ಇಲ್ಲಿರುವಂತಹ ದೇವರ ಮೂರ್ತಿ ಅಪರೂಪದ ಮೂರ್ತಿ ಆಗಿದ್ದು, ಈ ರೀತಿಯ ವಿಗ್ರಹವನ್ನು ನೀವು ಎಲ್ಲಿ ಕೂಡ ನೋಡಲು ಸಾಧ್ಯವೇ ಇಲ್ಲ, ಈ ಮೂರ್ತಿಯನ್ನು ಒಂಬತ್ತು ಬಗೆಯ ವಿಷದಿಂದ ತಯಾರು ಮಾಡಿದ್ದಾರೆ, ಹಾಗೆಯೇ ಈ ಮೂರ್ತಿಯನ್ನು ಹೇಗೆ ಮಾಡಿದಂತಹ ಬಗೆಯ ವಿಚಾರವನ್ನು ಇಲ್ಲಿವರೆಗೂ ಯಾರಿಗೂ ಕೂಡ ಬೇಧಿಸಲು ಯಾವ ವಿಜ್ಞಾನಿಗಳು ಕೈಯಲ್ಲಿ ಕೂಡ ಆಗಿಲ್ಲ. ಹಾಗಾದರೆ ಬನ್ನಿ ಈ ದೇವರ ಮೂರ್ತಿ ಇರುವುದಾದರೂ ಎಲ್ಲಿ ಹಾಗೂ ಇನ್ನಷ್ಟು ಹಲವಾರು ಕುತೂಹಲದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇನೆ ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಿ.

ನಿಮಗೆ ಗೊತ್ತಿರಬಹುದು ದೇವರ ಮೂರ್ತಿಯನ್ನು ಎಲ್ಲಾ ದೇವಸ್ಥಾನಗಳಲ್ಲಿ ಸಾಲಿಗ್ರಾಮ ಶಿಲೆಗಳಿಂದ ಅಥವಾ ಅಮೃತ ಶಿಲೆಗಳಿಂದ ಮಾಡುತ್ತಾರೆ, ಹಾಗೂ ಕೆಲವೊಂದು ದೇವಸ್ಥಾನಗಳಲ್ಲಿ ಅದರಲ್ಲೂ ಹಳೆಯ ದೇವಸ್ಥಾನಗಳಲ್ಲಿ ಪಂಚಲೋಹ ಗಳಿಂದಲೂ ಕೂಡ ಮಿಶ್ರಣ ಮಾಡಿ ದೇವರ ಶಿಲೆಯನ್ನು ಮಾಡಿರುವುದು ನೀವು ನೋಡಿರಬಹುದು. ಅದಕ್ಕೆ ಕಾರಣ ಆ ಶಿಲೆಗಳು ತುಂಬಾ ಕಾಲ ಹಾಗೂ ತುಂಬಾ ವರ್ಷ ಬಾಳಿಕೆ ಬರಲಿ ಎಂದು. ಆದರೆ ಇಲ್ಲಿರುವಂತಹ ಈ ಮೂರು ಜನ ವಿಗ್ರಹ ತಯಾರಾಗಿದ್ದು 9 ವಿಷ ಗಳಿಂದ. ಹೀಗೆ ವಿಷದಿಂದ ವಿಗ್ರಹವನ್ನು ತಯಾರಿಸುವುದಕ್ಕೆ ಆಗುತ್ತದೆಯೇ ಎನ್ನುವುದಕ್ಕೆ ನಿಜವಾಗಲೂ ನಂಬುವುದಕ್ಕೆ ಆಗದೇ ಇರುವಂತಹ ವಿಚಾರವಾಗಿದೆ ಆದರೂ ಕೂಡ ಇದು ಸತ್ಯದ ಮಾತು.

ಮುರುಗ ಸ್ವಾಮಿಯ ಶಿಲೆಯ ವಿಗ್ರಹ ಇರುವಂತಹ ಪ್ರದೇಶವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿರುವ ಅಂತಹ ಪಳನಿ ಯಲ್ಲಿದೆ  ಈ ತರದ ಒಂದು ದೇವಸ್ಥಾನ. ಇಲ್ಲಿರುವ ಈ ಮುರುಗ ಸ್ವಾಮಿ ದೇವಸ್ಥಾನದ ವಿಗ್ರಹ ಕೇವಲ 9 ವಿಷಯಗಳಿಂದ ತಯಾರಾಗಿದೆ ಎಂದು ಹಲವಾರು ಪುರಾಣಗಳು ಉಲ್ಲೇಖಿಸಿವೆ ಹಾಗೂ ಇಲ್ಲಿನ ಹಿರಿಯರು ಕೂಡ ಹೇಳಿದ್ದಾರೆ. ಇಲ್ಲಿನ ಮುರುಗ ಸ್ವಾಮಿಯನ್ನು ಇನ್ನೊಂದು ಹೆಸರಿನಲ್ಲಿ ಕೂಡ ಕರೆಯುತ್ತಾರೆ ಹೆಸರೇ ಪಳನಿಸ್ವಾಮಿ ಎಂದು.

ಪಳನಿ ಸ್ವಾಮಿಯ ಮೂರ್ತಿಯನ್ನು ವಾಲ್ಗಮ್  ಮಿಶ್ರಣದಿಂದ ತಯಾರು ಮಾಡಿದ್ದು, ವಾಲ್ಗಮ್  ಎಂದರೆ ಸಂಸ್ಕೃತದಲ್ಲಿಯೇ ನವಪಾಷಾಣ ಎಂದು ಕರೆಯುತ್ತಾರೆ, ಅಂದರೆ ಒಂದಕ್ಕಿಂತ ಹೆಚ್ಚು ವಿಷಯಗಳನ್ನು ಮಿಶ್ರಣ ಮಾಡಿ ಅದನ್ನು ಗಟ್ಟಿ ಮಾಡಿದರೆ ವಾಲ್ಗಮ್ ಎನ್ನುವ ಅಥವಾ ನವಪಾಷಾಣ ಎನ್ನುವ ವಿಷಯ ರೆಡಿಯಾಗುತ್ತದೆ.  ನವಪಾಷಾಣ ಹೇಗೆ ತಯಾರು ಮಾಡುತ್ತಾರೆ ಎಂದರೆ ಅದು ಕೇವಲ ಗಿಡಮೂಲಿಕೆ ಯಿಂದ. ಹೀಗೆ ಗಿಡಮೂಲಿಕೆ ಯಿಂದ ನವಪಾಷಾಣ ರೆಡಿ ಮಾಡಿದಂತಹ ಜಾಗ ಇವಾಗಲು ಕೂಡ ನೀವು ಅಲ್ಲಿ ನೋಡಬಹುದು.

ಈ ಮೂಲಕ ಸ್ವಾಮಿ ದೇವಸ್ಥಾನ ಇತಿಹಾಸದ ಪುಟಗಳಲ್ಲಿ ಸಾವಿರಾರು ಉಲ್ಲೇಖವನ್ನು ಹೊಂದಿದೆ, ಈ ದೇವಸ್ಥಾನ ಸಾವಿರಾರು ವರ್ಷಗಳ ಹಿನ್ನೆಲೆಯನ್ನು ಹೊಂದಿದ್ದು ,ಈ ಪಳನಿ ದೇವಸ್ಥಾನ ಅಥವಾ ಶ್ರಿ ಮುರುಗ ದೇವಸ್ಥಾನ ವಿಶ್ವ ವಿಖ್ಯಾತಿ ಆಗಿದೆ ,ಈ ಮುರುಗ ಸ್ವಾಮಿಗೆ ಅಥವಾ ಪಳನಿ ಸ್ವಾಮಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲ ಹೊರ ದೇಶದಲ್ಲಿ ಕೂಡ ಹಲವಾರು ಜನರು ಭಕ್ತರಿದ್ದಾರೆ. ಪ್ರತಿನಿತ್ಯ ಈ ದೇವಸ್ಥಾನಕ್ಕೆ ಹಲವಾರು ಜನರು ಸಾವಿರಾರು ಸಂಖ್ಯೆಯಲ್ಲಿ ತಂಡೋಪತಂಡವಾಗಿ ದೇವಸ್ಥಾನಕ್ಕೆ ಬರುತ್ತಾರೆ.

ಪಳನಿ ದೇವಸ್ಥಾನದ ರೋಚಕ ದ ಪವಾಡಗಳು?

ಪಳನಿ ದೇವಸ್ಥಾನದಲ್ಲಿ ಇರುವಂತಹ ಈ ಮೂರ್ತಿಯು ಹಲವಾರು ನವಪಾಷಾಣ ಗಳಿಂದ ತಯಾರಾಗಿದ್ದು, ಈ ಮೂರ್ತಿಯ ಮೇಲೆ ಅಭಿಷೇಕ ಮಾಡಿದಾಗ ಬರುವಂತಹ ಪ್ರಸಾದವನ್ನು ಸ್ವೀಕರಿಸಿದರು ಹಲವಾರು ರೋಗಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಈ ಅಭಿಷೇಕದ ಪ್ರಸಾದದಲ್ಲಿ  ಇದೆ ಎಂದು ಸಾವಿರಾರು ಜನರು ಇಂದಿಗೂ ಕೂಡ ನಂಬುತ್ತಾರೆ. ಆದರೆ ಇದರ ಹಿಂದಿನ ರಹಸ್ಯವನ್ನು ಇಂದಿಗೂ ಕೂಡ ಯಾರು ಬೇಧಿಸಲು ಆಗಿಲ್ಲ. ಪುರಾಣದ ಪ್ರಕಾರ ಇಲ್ಲಿ ನಡೆಸಿರುವಂತಹ ಮುರುಗ ಸ್ವಾಮಿಯನ್ನು ಹಾಗೂ ಆ ಶಿಲೆಯನ್ನು ಕೆತ್ತಿದ ಅಂತಹ ಮನುಷ್ಯನಾದರೂ ಯಾರು ಎನ್ನುವ ಪ್ರಶ್ನೆಗೆ ಉತ್ತರ ನಮ್ಮ ಜಗತ್ತಿನಲ್ಲಿ ಸಿದ್ಧಪುರುಷರು ಆಗಿರುವಂತಹ ಭೋಗ ನಾಥರು. ಬಸವಣ್ಣರ ಹೇಗೆ ನಮಗೆ ವಚನಗಳನ್ನು ಹೇಳಿ ಹೋಗಿದ್ದಾರೆ ಹಾಗೆ ಬೋಗಾರ್ ನಾಥರು ಕೂಡ 3000 ವರ್ಷಗಳ ಹಿಂದೆ ಜನಿಸಿದಂತಹ ಒಬ್ಬ ಸಿದ್ಧಪುರುಷ ಎಂದು ಕೂಡ ಹೇಳಬಹುದು. ಇವನಿಗೆ ಇರುವಂತಹ ಗಾಢವಾದ ಸಸ್ಯಗಳ ಹಾಗೂ ಗಿಡಮೂಲಿಕೆಗಳ ಅಗಾಧ ಜ್ಞಾನದಿಂದ ಇಲ್ಲಿರುವ ಶಿಲೆ ಯನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿನ ಜನರ ಹೇಳಿಕೆ ಪ್ರಕಾರ ಈ  ಭೋಗ ನಾಥರು ಈ ಮೂರ್ತಿಯನ್ನು ಸೃಷ್ಟಿಸಿದ್ದು ಲೋಕಕಲ್ಯಾಣ ಕೋಸ್ಕರ ಎಂದು.

ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ಶೇರ್ ಮಾಡಿ ಹಾಗೆ, ನಮ್ಮ ಪೇಜಿಗೆ ಇನ್ನು ನೀವು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಇವಾಗಲೇ ಲೈಕ್ ಮಾಡಿ ನಮ್ಮನ್ನು ಪ್ರೋತ್ಸಾಹ ನೀಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ

Leave a Reply

Your email address will not be published. Required fields are marked *

%d bloggers like this: