Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಒಂದು ಊರಿನಲ್ಲಿ ರಾಯಲ್ ಎನ್ ಫೀಲ್ಡ್ ಬೈಕೇ ದೇವರು ಅಂತೆ,,, ಇದರ ಹಿಂದಿನ ರಹಸ್ಯ ಏನು, ಈ ದೇವಸ್ಥಾನ ಎಲ್ಲಿದೆ ಗೊತ್ತಾ??

ನಮ್ಮ ಭಾರತ ದೇಶದಲ್ಲಿ ಅನೇಕ ದೇವಾಲಯಗಳಿವೆಕ್ಷ ಪ್ರತಿಯೊಂದು ದೇವಾಲಯಗಳಿಗೂ ಕೂಡ ಅದರದ್ದೇ ಆದ ವೈಶಿಷ್ಟ್ಯತೆ ಕೂಡ ಇದೆ, ಇಂತಹ ದೇವಾಲಯಗಳ ನಡುವೆ ಒಂದು ದೇವಾಲಯದ ಬಗ್ಗೆ ನೀವು ತಿಳಿದರೆ ಅಚ್ಚರಿ ಪಡುತ್ತೀರಿ .

ಆ ಒಂದು ದೇವಾಲಯವೂ ಇರುವುದು ಎಲ್ಲಿ ಅಂದರೆ ರಾಜಸ್ಥಾನದ ಜೋಧ್ಪುರಕ್ಕೆ ಸೇರಿದ ಪಾಳಿ ತಾಲ್ಲೂಕಿನ ಕುಟಿಲ ಎಂಬ ಗ್ರಾಮದಲ್ಲಿ. ಇಲ್ಲಿಯ ವೈಶಿಷ್ಯತೆಯ ಬಗ್ಗೆ ಕುರಿತು ಹೇಳಬೇಕಾದರೆ ಇಲ್ಲಿ ದೇವರನ್ನು ಪೂಜಿಸುವುದಿಲ್ಲ ಇದರ ಬದಲು ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಪೂಜೆ ಮಾಡಲಾಗುತ್ತದೆ ಕೇಳಿದರೆ ಶಾಕ್ ಜೊತೆಗೆ ಅಚ್ಚರಿ ಕೂಡ ಆಗುತ್ತೆ.

ರಾಯಲ್ ಎನ್ಫೀಲ್ಡ್ ಅನ್ನು ಪೂಜೆ ಮಾಡ್ತಾರೆ ಅಂತ ಈ ಒಂದು ಮಾಹಿತಿಯನ್ನು ಕುರಿತು ಹೆಚ್ಚಿನ ವಿಚಾರಗಳನ್ನು ತಿಳಿಸುತ್ತೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ರಾಜಸ್ಥಾನದ NH4 65 ಹೈವೇಯಲ್ಲಿ ಇರುವ ಈ ದೇವಾಲಯವು ಇದರ ಹಿಂದಿನ ಕಥೆಯನ್ನು ಹೇಳುವುದಾದರೆ ಒಮ್ಮೆ ಈ ಜಾಗದಲ್ಲಿ ಒಬ್ಬ ವ್ಯಕ್ತಿ ಅಪಘಾತದಿಂದ ಸಾವನ್ನಪ್ಪುತ್ತಾನೆ ಆತ ಬೈಕ್ ಆಕ್ಸಿಡೆಂಟ್ನಲ್ಲಿ ಸತ್ತು ಹೋಗಿರುತ್ತಾನೆ ಆ ಬೈಕ್ ಬೇರೆ ಯಾವುದೂ ಅಲ್ಲ ಇವತ್ತಿಗೂ ಕೂಡ ಪೂಜಿಸುವ ರಾಯಲ್ ಎನ್ ಫೀಲ್ಡ್ ಬೈಕ್ .

ಈತನ ಹೆಸರು ಹೋಮ್ಸಿಂಗ್ ರಾಥೋಡ್ ಎಂದು ಈತ ಗ್ರಾಮಸ್ಥರ ಮುಖ್ಯಸ್ಥನ ಮಗನಾಗಿದ್ದು ಇವನೇ ಈ ಅಪಘಾತದಲ್ಲಿ ಸತ್ತು ಹೋದ ವ್ಯಕ್ತಿ. ಈ ಘಟನೆ ನಡೆದದ್ದು 1991 ರಲ್ಲಿ, ಘಟನೆ ನಡೆದ ಸ್ಥಳದಲ್ಲಿ ಆ ಬೈಕ್ ಅನ್ನು ವಶಪಡಿಸಿಕೊಂಡು ಪೊಲೀಸರು ಸ್ಟೇಷನ್ ಗೆ ತೆಗೆದುಕೊಂಡು ಹೋದರು.

ವಶಪಡಿಸಿಕೊಂಡ ಬೈಕ್ ಅನ್ನು ಪೊಲೀಸರು ಸ್ಟೇಷನ್ನಲ್ಲಿ ನಿಲ್ಲಿಸಿದ ಮಾರನೆ ದಿವಸ ಮತ್ತೆ ಅಪಘಾತ ನಡೆದ ಸ್ಥಳದಲ್ಲಿ ಬೈಕ್ ಸಿಕ್ಕಿತು ಇದನ್ನು ಕಂಡು ಶಾಖ್ ಆದ ಪೊಲೀಸರು ಮತ್ತೆ ಬೈಕನ್ನು ತಂದು ಸರಪಳಿಯಿಂದ ಕಟ್ಟಿ ಸ್ಟೇಷನ್ನಲ್ಲಿ ನಿಲ್ಲಿಸಿದ್ದರು.

ಆದರೆ ಇದೇ ರೀತಿ ಆರು ತಿಂಗಳವರೆಗೂ ಸತತವಾಗಿ ನಡೆದದ್ದನ್ನು ಕಂಡು ಗ್ರಾಮಸ್ಥರು ಅಲ್ಲಿ ಹೋಮ್ ಸಿಂಗ್ ರಾಥೋಡ್ ನ ಆತ್ಮ ವಿರಬಹುದು ಅದೇ ಈ ರೀತಿ ಮಾಡುತ್ತಿರಬಹುದು ಎಂದು ಅಚ್ಚರಿಪಟ್ಟು ಮತ್ತೆ ಆ ಒಂದು ಬೈಕ್ ಅನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ಪ್ರತಿಷ್ಠಾಪನೆ ಮಾಡಿ .

ಇಂದಿಗೂ ಕೂಡ ಈ ಬೈಕಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಈ ಹೈವೇಯಲ್ಲಿ ಓಡಾಡುವಂತಹ ಬೈಕುಗಳು ಕೂಡ ಈ ದೇವಾಲಯದಲ್ಲಿರುವ ರಾಯಲ್ ಎನ್ಫೀಲ್ಡ್ ಬೈಕ್ಗೆ ಗೌರವ ನೀಡಲೆಂದೇ ಹಾರನ್ ಕೂಡ ಮಾಡುವುದಿಲ್ಲ.

ಹೀಗೆ ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ಈ ಬೈಕ್ಗೆ ದೇವಾಲಯವನ್ನು ಕಟ್ಟಿ ಇಲ್ಲಿಯ ಗ್ರಾಮಸ್ಥರು ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಬಂದ ಭಕ್ತಾದಿಗಳು ಹೂವನ್ನು ಬೈಕ್ಗೆ ಹಾಕಿ ಕಾಣಿಕೆಯನ್ನು ಇಟ್ಟು ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಿದ್ದಾರೆ.

ಎಂತೆಂಥ ವಿಚಿತ್ರವನ್ನು ನಾವು ನೋಡಿರುತ್ತೇವೆ ಕೇಳಿರುತ್ತೇವೆ ಆದರೆ ಈ ರಾಜಸ್ಥಾನದಲ್ಲಿ ನಡೆಯುತ್ತಿರುವ ಈ ಒಂದು ಪದ್ಧತಿಯ ಬಗ್ಗೆ ಕೇಳಿದರೆ ಯಾರಿಗಾದರೂ ಶಾಕ್ ಆಗ್ತದೆ.

ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮತ್ತು ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ. ಈ ಒಂದು ಮಾಹಿತಿ ನಿಮಗೆ ಇಂಟ್ರೆಸ್ಟಿಂಗ್ ಆಗಿತ್ತು ಎಂದು ನಾನು ಭಾವಿಸುತ್ತೇನೆ

ನಿಮಗೂ ಕೂಡ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ನಿಮ್ಮ ಒಂದು ಮೆಚ್ಚುಗೆಯನ್ನು ಮಾಹಿತಿಗೆ ನೀಡಿ ಹಾಗೂ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ ಇನ್ನೂ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ

Leave a Reply

Your email address will not be published. Required fields are marked *