ಇಸ್ರೋ ಹೊಸ ಸಾಹಸಕ್ಕೆ ಜಗತ್ತೇ ಬೆಚ್ಚಿ ಬಿದ್ದಿರೋದು ಯಾಕೆ ಗೊತ್ತಾ..

748

ನಮ್ಮ ಭಾರತ ದೇಶದ ಹೆಮ್ಮೆಯ ಸಂಸ್ಥೆಯಾಗಿರುವ ಇಸ್ರೋ ಇದೀಗ 2 ಮಹಾನ್ ಪ್ಲಾನ್ ಒಂದನ್ನು ಮಾಡಿದೆ ಹಾಗಾದರೆ ಇಸ್ರೋ ಮಾಡಿರುವಂತಹ ಪ್ಲಾನ್ ಏನು ಮತ್ತು ಅದಕ್ಕಾಗಿ ಮಾಡಿಕೊಂಡಿರುವಂತಹ ವ್ಯವಸ್ಥೆಯಾದರೂ ಏನು ಮತ್ತು ಈ ಪ್ಲಾನ್ ಜಾರಿಗೆ ತರುವುದು ಯಾವಾಗ ಅನ್ನೋದನ್ನು ನಾವು ಈ ದಿನದ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ .

ಸ್ನೇಹಿತರೆ ನೀವು ಈ ಮಾಹಿತಿಯನ್ನು ಓದುವ ಮೊದಲು ನಿಮಗೆ ಒಂದು ಪ್ರಶ್ನೆ ಬಾಹ್ಯಾಕಾಶ ಎಂದರೇನು ?? ಈ ಒಂದು ಪ್ರಶ್ನೆಗೆ ಉತ್ತರ ಬಾಹ್ಯಾಕಾಶ ಎಂದರೆ ಭೂಮಿಯ ಕೆಲವೊಂದು ಸರ್ಕಂಸ್ಟೇನ್ಸ್ ನಲ್ಲಿ ನಾವು ಇರುವಂತಹ ವಾತಾವರಣವೂ ಆ ಒಂದು ಸರ್ಕಂಸ್ಟೇನ್ಸ್ ನವರೆಗೂ ಇರುತ್ತದೆ ಅದಾದ ನಂತರವೂ ಕೂಡ ಇರುತ್ತದೆ ಆದರೆ ಭೂಮಿಯ ಪದರವು ಎಳೆಎಳೆಯಾಗಿ ವಾತಾವರಣವೂ ಕಡಿಮೆಯಾಗುತ್ತಾ ಹೋಗುತ್ತದೆ .

ನಂತರ ಗುರುತ್ವಾಕರ್ಷಣೆ ಎಂದು ಏನು ಹೇಳುತ್ತಾರೋ ಹಾಗೊಂದು ಆಕರ್ಷಣೆಯೂ ಕೂಡ ಕಡಿಮೆಯಾಗುತ್ತದೆ ಮತ್ತು ಈ ಬಾಹ್ಯಾಕಾಶದಲ್ಲಿ ಮನುಷ್ಯರು ಆಕ್ಸಿಜನ್ ಸಿಲಿಂಡರ್ ಇಲ್ಲದೇ ಇರಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಅಲ್ಲಿ ಮನುಷ್ಯ ಉಸಿರಾಡಲು ಆಕ್ಸಿಜನ್ ವ್ಯವಸ್ಥೆ ಇರದ ಕಾರಣದಿಂದಾಗಿ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ಇರುತ್ತದೆ .

ಈಗ ಇಸ್ರೋ ಮಾಡಿರುವ ಪ್ಲಾನ್ ನಂ.೧ ಬಗ್ಗೆ ಹೇಳೋದಾದರೆ ಗಗನಯಾನ ಎಂಬುದು , ಈ ಒಂದು ಇಸ್ರೋದ ಪ್ಲಾನ್ ನಲ್ಲಿ ಇಸ್ರೋ ಸಂಸ್ಥೆಯು ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕು ಅನ್ನೋ ಒಂದು ಯೋಚನೆಯನ್ನು ಮಾಡಿದ್ದು ಇದಕ್ಕಾಗಿ ಸುಮಾರು ಹನ್ನೆರಡು ಕೋಟಿ ಖರ್ಚನ್ನು ಮಾಡಿದೆ ಮತ್ತು ಇದಕ್ಕಾಗಿ 2008 ನೇ ವರ್ಷದಿಂದಲೂ ತಯಾರಿಯನ್ನು ನಡೆಸಿಕೊಳ್ಳುತ್ತಿದೆ .

ಇಡೀ ವಿಶ್ವವನ್ನೇ ತಿರುಗಿ ನೋಡುವಂತೆ ಮಾಡಲು ನಮ್ಮ ಭಾರತ ದೇಶದ ಇಸ್ರೊ ಸಂಸ್ಥೆಯು ಇದೀಗ ದೊಡ್ಡ ಹೆಜ್ಜೆಯನ್ನು ಇಡಲು ಮುಂದಾಗಿದೆ ಮತ್ತು ಇದಕ್ಕಾಗಿ ಸಾಕಷ್ಟು ತಯಾರಿಯನ್ನು ನಡೆಸಿಕೊಂಡಿರುವ ಇಸ್ರೊ ಸಂಸ್ಥೆಯು ಸುಮಾರು ಇನ್ನೂರು ಜನರನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಕೇವಲ ಹತ್ತು ಜನರನ್ನು ಮಾತ್ರ ಸೆಲೆಕ್ಟ್ ಮಾಡಿದೆ .

ನಂತರ ಈ ಹತ್ತು ಜನರಲ್ಲಿ ಕೇವಲ ನಾಲ್ಕು ಜನರನ್ನು ಮಾತ್ರ ಇದೀಗ ಸಂಸ್ಥೆಯು ಆಯ್ಕೆ ಮಾಡಿಕೊಂಡಿದ್ದು ಇವರಿಗೆ ಈಗಾಗಲೇ ತರಬೇತಿಯನ್ನು ನೀಡುತ್ತಿದೆ ಮತ್ತು ಈ ಒಂದು ಪ್ಲಾನ್ ಗೆ ರಷ್ಯಾ ದೇಶವು ಕೂಡ ಭಾರತ ದೇಶದೊಂದಿಗೆ ಕೈಜೋಡಿಸಿದೆ .
ಇಸ್ರೊ ಸಂಸ್ಥೆಯು ಆಯ್ಕೆ ಮಾಡಿರುವ ನಾಲ್ಕು ಜನರನ್ನು ರಷ್ಯಾ ದೇಶಕ್ಕೆ ಕಳುಹಿಸಿ ತರಬೇತಿಯನ್ನು ನೀಡಲಾಗುತ್ತಿದೆ . ಈ ಪ್ಲಾನ್ನಲ್ಲಿ ರಾಕೆಟ್ ನೊಂದಿಗೆ ಗಗನಯಾನ ನೌಕೆಯನ್ನು ಕಳುಹಿಸಿ , ನೌಕೆ ಯೊಳಗೆ ಮನುಷ್ಯರನ್ನು ಇರಿಸಲಾಗುತ್ತದೆ ನಂತರ ಈ ಒಂದು ನೌಕೆಯಲ್ಲಿ ಮನುಷ್ಯರು ಬಾಹ್ಯಾಕಾಶಕ್ಕೆ ತಲುಪಿ ಅಲ್ಲಿಯ ಬಗೆಗೂ ಕೂಡ ಇನ್ನೂ ಹೆಚ್ಚಿನ ಸಂಶೋಧನೆಯನ್ನು ನಡೆಸಬಹುದಾಗಿದೆ .

ಈಗಾಗಲೇ ಇಸ್ರೊ ಸಂಸ್ಥೆಯು ಎರಡು ಟೆಸ್ಟ್ ಅನ್ನು ಮಾಡಿದ್ದು ಆ ಟೆಸ್ಟ್ನಲ್ಲಿ ರಾಕೆಟ್ ಟೆಕ್ನಿಕಲ್ ಸಮಸ್ಯೆಯಿಂದಾಗಿ ಪ್ರಾಬ್ಲಂ ಅನ್ನು ಎದುರಿಸುತ್ತಿದ್ದರೆ ಆಗ ಹೇಗೆ ನೌಕೆಯನ್ನು ರಾಕೆಟ್ ನಿಂದ ಬೇರ್ಪಡಿಸುವುದು ಮತ್ತು ಬಾಹ್ಯಾಕಾಶಕ್ಕೆ ತಲುಪಿದ ನಂತರ ರಾಕೆಟ್ ನಿಂದ ನೌಕೆಯನ್ನು ಹೇಗೆ ಆಚೆ ತರುವುದು ಅಂತೆಲ್ಲ ಒಮ್ಮೆ ಟೆಸ್ಟ್ ಮಾಡಲಾಗಿದೆ .

ಮತ್ತೊಂದು ಟೆಸ್ಟ್ ಅಂದರೆ ಬಾಹ್ಯಾಕಾಶದಿಂದ ತಿರುಗಿ ವಾಪಸ್ ಭೂಮಿಯೆಡೆಗೆ ಬರುವಾಗ ಬಾಹ್ಯಾಕಾಶದ ವಾತಾವರಣದಿಂದ ಭೂಮಿಯ ವಾತಾವರಣಕ್ಕೆ ನೌಕೆ ಬಂದ ಕೂಡಲೇ ಅದರೊಳಗೆ ಇರುವಂತಹ ಮನುಷ್ಯರಿಗೆ ಯಾವುದೇ ರೀತಿಯ ಸಮಸ್ಯೆ ಆಗದೆ ಇರುವ ಹಾಗೆ ಲ್ಯಾಂಡಿಂಗ್ ಮಾಡುವ ರೀತಿಯೂ ಕೂಡ ಒಂದು ಟೆಸ್ಟ್ ಅನ್ನು ಮಾಡಲಾಗಿತ್ತು ಮತ್ತು ಇವಂದು ಟೆಸ್ಟ್ ಮಾಡಿದಾಗ ನೌಕೆಯೊಂದಿಗೆ ರಾಕೆಟ್ ಅಂಡಮಾನ್ ಸಮುದ್ರದಲ್ಲಿ ಬಂದು ಲ್ಯಾಂಡ್ ಆಗುವ ಹಾಗೆ ಮಾಡಲಾಗಿತ್ತು .

ಇದು ಇಸ್ರೊ ಸಂಸ್ಥೆಯು ಮಾಡಿರುವ ಮೊದಲನೇ ಪ್ಲಾನ್ ತಯಾರಿ ಮತ್ತು ಇಸ್ರೋ ಸಂಸ್ಥೆಯ ಎರಡನೇ ಪ್ಲಾನ್ ಯಾವುದು ಅಂದರೆ ಸ್ಪೇಸ್ ಸ್ಟೇಷನ್ , ಬಾಹ್ಯಾಕಾಶದಲ್ಲಿ ಸ್ಪೇಸ್ ಸ್ಟೇಷನ್ ನಿರ್ಮಾಣ ಮಾಡಬೇಕೆಂದು ಇಸ್ರೋ ಸಂಸ್ಥೆಯ ಪ್ಲಾನ್ ಆಗಿದೆ .
ಇಸ್ರೋ ಸ್ಟೇಷನ್ ಅಂದ ಕೂಡಲೇ ಎಲ್ಲರಿಗೂ ಕೂಡ ಆಶ್ಚರ್ಯವಾಗಬಹುದು ಹೌದು ಹೇಗೆ ಬಸ್ ಗಳನ್ನು ಸ್ಟೇಷನ್ ನಲ್ಲಿ ನಿಲ್ಲಿಸಲಾಗುತ್ತದೆಯೊ ಹಾಗೆ ಸ್ಪೇಸ್ ಸ್ಟೇಷನ್ ನಲ್ಲಿ ನೌಕೆಯನ್ನು ಲ್ಯಾಂಡ್ ಮಾಡಿ ಸ್ವಲ್ಪ ಸಮಯ ಅಲ್ಲೇ ವಿಶ್ರಾಂತಿ ಪಡೆದುಕೊಳ್ಳುವುದಕ್ಕೆ ಸ್ಪೇಸ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ .

ಇಸ್ರೊ ಸಂಸ್ಥೆಯು ಭಾರತ ದೇಶದ ಸ್ಪೇಸ್ ಸ್ಟೇಷನ್ ಅನ್ನು ಸ್ಪೇಸ್ ನಲ್ಲಿ ಮಾಡಿದ ನಂತರ ವಿಜ್ಞಾನಿಗಳು ಅಲ್ಲಿಯೇ ಹೋಗಿ ತಂಗಿ ಆ ಒಂದು ಸ್ಪೇಸ್ ನ ಬಗ್ಗೆ ಇನ್ನೂ ಹೆಚ್ಚು ಅಧ್ಯಯನವನ್ನು ಮಾಡಬಹುದಾಗಿದೆ .ಇದಕ್ಕಾಗಿ ಇಸ್ರೊ ಸಂಸ್ಥೆಯು ಸುಮಾರು ಇನ್ನೂರು ಟನ್ ತೂಕದ ಸ್ಪೇಸ್ ಸ್ಟೇಷನ್ ಅನ್ನು ಈಗಾಗಲೇ ಮಾಡಿದ್ದು ಈ ಒಂದು ಪ್ಲಾನನ್ನು ಕೂಡ ಆದಷ್ಟು ಬೇಗ ಇಸ್ರೊ ಸಂಸ್ಥೆಯು ಕೈಗೊಳ್ಳಲಿದೆ .
ಇಸ್ರೊ ಸಂಸ್ಥೆಯು ತನ್ನ ಮೊದಲನೇ ಪ್ಲಾನ್ ಅನ್ನು ಅಂದರೆ ಮನುಷ್ಯನನ್ನು ನೌಕೆಯೊಂದಿಗೆ ಸ್ಪೇಸ್ ಗೆ ಕಳುಹಿಸಲು 2021 ಡಿಸೆಂಬರ್ ತಿಂಗಳಿನಲ್ಲಿ ಮುಂದಾಗಲಿದೆ .

ವಿಶ್ವದಲ್ಲಿ ಹದಿನೈದು ರಾಷ್ಟ್ರಗಳೊಂದಿಗೆ ಅಮೆರಿಕ ದೇಶವು ಸೇರಿ ಸ್ಪೇಸ್ ನಲ್ಲಿ ಇಂಟರ್ನೆಟ್ ಸ್ಪೇಸ್ ಸ್ಟೇಷನ್ ಅನ್ನು ನಿರ್ಮಾಣ ಮಾಡಿದ ಮತ್ತು ಚೀನಾವು ಕೂಡ ತನ್ನದೇ ಆದ ಒಂದು ಸ್ಪೇಸ್ ಸ್ಟೇಷನ್ ಅನ್ನು ನಿರ್ಮಿಸಲು ನಿರ್ಧರಿಸಿದ್ದು ಭಾರತ ದೇಶವು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ ಅಂತಾನೇ ಹೇಳಬಹುದು .

ಇಸ್ರೊ ಸಂಸ್ಥೆಯು ಮಾಡಿರುವಂತಹ ಪ್ಲಾನ್ ಗೆ ನಾವು ಕೂಡ ಆಲ್ ದಿ ಬೆಸ್ಟ್ ಹೇಳುತ್ತಾ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಮತ್ತು ಶೇರ್ ಮಾಡಿ .

LEAVE A REPLY

Please enter your comment!
Please enter your name here