ಜಾರ್ಖಂಡ್ ರಾಜ್ಯಕ್ಕೆ ಸೇರಿದಂತಹ ಈ ಜಮ್ತಾರ ಊರಿನಿಂದ ನಿಮಗೇನಾದರೂ ಒಂದು ಕಾಲ್ ಬಂದರೆ ಸಾಕು ನಿಮ್ಮ ಮೊಬೈಲ್ ಹ್ಯಾಕ್ ಆದಂತೆ ಅಥವಾ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಖಾಲಿ ಅಂತಾನೇ ಅಂದ್ಕೊಳ್ಳಿ !
ಹೌದು ಸ್ನೇಹಿತರೇ ಯಾಕೆ ಹೀಗೆ ಹೇಳುತ್ತಿದ್ದೇನೆ ಅಂದರೆ ಈ ಜಮ್ತಾರಾ ಊರಿಗೆ ಸೇರಿದಂತಹ ಜನರು ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಲ್ಲರು ಜೊತೆಗೆ ನಿಮ್ಮ ಅಕೌಂಟ್ ನಲ್ಲಿ ಇರುವಂತಹ ಎಲ್ಲ ಹಣವನ್ನು ಐದು ನಿಮಿಷದಲ್ಲಿಯೇ ಖಾಲಿ ಮಾಡಬಹುದಾಗಿದೆ .
ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ ತಪ್ಪದೇ ಈ ಪೂರ್ತಿ ಮಾಹಿತಿಯನ್ನು ಓದಿ ಹಾಗೆ ಯಾವುದೇ ಫೋನ್ ಕಾಲ್ ಬಂದರೂ ಎಚ್ಚರದಿಂದ ಇರಿ ಹಾಗೆಯೇ ಯಾರೊಂದಿಗೂ ಕೂಡ ನಿಮ್ಮ ಮೊಬೈಲ್ ನಂಬರ್ ಆಗಲಿ ಅಥವಾ ನಿಮ್ಮ ಮೊಬೈಲ್ ಗೆ ಬಂದಂತಹ ಒಟಿಪಿ ಯನ್ನಾಗಲಿ ಹಂಚಿಕೊಳ್ಳಲು ಹೋಗಬೇಡಿ .
ಜಮ್ತಾರಾ ಈ ಊರಿನ ಹೆಸರು ಕೇಳಿದರೆ ಅದೆಷ್ಟೋ ಜನ ಗಾಬರಿಗೊಳ್ಳುತ್ತಾರೆ ಯಾಕೆ ಅಂತೀರಾ ಈ ಊರಿನಲ್ಲಿರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ದಂಧೆಯನ್ನೇ ಮಾಡುತ್ತಿದ್ದಾರೆ ಹಾಗೆ ಈ ದಂಧೆಯಿಂದ ಲಕ್ಷ ಲಕ್ಷ ಹಣವನ್ನು ಕೂಡ ಸಂಪಾದಿಸಿದ್ದಾರೆ .
ಮೊದಲಿಗೆ ಈ ಊರಿನ ಜನರು ತುಂಬಾನೇ ಬಡವರಾಗಿದ್ದರೂ ಹಾಗೂ ಈ ಒಂದು ಊರು ಒಂದು ಕುಗ್ರಾಮವಾಗಿತ್ತು.
ಆದರೆ ಯಾವಾಗಿನಿಂದ ಇವರು ಈ ಬ್ಯಾಂಕ್ ಅಕೌಂಟನ್ನು ಹ್ಯಾಕ್ ಮಾಡುವಂತಹ ದಂಧೆಯನ್ನು ಶುರು ಮಾಡಿಕೊಂಡರು ಅಲ್ಲಿಂದ ಈ ಜನ ಶ್ರೀಮಂತರಾಗಿ ಬಿಟ್ಟಿದ್ದಾರೆ ಆದರೆ ಅವರು ಶ್ರೀಮಂತರಾಗಿರುವುದು ಯಾವುದೇ ಕಷ್ಟಪಟ್ಟಿ ಅಲ್ಲ ಈ ರೀತಿ ಅನ್ಯಾಯ ಮೋಸವನ್ನು ಮಾಡಿ .
ಈ ಊರಿಗೆ ಸೇರಿದಂತಹ ಜನರು ಕೆಲವೊಂದಿಷ್ಟು ಫೋನ್ ನಂಬರ್ ಗಳನ್ನು ಕಲೆಕ್ಟ್ ಮಾಡಿಕೊಳ್ಳುತ್ತಾರೆ.
ನಂತರ ಆ ನಂಬರ್ಗಳಿಗೆ ಕಾಲ್ ಕೂಡ ಮಾಡುತ್ತಾರೆ ನಿಮ್ಮ ಎಟಿಎಂ ಎಕ್ಸ್ಪೈರಿ ಆಗಿದೆ ಅಥವಾ ನಿಮ್ಮ ಅಕೌಂಟ್ ನಲ್ಲಿ ಈ ರೀತಿ ಪ್ರಾಬ್ಲಂ ಇದೆ ಅಂತ ಬ್ಯಾಂಕ್ಗಳಿಂದ ಕರೆ ಮಾಡುವ ರೀತಿ ಕರೆ ಮಾಡಿ ನಂತರ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಬಂದಿದೆ ಅದನ್ನು ತಿಳಿಸಿ ಅಂತ ನೈಯಸ್ ಆಗಿ ಕೇಳುತ್ತಾರೆ ಆಗ ನೀವು ಮಾತಿಗೆ ಮರುಳಾಗಿ ಒಟಿಪಿಯನ್ನು ಕೂಡ ಕೊಡುತ್ತೀರಾ .
ಇನ್ನೇನು ನೀವು ಫೋನ್ ಕಟ್ ಮಾಡುವ ತಕ್ಷಣವೇ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಹೀರೋ ಆಗಿರುತ್ತದೆ ಹೌದು ಆ ಒಟಿಪಿ ಯಿಂದ ನಿಮ್ಮ ಅಕೌಂಟ್ ಅಲ್ಲಿರುವಂತಹ ಹಣವನ್ನು ಇವರು ಲಪಟಾಯಿಸಿ ಬಿಟ್ಟಿರುತ್ತಾರೆ . ಒಂದೆರಡು ವರ್ಷಗಳ ಹಿಂದೆ ಒಬ್ಬ ಬಾಲಿವುಡ್ ನಟನಾ ಅಕೌಂಟ್ ನಿಂದ ಸುಮಾರು ಐದು ಲಕ್ಷ ರುಪಾಯಿ ಡೆಬಿಟ್ ಆಗಿತ್ತು ಅದಕ್ಕೆ ಕಾರಣ ಈ ಜಮ್ತಾರ ಊರಿನ ಹ್ಯಾಕರ್ಸ್ಗಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ .
ನಮ್ಮ ಭಾರತ ದೇಶದಲ್ಲಿ ಮೂರ್ನಾಲ್ಕು ರಾಜ್ಯಗಳನ್ನು ಹೊರತುಪಡಿಸಿ ಪ್ರತಿ ರಾಜ್ಯದ ಪೊಲೀಸ್ ಅಧಿಕಾರಿಗಳು ಈ ಜಮ್ತಾರಾ ಊರಿಗೆ ಭೇಟಿ ನೀಡಿ ಇಲ್ಲಿರುವಂತಹ ಜನರನ್ನು ಇನ್ವೆಸ್ಟಿಗೇಷನ್ ಕೂಡ ಮಾಡುತ್ತಾರೆ ಯಾಕೆ ಅಂದರೆ ದೇಶದಲ್ಲಿ ನಡೆಯುವಂತಹ ಇಂತಹ ಹಲವಾರು ಪ್ರಕರಣಗಳಿಗೆ ಈ ಊರಿನ ಜನರೇ ಹೆಚ್ಚು ಕಾರಣರಾಗಿರುತ್ತಾರೆ ಅಂತ .
ಇನ್ನು ಮುಂದೆ ನೀವು ಕೂಡ ಜೋಪಾನವಾಗಿರಿ ನಿಮ್ಮ ಮೊಬೈಲ್ಗೆ ಕಾಲ್ ಮಾಡಿ ಅಕೌಂಟ್ ಡಿಟೇಲ್ಸ್ ಅಥವಾ ಎಟಿಎಂ ನಂಬರ್ ಒಟಿಪಿ ನಂಬರ್ ಅನ್ನು ಕೇಳಿದರೆ ಅವರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾಗಬೇಡಿ .