋಗವನ್ನು ಕೂಡ ವಾಸಿ ಮಾಡಿಕೊಳ್ಳಬಹುದು.ಹಾಗೆಯೇ ಬೇರುಸಹಿತ ನೆಲೆ ನೆಲನಲ್ಲಿ ಗಿಡವನ್ನು ತಂದು ಚೆನ್ನಾಗಿ ಕುದಿಸಿ ಅದಕ್ಕೆ ಜೀರಿಗೆ ಮತ್ತು ಜೇನುತುಪ್ಪವನ್ನು ಬೆರೆಸಿ ತಿಂದರೆ ಕಾಮಾಲೆ ಹಾಗೂ ಲಿವರ ತಡೆಗಟ್ಟಬಹುದು .ಮತ್ತು ಚರ್ಮರೋಗದಿಂದ ಬಳಲುತ್ತಿರುವವರು ಈ ಎಲೆಯ ಜೊತೆಗೆ ಉಪ್ಪನ್ನು ಬೆರೆಸಿ ಚೆನ್ನಾಗಿ ಅರೆದು ಲೇಪಿಸಿಕೊಂಡರೆ ಚರ್ಮಕಾಯಿಲೆಗಳಿಂದ ಕೂಡ ಹೊರಬರಬಹುದು. ಅದರಲ್ಲಿಯೂ ಹೆಣ್ಣುಮಕ್ಕಳ ಸಮಸ್ಯೆಗೆ ನೆಲೆ ನಲ್ಲಿಯೂ ಹೇಳಿಮಾಡಿಸಿದಂತಹ ದಿವ್ಯೌಷಧ.

ಹೀಗೆ ಹಲವಾರು ಕಾಯಿಲೆಗಳಿಗೆ ಈ ಒಂದು ನೆಲೆಯಲ್ಲಿ ಗಿಡವು ರಾಮಬಾಣವಾಗಿದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *