ಇಲ್ಲಿರುವ ಶನಿದೇವರ ದೇವಸ್ಥಾನದಲ್ಲಿ ಎಲ್ಲಿಯೂ ಕೂಡ ಬಾಗಿಲುಗಳೇ ಇಲ್ಲ ಮತ್ತು ಈ ಗ್ರಾಮದಲ್ಲಿ ಯಾವ ಮನೆಯಲ್ಲಿಯೂ ಕೂಡ ಬಾಗಿಲುಗಳೇ ಇಲ್ಲ ಆದರೂ ಇಲ್ಲಿ ಕಳ್ಳತನವಾಗಿಲ್ಲ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಇಲ್ಲಿಯ ಜನರಿಗೆ ಶನಿ ಮಹಾತ್ಮನ ಮೇಲಿರೋ ಅಚಲ ನಂಬಿಕೆಯೂ ಅಪಾರವಾಗಿದೆ ಹಾಗೂ ಈ ಒಂದು ಸ್ಥಳದಲ್ಲಿ ಶನಿಮಹಾತ್ಮ ಅನೇಕ ಅಚ್ಚರಿಗಳನ್ನು ಉಂಟು ಮಾಡುತ್ತಾ ಇಲ್ಲಿಯ ಜನರಿಗೆ ಆಶೀರ್ವಾದವನ್ನು ಮಾಡುತ್ತಾ ಎಂದಿಗೂ ಕೂಡ ಅಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಅನೇಕ ನಿದರ್ಶನಗಳು ಕೂಡ ಇವೆ.ಹಾಗೂ ಇಲ್ಲಿ ನಡೆಯುತ್ತಿರುವ ಪವಾಡಗಳ ಬಗ್ಗೆ ಇನ್ನೂ ಸಾಕಷ್ಟು ಜನರಿಗೆ ತಿಳಿದೇ ಇಲ್ಲ ಅಂತಹ ಒಂದು ಮಾಹಿತಿಯನ್ನು ನಾವು ಈ ದಿನದ ಈ ಲೇಖನದಲ್ಲಿ ತಿಳಿದುಕೊಳ್ಳೋಣ.ಹೌದು ನಾನು ಈ ದಿನ ಮಾತನಾಡಲು ಹೊರಟಿರುವ ಆ ಒಂದು ಪುಣ್ಯ ಕ್ಷೇತ್ರ ಯಾವುದು ಅಂದರೆ ಶನಿಸಿಂಗನಾಪುರ ಇಲ್ಲಿ ಶನಿಮಹಾತ್ಮನು ನೆಲೆಸಿದ್ದಾನೆ ಆದರೆ ಯಾವುದೇ ಮೂರ್ತಿಯ ರೂಪದಲ್ಲಿ ಅಲ್ಲ.

ಶನಿಸಿಂಗನಾಪುರ ಶ್ರೀ ಶನಿ ಮಹಾತ್ಮನ ಪುಣ್ಯ ಕ್ಷೇತ್ರವಾಗಿರುವ ಈ ಒಂದು ನೆಲೆ ಅಪಾರ ಭಕ್ತಾದಿಗಳನ್ನು ಹೊಂದಿದ್ದು ಶನಿದೋಷ ನಿವಾರಣೆಗಾಗಿ ಜನರು ಈ ಕ್ಷೇತ್ರಕ್ಕೆ ಬರುತ್ತಾರೆ .ಹಾಗೇ ಈ ಕ್ಷೇತ್ರದ ಮತ್ತೊಂದು ಮಹಾತ್ಮ ಏನು ಅಂದರೆ ಹಾವು ಕಚ್ಚಿದವರನ್ನು ಇಲ್ಲಿಗೆ ಕರೆದುಕೊಂಡು ಬಂದು ದೇವರ ದರುಶನವನ್ನು ಮಾಡಿದರೆ ವಿಷ ಇಳಿಯುತ್ತದೆ ಎಂಬ ನಂಬಿಕೆಯೂ ಕೂಡ ಇದೇ.

ಹಾಗೆ ಇಲ್ಲಿ ಇಂದಿಗೂ ಕೂಡ ಜನರು ನಂಬಿರುವಂತೆ ವಿಶೇಷವಾದ ನಂಬಿಕೆ ಏನು ಅಂದರೆ ಶನಿದೇವ ನೆಲೆಸಿರುವ ಗ್ರಾಮದಲ್ಲಿ ಯಾರ ಮನೆಗೂ ಬಾಗಿಲುಗಳು ಇಲ್ಲ ಹೌದು ಇದೊಂದು ಅಚ್ಚರಿ ಅಂತಾನೇ ಹೇಳಬಹುದು.ಶಿಲಾ ಸ್ತಂಭ ರೂಪದಲ್ಲಿ ನೆಲೆಸಿರುವ ಶನಿಮಹಾತ್ಮನು ತಾನು ನೆಲೆಸಿರುವ ಗ್ರಾಮದಲ್ಲಿ ಯಾರೇ ಕಳ್ಳತನ ಮಾಡಿದರೂ ಆ ಗ್ರಾಮ ಬಿಟ್ಟು ಹೋಗುವ ಮುನ್ನವೇ ರಕ್ತಕಾರಿ  ಹೋಗುತ್ತಾರೆ ಎಂದು ಹೇಳಲಾಗಿದೆ.ಮತ್ತು ವಸ್ತುಗಳನ್ನು ಕಳೆದುಕೊಂಡ ಅನೇಕರು ಮತ್ತೆ ಆ ವಸ್ತುಗಳನ್ನು ಹಿಂಪಡೆದಿರುವ ಉದಾಹರಣೆಗಳು ಕೂಡ ಇಲ್ಲಿ ಇದೆ ಎಂದು ಹೇಳಲಾಗಿದೆ ಮತ್ತು ನಾಯಿಗಳಿಂದ ಮನೆಯ ವಸ್ತುಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಲ್ಲಿ ಮನೆ ಬಾಗಿಲುಗಳಿಗೆ ಬಟ್ಟೆಗಳನ್ನು ಬಿಟ್ಟಿರುತ್ತಾರೆ ಆದರೆ ಯಾರ ಮನೆಗಾಗಲಿ ಇಲ್ಲಿ ಬಾಗಿಲುಗಳು ಇರುವುದಿಲ್ಲ.

ಶನಿದೇವ ಇಲ್ಲಿ ಬಂದು ನೆಲೆಸಿದ್ದು ಹೇಗೆ ಎಂಬ ಪುರಾಣ ಕಥೆಯ ಬಗ್ಗೆ ಹೇಳುವುದಾದರೆ, ಸುಮಾರು ನೂರ ಐವತ್ತು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಬಹಳಾನೇ ಪ್ರವಾಹವಾಗಿತ್ತು,ಪ್ರವಾಹದ ನೀರಿನಲ್ಲಿ ಒಂದು ಕಪ್ಪು ಬಣ್ಣದ ಶಿಲಾ ಸ್ತಂಭವು ತೇಲಿ ಬರುತ್ತಿದ್ದುದನ್ನು ಕಂಡ ನದಿಯ ದಡದಲ್ಲಿದ್ದ ಕುರಿಗಾಹಿ ಹುಡುಗರು ಈ ಸ್ತಂಭವನ್ನು ಕಂಡು ಅದಕ್ಕೆ ಬೆತ್ತದಿಂದ ಹೊಡೆಯುತ್ತಿರುತ್ತಾರೆ.ಆಗ ಆ ಕಪ್ಪು ಶಿಲಾ ಸ್ತಂಭದ ಂದ ರಕ್ತ ಬರುತ್ತದೆ ಇದನ್ನು ಕಂಡ ಊರಿನ ಮುಖ್ಯಸ್ಥರು ಇದರಲ್ಲಿ ಒಂದು ವಿಶೇಷವಾದ ಶಕ್ತಿ ಅಡಗಿದೆ ಎಂದು ಅದನ್ನು ಸ್ಥಾಪಿಸುತ್ತಾರೆ. ಕೊನೆಗೆ ಒಂದು ದಿನ ಆ ಊರಿನ ಮುಖ್ಯಸ್ಥನ ಕನಸಿನಲ್ಲಿ ಬಂದು ಶನಿದೇವನು ತಾನು ಇಲ್ಲಿ ನೆಲೆಸಿರುವುದಾಗಿ ಹೇಳುತ್ತಾರೆ.

ಶನಿಮಹಾತ್ಮನು ಇಲ್ಲಿ ಶಿಲಾ ಸ್ತಂಭದ ರೂಪದಲ್ಲಿ ನೆಲೆಸಿರುವುದು ಕೂಡ ಇಲ್ಲಿಯ ಒಂದು ಅಚ್ಚರಿಯಾದರೆ, ಇಲ್ಲಿ ಆಲಯಕ್ಕೆ ಯಾವುದೇ ಮೇಲ್ಛಾವಣಿ ಇರುವುದಿಲ್ಲ ಹಾಗೆ ಈ ಶಿಲಾ ಸ್ತಂಭದ ಪಕ್ಕದಲ್ಲಿ ತ್ರಿಶೂಲವಿದ್ದು ಅಲ್ಲಿ ಶಿವ ಹನುಮಂತ ಮತ್ತು ನಂದಿ ನೆಲೆಸಿದ್ದಾರೆ.ಶನಿದೇವನ ಪೂಜೆಗಾಗಿ ಯಾವುದೇ ಅರ್ಚಕರು ಇರುವುದಿಲ್ಲ ಬಂದ ಭಕ್ತಾದಿಗಳು ಇಲ್ಲಿ ಇರುವ ಬಾವಿ ನೀರಿನಲ್ಲಿ ಸ್ನಾನವನ್ನು ಮಾಡಿ ಖಾಕಿ ತೊಟ್ಟು ದೇವರ ಪೂಜೆಯನ್ನು ಮಾಡಬೇಕಾಗುತ್ತದೆ ಹಾಗೆ ಖಾಕಿ ತೊಡದ ಭಕ್ತಾದಿಗಳು ದೂರದಲ್ಲಿ ನಿಂತು ದೇವರ ದರ್ಶನ ಪಡೆದುಕೊಳ್ಳಬಹುದು.ದೇವಸ್ಥಾನದ ಮುಂದೆ ಪೂಜಾ ತಟ್ಟೆಯನ್ನು ನೀಡಲಾಗುತ್ತದೆ ಇದರಲ್ಲಿ ಎಳ್ಳಿನ ಎಣ್ಣೆ ಕಪ್ಪು ಬಟ್ಟೆ ಕಪ್ಪು ದಾರ ದೃಷ್ಟಿ ಬೊಂಬೆ ಎಕ್ಕದ ಹೂವು ಇವುಗಳನ್ನು ನೀಡಲಾಗುತ್ತದೆ ಮತ್ತು ದೇವರ ಪೂಜೆಯನ್ನು ಮಾಡಿ ಈ ದೃಷ್ಟಿ ಬೊಂಬೆಯನ್ನು ಮನೆಗೆ ತೆಗೆದುಕೊಂಡು ಹೋಗಿ ಮನೆಯ ಮುಂದೆ ಹಾಕಿದರೆ ದೃಷ್ಟಿದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ.

ಶನಿವಾರದ ದಿವಸ ಹುಣ್ಣಿಮೆ ಬಂದರೆ ಅಥವಾ ವಿಶೇಷ ಶನಿವಾರದ ದಿನದಂದು ಈ ಶಿಲಾ ಸ್ತಂಭಕ್ಕೆ ಎಣ್ಣೆ ಮತ್ತು ನೀರಿನಿಂದ ಅಭಿಷೇಕ ಮಾಡಲಾಗುತ್ತದೆ.ಶನಿಸಿಂಗನಾಪುರ ಇರುವುದು ಮಹಾರಾಷ್ಟ್ರದ ಅಹ್ಮದ ನಗರದಲ್ಲಿದೆ ಹಾಗೂ ಈ ಶನಿಸಿಂಗನಾಪುರ ಕ್ಷೇತ್ರದಿಂದ ಶಿರಡಿ ಸುಮಾರು ಎಪ್ಪತ್ತು ಕಿಲೋ ಮೀಟರ್ ದೂರದಲ್ಲಿದ್ದರೆ ಅಜಂತ ಎಲ್ಲೋರ ಗುಹೆಗಳು ಈ ದೇವಸ್ಥಾನದ ದಕ್ಷಿಣ ದಿಕ್ಕಿನೆಡೆ ಎಂಬತ್ತು ಕಿಲೋಮೀಟರ್ ದೂರದಲ್ಲಿದೆ,ಈ ಗ್ರಾಮದಲ್ಲಿ ಸುಮಾರು ಮೂರು ಸಾವಿರ ಮನೆಗಳಿದ್ದು ಇಲ್ಲಿ ಯಾವ ಮನೆಗಳಿಗೂ ಬಾಗಿಲು ಇಲ್ಲದೇ ಇರುವುದೇ ಇಲ್ಲಿಯ ಒಂದು ವಿಶೇಷತೆ. ನೀವು ಕೂಡ ಒಮ್ಮೆ ಶನಿ ಸಿಂಗನಾಪುರ ದೇವಾಲಯಕ್ಕೆ ಭೇಟಿ ನೀಡಿ ಶನಿದೇವನ ಕೃಪೆಗೆ ಪಾತ್ರರಾಗಿ ಧನ್ಯವಾದ.

Leave a Reply

Your email address will not be published. Required fields are marked *