ಇಲ್ಲಿ ಜೀವಂತವಾಗಿ ಉಸಿರಾಡುತ್ತಿರುವ ಹಾಗೂ ರಾಮನಾಮ ಜಪಿಸುವ ಆಂಜನೇಯ ಮತ್ತು ಅನೇಕ ಪವಾಡ ಮಾಡುತ್ತಿರುವ ಆಂಜನೇಯನ ದೇವಸ್ಥಾನ ಇರುವುದು ಎಲ್ಲಿ ಗೊತ್ತ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಪ್ರಿಯ ವೀಕ್ಷಕರೇ ನಾವು ಈ ದಿನದ ಮಾಹಿತಿಯಲ್ಲಿ ಒಂದು ಅತ್ಯದ್ಭುತವಾದ ಮಾಹಿತಿಯನ್ನು ತಿಳಿದುಕೊಳ್ಳೋಣ, ಇದನ್ನು ನೀವು ತಿಳಿದರೆ ನಿಮಗೂ ಕೂಡ ಅಚ್ಚರಿ ಆಗುವುದರಲ್ಲಿ ಸಂಶಯವಿಲ್ಲ,ನಿಜಕ್ಕೂ ಇದು ನಮ್ಮ ದೇಶದಲ್ಲಿಯೇ ನಡೆಯುತ್ತಿದೆಯಾ ಎಂಬ ಅಚ್ಚರಿ ನಿಮ್ಮಲ್ಲಿ ಮೂಡುತ್ತದೆ. ನೀವೇನಾದರೂ ಆಂಜನೇಯನ ಭಕ್ತರಾಗಿ ಇದ್ದರೆ ಸಂಪೂರ್ಣ ಮಾಹಿತಿಯನ್ನು ತಿಳಿದು,ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವ ಮುಖಾಂತರ ಈ ಒಂದು ಆಂಜನೇಯನ ಮಹಾತ್ಮೆಯನ್ನು ಪ್ರತಿಯೊಬ್ಬರಿಗೂ ತಿಳಿಸಿಕೊಡಿ ಹಾಗೂ ಮಾಹಿತಿಗೆ ಲೈಕ್ ಮಾಡಿ.ಹೌದು ನಾನು ಹೇಳಲು ಹೊರಟಿರುವ ದೇನೆಂದರೆ ಇಲ್ಲಿಯ ಆಂಜನೇಯ ಸ್ವಾಮಿಯ ದೇವಾಲಯದಲ್ಲಿರುವ ಆಂಜನೇಯನ ವಿಗ್ರಹವು ಜೀವಂತವಾಗಿದೆ ಅಂತ ಮತ್ತು ಉಸಿರಾಡುವ ಶಬ್ದವು ಕೂಡ ಕೇಳಿಸುತ್ತದೆ ಅಂತೆ,

ನಂಬಲು ಸಾಧ್ಯವಾಗದೇ ಇರಬಹುದು, ಆದರೆ ಇಲ್ಲಿಯ ಜನರ ನಂಬಿಕೆಯ ಪ್ರಕಾರ ಇಲ್ಲಿರುವ ಆಂಜನೇಯ ಸ್ವಾಮಿಯು ಜೀವಂತವಾಗಿದ್ದು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ನಂಬಲಾಗಿದೆ.ಅಷ್ಟಕ್ಕೂ ಈ ದೇವಾಲಯವಿರುವುದು ಉತ್ತರಪ್ರದೇಶದ ರಾಜ್ಯಕ್ಕೆ ಸೇರಿರುವ ಇಟಾವಾ ಎಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ರೂರ ಎಂಬ ಹಳ್ಳಿಯಲ್ಲಿ ಯಮುನಾ ನದಿಯ ದಡದಲ್ಲಿ ಇರುವ ದೇವಾಲಯದಲ್ಲಿ ಆಂಜನೇಯ ಸ್ವಾಮಿಯೂ ನೆಲೆಯೂರಿದ್ದಾರೆ, ಈ ಆಂಜನೇಯ ಸ್ವಾಮಿಯ ಉಸಿರಾಡುವುದು ಮತ್ತು ರಾಮ ಜಪ ಮಾಡುವುದು ಕೂಡ ತಿಳಿಯುತ್ತದೆ ಅಂತ.ಈ ದೇವಾಲಯದ ಬಗೆಗಿನ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು, ಇದರ ಸ್ಥಳ ಪುರಾಣವನ್ನು ಹೇಳಬೇಕಾದರೆ, ಈ ಪ್ರದೇಶದ ರಾಜನು ಒಮ್ಮೆ ಆಂಜನೇಯ ಸ್ವಾಮಿಯ ವಿಗ್ರಹವನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ,

ಎಷ್ಟೇ ಕಷ್ಟಪಟ್ಟರೂ ವಿಗ್ರಹವನ್ನು ಭೂಮಿಯಿಂದ ಬೇರ್ಪಡಿಸುವುದಕ್ಕೆ ಸಾಧ್ಯವಾಗುವುದಿಲ್ಲ ಆ ದಿನ ರಾತ್ರಿ ಆಂಜನೇಯ ಸ್ವಾಮಿಯು ರಾಜನ ಕನಸಿಗೆ ಬಂದು, ತನಗೆ ಸಾಕಾಗುವಷ್ಟು ಸಿಹಿಯನ್ನು ಮತ್ತು ಹಾಲನ್ನು ನೀಡಿದರೆ ನಾನು ಭೂಮಿಯಿಂದ ಮೇಲೆ ಬರುತ್ತೇನೆ ಎಂದು ಹೇಳುತ್ತಾರೆ.ಮರಳಿ ದಿವಸ ರಾಜ ಕೆಜಿ ಕೆಜಿ ಗಟ್ಟಲೆ ಲಾಡು ಮತ್ತು ಲೀಟರ್ಗಟ್ಟಲೆ ಹಾಲನ್ನು ತರಿಸಿ ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಸಮರ್ಪಿಸುತ್ತಾರೆ ಎಷ್ಟೇ ಲಾಡು ಹಾಲನ್ನು ಸಮರ್ಪಿಸಿದರೂ ಆಂಜನೇಯ ಸ್ವಾಮಿಯೂ ತೃಪ್ತಿಯೇ ಆಗುವುದಿಲ್ಲ, ಹತಾಶನಾದ ರಾಜನು ಆ ಕೆಲಸವನ್ನು ಅಲ್ಲಿಯೇ ಬಿಟ್ಟು ಆಂಜನೇಯ ಸ್ವಾಮಿಗೆ ತನ್ನ ತಪ್ಪಿನ ಅರಿವಾಯಿತು ಎಂದು ಕೇಳಿಕೊಳ್ಳುತ್ತಾರೆ.ನಂತರ ರಾಜನು ಆಂಜನೇಯ ಸ್ವಾಮಿ ವಿಗ್ರಹ ಇರುವ ಸ್ಥಳದಲ್ಲಿ ದೇವಾಲಯವನ್ನು ಕಟ್ಟಿಸುತ್ತಾರೆ, ಇಲ್ಲಿಗೆ ಬರುವ ಭಕ್ತಾದಿಗಳು ಆಂಜನೇಯ ಸ್ವಾಮಿಗೆ ಕೆಜಿಗಟ್ಟಲೆ ಲಾಡುವನ್ನು ತಂದು ಸಮರ್ಪಣೆ ಮಾಡುತ್ತಾರೆ .

ಮತ್ತು ತಮ್ಮ ಕಷ್ಟಗಳನ್ನು ಕೂಡ ಹೇಳಿಕೊಳ್ಳುತ್ತಾರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕೂಡ ಇಲ್ಲಿ ದೊರೆಯುತ್ತದೆ ಎಂದು ಭಕ್ತಾದಿಗಳು ನಂಬಿದ್ದು, ಈ ಒಂದು ದೇವಾಲಯವಿರುವುದು ಉತ್ತರ ಪ್ರದೇಶದಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ರೂರ ಎಂಬ ಹಳ್ಳಿಯಲ್ಲಿ.ಇಲ್ಲಿ ಆಂಜನೇಯ ಸ್ವಾಮಿಯ ಉಸಿರಾಡುವ ಶಬ್ದವೂ ಕೂಡ ಕೇಳಿಬರುತ್ತದೆ ಮತ್ತು ಬಾಯಿಯಲ್ಲಿ ಗುಳಿಯಿದ್ದು, ಇಲ್ಲಿಂದ ನೀರು ಗುಳ್ಳೆಗಳು ಬರುವುದನ್ನು ಕೂಡ ನಾವು ಗಮನಿಸಬಹುದಾಗಿದೆ ಮತ್ತು ಇಲ್ಲಿಯ ವಿಗ್ರಹದ ಬಾಯಿಯಿಂದ ರಾಮಜಪ ಮಾಡುವ ಶಬ್ದವನ್ನು ಕೂಡ ಇಲ್ಲಿಗೆ ಬರುವ ಭಕ್ತಾದಿಗಳು ಕೇಳಿಸಿ ಕೊಂಡಿರುವುದಾಗಿ ಕೂಡ ಹೇಳಿದ್ದು,ಭಕ್ತಾದಿಗಳು ತಮ್ಮ ಕಷ್ಟಗಳನ್ನು ಹೇಳಿಕೊಂಡು ಆಂಜನೇಯಸ್ವಾಮಿಯ ಮೊರೆ ಹೋಗಿ ತಮ್ಮ ಕಷ್ಟಗಳಿಗೆ ಪರಿಹಾರವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ, ಹಾಗಾದರೆ ನೀವು ಒಮ್ಮೆ ಆಂಜನೇಯ ಸ್ವಾಮಿಯ ಈ ದೇವಾಲಯಕ್ಕೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಅಚ್ಚರಿಯನ್ನು ನೀವು ಕೂಡ ಕಣ್ತುಂಬಿಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *