ಸ್ನೇಹಿತರೇ ನಮ್ಮ ಸುತ್ತಮುತ್ತ ಹಲವಾರು ರೀತಿಯ ಅಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಗಳಿರುತ್ತಾರೆ ಅದು ನಮ್ಮ ಗಮನಕ್ಕೆ ಬಂದಿರುತ್ತದೆ. ಆದರೆ ವ್ಯಕ್ತಿಗಳ ವ್ಯಕ್ತಿತ್ವವನ್ನು ಅಳತೆ ಮಾಡುವುದು ಅಷ್ಟು ಸುಲಭವಲ್ಲ.ಕೆಲವೊಬ್ಬರು ಅವರು ಮಾಡುತ್ತಿರುವ ಕೆಲಸ ಮತ್ತು ಅವರಿಗೆ ಬರುತ್ತಿರುವ ಸಂಬಳ ಅವರು ಹಾಕಿರುವ ಬಟ್ಟೆ ಇವುಗಳ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಧಾರ ಮಾಡುವ ಪ್ರಯತ್ನವನ್ನು ಮಾಡಿರುತ್ತಾರೆ ಆದರೆ ಈ ರೀತಿ ನಿರ್ಧಾರ ಮಾಡುವುದು ಒಳ್ಳೆಯದಲ್ಲ.ಪ್ರತಿಯೊಬ್ಬರಿಗೂ ಕೂಡ ಅವರದೇ ಆದಂತಹ ವ್ಯಕ್ತಿತ್ವ ಇರುತ್ತದೆ ಎಂಬುದು ಅವರ ವ್ಯಕ್ತಿತ್ವದ ಪರಿಚಯ ನಮಗೆ ಆದ ನಂತರ ಮಾತ್ರವೇ ನಮಗೆ ತಿಳಿಯುತ್ತದೆ ಅದಕ್ಕೆ ಉದಾಹರಣೆಯಾಗಿ ಈ ದಿನ ನಾವು ನಿಮಗೊಂದು ಉತ್ತಮವಾದಂತಹ ಘಟನೆಯ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ .
ಈ ಘಟನೆ ನೀವು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿದೆ ಮತ್ತು ನಮ್ಮ ಮನಸ್ಸಿನಲ್ಲಿ ಒಂದು ಒಳ್ಳೆಯ ರೀತಿ ಆದಂತಹ ಭಾವನೆಯನ್ನು ಕೂಡ ಮೂಡಿಸುತ್ತದೆ ಆ ಘಟನೆ ಯಾವುದು ಘಟನೆಯ ನಡೆದದ್ದಾದರೂ ಎಲ್ಲಿ ಎಂಬ ಕುತೂಹಲ ಎಲ್ಲರಿಗೂ ಒಂದು ಕ್ಷಣ ಬರುತ್ತದೆ.ಈ ಘಟನೆ ನಡೆದಿರುವುದು ಬೆಂಗಳೂರಿನ ಕೆ ಆರ್ ನಗರ ಏರಿಯಾದ ಒಂದು ಶಾಲೆಯ ಎದುರು ಸಾಮಾನ್ಯವಾಗಿ, ನಮ್ಮ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚಾಟ್ಸ್ ಗಳ ಹಾವಳಿ ಹೆಚ್ಚಾಗಿದೆ.ಅದರಲ್ಲೂ ಕೂಡ ಗೋಬಿ ಪಾನಿ ಪೂರಿಗಳನ್ನು ತಿನ್ನುವವರು ಹೆಚ್ಚಿನ ಸಂಖ್ಯೆಯಲ್ಲಿ ಹುಡುಗಿಯರು, ಅದರ ಜೊತೆಯಲ್ಲಿ ಕಾಲೇಜು ಅಥವಾ ಸ್ಕೂಲ್ ಓದುತ್ತಿರುವ ಹುಡುಗಿಯರೂ ಇವಕ್ಕೆ ತಮ್ಮನ್ನು ತಾವು ಒಗ್ಗಿಸಿಕೊಂಡಿದ್ದಾರೆ ಎಂದರೂ ತಪ್ಪಾಗುವುದಿಲ್ಲ,
ಆದರೆ ಅವರೆಲ್ಲರೂ ಕೂಡ ಹೆಚ್ಚಾಗಿ ಉತ್ತರ ಭಾರತದಿಂದ ಬಂದವರೇ ಆಗಿರುತ್ತಾರೆ ಅವರಿಗೆ ಕನ್ನಡ ಬರದಿದ್ದರೂ ಕೂಡ ಇಲ್ಲಿ ನೆಲೆಸಿ ತಮ್ಮ ಭಾಷೆಯಲ್ಲಿಯೇ ಜನರು ವ್ಯವಹಾರ ಮಾಡುವ ರೀತಿಯಲ್ಲಿ ಮಾಡಿಕೊಂಡಿದ್ದಾರೆ.ಅವರ ಬಳಿ ಹುಡುಗಿಯರು ಪಾನಿಪುರಿ ತಿನ್ನಲೆಂದು ಬಂದಾಗ ಅವರನ್ನು ರೇಗಿಸುವ ಕೆಲಸವನ್ನು ಕೂಡ ಹಲವಾರು ಪಾನಿಪುರಿ ಮಾರುವ ಜನರು ಮಾಡಿಕೊಂಡು ಬಂದಿದ್ದಾರೆ ಆದರೆ ಇಲ್ಲೊಬ್ಬ ವಿಶಿಷ್ಟವಾದ ವ್ಯಕ್ತಿ ಇದ್ದಾನೆ ಅವನ ಹೆಸರು ರಾಮ್ ಸಿಂಗ್ ಇವನು ಒಂದು ಬಾರಿ ಪಾನಿಪೂರಿಯನ್ನು ಈ ಕೆ ಆರ್ ಪುರಂನ ಒಂದು ಸ್ಕೂಲಿನ ಮುಂದೆ ಮಾರುತ್ತಾ ಇರುವಂತಹ ಸಂದರ್ಭದಲ್ಲಿ.ಸೈಕಲ್ ನಲ್ಲಿ ಬರುತ್ತಿದ್ದ ಒಂದು ಹುಡುಗಿಯರ ಗುಂಪು ಮತ್ತೊಂದು ಹುಡುಗಿಯನ್ನು ರೇಗಿಸುತ್ತಾರೆ ಹಾಗೆ ರೇಗಿಸಲು ಕಾರಣ ಆ ಹುಡುಗಿಯ ಯೂನಿಫಾರ್ಮ್ ಹಿಂದೆ ಹರಿದು ಹೋಗಿರುತ್ತದೆ ಆ ಕಾರಣದಿಂದಾಗಿ ಆ ಎಲ್ಲ ಹುಡುಗಿಯರು ಕೂಡ ಈ ಹುಡುಗಿಯನ್ನು ರೇಗಿಸುತ್ತಿರುತ್ತಾರೆ .
ಅದನ್ನು ಕಂಡ ರಾಮಸಿಂಗ್ ಆಗಲೇ ತಕ್ಷಣ ಆ ಹುಡುಗಿಯನ್ನು ಕರೆತಂದು ಅಂಗಡಿ ಬಳಿಯಲ್ಲಿ ಕೂರಿಸಿ ಆತನಿಗೆ ವ್ಯಾಪಾರ ವಾಗಿದ್ದ ಹಣವನ್ನು ತೆಗೆದುಕೊಂಡು ಹೋಗಿ ಆ ಹುಡುಗಿಗೆ ಒಂದು ಸ್ವೆಟರ್ ಅನ್ನು ಖರೀದಿ ಮಾಡಿಕೊಂಡು ಬರುತ್ತಾನೆ ಅದನ್ನು ಆ ಹುಡುಗಿಗೆ ಹಾಕಿಸಿ ಮನೆಗೆ ಕಳುಹಿಸುತ್ತಾನೆ.ಅದಾದ ನಂತರ ಆ ಹುಡುಗಿ ಮನೆಗೆ ಹೋಗಿ ತನ್ನ ತಾಯಿಯ ಬಳಿ ಎಲ್ಲವನ್ನೂ ವಿವರಿಸಿ ತಾಯಿಯನ್ನು ಕರೆದುಕೊಂಡು ಆ ಪಾನಿಪುರಿ ಅವನ ಬಳಿ ಬಂದು ತಾಯಿ ಮಗಳು ಇಬ್ಬರೂ ಕೂಡ ಮನಃಪೂರ್ವಕವಾಗಿ ಅವರಿಗೆ ಧನ್ಯವಾದವನ್ನು ಹೇಳುವುದನ್ನು ನಾವು ಇಲ್ಲಿ ಗಮನಿಸಬಹುದಾಗಿದೆ.ಈ ರೀತಿ ಈ ಘಟನೆಗಳಿಂದ ನಾವು ಗಮನಿಸಬೇಕಾದ ಅಂಶವೆಂದರೆ ಕೆಲವೊಬ್ಬರು ಒಳ್ಳೆಯವರು ಇರುತ್ತಾರೆ ಕೆಲವೊಬ್ಬರು ಕೆಟ್ಟವರು ಇರುತ್ತಾರೆ ಯಾರ ವ್ಯಕ್ತಿತ್ವದ ಪರಿಚಯವು ಆಗದೆ ನಾವು ಅವರು ಹೇಗೆ ಎಂದು ನಿರ್ಧಾರಕ್ಕೆ ಬರುವುದು ತಪ್ಪು ಅಲ್ಲವೇ ಧನ್ಯವಾದಗಳು.