ನಮಸ್ಕಾರ ಓಂ ಶ್ರೀ ಲಕ್ಷ್ಮಿ ದೇವಿಯೆ ನಮಃ , ಶ್ರೀ ಗೊರವನಹಳ್ಳಿ ಲಕ್ಷ್ಮಿ ದೇವಿ ದೇವಸ್ಥಾನದ ಬಗ್ಗೆ ನೀವು ಕೇಳಿರುತ್ತೀರ. ಅನೇಕ ಜನರು ತಮ್ಮ ಸಮಸ್ಯೆಗಳನ್ನು ಹೊತ್ತೊಯ್ದು ದೇವಿಯಲ್ಲಿ ಕೇಳಿಕೊಂಡು ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಂಡು .ಬರುವ ಈ ಪುಣ್ಯ ಕ್ಷೇತ್ರದ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಇದರ ಇತಿಹಾಸ ಹಾಗೆ ಗೊರವನಹಳ್ಳಿ ಲಕ್ಷ್ಮೀದೇವಿ ದೇವಾಲಯದ ಅಕ್ಕಪಕ್ಕದಲ್ಲಿರುವ ಪುಣ್ಯಕ್ಷೇತ್ರಗಳ ಬಗೆಗಿನ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ.ಗೊರವನಹಳ್ಳಿ ಲಕ್ಷ್ಮೀ ದೇವಿಯ ಪುಣ್ಯ ಕ್ಷೇತ್ರವಾಗಿರುವ ಈ ದೇವಾಲಯದಲ್ಲಿ ಲಕ್ಷ್ಮೀ ದೇವಿಯ ಆರಾಧನೆಯೂ ನಡೆಯುತ್ತದೆ, ಲಕ್ಷ್ಮೀದೇವಿಯ ಪುಣ್ಯಕ್ಷೇತ್ರ ಅಂದ ಕೂಡಲೇ ನಮಗೆ ನೆನಪಾಗುವುದು ಕೊಲ್ಲಾಪುರ ಕ್ಷೇತ್ರ.
ಆದರೆ ಕರ್ನಾಟಕದಲ್ಲಿ ಅತ್ಯಂತ ಪ್ರಖ್ಯಾತಿಯನ್ನು ಹೊಂದಿರುವಂತಹ ಈ ಪುಣ್ಯಕ್ಷೇತ್ರವು ಭಕ್ತ ಸಾಗರವನ್ನೇ ಹೊಂದಿದೆ ಇಲ್ಲಿಯ ಲಕ್ಷ್ಮೀದೇವಿಯ ದರುಶನವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರತಿ ದಿನ ಜನರು ಈ ಕ್ಷೇತ್ರಕ್ಕೆ ಧಾವಿಸಿ ಬರುತ್ತಾರೆ.ಭಕ್ತಾದಿಗಳು ಸಂತಾನ ಪ್ರಾಪ್ತಿಗಾಗಿ ತಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಅನೇಕ ಸಮಸ್ಯೆಗಳನ್ನು ಹೊತ್ತು ತಾಯಿಯಲ್ಲಿ ಬೇಡಿಕೊಳ್ಳಲು ಬರುತ್ತಾರೆ. ಮತ್ತು ಶ್ರೀ ಕ್ಷೇತ್ರ ಗೊರವನಹಳ್ಳಿ ಲಕ್ಷ್ಮೀ ದೇವಿ ದೇವಾಲಯದಲ್ಲಿ ಮುಖ್ಯವಾಗಿ ಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವ ಕಾರಣ ಮಂಗಳವಾರ ಶುಕ್ರವಾರ ಮತ್ತು ಭಾನುವಾರ ದಿವಸ ಇದೊಂದು ವಿಶೇಷವಾದ ಪೂಜೆಗಳು ತಾಯಿಗೆ ನೆರವೇರುತ್ತದೆ.ಪ್ರತಿ ದಿನವೂ ಜನ ಜಾತ್ರೆಯನ್ನು ನಾವು ಇಲ್ಲಿ ಕಾಣಬಹುದಾಗಿದ್ದು ಈ ದೇವಾಲಯದ ಇತಿಹಾಸದ ಬಗ್ಗೆ ನಾವು ಹೇಳುವುದಾದರೆ ಒಮ್ಮೆ ಗೊರವನಹಳ್ಳಿಗೆ ಸೇರಿದ ಅಪ್ಪಯ್ಯ ಎಂಬ ವ್ಯಕ್ತಿಯು ಗೀತಾ ಜಲಾಶಯದ ದಡದಲ್ಲಿ ಕೆಲಸವನ್ನು ಮಾಡುತ್ತಿರುವಾಗ ಒಂದು ಅಶರೀರವಾಣಿ ಕೇಳಿಸುತ್ತದೆ.
ಅದೇನೆಂದರೆ ನಾನು ನಿನ್ನ ಮನೆಗೆ ಬರುತ್ತೇನೆ ನನ್ನನ್ನು ಕರೆದುಕೊಂಡು ಹೋಗು ಎಂದು ಇದರಿಂದ ವಿಚಲಿತನಾದ ಅಪ್ಪಯ್ಯ ತನ್ನ ತಾಯಿಯ ಬಳಿ ಇದನ್ನು ಹೇಳಿಕೊಳ್ಳುತ್ತಾನೆ ಆಗ ತಾಯಿ ಹೇಳಿಕೊಟ್ಟ ಪರಿಹಾರವನ್ನು ಮಾರನೆ ದಿವಸ ಅಪ್ಪಯ್ಯ ಮಾಡುತ್ತಾನೆ ಅದೇನೆಂದರೆ ಅಶರೀರವಾಣಿಯ ಧ್ವನಿ ಕೇಳಿದಾಗ ದೆವ್ವವಿದೆ ಬರಬೇಡ ದೇವರಾದರೆ ಮನೆಗೆ ಬಾ ಎಂದು ಅಪ್ಪಯ್ಯ ಹೇಳುತ್ತಾನೆ.ಎರಡು ಮೂರು ಬಾರಿ ಹೀಗೆ ಅಶರೀರವಾಣಿ ಕೇಳಿಸಿದಾಗ ಅಪ್ಪಯ್ಯ ವರ್ಗವಾದರೆ ಬರಬೇಡ ದೇವರಾದರೆ ಬಾ ಎಂದು ಹೇಳಿದಾಗ ಲಕ್ಷ್ಮೀದೇವಿಯು ಅಪ್ಪಯ್ಯನ ಮನೆಗೆ ಬಂದು ನೆಲೆಸುತ್ತಾಳೆ ಮೊದಲಿಗೆ ಚಿಕ್ಕ ಗುಡಿಯನ್ನು ಕಟ್ಟಿದ ಲಕ್ಷ್ಮೀದೇವಿಗೆ ನಂತರ ದೊಡ್ಡ ದೇವಾಲಯವನ್ನು ಕಟ್ಟಲಾಗಿದೆ ಈ ದೇವಾಲಯದಲ್ಲಿ ದೊಡ್ಡ ಗೋಪುರವಿದೆ ಗೋಪುರದಲ್ಲಿ ಅಷ್ಟಲಕ್ಷ್ಮಿಯರು ಋಷಿ ಮುನಿಗಳ ವಿಗ್ರಹವನ್ನು ಕೆತ್ತಲಾಗಿದೆ.
ಕಲಿಯುಗದ ಕಾಮಧೇನು ಎಂದು ಹೆಸರಾಗಿರುವ ಈ ದೇವಾಲಯವು ತುಮಕೂರಿನ ಕೊರಟಗೆರೆಗೆ ಸೇರಿದ ಗೊರವನಹಳ್ಳಿ ಗ್ರಾಮದಲ್ಲಿದೆ, ಈ ದೇವಾಲಯದಿಂದಲೇ ಈ ಒಂದು ಗ್ರಾಮ ಚಿರಪರಿಚಿತವಾಗಿದ್ದು ಬೆಂಗಳೂರಿನಿಂದ ಎಂಬತ್ತು ಎಂಟು ಕಿಲೋಮೀಟರ್ ದೂರದಲ್ಲಿದ್ದು ತುಮಕೂರಿನಿಂದ ಕೇವಲ ಅರುವತ್ತು ಏಳು ಕಿಲೋಮೀಟರ್ ದೂರದಲ್ಲಿದೆ ಶ್ರೀ ಗೊರವನಹಳ್ಳಿ ಲಕ್ಷ್ಮಿ ದೇವಿಯ ದೇವಾಲಯವೂ.ಗೊರವನಹಳ್ಳಿ ಲಕ್ಷ್ಮೀ ದೇವಿ ದೇವಾಲಯಕ್ಕೆ ಬೆಂಗಳೂರಿನಿಂದ ನೇರ ಬಸ್ ವ್ಯವಸ್ಥೆ ಇದೆ ತುಮಕೂರಿನಿಂದ ಕೂಡ ದೇವಾಲಯಕ್ಕೆ ಅನೇಕ ಬಸ್ಗಳ ವ್ಯವಸ್ಥೆ ಇರುವುದನ್ನು ನಾವು ಗಮನಿಸಬಹುದಾಗಿದೆ.
ಗೊರವನಹಳ್ಳಿ ಲಕ್ಷ್ಮೀ ದೇವಿಯ ಅಕ್ಕಪಕ್ಕದಲ್ಲಿ ಗೀತಾ ಜಲಾಶಯ ,ದೇವರಾಯ ದುರ್ಗ, ಶಿವಗಂಗೆ, ಸಿದ್ದರಬೆಟ್ಟ, ನಮೂದೊಚಿಲುಮೆ ,ಎಂಬ ಸುಂದರ ತಾಣಗಳು ಕೂಡ ಇವೆ. ಇದಿಷ್ಟು ಇವತ್ತಿನ ಶ್ರೀ ಗೊರವನಹಳ್ಳಿ ಲಕ್ಷ್ಮಿ ದೇವಿಯ ಪುಣ್ಯಕ್ಷೇತ್ರವನ್ನು ಕುರಿತು ಕಿರು ಪರಿಚಯ ಮಾಹಿತಿ ಇಷ್ಟವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.