ಇಲ್ಲಿ ನಡೆದಿರುವಂತಹ ದುರ್ಗಮ್ಮ ದೇವಿ ಬಂಗಾರ ಪ್ರಿಯೆ, ಈ ದೇವಿಯನ್ನು ನಂಬಿ ಬಂದಂತಹ ಭಕ್ತರಿಗೆ ಈ ದುರ್ಗಮ್ಮ ದೇವಿ ಯಾವತ್ತು ಕೈ ಬಿಟ್ಟಿಲ್ಲ. ವ್ಯಾಪಾರದಲ್ಲಿ ಸಹ ಆಗಬಹುದು ಅಥವಾ ಉದ್ಯೋಗದಲ್ಲಿ ಸಹ ಆಗಬಹುದು ಯಾವುದೇ ಕಷ್ಟದಿಂದ ಬಂದಂತಹ ಜನರಿಗೆ ಸಹಾಯವನ್ನು ಮಾಡುತ್ತಿದ್ದಾಳೆ ದುರ್ಗಮ್ಮ ದೇವಿ.
ಹೀಗೆ ವ್ಯಾಪಾರ ಸಂತಾನ ಉದ್ಯೋಗದಲ್ಲಿ ನಷ್ಟ ಹೊಂದಿರುವಂತಹ ಜನರು ಇಲ್ಲಿ ಸಾವಿರಾರು ರೀತಿಯಲ್ಲಿ ಬಂದು ಹೋಗುತ್ತಿದ್ದಾರೆ, ಹಾಗೆ ಈ ದೇವಿಯನ್ನು ಪೂಜೆಯನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ದೇವಸ್ಥಾನದಲ್ಲಿ ಅನೇಕ ರೀತಿಯ ವಿಚಿತ್ರವಾದ ಪವಾಡಗಳು ಕೂಡ ನಡೆಯುತ್ತದೆ. ಹಾಗಾದರೆ ಯಾವ ರೀತಿಯ ಪವಾಡಗಳು ಈ ದೇವಸ್ಥಾನದಲ್ಲಿ ನಡೆಯುತ್ತಿರುವ ಹಾಗೂ ಈ ದೇವಿಯ ಸಂಪೂರ್ಣವಾದ ಮಹಿಮೆಯನ್ನು ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ.
ಈ ದುರ್ಗಮ್ಮ ದೇವಿಯ ಸುಂದರವಾದ ದೇವ ಸ್ಥಾನ ಇರುವುದು ನಮ್ಮ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ, ಈ ಬಳ್ಳಾರಿ ಜಿಲ್ಲೆಯಲ್ಲಿ ಈ ದುರ್ಗಮ್ಮ ದೇವಿ ಬಂಗಾರದ ಮೂರ್ತಿಯನ್ನು ಹೊಂದಿರುವಂತಹ ಈ ದೇವಿಯ ಅತಿ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ, ಇಲ್ಲಿ ನೆಲೆಸಿರುವ ಈ ಕನಕ ದುರ್ಗ ದೇವಿ ಹಲವಾರು ಭಕ್ತರಿಗೆ ಬೆಳೆದಿಲ್ಲ ನೀಡುವಂತಹ ದೇವಿ ಅವಳಾಗಿದ್ದಾಳೆ.
ಈ ಪ್ರದೇಶದಲ್ಲಿ ಹೊಂದಿರುವಂತಹ ಜನರು ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮೊದಲು ಈ ದೇವಿಯ ಹತ್ತಿರ ಬಂದು ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಾರೆ, ಹಾಗೆ ಈ ದೇವಸ್ಥಾನದಲ್ಲಿ ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಎಲ್ಲಾ ರೀತಿಯ ಜಾತಿಯ ಮತದವರು ಕೂಡ ಈ ದೇವಿಯನ್ನು ಪೂಜೆ ಮಾಡುತ್ತಾರೆ .
ಯಾಕೆಂದರೆ ಈ ದೇವಿ ಇಂದ ಆಗುವಂತಹ ಪವಾಡಗಳು ಒಂದಲ್ಲ ಎರಡಲ್ಲ, ಯಾರೋ ಒಬ್ಬ ಭಕ್ತ ಕೂಡ ಹರಕೆಯನ್ನು ಮಾಡಿಕೊಂಡು ಅಥವಾ ಪೂಜೆಯನ್ನು ಮಾಡಿ ತನಗೆ ಆಗುವಂತಹ ಕಷ್ಟವನ್ನು ತೋಡಿಕೊಂಡ ರೆ, ಈ ದೇವಿ ಪವಾಡ ರೂಪದಲ್ಲಿ ಅವರಿಗೆ ಇರುವಂತಹ ಕಷ್ಟಗಳು ನಿವಾರಣೆ ಮಾಡುತ್ತಾರೆ ಎನ್ನುವ ಒಂದು ನಂಬಿಕೆಯಾಗಿದೆ.
ನಾನು ಮೊದಲೇ ಹೇಳಿದಂತೆ ದುರ್ಗಮ್ಮ ದೇವಿ ಇರುವಂತಹ ಸ್ಥಳ ಬಳ್ಳಾರಿ ಆಗಿದ್ದು, ಕೇವಲ ಬಳ್ಳಾರಿ ಜನಗಳು ಮಾತ್ರವೇ ಅಲ್ಲ ಆಂಧ್ರದಿಂದ ತೆಲಂಗಾಣದಿಂದ ಹಾಗೂ ಹಲವಾರು ಬೇರೆ ಬೇರೆ ರಾಜ್ಯಗಳಿಂದ ಕೂಡ ಜನರು ಇವಳ ಸನ್ನಿಧಿಗೆ ಬಂದು ಆಶೀರ್ವಾದವನ್ನು ಪಡೆದು ಕೊಳ್ಳುತ್ತಾರೆ. ಈ ದೇವಿ ಬಳ್ಳಾರಿಯ ಅಧಿದೇವತೆ ಯಾಗಿದ್ದು ಇವಳು ಹುತ್ತದಿಂದ ಜನಿಸಿದ್ದಾಳೆ ಎನ್ನುವ ಉಲ್ಲೇಖ ಅಲ್ಲಿನ ಜನರನ್ನು. ಹಾಗೆ ಕನಕದುರ್ಗ ಎಂದು ಕೂಡ ಹೆಸರು ಬರಲು ಕಾರಣ ಕೇವಲ ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಂತಹ ಸಂಗತಿಯಾಗಿದೆ.
ಹುತ್ತದಿಂದ ಹುಟ್ಟಿ ಬಂದಂತಹ ಈ ದೇವಿಯನ್ನು ಇಂದಿಗೂ ಕೂಡ ಹುತ್ತದಲ್ಲಿ ಪೂಜೆ ಮಾಡುತ್ತಾರೆ, ದಿನಕ್ಕೆ ಐದು ಬಾರಿ ಪೂಜೆ ಮಾಡುತ್ತಿರುವ ಅಂತಹ ಈ ದೇವಿಗೆ ಹತ್ತಾರು ಅಲಂಕಾರಗಳನ್ನು ಮಾಡಿ ಪೂಜೆಯನ್ನು ಮಾಡುತ್ತಾರೆ, ಪುರಾಣದ ಪ್ರಕಾರ ಇಲ್ಲಿನ ಕನಕ ದುರ್ಗ ದೇವಿ ಹುತ್ತದ ರೂಪದಲ್ಲಿ ಒಂದು ಸಾವಿರ ವರ್ಷಗಳ ಹಿಂದೆ ಜನಿಸಿದ್ದಾರೆ ಎಂದು ಹಿರಿಯರು ಕೂಡ ಹೇಳುತ್ತಾರೆ. ಪ್ರತಿ ಶುಕ್ರವಾರ ಈ ದೇವಿಯ ಪ್ರಿಯವಾಗಿದ್ದು ಹಲವಾರು ಜನರು ಶುಕ್ರವಾರದಂದು ಈ ದೇವಿಯ ಹತ್ತಿರ ಪೂಜೆಯನ್ನು ಮಾಡಿಸಿ ಕೊಳ್ಳುತ್ತಾರೆ, ಈ ದೇವಿಗೆ ನಿಂಬೆಹಣ್ಣು ಅತಿ ಪ್ರಿಯವಾಗಿತ್ತು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದು ನಿಂಬೆ ಹಣ್ಣಿನಿಂದ ಪೂಜೆ ಮಾಡಿಸಿಕೊಂಡು ಹಾಗೆ ದೀಪವನ್ನು ಹಚ್ಚಿ ಮನೆಗೆ ತೆರಳುತ್ತಾರೆ.
ಹಾಗೆ ಇನ್ನೊಂದು ವಿಷಯ ಏನಪ್ಪಾ ಅಂದರೆ ಈ ದೇವಿಗೆ ಬಂಗಾರ ಇಷ್ಟವಾಗಿದ್ದು ,ಸದ್ಯಕ್ಕೆ ಈ ದೇವಿಗೆ ಬಂಗಾರದಿಂದ ಪೂಜೆಯನ್ನು ಮಾಡಲಾಗುತ್ತದೆ, ಈ ದೇವಿಯ ಹತ್ತಿರ 8 ಕೆಜಿ ಬಂಗಾರ ವಿದ್ದು ಇದನ್ನು ಕೇವಲ ಪೂಜೆ ಮಾಡುವ ಸಮಯದಲ್ಲಿ ಮಾತ್ರವೇ ಈ ದೇವಿಗೆ ಧರಿಸುತ್ತಾರೆ, ಹಾಗೂ ಈ ದೇವಿಯ ದರ್ಶನ ಕೇವಲ ವರ್ಷದಲ್ಲಿ ನಾಲ್ಕು ಸಾರಿ ಮಾತ್ರವೇ ಬಂಗಾರವನ್ನು ಧರಿಸುತ್ತಾರೆ ಅದು ಯುಗಾದಿ ಶಿವರಾತ್ರಿ ಹಾಗೂ ದೀಪಾವಳಿ ಎನ್ನುವ ಹಬ್ಬದಲ್ಲಿ. ಹೀಗೆ ಅಲಂಕಾರ ಮಾಡಿಕೊಂಡಂತಹ ಮಹಿಮೆ ಅಂತಹ ದೇವಿಯನ್ನು ನೋಡುವುದೇ ಒಂದು ಸ್ವರ್ಗಕ್ಕೆ ಕೈ ಹಾಕಿದಂತೆ. ಅಂತ ಸುಂದರವಾಗಿ ಕನಕ ದುರ್ಗಯ್ಯ ಕಾಣುತ್ತಾಳೆ.
ಪ್ರತಿವರ್ಷ ಬಳ್ಳಾರಿಯಲ್ಲಿ ಕನಕ ದುರ್ಗಯ್ಯ ದೇವಸ್ಥಾನದಲ್ಲಿ ಅದರಲ್ಲೂ ಅಮಾವಾಸ್ಯೆಯಂದು ವರ್ಷಕ್ಕೆ ಒಂದು ಸಾರಿ ಸಿಡಿ ಬಂಡಿ ಎನ್ನುವ ಉತ್ಸವ ಕೂಡ ಇಲ್ಲಿ ಜರುಗುತ್ತದೆ. ಈ ಉತ್ಸವದ ಹಿಂದೆ ಹಲವಾರು ತರನಾದ ಇತಿಹಾಸವಿದೆ. ಬಳ್ಳಾರಿಯಲ್ಲಿ ಸಾಂಕ್ರಾಮಿಕ ರೋಗ ಬಂದಾಗ ಸಿಡಿ ಬಂಡೆ ಎನ್ನುವ ಉತ್ಸವನ್ನು ಮಾಡುತ್ತಾರೆ, ಹೀಗೆ ಉತ್ಸವವನ್ನು ಮಾಡಿದ ನಂತರ ಬಳ್ಳಾರಿಯಲ್ಲಿ ಸಾಂಕ್ರಾಮಿಕ ರೋಗ ಕಡಿಮೆಯಾಗಿ ಹಲವಾರು ಜನರು ಪ್ರಾಣ ಕಳೆದುಕೊಳ್ಳುವುದು ಹೋಗುತ್ತದೆ. ಆದ್ದರಿಂದ ಈ ರೀತಿಯ ಸಂಪ್ರದಾಯ ಇಂದಿಗೂ ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಬಳ್ಳಾರಿಯಲ್ಲಿ ಇರುವಂತಹ ಈ ಕನಕದುರ್ಗ ದೇವಸ್ಥಾನದ ಮಹಿಮೆ ಅಪಾರ, ನಿಮಗೇನಾದರೂ ಸಮಯವಿದ್ದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ಹಾಗೆ ಕನಕ ದುರ್ಗಯ್ಯ ಆಶೀರ್ವಾದವನ್ನು ಪಡೆದು ಕೊಳ್ಳಿ. ನೀವ್ ಇನ್ನು ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ಇವತ್ತು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.