ನಮಸ್ಕಾರ ಸ್ನೇಹಿತರೆ ನಾವು ಹೇಳುವ ಇಂದಿನ ಮಾಹಿತಿಯಲ್ಲಿ ಈ ಒಂದು ದೇವಸ್ಥಾನದಲ್ಲಿ ನೀವು ಕಾಯಿಯನ್ನು ಹರಕೆ ಕಟ್ಟಿಕೊಂಡರೆ ಸಾಕು ನಿಮ್ಮಲ್ಲಿ ಇರುವಂತಹ ಎಂತಹ ಬೇಡಿಕೆಗಳು ಆದರೂ ಈಡೇರುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ದೇವಸ್ಥಾನಕ್ಕೆ ಹೋದಾಗ ಅವರ ಕಷ್ಟಗಳನ್ನೆಲ್ಲ ಬೇಡಿಕೊಂಡು ಒಂದು ರೀತಿಯಾದಂತಹ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ ಹಾಗೆಯೇ ದೇವರಲ್ಲಿ ಪ್ರಾರ್ಥನೆಯನ್ನು ಕೂಡ ಮಾಡುತ್ತಾರೆ.
ಹೀಗೆ ಒಂದೊಂದು ದೇವಸ್ಥಾನದಲ್ಲಿ ಬೇರೆಬೇರೆ ರೀತಿಯಾದಂತಹ ಹರಕೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ವಿಧಾನವಿದೆ. ನಾವು ಇಂದು ಹೇಳ ಹೊರಟಿರುವಂತ ದೇವಸ್ಥಾನದ ಹೆಸರು ಕಾರ್ಯಸಿದ್ದಿ ಆಂಜನೇಯ ದೇವಸ್ಥಾನ.
ಈ ದೇವಸ್ಥಾನದಲ್ಲಿ ನೀವುಗಳು ಒಂದು ಹರಕೆಯನ್ನು ಮಾಡಿಕೊಂಡು ಹರಕೆಯ ಪ್ರತಿರೂಪವಾಗಿ ಒಂದು ತೆಂಗಿನ ಕಾಯಿಯನ್ನು ಅದೇ ದೇವಸ್ಥಾನದಲ್ಲಿ ಕಟ್ಟಿಕೊಂಡು ಬಂದರೆ ಒಂದು ತಿಂಗಳಿನಲ್ಲಿ ನೀವು ಅಂದುಕೊಂಡಿರುವ ಕಾರ್ಯಗಳು ನೆರವೇರುತ್ತವೆ.
ಇಲ್ಲಿ ಹಲವಾರು ಜನರು ಪ್ರತಿನಿತ್ಯ ಬಂದು ಆಂಜನೇಯ ದೇವರಿಗೆ ಕಾಯಿಯನ್ನು ಹರಕೆಯನ್ನಾಗಿ ಕಟ್ಟಿ ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಸ್ನೇಹಿತರೆ.
ಹೌದು ಸ್ನೇಹಿತರೆ ಈ ದೇವಸ್ಥಾನವಿರುವುದು ಬೇರೆ ಎಲ್ಲೂ ಇಲ್ಲ ಬೆಂಗಳೂರು ನಗರದಲ್ಲಿ ಹೌದು ಈ ದೇವಸ್ಥಾನವು ಇರುವುದು ಬೆಂಗಳೂರು ನಗರದಿಂದ 20 ಕಿಲೋಮೀಟರ್ ದೂರದಲ್ಲಿ ಇರುವಂತಹ ಬನಶಂಕರಿಯ ಗಿರಿನಗರದಲ್ಲಿ.
ಹೌದು ಸ್ನೇಹಿತರೆ ಸಾಮಾನ್ಯವಾಗಿ ಇಲ್ಲಿ ಭೇಟಿ ಕೊಟ್ಟ ಭಕ್ತರು ಮೊದಲಿಗೆ ಒಂದು ತೆಂಗಿನ ಕಾಯಿಯನ್ನು ಕೌಂಟರ್ನಲ್ಲಿ ತೆಗೆದುಕೊಳ್ಳಬೇಕು ಅದನ್ನು ಕೈಯಲ್ಲಿ ಹಿಡಿದುಕೊಂಡು ದೇವರನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಾ ಬೇಡಿಕೆಗಳನ್ನು ಕೇಳಿಕೊಳ್ಳಬೇಕು ಕೇಳಿಕೊಂಡ ನಂತರ ನೀವು ದೇವಸ್ಥಾನದಲ್ಲಿ ಕಾಯಿಯನ್ನು ಕಟ್ಟಿ ಬರಬೇಕು.
ಆ ಕಾಯನ್ನು ಕಟ್ಟಿ ಬಂದ ನಂತರ 16 ದಿನ ನೀವು ಈ ಒಂದು ಹರಕೆಯನ್ನು ಪಾಲಿಸಬೇಕಾಗುತ್ತದೆ ಅದು ಹೇಗೆಂದರೆ 16 ದಿನಗಳಲ್ಲಿ ನಾಲ್ಕು ಬಾರಿ ನೀವು ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು
ನಿಮ್ಮ ಬೇಡಿಕೆ ಏನು ಇರುತ್ತದೆಯೋ ಆ ಬೇಡಿಕೆಯನ್ನು ನೀವು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಹಾಗೂ ಮನೆಯಲ್ಲಿ ಬಂದು 108 ಸಾರಿ ಆಂಜನೇಯನ ಮಂತ್ರವನ್ನು ಹೇಳಬೇಕು.
ಈ ಮಂತ್ರ ಹೀಗಿದೆ “ತ್ವಮಸ್ವಿನ್ ಕಾರ್ಯನಿರ್ಯೋಗೇ ಪ್ರಮಾಣಂ ಹರಿಸತ್ತಮ, ಹನುಮಾನ್ ಯತ್ನಮಾಸ್ಥಾಯ ದುಃಖಕ್ಷಯ ಕರೋ ಭಾವ ” ಹಾಗೆಯೇ ಈ ಒಂದು ಹರಕೆಯನ್ನು ಕಟ್ಟಿ ಬಂದ ನಂತರ ನೀವು ಮನೆಯಲ್ಲಿ ಬ್ರಹ್ಮಚಾರ್ಯ ರೂಪದಲ್ಲಿರಬೇಕು.
ಹಾಗೆ ಯಾವುದೇ ರೀತಿಯಾದಂತಹ ಮಾಂಸಹಾರವನ್ನು ಕೂಡ ಸೇವಿಸಬಾರದು. ಹಾಗೆ ಮಹಿಳೆಯರು ಕೂಡ ತಮ್ಮ ಸಮಸ್ಯೆಗಳು ಮುಗಿದನಂತರ ಈ ಒಂದು ವೃತವನ್ನು ಮುಂದುವರಿಸಬೇಕು.
ನಂತರ 16 ದಿನಗಳಾದ ನಂತರ ನಿಮ್ಮ ವೃತ ಮುಗಿದಾದ ಮೇಲೆ ದೇವಸ್ಥಾನದಲ್ಲಿ ಕಟ್ಟಿ ಬಂದ ಹರಕೆ ಕಾಯಿಯನ್ನು ಹೋಗಿ ತೆಗೆದು ಬರಬೇಕು. ಹೀಗೆ ಹರಕೆಯನ್ನಾಗಿ ಕಟ್ಟಿದಂತಹ ಕಾಯನ್ನು ಮನೆಗೆ ತಗೊಂಡು ತೆಗೆದುಕೊಂಡು ಬಂದು ಅದರಿಂದ ದೇವರನ್ನು ಪೂಜೆ ಮಾಡಿ ದೇವರಿಗೆ ಅದನ್ನು ನೈವೇದ್ಯವನ್ನು ಇಟ್ಟು ನೀವು ಪ್ರಸಾದ ರೂಪದಲ್ಲಿ ಅದನ್ನು ಪಾಯಸ ಮಾಡಿಕೊಂಡು ಸ್ವೀಕರಿಸಬೇಕು.
ಹೀಗೆ ಹದಿನಾರು ದಿನಗಳ ಕಾಲ ಪೂಜೆ ಮಾಡಿ 108 ಬಾರಿ ಆಂಜನೇಯನ ಮಂತ್ರವನ್ನು ಹೇಳಿದರೆ ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಿರುವ ಅಂತಹ ಯಾವುದೇ ರೀತಿಯ ಹರಕೆಗಳು ಈಡೇರುತ್ತವೆ.
ಈ ಒಂದು ಕಾರ್ಯಸಿದ್ದಿ ಆಂಜನೇಯ ದೇವಸ್ಥಾನಕ್ಕೆ ಹಲವಾರು ಜನರು ಭೇಟಿಕೊಟ್ಟು ತಮ್ಮ ಕೋರಿಕೆಗಳನ್ನು ಈಡೇರಿಸಿ. ನೀವು ಕೂಡ ಒಂದು ಬಾರಿ ಬೆಂಗಳೂರು ನಗರಕ್ಕೆ ಬಂದು ಈ ಒಂದು ಕಾರ್ಯಸಿದ್ದಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಿ .
ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.