ಈಗಲೂ ಕೂಡ ಆಂಜನೇಯ ಪವಾಡಗಳನ್ನು ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಅಷ್ಟಕ್ಕೂ ಇಲ್ಲಿ ಆಗಿದ್ದೇನು ಗೊತ್ತಾ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಕೆಲವು ತಿಂಗಳುಗಳ ಹಿಂದೆ ಆಂಜನೇಯಸ್ವಾಮಿ ಮಾಡಿದ ಈ ಪವಾಡ ನೀವು ಕೂಡ ತಿಳಿದರೆ ನೀವು ಕೂಡ ನಿಜಕ್ಕೂ ಆಂಜನೇಯಸ್ವಾಮಿ ಇದ್ದಾರೆ ಆಂಜನೇಯಸ್ವಾಮಿ ಈಗಲೂ ಕೂಡ ಕೆಲವೊಂದು ಪವಾಡಗಳನ್ನು ಮಾಡುತ್ತಾರೆ ಅಂತ ನಂಬ್ತೀರಾ.ಹೌದು ಈ 1ಘಟನೆ ನಡೆದಿರುವುದು ನಮ್ಮ ಭಾರತ ದೇಶದಲ್ಲಿಯೇ ಎಲ್ಲಿಯೆಂದರೆ ಉತ್ತರಪ್ರದೇಶದ ಶಹಜಾನ್ ಪುರದಲ್ಲಿ ನಡೆದ ಈ ಒಂದು ಘಟನೆ ಅಲ್ಲಿಯ ಗ್ರಾಮಸ್ಥರಿಗೆ ಅಚ್ಚರಿಯನ್ನು ಉಂಟುಮಾಡಿತ್ತು.ಇದೀಗ ಅಲ್ಲಿಯ ಗ್ರಾಮಸ್ಥರು ಪ್ರತಿದಿನ ಆಂಜನೇಯ ಸ್ವಾಮಿಯ ಗುಡಿಗೆ ಹೋಗಿ ಹನುಮನ ಆಶೀರ್ವಾದವನ್ನೂ ಪಡೆದುಕೊಂಡು ಬರುತ್ತಿದ್ದಾರೆ. ಹಾಗಾದರೆ ಅಲ್ಲಿ ನಡೆದ ಪವಾಡ ಏನು ಅಂತ ತಿಳಿಯುವುದಕ್ಕಾಗಿ ಸಂಪೂರ್ಣ ಲೇಖನವನ್ನು ತಿಳಿಯಿರಿ. ಆಂಜನೇಯ ಸ್ವಾಮಿಯ ಭಕ್ತರು ನೀವಾಗಿದ್ದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಹೌದು ಉತ್ತರ ಪ್ರದೇಶದ ಒಂದು ಗ್ರಾಮದಲ್ಲಿ ಒಮ್ಮೆ ರಸ್ತೆ ಕಾಮಗಾರಿಗಾಗಿ ಅಂದರೆ ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಮಧ್ಯದಲ್ಲಿ ಇದ್ದ ಆಂಜನೇಯಸ್ವಾಮಿಯ ಗುಡಿಯನ್ನು ಒಡೆದು ಹಾಕಲು ಅಧಿಕಾರಿಗಳು ನಿರ್ಧರಿಸುತ್ತಾರೆ ಆದರೆ ಆ ರಸ್ತೆಯ ಮಧ್ಯದಲ್ಲಿ ಇದ್ದ ಆ ಆಂಜನೇಯ ಸ್ವಾಮಿಯ ಗುಡಿಗೆ ಸುಮಾರು ನೂರೈವತ್ತು ವರುಷಗಳ ಇತಿಹಾಸವನ್ನು ಹೊಂದಿತ್ತು ಯಾವಾಗ ಅಧಿಕಾರಿಗಳು ಆ ಆಂಜನೇಯಸ್ವಾಮಿ ಗುಡಿಯನ್ನು ಹೊಡೆದು ಹಾಕಲು ನಿರ್ಧರಿಸಿ ಆ ಸ್ಥಳಕ್ಕೆ ಜೆಸಿಬಿಗಳನ್ನು ಕಳುಹಿಸುತ್ತಾರೆ ಅಂದು ಅಲ್ಲಿ ಒಂದು ಪವಾಡವೇ ನಡೆದಿತ್ತು. ಗುಡಿಯನ್ನು ಹೊಡೆದು ಹಾಕಲು ಸಖತ್ ನಾಲ್ಕೈದು ಜೆಸಿಬಿಗಳು ಬಂದಿದ್ದವು ಆದರೆ ಆ ಜೆಸಿಬಿಗಳು ಯಾವಾಗ ಗುಡಿಯನು ಒಡೆಯುವುದಕ್ಕಾಗಿ ಗುಡಿಯ ಗೋಡೆಯನ್ನು ಮುಟ್ಟುತ್ತದೆಯೋ ಆಗಲೇ ಎಲ್ಲಾ ಜೆಸಿಬಿಗಳು ಕೆಟ್ಟು ನಿಂತವು.ಆದರೆ ಅಧಿಕಾರಿಗಳು ಅಲ್ಲಿಗೇ ಸುಮ್ಮನಾಗಲಿಲ್ಲ ಮತ್ತೆ ಎರಡನೇ ಬಾರಿಯೂ ಕೂಡ ಪ್ರಯತ್ನ ಮಾಡುತ್ತಾರೆ. ಎರಡನೇ ಬಾರಿಯೂ ಕೂಡ ಇದೆ ರೀತಿ ಬಂದ ಜೆಸಿಬಿಗಳು ಎಲ್ಲವೂ ಕೂಡ ಕೆಟ್ಟು ನಿಲ್ಲುತ್ತದೆ.

2ಬಾರಿ ಪ್ರಯತ್ನದಲ್ಲಿಯೂ ಕೂಡ ಸೋತ ಅಧಿಕಾರಿಗಳು ಮೂರನೇ ಬಾರಿ ದೊಡ್ಡ ದೊಡ್ಡ ಕ್ರೇನ್ ಅನ್ನು ಕರೆಸುತ್ತಾರೆ ದೊಡ್ಡ ಕ್ರೇನ್ ತರಿಸಿ ಹಗ್ಗವನ್ನು ಹಾಕಿ ಆಂಜನೇಯಸ್ವಾಮಿ ಗುಡಿಯಲ್ಲಿರುವ ಹನುಮನ ವಿಗ್ರಹವನ್ನು ತೆಗೆಯಲು ಪ್ರಯತ್ನಿಸಿದಾಗ ಆಸ್ಪತ್ರೆ ಒಳಗೆ ಇದ್ದ ಸರಪಳಿಯು ಕಳಚಿ ಕೆಳಗೆ ಬಿದ್ದು ಬಿಡುತ್ತದೆ.ಈ ರೀತಿ ಮೂರು ಪ್ರಯತ್ನಗಳಲ್ಲಿ ಅಧಿಕಾರಿಗಳು ಸೋಲುತ್ತಾರೆ. ಆಗ ಗ್ರಾಮಸ್ಥರು ಹೇಳ್ತಾರೆ ಇಲ್ಲಿಯ ಆಂಜನೇಯಸ್ವಾಮಿಯ ಸತ್ಯ ಇದಾಗಿದೆ. ಗುಡಿಯನ್ನು ಕೆಡವದೆ ಇಲ್ಲಿಗೆ ಈ ಒಂದು ಕೆಲಸವನ್ನು ನಿಲ್ಲಿಸುವುದು ನಿಮಗೆ ಒಳಿತು ಅಂತ ಸಲಹೆ ಅನ್ನು ಕೂಡ ನೀಡ್ತಾರೆ.ಈ ರೀತಿಯಾಗಿ ಅಧಿಕಾರಿಗಳು ದೇವಸ್ಥಾನ ಹೊಡೆಯಲು ಬಂದಾಗ ಆಂಜನೇಯಸ್ವಾಮಿಯು ಪವಾಡವನ್ನು ಮಾಡಿ ತನ್ನ ಇರುವಿಕೆಯನ್ನು ಭಕ್ತಾದಿಗಳಿಗೆ ಈ ಮೂಲಕ ತಿಳಿಸಿದ್ದಾರೆ.

ಇದು ನಿಜಕ್ಕೂ ಆಂಜನೇಯಸ್ವಾಮಿಯ ಪವಾಡವೇ ಹೌದು. ರಸ್ತೆ ಅಗಲೀಕರಣ ಮಾಡುವುದಕ್ಕೆ ಬಂದ ಅಧಿಕಾರಿಗಳು ದೇವಾಲಯವನ್ನು ಹಾಗೇ ಬಿಟ್ಟು ಅಷ್ಟೂ ಜಾಗವನ್ನು ಮಾತ್ರ ಬಿಟ್ಟು ಮುಂದೆ ರಸ್ತೆ ಅಗಲೀಕರಣವನ್ನು ಮಾಡಿದರು.ಈ ರೀತಿಯಾಗಿ ಆಂಜನೇಯ ಸ್ವಾಮಿಯು ಪವಾಡವನ್ನೇ ಮಾಡಿದರು ಇದು ನಡೆದಿರುವುದು ಉತ್ತರ ಪ್ರದೇಶದ ಶಹಜಪುರದಲ್ಲಿ. ಆಂಜನೇಯಸ್ವಾಮಿ ಚಿರಂಜೀವಿಯಂಥ ಅದಕ್ಕೆ ಈ ಕೆಲವೊಂದು ಘಟನೆಗಳು ಸಾಕ್ಷಿಯಾಗಿವೆ ಏನಂತೀರಾ ಫ್ರೆಂಡ್ಸ್.ಆಂಜನೇಯಸ್ವಾಮಿ ಇದ್ದಲ್ಲಿ ಭಯ ಇರುವುದಿಲ್ಲ ಆದಕಾರಣವೆ ಪ್ರತಿ ಗ್ರಾಮದಲ್ಲಿಯೂ ಕೂಡ ಒಂದು ಆಂಜನೇಯಸ್ವಾಮಿಯ ಗುಡಿ ಇರುತ್ತದೆ ಧನ್ಯವಾದಗಳು.

Leave a Reply

Your email address will not be published. Required fields are marked *