Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಈ ಒಂದು ಒಂದು ಎಲೆ ಸಾಕು ಹತ್ತು ನಿಮಿಷದಲ್ಲಿ ಮಂಡಿ ನೋವು, ಕೈ ಸೊಂಟ ಕಡಿಮೆ ಮಾಡೋಕೆ ಹಾಗಾದ್ರೆ ಆ ಎಲೆ ಯಾವುದು ಗೊತ್ತಾ !!!

ಇತ್ತೀಚಿನ ದಿನಗಳಲ್ಲಂತೂ ಎಲ್ಲರಲ್ಲೂ ಕೂಡ ಕೆಲವೊಂದು ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೇ ಸಮಸ್ಯೆಗಳು ಸರ್ವೇಸಾಮಾನ್ಯವಾಗಿದೆ. ಆದರೆ ಈ ಸಮಸ್ಯೆಗಳು ಯಾವುವು ಎಂದು ಗುರುತಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ

ಅವು ಏನೆಂದರೆ ಮಂಡಿನೋವು ಇದು ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆ ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಎಷ್ಟೊಂದು ಜನರು ಮಂಡಿನೋವಿನಿಂದ ಪ್ರತಿನಿತ್ಯ ಮಾಡುವಂಥ ಕೆಲಸಗಳನ್ನು ಕೂಡ ಮಾಡುವುದನ್ನ ಬಿಟ್ಟಿರುತ್ತಾರೆ

ಅದರ ಜೊತೆಯಲ್ಲಿ ನಡೆಯಲು ಕೂಡ ಕಷ್ಟ ಆಗುವ ರೀತಿಯಲ್ಲಿ ಕೆಲವೊಬ್ಬರಿಗೆ ಮಂಡಿ ನೋವು ಇರುತ್ತದೆ ಆದರೆ ಯಾವ ರೀತಿಯಾಗಿ ಮಂಡಿ ನೋವನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ.

ಎಷ್ಟೊಂದು ಜನರು ಕ್ರೀಮ್ ಗಳನ್ನು ಬಳಸುತ್ತಾರೆ ಲೋಷನ್ ಗಳನ್ನು ಬಳಸುತ್ತಾರೆ ಮತ್ತು ನೋವು ತೀರಾ ಹೆಚ್ಚಾದರೆ ಆಪರೇಷನ್ ಮಾಡಿಸುವಂತಹ ಸಂದರ್ಭಗಳು ಹಲವರಿಗೆ ಎದುರಾಗಿದೆ ಆದರೆ ಈ ದಿನ ನಾವು ನಿಮಗೆ ಈ ಮಂಡಿ ನೋವನ್ನು ನಿವಾರಣೆ ಮಾಡಿಕೊಳ್ಳಲು ಒಂದು ಸುಲಭವಾದಂತ ಮನೆಮದ್ದನ್ನು ತಿಳಿಸಿಕೊಡುತ್ತೇವೆ

ಇದು ಅತ್ಯಂತ ಸುಲಭವಾದಂಥ ಮನೆಮದ್ದಾಗಿದೆ ನಿಮ್ಮ ಸುತ್ತಮುತ್ತ ಇರುವಂಥ ವಸ್ತುಗಳನ್ನು ತೆಗೆದುಕೊಂಡು ಈ ಮನೆ ಮದ್ದನ್ನು ತಯಾರಿಸಬಹುದು ಹೆಚ್ಚಿನ ಸಮಯದ ಅವಶ್ಯಕತೆ ಇಲ್ಲ ಹೆಚ್ಚಿನ ಹಣದ ಅವಶ್ಯಕತೆಯೂ ಇರುವುದಿಲ್ಲ ಸಾದ್ಯವಾದರೆ ಒಮ್ಮೆ ಪ್ರಯತ್ನಪಟ್ಟು ನೋಡಿ ಖಂಡಿತವಾಗಿಯೂ ಅದರ ಫಲಿತಾಂಶ ನಿಮಗೆ ದೊರೆಯುತ್ತದೆ.

ಈ ಮನೆಮದ್ದನ್ನು ಮಾಡಲು ಬೇಕಾಗುವ ಸಾಮಗ್ರಿಗಳೆಂದರೆ ಒಂದು ಚಮಚ ಅಡಿಗೆ ಅರಿಶಿಣ ಒಂದು ಅಲೋವೇರಾ ನಿಮ್ಮ ಮನೆಯಲ್ಲಿಯೇ ನೈಸರ್ಗಿಕವಾಗಿ ಬೆಳೆದಂಥ ಅಲೋವೆರಾ ಇದ್ದರೆ ಆಗುತ್ತದೆ ಆ ಅಲೋವೆರಾ ಇಲ್ಲ ಎಂದರೆ ಅಂಗಡಿಯಲ್ಲಿ ಜೆಲ್ ಸಿಗುತ್ತದೆಯಲ್ಲ

ಅದನ್ನು ಬೇಕಾದರೂ ತಂದು ಬಳಸಬಹುದು ಮತ್ತೊಂದು ಸಾಮಗ್ರಿಯೆಂದರೆ ಎಳ್ಳೆಣ್ಣೆ ಈ ಎಳ್ಳೆಣ್ಣೆ ನಿಮಗೆ ಲಭ್ಯವಿಲ್ಲದಿದ್ದರೆ ಸಾಸಿವೆ ಎಣ್ಣೆಯನ್ನು ಬೇಕಾದರೂ ಬಳಸಬಹುದು ಮತ್ತೊಂದು ವಿಶೇಷವಾದ ಸಾಮಗ್ರಿಯೆಂದರೆ ಎಕ್ಕದ ಗಿಡದ ಎಲೆ ಈ ಎಕ್ಕದಲ್ಲಿ ಎರಡು ರೀತಿಯಾದಂಥ ಎಕ್ಕ ಇದೆ.

ಕೆಂಪು ಎಕ್ಕ ಇನ್ನೊಂದು ಬಿಳಿ ಎಕ್ಕ ಬಿಳಿ ಎಕ್ಕವು ಶ್ರೇಷ್ಠವಾದುದು ಆದ್ದರಿಂದ ಬಿಳಿ ಎಕ್ಕದ ಎಲೆಗಳನ್ನು ತೆಗೆದುಕೊಳ್ಳಿ ಎರಡು ಎಲೆಗಳನ್ನು ತೆಗೆದು ಕೊಂಡರೆ ಸಾಕು. ಈ ಮನೆಮದ್ದನ್ನು ಮಾಡುವ ವಿಧಾನದ ಕಡೆ ಗಮನ ಹರಿಸೋಣ ಮೊದಲು ನೀವು ಅಲೋವೆರಾವನ್ನು ತೆಗೆದುಕೊಳ್ಳಿ ಅಲೋವೆರಾದ ಜೆಲ್ ಅನ್ನು ಬೇರ್ಪಡಿಸಿ ಒಂದು ಬಟ್ಟಲಿಗೆ ಹಾಕಿಕೊಳ್ಳಿ

ಅದೇ ಬಟ್ಟಲಿಗೆ ಒಂದು ಚಮಚ ಅರಿಶಿನ ಮತ್ತು ಒಂದು ಚಮಚ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಶ್ರ ಮಾಡಿ. ಯಾವ ಮಟ್ಟಿಗೆ ಇದನ್ನ ಮಿಶ್ರ ಮಾಡಬೇಕು ಎಂದರೆ, ಇದು ಪೇಸ್ಟ್ ರೀತಿಯಲ್ಲಿ ಆಗಬೇಕು ಅಲ್ಲಿಯವರೆಗೂ ಕೂಡ ಇದನ್ನು ಚೆನ್ನಾಗಿ ಮಿಶ್ರ ಮಾಡಿ ಅದಾದ ನಂತರ ಎರಡು ಎಕ್ಕದ ಗಿಡದ ಎಲೆಗಳನ್ನು ತೆಗೆದುಕೊಳ್ಳಿ

ಒಂದು ತವವನ್ನು ಒಲೆಯ ಮೇಲಿಟ್ಟು ತವಾ ಕಾದಮೇಲೆ ಎಕ್ಕದ ಗಿಡದ ಎಲೆಗಳನ್ನು ತವಾ ಮೇಲೆ ಇಟ್ಟು ಚೆನ್ನಾಗಿ ಬಿಸಿಮಾಡಿ ಅದರ ಬಣ್ಣ ಅಂದರೆ ಎಲೆಯ ಹಸಿರು ಬಣ್ಣ ಸ್ವಲ್ಪ ಕಂದುವವರೆಗೂ ಬಿಸಿ ಮಾಡಬೇಕು. ಅದಾದ ನಂತರ ನೀವು ತಯಾರಿಸಿಟ್ಟುಕೊಂಡ ಜೆಲ್ ಅನ್ನು ನಿಮಗೆ ಯಾವ ಮಂಡಿಯಲ್ಲಿ ನೋವಿದೆ ಆ ಮಂಡಿಯ ಮೇಲೆ ಹಚ್ಚಿ

ಅದರ ಮೇಲೆ ಸ್ವಲ್ಪ ಬಿಸಿ ಇರುವ ಎಲೆಯನ್ನ ಇಡಬೇಕು ಅದಕ್ಕೆ ಸ್ವಲ್ಪ ಬಿಗಿಯಾಗಿ ಕಟ್ಟಬೇಕು ಇದನ್ನು ನಿಯಮಿತವಾಗಿ ವಾರದಲ್ಲಿ ಒಮ್ಮೆ ಮಾಡಿ ಖಂಡಿತವಾಗಿಯೂ ನಿಮ್ಮ ಮಂಡಿ ನೋವು ನಿವಾರಣೆಯಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ ನಿಮಗೆ ಪರಿಣಾಮ ತಿಳಿದನಂತರ ಬೇರೆಯವರಿಗೂ ಕೂಡ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ